ಡಾ. ಮುದ್ನರ್ ದತ್ತಾ ಅವರಿಗೆ ‘ವಿಶ್ವ ಹಿಂದಿ ಸೇತು ಸಮ್ಮಾನ್’
ಕಲಬುರಗಿ.31.ಜನವರಿ.26: ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾನಿಲಯದ ಹಿಂದಿ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಮುದ್ನಾರ್ ದತ್ತಾ ಅವರಿಗೆ ಮಾರಿಷಸ್ನಲ್ಲಿ ಹಿಂದಿ ಭಾಷೆಯ ಜಾಗತಿಕ ಪ್ರಚಾರಕ್ಕೆ ನೀಡಿದ ಅತ್ಯುತ್ತಮ ಕೊಡುಗೆಗಾಗಿ ಪ್ರತಿಷ್ಠಿತ ‘ವಿಶ್ವ ಹಿಂದಿ ಸೇತು ಸಮ್ಮಾನ್’ ನೀಡಿ ಗೌರವಿಸಲಾಯಿತು. ಮಾರಿಷಸ್ನ ಹಿಂದಿ ಪ್ರಚಾರಿಣಿ ಸಭಾ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದೆ. ಜನವರಿ 12, 2026 ರಂದು ಮಾರಿಷಸ್ನ ಹಿಂದಿ ಪ್ರಚಾರಿಣಿ ಸಭಾದಲ್ಲಿ ನಡೆದ ‘ಹಿಂದಿ ಭಾಷೆಯಲ್ಲಿನ ಆವಿಷ್ಕಾರಗಳು’ ಎಂಬ ಅಂತರರಾಷ್ಟ್ರೀಯ ಸಮ್ಮೇಳನದ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಿತು….
Any questions related to Day: 31/01/2026?