ಬೀದರ.27.ಜೂನ್.25- ಬೀದರ ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ಎಲ್ಲಾ ಸಂಯೋಜಿತ ಸ್ನಾತಕ ಮಹಾವಿದ್ಯಾಲಗಳಲ್ಲಿ
2025-26ನೇ ಶೈಕ್ಷಣಿಕ ಸಾಲಿನ ಬಿ.ಎ/ಬಿ.ಎಸ್ಸಿ/ಬಿ.ಕಾಂ ಬಿ.ಬಿ.ಎ/ಬಿ.ಸಿ.ಎ ಮತ್ತು ಬಿ.ಯೋಕ್ ಕೋರ್ಸುಗಳಿಗೆ ಪ್ರವೇಶಾತಿ ಪಡೆಯುವ ಅವಧಿಯನ್ನು ಜುಲೈ.4 ರವರೆಗೆ ದಂಡ ರಹಿತ ಹಾಗೂ ಜುಲೈ.15 ರವರೆಗೆ ದಂಡ ಸಹಿತ ವಿಸ್ತರಿಸಲಾಗಿದೆ ಎಂದು ಬೀದರ ವಿಶ್ವವಿದ್ಯಾಲಯದ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈಗಾಗಲೇ ದಿನಾಂಕ. 25-06-2025 ರವರೆಗೆ ದಂಡ ರಹಿತ ಪ್ರವೆಶಾತಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ಕುಲಪತಿಗಳ ಅನುಮೋದನೆ ಮೇರೆಗೆ ಪ್ರವೇಶಾತಿ ದಿನಾಂಕವನ್ನು ವಿಸ್ತರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.