ಡಿಸೆಂಬರ್ 31ರಂದು ಡಾಕ್ ಅದಾಲತ್
ರಾಯಚೂರು.26.ಡಿಸೆಂಬರ್.25: ರಾಯಚೂರು ವಿಭಾಗೀಯ ಡಾಕ್ ಅದಾಲತ್ನ್ನು ರಾಯಚೂರು ವಿಭಾಗದ ಅಂಚೆ ಕಚೇರಿಗಳ ಅಧೀಕ್ಷಕರ ಅಧ್ಯಕ್ಷತೆಯಲ್ಲಿ ಡಿಸೆಂಬರ್ 31ರ ಬೆಳಗ್ಗೆ 11 ಗಂಟೆಗೆ ನಗರದ ಕನಕದಾಸ ವೃತ್ತದ ಬಳಿಯಲ್ಲಿರುವ ಅಂಚೆ ಕಚೇರಿಗಳ ಅಧೀಕ್ಷಕರ ಕಚೇರಿಯಲ್ಲಿ ನಡೆಯಲಿದೆ. ಸಾರ್ವಜನಿಕರು ಅಂಚೆ ಸೇವೆಗಳ ಬಗ್ಗೆ ತಮ್ಮ ದೂರುಗಳನ್ನು ಡಿಸೆಂಬರ್ 30ರೊಳಗೆ, ಅಂಚೆ ಕಚೇರಿಗಳ ಅಧೀಕ್ಷಕರ ಕಾರ್ಯಾಲಯ, ರಾಯಚೂರು ವಿಭಾಗ–584102ಗೆ ಸಲ್ಲಿಸಬೇಕು ಎಂದು ಅಂಚೆ ಕಚೇರಿಯ ಅಧೀಕ್ಷಕರ ಕಚೇರಿಯ ಪ್ರಕಟಣೆ ತಿಳಿಸಿದೆ.
Any questions related to Day: 26/12/2025?