04/08/2025 9:52 PM

Translate Language

Home » ಲೈವ್ ನ್ಯೂಸ್ » ಬೀದರನಲಿ,ಮ್ಯಾರಾಥಾನ್‌ಗೆ ಚಾಲನೆ ಯಶಸ್ವಿಗೊಳಿಸಿದರು. ಚಿತ್ರ ನಟ ಸೋನು ಸೂದ್‌

ಬೀದರನಲಿ,ಮ್ಯಾರಾಥಾನ್‌ಗೆ ಚಾಲನೆ  ಯಶಸ್ವಿಗೊಳಿಸಿದರು. ಚಿತ್ರ ನಟ ಸೋನು ಸೂದ್‌

Facebook
X
WhatsApp
Telegram

ಬೀದರ. 12.ಜನವರಿ.25:- ಬೀದರ ನಗರದ ಗುರುನಾನಕ ದೇವ ಪಬ್ಲಿಕ್‌ ಶಾಲೆಯ ಸುವರ್ಣ ಮಹೋತ್ಸವದ ಅಂಗವಾಗಿ ನಗರದಲ್ಲಿ ಭಾನುವಾರ ಬೆಳಗಿನ ಜಾವ ಹಮ್ಮಿಕೊಂಡಿದ್ದ ‘ಬೀದರ್‌ ಮ್ಯಾರಾಥಾನ್‌’ಗೆ ಉತ್ತಮ ಪ್ರತಿಕ್ರಿಯೆ ದೊರೆಯಿತು.

ಮೈಕೊರೆಯುವ ಚಳಿಯಿದ್ದರೂ ನಸುಕಿನ ಜಾವ ನಾಲ್ಕು ಗಂಟೆಗೆ ಯುವಕ/ಯುವತಿಯರು, ಶಾಲೆಯ ಮಕ್ಕಳು, ಸಿಬ್ಬಂದಿ, ಆಡಳಿತ ಮಂಡಳಿ ಸದಸ್ಯರು, ವಿವಿಧ ಸ್ವಯಂಸೇವಾ ಸಂಸ್ಥೆಗಳವರು ಬಂದಿದ್ದರು.

ನಗರದ ನೆಹರೂ ಕ್ರೀಡಾಂಗಣದಲ್ಲಿ ಕೇಸರಿ ಬಣ್ಣದ ಟೀ ಶರ್ಟ್‌ ಧರಿಸಿ ನೂರಾರು ವಿದ್ಯಾರ್ಥಿ/ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಸಂಘಟಕರ ಪ್ರಕಾರ, ಐದು ಸಾವಿರಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದರು.

ಎಲ್ಲರೂ ಉತ್ಸಾಹದಿಂದ ಭಾಗವಹಿಸಿ ಮ್ಯಾರಾಥಾನ್‌ ಯಶಸ್ವಿಗೊಳಿಸಿದರು. ಚಿತ್ರ ನಟ ಸೋನು ಸೂದ್‌ ಅವರು ಮ್ಯಾರಾಥಾನ್‌ಗೆ ಚಾಲನೆ ನೀಡಿ, ಅವರೇ ಪ್ರಮಾಣ ಪತ್ರ ವಿತರಿಸಿದರು.


21 ಕಿ.ಮೀ, 10 ಕಿ.ಮೀ, 5 ಕಿ.ಮೀ ಮತ್ತು 3 ಕಿ.ಮೀ ಮ್ಯಾರಾಥಾನ್ ಹೀಗೆ ನಾಲ್ಕು ವಿಧಗಳಲ್ಲಿ ಓಟ ನಡೆಯಿತು.
ಸೋನು ಸೂದ್‌ ಅವರು ವೇದಿಕೆಗೆ ಬರುತ್ತಿದ್ದಂತೆ ಕರತಾಡನ, ಶಿಳ್ಳೆ ಮುಗಿಲು ಮುಟ್ಟಿತ್ತು. ವಿದ್ಯಾರ್ಥಿ/ವಿದ್ಯಾರ್ಥಿನಿಯರು ಹುಚ್ಚೆದ್ದು ಕುಣಿದರು. ಕೆಲಕಾಲ ಸೋನು ಸೂದ್‌ ಅವರಿಗೆ ಮಾತನಾಡಲು ಸಾಧ್ಯವಾಗಲಿಲ್ಲ. ಎಲ್ಲರಿಗೆ ಕೈಮುಗಿದು, ‘ನಿಮ್ಮ ಪ್ರೀತಿಗೆ ಧನ್ಯವಾದ’ ಎಂದು ಹೇಳಿ ಮಾತು ಆರಂಭಿಸಿದರು.

‘ವಿದ್ಯಾರ್ಥಿ ಜೀವನ ಬಹಳ ಮಹತ್ವದ್ದು. ಯಾರೂ ಕೂಡ ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡಿಕೊಳ್ಳಬಾರದು. ಆನ್‌ಲೈನ್‌ ಗೇಮ್‌, ಸಾಮಾಜಿಕ ಜಾಲತಾಣಗಳಿಂದ ದೂರ ಇರಬೇಕು. ಸಾಧನೆಯ ಗುರಿಯೆಡೆಗೆ ಗಮನ ಇರಬೇಕು. ಕನಸಿನ ಬೆನ್ನತ್ತಿ ಸಾಕಾರಗೊಳಿಸಲು ಶ್ರಮಿಸಬೇಕು’ ಎಂದು ಕಿವಿಮಾತು ಹೇಳಿದಾಗ ಮತ್ತೆ ಕರತಾಡನ ಜೋರಾಯಿತು.

‘ಸಾಧನೆ ಮಾಡಬೇಕು ಎಂದು ನಿಮ್ಮ ಮನಸ್ಸಿನಲ್ಲಿ ಅಂದುಕೊಂಡರೆ ಆ ಕೆಲಸ ಇಂದಿನಿಂದಲೇ ಆರಂಭಿಸಬೇಕು. ನಾಳೆಗಾಗಿ ಕಾಯಬಾರದು. ತನಗಾಗಿ ಎಲ್ಲರೂ ಬದುಕುತ್ತಾರೆ. ಆದರೆ, ಸಮಾಜಕ್ಕಾಗಿ, ದೇಶಕ್ಕಾಗಿ ಬದುಕುವವರ ಸಂಖ್ಯೆ ಕಡಿಮೆಯಾಗಿದೆ. ದೇಶಕ್ಕೆ ಏನಾದರೂ ಕೊಡುಗೆ ನೀಡಿ ಹೆಸರು ಇತಿಹಾಸದಲ್ಲಿ ದಾಖಲಾಗುವಂತೆ ಬದುಕಬೇಕು. ಪುಸ್ತಕ ಮುಚ್ಚುವ ವ್ಯಕ್ತಿಗಳಾಗದೆ ಪುಟಗಳನ್ನು ತೆರೆದು ಓದುವ ಆದರ್ಶ ಸಾಧಕರಾಗಬೇಕು’ ಎಂದು ಸಲಹೆ ನೀಡಿದರು.

ಕೋವಿಡ್ ಸಂದರ್ಭದಲ್ಲಿ ನಾನು ಮಾಡಿದ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗುರುನಾನಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸರ್ದಾರ್‌ ಬಲಬೀರ್‌ ಸಿಂಗ್‌, ಉಪಾಧ್ಯಕ್ಷೆ ರೇಷ್ಮಾ ಕೌರ್‌ ಅವರು ನನಗೆ ಸೂಚಿಸಿದರೆ ಖಂಡಿತವಾಗಿ ನನ್ನ ಸಮಾಜ ಸೇವಾ ಕಾರ್ಯ ಬೀದರ್‌ ಜಿಲ್ಲೆಗೂ ವಿಸ್ತರಿಸುವೆ’ ಎಂದು ಭರವಸೆ ನೀಡಿದಾಗ ಚಪ್ಪಾಳೆ ತಟ್ಟಿ ವಿದ್ಯಾರ್ಥಿಗಳು ಮೆಚ್ಚುಗೆ ಸೂಚಿಸಿದರು.

ರೇಷ್ಮಾ ಕೌರ್ ಮಾತನಾಡಿ, ಬೀದರ್‌ ಮ್ಯಾರಾಥಾನ್‌ಗೆ ಆರು ಸಾವಿರ ಜನರು ನೋಂದಣಿ ಮಾಡಿಸಿಕೊಂಡಿದ್ದರು. ಎಲ್ಲರೂ ಉತ್ಸಾಹದಿಂದ ಭಾಗವಹಿಸಿ ಯಶಸ್ವಿಗೊಳಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸುತ್ತೇವೆ. ನಟ ಸೋನು ಸೂದ್ ಅವರು ನಮ್ಮ ಕರೆಗೆ ಓಗೊಟ್ಟು ಬಂದು, ಕಾರ್ಯಕ್ರಮಕ್ಕೆ ಶೋಭೆ ತಂದುಕೊಟ್ಟಿದ್ದಾರೆ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್‌ ಗುಂಟಿ, ಪುನೀತ್ ಸಿಂಗ್ ಸೇರಿದಂತೆ ಮತ್ತಿತರರು ಹಾಜರಿದ್ದರು.

ಈ ಮ್ಯಾರಥಾನ್ ಕಾರ್ಯಕ್ರಮ ಬೀದರ ನಗರದ್ ನೆಹರೂ ಕ್ರೀಡಾಂಗಣಲ್ಲಿ ನಡೆಯಿತು ವಿದ್ಯಾರ್ಥಿ ಜೀವನ ಬಹಳ ಮಹತ್ವದ್ದು ಕ್ಷಣ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!

Featuring Advanced Search Functions plugin by YD