01/07/2025 10:58 AM

Translate Language

Home » ಲೈವ್ ನ್ಯೂಸ್ » ಯಶಸ್ವಿಯಾಗಿ ನಡದ ಎಕೆಬಿಎಂಎಸ್ ಮಹಿಳಾ ಘಟಕದ ಸಭೆ

ಯಶಸ್ವಿಯಾಗಿ ನಡದ ಎಕೆಬಿಎಂಎಸ್ ಮಹಿಳಾ ಘಟಕದ ಸಭೆ

Facebook
X
WhatsApp
Telegram

ಬೀದರ :  ದಿ.೨೯ ರವಿವಾರ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಬೀದರ ಮಹಿಳಾ ಘಟಕದ ಸಭೆ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ  ನಡೆಯಿತು. ಸಭೆಯನ್ನು ಉದ್ದೇಶಿಸಿ ಮಾತನಾoಡಿದ  ಜಿಲ್ಲಾ ಅಧ್ಯಕ್ಷ ವೆಂಕಟೇಶ್ ಕುಲಕರ್ಣಿ  ಸಮಾಜಕ್ಕೇ ಸರ್ಕಾರದಿಂದ ಸಿಗುವ ಸೌಲತ್ತು ಪಡೆಯಲು ಸಹಾಯ ನೀಡುವುದಾಗಿ ಭರವಸೆ ನೀಡಿದರು.

ಮುಂದಿನ ದಿನಗಳಲ್ಲಿ ಕಚೇರಿ ಉದ್ಘಾಟನಾ ಕಾರ್ಯಕ್ರಮ  ನಡೆಯಲಿದೆ ಎಂದು ತಿಳಿಸಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮಹಿಳಾ ಘಟಕದ ಅಧ್ಯಕ್ಷರಾದ ಪ್ರಮೋದಿನಿ ಕುಲಕರ್ಣಿ ಮಾತನಾಡಿ ಇಂದಿನ ದಿನಗಳಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಪುರುಷರಿಗೆ ಸಮಾನವಾಗಿ ಕೆಲಸ ಮಾಡುತ್ತಿದ್ದು ಸಂತೋಷದ ವಿಷಯವಾಗಿದೆ. ಆದರೆ ತಮ್ಮ ವೈಯಕ್ತಿಕ ಕೆಲಸದÀ ಜೊತೆ ಸಮಾಜದ ಕೆಲಸ ಮಾಡುವುದು ಅಷ್ಟೆ ಜರುರಿ ಇರುವುದರಿಂದ ಮಹಿಳೆಯರು  ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಕೆಲಸಕ್ಕೆ ಬರಬೇಕು ಎಂದು ಮನವಿ ಮಾಡಿದರು. ಮಹಿಳೆಯರು ಹೆಚ್ಚಿನ ಸಂಖೆಯಲ್ಲಿ ಎಕೆಬಿಎಂಎಸ್ ಸದಸ್ಯತ್ವ ಪಡೆಯಬೇಕು  ಹಾಗೂ ಎಲ್ಲರು ಸೇರಿ ಒಟ್ಟಾಗಿ ಸಮಾಜದ ಅಭಿವೃದ್ದಿ ಕೆಲಸ ಮಾಡೋಣಾ ಎಂದರು. 

ರಾಜ್ಯ ಜಂಟಿ ಕಾರ್ಯದರ್ಶಿ ರಾಜೇಶ್ ಕುಲಕರ್ಣಿ ಹಳ್ಳಿಖೇಡ ಇತ್ತೀಚಿಗೆ ಬೆಂಗಳೂರು ಹೋಗಿದಾಗ . ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ಎಸ್ , ರಘುನಾಥ್, ಅಖಿಲ್ ಕರ್ನಾಟಕ ಬ್ರಾಹ್ಮಣ ಮಂಡಳಿಯ ಅಧ್ಯಕ್ಷರಾದ ಜಯಸಿಂಹ ಹಾಗೂ ಆರೋಗ್ಯ  ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀ  ದಿನೇಶ್ ಗುಂಡೂರಾವ್ ಅವರ ಜೊತೆ ಬೇಟಿ ಮಾಡಿ  ಅವರ ಜೊತೆ ಚರ್ಚೆಯಾದ ವಿಷಯಗಳ ಬಗ್ಗೆ ವಿವಿರಿಸಿದರು. ಇದೇ ಸಂಧರ್ಭದಲ್ಲಿ  ಹುಮನಾಬಾದ ತಾಲೂಕು ಅಧ್ಯಕ್ಷರಾದ ಶ್ರೀ ಭೀಮರಾವ್ ಕುಲಕರ್ಣಿ, ಹಿರಿಯರಾದ  ದಿನಕರ ಕುಲಕರ್ಣಿ ಮಾತನಾಡಿದರು. ಇದೇ ಸಮಯದಲ್ಲಿ  ರಾಜ್ಯ  ಕಾರ್ಯಕಾರಿಣಿ ಸದಸ್ಯರಾಗಿ  ನೇಮಕಗೊಂಡ ರೇಖಾ ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು.


ಈ ಸಭೆಯಲ್ಲಿ ಪ್ರಮುಖರಾದ ಸುಧಾಕರ ರಾವ್ ಪಾಟೀಲ್, ರಘುನಾಥ್ ರಾವ್ ಕುಲಕರ್ಣಿ, ಶ್ರೀ ರಾಮರಾವ್ ಕುಲಕರ್ಣಿ ಶೆಂಬೆಳ್ಳಿ, ದಿನಕರ ರಾವ್ ಕುಲಕರ್ಣಿ ಶೆಂಬೆಳ್ಳಿ, ಅನಿಲ್ ಕುಮಾರ್ ಚಿಕಮನುರ್, ಅಶೋಕ್ ಡಾಕುಳಗಿ, ಪ್ರವೀಣ್ ಜೋಶಿ, ವೆಂಕಟೇಶ್ ಕುಲಕರ್ಣಿ   ಮಾಣಿಕ ಕುಲಕರ್ಣಿ . ಹಣಮಂತ ಕುಲಕರ್ಣಿ ,ಶಾರದ ಕುಲಕರ್ಣಿ , ಸರೋಜಾ ಕುಲಕರ್ಣಿ, ಪುಜಾ ಕುಲಕರ್ಣಿ  ಸೇರಿದಂತೆ ನೂರಾರು ಮಹಿಳೆಯರು  ಉಪಸ್ಥಿತರಿದ್ದರು. .  ಶ್ರೀ ಪ್ರಭಾಕರ ರಾವ್ ಕಾರಮುಂಗಿ ಸಭೆಗೆ  ಬಂದ ಎಲ್ಲರನ್ನೂ ಸ್ವಾಗತಿಸಿದರು. ರಾಮರಾವ ಕುಲರ್ಣಿ ವಂದಿಸಿದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!