ಬೆಂಗಳೂರಿನ 44 ಎಕರೆಯಲ್ಲಿ ಕೆಂಪೇಗೌಡ ಒಕ್ಕಲಿಗ ವಿ.ವಿ: ಎಚ್.ಎನ್.ಅಶೋಕ್
ಮಾಗಡಿ: ಬೆಂಗಳೂರಿನ ಸಜ್ಜೇಪಾಳ್ಯದಲ್ಲಿ ಇರುವ ಕೃಷ್ಣಪ್ಪ, ರಂಗಮ್ಮ ಎಜುಕೇಶನ್ ಟ್ರಸ್ಟ್ ನ ಹೆಸರಿನಲ್ಲಿ ಇದ್ದ 44 ಎಕರೆ 33 ಗುಂಟೆ ಜಾಗ ಮೂಲ ಖಾತೆದಾರಾದ ದಿ.ರಂಗಮ್ಮನವರ ಹೆಸರಿಗೆ ಬರುವ ಮೂಲಕ ರಾಜ್ಯ ಒಕ್ಕಲಿಗ ಸಂಘಕ್ಕೆ ದೊಡ್ಡ ಜಯ ಸಿಕ್ಕಂತಾಗಿದ್ದು ಈ ಜಾಗದಲ್ಲಿ ಕೆಂಪೇಗೌಡ ಒಕ್ಕಲಿಗರ ವಿಶ್ವ ವಿದ್ಯಾಲಯ ಸ್ಥಾಪನೆ ಮಾಡಲಾಗುತ್ತದೆ ಎಂದು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹಾಗೂ ಕೆಂಪೇಗೌಡ ಆಸ್ಪತ್ರೆ ಅದ್ಯಕ್ಷರಾದ ಎಚ್.ಎನ್.ಅಶೋಕ್ ಹೇಳಿದರು. ಶನಿವಾರ ಪಟ್ಟಣದ ಹೊಸಪೇಟೆಯ ಬಮೂಲ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ದಿ.ರಂಗಮ್ಮನವರು…