ಬೀದರ.01.ಜುಲೈ.25:- ಕರ್ನಾಟಕ ವಿಧಾನ ಪರಿಷತ್ತಿನ ಹಕ್ಕುಬಾಧ್ಯತಾ ಸಮಿತಿಯ ಅಧ್ಯಕ್ಷರನ್ನೊಳಗೊಂಡoತೆ ಒಟ್ಟು 08 ಜನ ಸದಸ್ಯರುಗಳು, ಪರಿಷತ್ತಿನ ಅಧಿಕಾರಿ/ಸಿಬ್ಬಂದಿಗಳು ಹಾಗೂ ವರದಿಗಾರರು ಸೇರಿದಂತೆ ಒಟ್ಟು 07 ಜನರನ್ನು ಹೊಂದಿರುವ ತಂಡವು ಜುಲೈ.1 ರಿಂದ ಜುಲೈ.3 ರವರೆಗೆ ಬೀದರ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದೆ ಎಂದು ಕರ್ನಾಟಕ ವಿಧಾನ ಪರಿಷತ್ತು ಕಾರ್ಯದರ್ಶಿ-2 ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜುಲೈ.1 ರಂದು ಬೆಳಿಗ್ಗೆ 7.30 ಗಂಟೆಗೆ ಬೆಂಗಳೂರಿನಿoದ ನಿರ್ಗಮಿಸಿ ಬೆಳಿಗ್ಗೆ 9.30 ಗಂಟೆಗೆ ಬೀದರ ಆಗಮಿಸಿ ವಾಸ್ತವ್ಯ ಮಾಡಲಿದ್ದಾರೆ.
ಜುಲೈ.2 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಸಭೆ ಸೇರಿ ಸರ್ಕಾರದಿಂದ ಶಿಷ್ಠಾಚಾರ ಪಾಲನೆ ಕುರಿತು ಹೊರಡಿಸಲಾಗಿರುವ ಆದೇಶ, ಸುತ್ತೋಲೆ/ಮಾರ್ಗಸೂಚಿಗಳನ್ನು ಪಾಲಿಸದೆ ಶಿಷ್ಠಾಚಾರ ಉಲ್ಲಂಘನೆ ಪ್ರಕರಣಗಳು ಪದೇ ಪದೇ ಮರುಕಳಿಸುತ್ತಿರುವ ಹಾಗೂ ಶಾಸಕರಾದ ಭೀಮರಾವ ಬಸವರಾಜ ಪಾಟಿಲ ಅವರಿಗೆ ಬೀದರ ಜಿಲ್ಲೆಯ ಔರಾದ ನಗರದಲ್ಲಿ ಕಛೇರಿ ಒದಗಿಸುವ ಕುರಿತು ಸ್ಥಳೀಯ ವಿಧಾನ ಪರಿಷತ್ತಿನ ಶಾಸಕರುಗಳ ಉಪಸ್ಥಿತಿಯಲ್ಲಿ ಹಾಗೂ ತಮ್ಮ ಸಮ್ಮುಖದಲ್ಲಿ ಜಿಲ್ಲಾಮಟ್ಟದ ಎಲ್ಲಾ ಇಲಾಖೆಗಳ ಮುಖ್ಯಸ್ಥರು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾದಿಕಾರಿಗಳು ಹಾಗೂ ಕಾರ್ಪೋರೇಷನ್/ಮುನಿಸಿಪಾಲಿಟಿ ಆಯುಕ್ತರುಗಳೊಂದಿಗೆ ಚರ್ಚಿಸಲಾಗುತ್ತದೆ.
ಜುಲೈ.3 ರಂದು ಬೆಳಿಗ್ಗೆ 7.30 ಗಂಟೆಗೆ ಬೀದರ (ವಿಮಾನದ ಮೂಲಕ) ನಿರ್ಗಮಿಸಿ ಬೆಂಗಳೂರಿಗೆ ಪ್ರವಾಸ ಕೈಗೊಳ್ಳಲಿದ್ದಾರೆಂದು ಅವರು ತಿಳಿಸಿದ್ದಾರೆ.