ಆ.28 ರಿಂದ ತಾಲ್ಲೂಕಾ ಮಟ್ಟದ ದಸರಾ ಸಿ.ಎಂ.ಕಪ್ ಕ್ರೀಡಾಕೂಟ:
ಹೆಸರು ನೋಂದಣಿಗೆ ಸೂಚನೆ
ಬೀದರ.21.ಅಗಸ್ಟ್.25:- 2025-26ನೇ ಸಾಲಿನ ತಾಲೂಕಾ ಮಟ್ಟದ ದಸರಾ ಸಿ.ಎಂ. ಕಪ್ ಕ್ರೀಡಾಕೂಟವನ್ನು ಬೀದರ ಜಿಲ್ಲೆಯ ವಿವಿಧ ತಾಲೂಕಗಳಲ್ಲಿ ಆಗಸ್ಟ್.28 ರಿಂದ ಸೆಪ್ಟೆಂಬರ್.3 ರವರೆಗೆ ಆಯೋಜಿಸಲಾಗಿದ್ದು, ಈ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಆಸಕ್ತರಿರುವ ಕ್ರೀಡಾಪಟುಗಳು ಕಡ್ಡಾಯವಾಗಿ ಆನ್‍ಲೈನ್ https://dasaracmcup-2025.etrpindia.com/KA-sports ಮೂಲಕ ಅಥವಾ ಕ್ಯೂರ್ ಆರ್ ಕೋಡ್ ಉಪಯೋಗಿಸಿ ನೋಂದಣಿ ಮಾಡಿಕೊಂಡು ಆಯಾ ತಾಲೂಕಿನ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಬೀದರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ತಾಲ್ಲೂಕಾ ಮಟ್ಟದ ದಸರಾ ಸಿ.ಎಂ.ಕಪ್ ಕ್ರೀಡಾಕೂಟಗಳ ವಿವರ: ಆಗಸ್ಟ್.28…