ಶಿವಮೊಗಾ.20.ಫೆಬ್ರವರಿ.26: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ನಾನ್-ಯುಜಿಸಿ ಅತಿಥಿ ಉಪನ್ಯಾಸಕರ ಸಂಘ.( ರಿ) ಭದ್ರಾವತಿ. ವತಿಯಿಂದ .ಉನ್ನತ ಶಿಕ್ಷಣ ಇಲಾಖೆಯ ವತಿಯಿಂದ ಅರ್ಹತೆ ನೆಪದಲ್ಲಿ ಡಿಸೆಂಬರ್ 08 ರಿಂದ ಏಕಾಎಕಿಯಾಗಿ ಸುಮಾರು 6600 ಅತಿಥಿ ಉಪನ್ಯಾಸಕರನ್ನು ಕೈಬಿಡಲಾಯಿತು.
ಸರ್ಕಾರ ಇದುವರೆಗೂ ಯಾವುದೇ ಪರ್ಯಾಯ ವ್ಯವಸ್ಥೆ ಕಲ್ಪಿಸಿಲ್ಲ 6600. ನಾನ್-ಯುಜಿಸಿ ಅತಿಥಿ ಉಪನ್ಯಾಸಕರ ಕುಟುಂಬಗಳು ಬೀದಿಗೆ ಬಿದ್ದಿವಿ ಬೇರೆ ಕಡೆ ಎಲ್ಲೂ ಕೆಲಸ ಸಿಗದೆ ಕುಟುಂಬಗಳು ಅತಂತ್ರ ಸ್ಥಿತಿಯನ್ನು ತಲುಪಿದ್ದಾವೆ. ಬಹುತೇಕ ಅತಿಥಿ ಉಪನ್ಯಾಸಕರು ನಗರ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು.ಮಕ್ಕಳ ಶಿಕ್ಷಣ. ತಂದೆ ತಾಯಿಗಳ ಜವಾಬ್ದಾರಿ ತೆಗೆದುಕೊಳ್ಳುವ ಅತಿಥಿ ಉಪನ್ಯಾಸಕರು ಇದನ್ನೆ ನಂಬಿದ್ದವರು ನಿರುದ್ಯೋಗಿಯಾಗಿದ್ದಾರೆ.
ಎರಡು ತಿಂಗಳಿಂದ ಕೆಲಸನೂ ಇಲ್ಲ ವೇತನವು ಇಲ್ಲದೇ ಜೀವನ ನಡೆಸಲು ಪರದಾಡುತ್ತಿದ್ದಾರೆ.ರಾಜ್ಯ ಸರ್ಕಾರವು ಇವರ ನೆರವಿಗೆ ಕೂಡಲೇ ಬರುವಂತೆ. ಅತಿಥಿ ಉಪನ್ಯಾಸಕರಾದ ರಂಗನಾಥ .ಆರ್.ತಮ್ಮ ನೋವನ್ನು ಹೇಳಿಕೊಂಡಿದ್ದಾರೆ. ಮತ್ತು ಫೆಬ್ರವರಿ 25 ರಂದು ರಾಜ್ಯ ಸರ್ಕಾರಕ್ಕೆ ಶಾಂತಿಯುತವಾಗಿ ಮನವಿಯನ್ನು ಸಲ್ಲಿಸಲು ಹೊರಗುಳಿದ 6600 ಅತಿಥಿ ಉಪನ್ಯಾಸಕರು ಬೆಂಗಳೂರು ಚಲೋ ಗೆ ಕರೆ ನೀಡಿದರು.
ರಮೇಶ್ ಬಾಬು.ಅತಿಥಿ ಉಪನ್ಯಾಸಕರು ಭಾಗವಹಿಸಿದ್ದರು. ಹಾಗೂ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ.ರಿ ಶಿವಮೊಗ್ಗ ಜಿಲ್ಲಾ ಘಟಕದವತಿಂದ ಗೌರವಾಧ್ಯಕ್ಷರಾದ ಈರಪ್ಪ .ಮತ್ತು ಜಿಲ್ಲಾಧ್ಯಕ್ಷರಾದ ಮೂರ್ತಿ.ಸಿ ರವರು ಬೆಂಗಳೂರು ಚಲೋ ಕಾರ್ಯಕ್ರಮಕ್ಕೆ ಸಂಘಟನೆಯ ಮೂಲಕ ನೈತಿಕ ಬೆಂಬಲವನ್ನು ನೀಡುವುದಾಗಿ ತಿಳಿಸಿದರು..






Any questions related to 6600 ನಾನ್-ಯುಜಿಸಿ ಅತಿಥಿ ಉಪನ್ಯಾಸಕರಿಗೆ ನಿರುದ್ಯೋಗ ಕರುಣಿಸಿದ ರಾಜ್ಯ ಸರ್ಕಾರ?