ಎರಡು ಪ್ರತಿಷ್ಠಿತ ಮಹಾವಿದ್ಯಾಲಯಗಳ ಮಧ್ಯ ತಿಳುವಳಿಕೆ ಒಪ್ಪಂದ
|

ಎರಡು ಪ್ರತಿಷ್ಠಿತ ಮಹಾವಿದ್ಯಾಲಯಗಳ ಮಧ್ಯ ತಿಳುವಳಿಕೆ ಒಪ್ಪಂದ

ಕಲಬುರಗಿ.07.ಆಗಸ್ಟ್.25:- ಶೈಕ್ಷಣಿಕ ಸಹಕಾರವನ್ನು ಬೆಳೆಸುವ ಮತ್ತು ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ಪ್ರಯತ್ನದಲ್ಲಿ, ಕಲಬುರಗಿಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಹೈದರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ಹಿಂದಿ ವಿಭಾಗ ಮತ್ತು  ಸರ್ಕಾರಿ ಪದವಿ ಕಾಲೇಜಿನ (ಸ್ವಾಯತ್ತ) ಹಿಂದಿ ವಿಭಾಗಗಳ ಮಧ್ಯೆ  ಗುರುವಾರ ದಿನಾಂಕ 07.08.2025ರಂದು  ತಿಳುವಳಿಕೆ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಿದವು. 2025-26 ಶೈಕ್ಷಣಿಕ ವರ್ಷದಿಂದ 2029-30 ರವರೆಗೆ ಐದು ವರ್ಷಗಳವರೆಗೆ ಮಾನ್ಯವಾಗಿರುವ ಈ ಒಪ್ಪಂದವು, ಎರಡು ಸಂಸ್ಥೆಗಳ ನಡುವೆ ಸಹಯೋಗದ ಕಾರ್ಯಕ್ರಮಗಳು,…

ಬ್ಯಾಕ್ ಲಾಗ್’ ಹುದ್ದೆಗಳ ಭರ್ತಿ : ಸರ್ಕಾರದಿಂದ ಆದೇಶ
|

ಬ್ಯಾಕ್ ಲಾಗ್’ ಹುದ್ದೆಗಳ ಭರ್ತಿ : ಸರ್ಕಾರದಿಂದ ಆದೇಶ

ಬೆಂಗಳೂರು.07.ಆಗಸ್ಟ್.25:- ಶಾಲಾ ಶಿಕ್ಷಣ ಇಲಾಖೆಯ ಸರ್ಕಾರಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಗಳಲ್ಲಿನ ನೇರ ನೇಮಕಾತಿ ಮತ್ತು ಮುಂಬಡ್ತಿ ಬ್ಯಾಕ್ ಲಾಗ್ ಹುದ್ದೆಗಳನ್ನು ಗುರುತಿಸಿ ಭರ್ತಿ ಮಾಡುವ ಬಗ್ಗೆ ರಾಜ್ಯ ಸರ್ಕಾರವು ಮಹತ್ವದ ಆದೇಶ ಹೊರಡಿಸಿದೆ. ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, 1978 ರಿಂದ 2003ರ ವರೆಗೆ ರಾಜ್ಯದ 04 ವಿಭಾಗೀಯ ಕಛೇರಿಗಳ ಸಹ ನಿರ್ದೇಶಕರುಗಳಿಗೆ ಹಾಗೂ 2003ನೇ ಸಾಲಿನಿಂದ ರಾಜ್ಯದ 35 ಶೈಕ್ಷಣಿಕ ಜಿಲ್ಲೆಗಳ ಉಪ ನಿರ್ದೇಶಕರಾಗಿರುಗಳಿಗೆ ಸರ್ಕಾರಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಗಳಲ್ಲಿನ ನೇರ ನೇಮಕಾತಿ ಮತ್ತು…

ಜಾರ ಲಂಬಾಣಿ  ಸಮಾಜಕ್ಕೆ  ಶೇ೬ರಷ್ಟು ಮೀಸಲಾತಿ ಕಲ್ಪಿಸಬೇಕೆಂದು ಬಸವರಾಜ ಪವಾರ ಆಗ್ರಹ
|

ಜಾರ ಲಂಬಾಣಿ  ಸಮಾಜಕ್ಕೆ  ಶೇ೬ರಷ್ಟು ಮೀಸಲಾತಿ ಕಲ್ಪಿಸಬೇಕೆಂದು ಬಸವರಾಜ ಪವಾರ ಆಗ್ರಹ

ಬೀದರ.07.ಆಗಸ್ಟ್.25:- ಬಂಜಾರ ಲಂಬಾಣಿ  ಸಮಾಜಕ್ಕೆ  ಈ ಹಿಂದೆ ಬಿಜೆಪಿ ಬಸವರಾಜ ಬೊಮ್ಮಾಯಿ ನೇತೃತ್ವ ಸರ್ಕಾರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಳಮಾಡಿ ಎಂದು  ಕೇಂದ್ರಕ್ಕೆ ಶ್ರೀಫಾರಸ್ಸು  ಮಾಡಿ ಒತ್ತಾಯಿಸಿತ್ತು ಅದರಂತೆ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ ದಾಸ ವರದಿಯಂತೆ ಶೇ೬% ರಷ್ಟು ಒಳಮೀಸಲಾತಿ ಕಲ್ಪಿಸಬೇಕೆಂದು  ಬೀದರ ಜಿಲ್ಲಾ ಬಂಜಾರ ಸಮಾಜದ ಅಧ್ಯಕ್ಷ ಬಸವರಾಜ ಪವಾರ ವಕೀಲರು  ಪತ್ರಿಕಾ ಹೇಳಿಕೆ ನೀಡಿದ್ದಾರೆ. ಆಯೋಗದ ವರದಿಯಂತೆ ಲಂಬಾಣಿ ,ಭೋವಿ, ಕೋರವ ಮತ್ತು ಕೊರಚ ಸಮುದಾಯಗಳಿಗೆ ನ್ಯಾಯಯುತವಾಗಿರುವಂತೆ  ಶೇ೬% ರಷ್ಟಿ ಮೀಸಲಾತಿ ನೀಡಬೇಕು.೧೫೦ ಕೋಟಿ ರೂ.ವೆಚ್ಚದಲ್ಲಿ …

ಜನರಿಗೆ ಧ್ವನಿ ತಂದು ಕೊಟ್ಟ ಶಕ್ತಿ ಮಾಧ್ಯಮಗಳಿಗೆ ಸಲ್ಲುತ್ತದೆ- ಸಚಿವ ಈಶ್ವರ ಖಂಡ್ರೆ
|

ಜನರಿಗೆ ಧ್ವನಿ ತಂದು ಕೊಟ್ಟ ಶಕ್ತಿ ಮಾಧ್ಯಮಗಳಿಗೆ ಸಲ್ಲುತ್ತದೆ- ಸಚಿವ ಈಶ್ವರ ಖಂಡ್ರೆ

ಬೀದರ.07.ಆಗಸ್ಟ್.25:- ಜನರಿಗೆ ಧ್ವನಿ ತಂದು ಕೊಟ್ಟ ಶಕ್ತಿ ಮಾಧ್ಯಮಗಳಿಗೆ ಸಲ್ಲುತ್ತದೆ ಎಂದು ರಾಜ್ಯದ ಅರಣ್ಯ, ಪರಿಸರ ಹಾಗೂ ಜೀವಶಾಸ್ತç ಮತ್ತು ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ಅವರು ಹೇಳಿದರು. ಅವರಿಂದು ನಗರದ ಮೈಲೂರು ರಸ್ತೆಯಲ್ಲಿರುವ ಜಿ.ಎನ್.ಡಿ ಕಾಲೇಜು ಕ್ಯಾಂಪಸ್‌ನ ಗುರುನಾನಕ ಭವನ ಅವರಣದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗಳ ಸಹಯೋಗದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಪತ್ರಕರ್ತರಿಗೆ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಶಾಸಕಾಂಗ, ಕಾರ್ಯಾಂಗ ಹಾಗೂ…

ವಿಕ್ಟೋರಿಯಾ ಆಸ್ಪತ್ರೆಗೆ ಅನಿರೀಕ್ಷಿತ ಭೇಟಿ ನೀಡಿದ ಮುಖ್ಯಮಂತ್ರಿಗಳು, ವೈದ್ಯಕೀಯ ಶಿಕ್ಷಣ ಸಚಿವರು
|

ವಿಕ್ಟೋರಿಯಾ ಆಸ್ಪತ್ರೆಗೆ ಅನಿರೀಕ್ಷಿತ ಭೇಟಿ ನೀಡಿದ ಮುಖ್ಯಮಂತ್ರಿಗಳು, ವೈದ್ಯಕೀಯ ಶಿಕ್ಷಣ ಸಚಿವರು

ರಾಯಚೂರು.07.ಆಗಸ್ಟ್.25:- ರಾಯಚೂರು ಜಿಲ್ಲೆಯ ಹಟ್ಟಿಯಲ್ಲಿ ನಿಗದಿಯಾಗಿದ್ದ ಮುಖ್ಯಮಂತ್ರಿಗಳ ಪ್ರವಾಸವು ಮಳೆಯಿಂದಾಗಿ ದಿಢೀರ್ ರದ್ದಾಗಿದ್ದರಿಂದ, ಬೆಂಗಳೂರಿನಲ್ಲಿ ಆಗಸ್ಟ್ 6ರಂದು ವಿಕ್ಟೋರಿಯಾ ಆಸ್ಪತ್ರೆಗೆ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಅವರು ಅನಿರೀಕ್ಷಿತ ಭೇಟಿ ನೀಡಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣಪ್ರಕಾಶ ಆರ್. ಪಾಟೀಲ್ ಅವರೊಂದಿಗೆ ವಿಕ್ಟೋರಿಯಾ ಆಸ್ಪತ್ರೆಗೆ ತೆರಳಿ ಗ್ಯಾಸ್ಟ್ರೋಎಂಟರಾಲಜಿ ಸಂಸ್ಥೆ, ಅಪಘಾತ, ಆಘಾತ ಮತ್ತು ತುರ್ತು ಆರೈಕೆ ಕೇಂದ್ರ ಮತ್ತು ವಾಣಿ ವಿಲಾಸ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ…

ಶಾಸಕರಾದ ಬಸನಗೌಡ ದದ್ದಲ್ ಗ್ರಾಮೀಣ ಪ್ರದೇಶದಲ್ಲಿ ಸಂಚಾರ; ಏತ ನೀರಾವರಿ ಕಾಮಗಾರಿ ವೀಕ್ಷಣೆ
|

ಶಾಸಕರಾದ ಬಸನಗೌಡ ದದ್ದಲ್ ಗ್ರಾಮೀಣ ಪ್ರದೇಶದಲ್ಲಿ ಸಂಚಾರ; ಏತ ನೀರಾವರಿ ಕಾಮಗಾರಿ ವೀಕ್ಷಣೆ

ರಾಯಚೂರು.07.ಆಗಸ್ಟ್ .25: ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ಆಗಿರುವ ರಾಯಚೂರು ಗ್ರಾಮಾಂತರ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್ ಅವರು ಆಗಸ್ಟ್ 6ರಂದು ರಾಯಚೂರ ಗ್ರಾಮೀಣ ಭಾಗದಲ್ಲಿ ಸಂಚಾರ ನಡೆಸಿದರು. ಗುಂಜಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಶಾಸಕರು, 146 ಕೋಟಿ ರೂ ನಲ್ಲಿ ಗುಂಜಳ್ಳಿ ಬಸಪ್ಪ ಕೆರೆ ಹಾಗೂ ಸುತ್ತಲಿನ ಗ್ರಾಮಗಳ 9 ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಯೋಜನೆಯಾದ ಏತ ನೀರಾವರಿಯ ಕಾಮಗಾರಿ ವೀಕ್ಷಣೆ ನಡೆಸಿದರು. ರಾಯಚೂರು ಗ್ರಾಮೀಣ ಕ್ಷೇತ್ರದ ವ್ಯಾಪ್ತಿಯ ಚಿಕ್ಕಮಂಚಾಲಿ,…

ಸೇನಾ ನೇಮಕಾತಿ ರ‍್ಯಾಲಿ: ವಸತಿ ವ್ಯವಸ್ಥೆಗೆಅಡುಗೆದಾರರು, ವಾರ್ಡನ್ ನಿಯೋಜನೆ
|

ಸೇನಾ ನೇಮಕಾತಿ ರ‍್ಯಾಲಿ: ವಸತಿ ವ್ಯವಸ್ಥೆಗೆ
ಅಡುಗೆದಾರರು, ವಾರ್ಡನ್ ನಿಯೋಜನೆ

ರಾಯಚೂರು.07.ಆಗಸ್ಟ್.25: ಇಲ್ಲಿನ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಆಗಸ್ಟ್ 08ರಿಂದ ಆಗಸ್ಟ್ 26ರವರೆಗೆ ನಡೆಯುವ ಅಗ್ನಿವೀರ ಸೇನಾ ನೇಮಕಾತಿ ರ‍್ಯಾಲಿ ಹಿನ್ನಲೆಯಲ್ಲಿ ಸೇನಾ ನೇಮಕಾತಿ ರ‍್ಯಾಲಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ವ್ಯವಸ್ಥೆ ಕಲ್ಪಿಸಲು ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿನ ಖಾಯಂ ಸಿಬ್ಬಂದಿಯಾದ 36 ಜನ ಅಡುಗೆದಾರರನ್ನು ಹಾಗೂ 19 ಜನ ವಾರ್ಡಗಳನ್ನು ನಿಯೋಜನೆ ಮಾಡಲಾಗಿದೆ. ಆಗಸ್ಟ್ 08ರಿಂದ ಆಗಸ್ಟ್ 26ರವರೆಗೆ ನಡೆಯುವ ಸೇನಾ ನೇಮಕಾತಿ ರ‍್ಯಾಲಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಉಚಿತವಾಗಿ ವಸತಿ, ಕುಡಿಯುವ ನೀರು, ಬಳಕೆ ನೀರು, ಊಟ…

ಅಗ್ನಿವೀರ ಸೇನಾ ನೇಮಕಾತಿ ರ‍್ಯಾಲಿ: ವಸತಿವ್ಯವಸ್ಥೆಗೆ ಸ್ಥಾನಿಕ ವೀಕ್ಷಕರ ನೇಮಕ
|

ಅಗ್ನಿವೀರ ಸೇನಾ ನೇಮಕಾತಿ ರ‍್ಯಾಲಿ: ವಸತಿ
ವ್ಯವಸ್ಥೆಗೆ ಸ್ಥಾನಿಕ ವೀಕ್ಷಕರ ನೇಮಕ

ರಾಯಚೂರು.07.ಆಗಸ್ಟ್.25: ಇಲ್ಲಿನ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಆಗಸ್ಟ್ 08ರಿಂದ ಆಗಸ್ಟ್ 26ರವರೆಗೆ ನಡೆಯುವ ಅಗ್ನಿವೀರ್ ಸೇನಾ ರ‍್ಯಾಲಿಗೆ ಸ್ಥಾನಿಕ ವೀಕ್ಷಕರನ್ನು ನೇಮಿಸಲಾಗಿದೆ. ಈ ಸೇನಾ ನೇಮಕಾತಿ ರ‍್ಯಾಲಿಯಲ್ಲಿ ಭಾಗವಹಿಸುವ ರಾಜ್ಯದ ವಿವಿಧ ಜಿಲ್ಲೆಯ ಅಭ್ಯರ್ಥಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸೂಚನೆ ನೀಡಿದ್ದರಿಂದಾಗಿ ಈ ಅಭ್ಯರ್ಥಿಗಳಿಗೆ ಸಂತೋಷ ಹಬ್‌ನಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.ಗಾಂಧೀ ವೃತ್ತದಲ್ಲಿರುವ ಸಂತೋಷ ಹಬ್‌ನಲ್ಲಿ ಅಭ್ಯರ್ಥಿಗಳಿಗೆ ವಸತಿ ವ್ಯವಸ್ಥೆಯನ್ನು ಒದಗಿಸಿದ ಬಗ್ಗೆ ಮತ್ತು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಮತ್ತು ಸಾರಿಗೆ ಇಲಾಖೆ…

ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಅಪರಾಧಿಗೆ ಶಿಕ್ಷೆ ಪ್ರಕಟ
|

ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಅಪರಾಧಿಗೆ ಶಿಕ್ಷೆ ಪ್ರಕಟ

ಕೊಪ್ಪಳ.07.ಆಗಸ್ಟ್ .25: ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಅಮರೇಶ ಬಡಿಗೇರ ಇತನ ಮೇಲಿನ ಆರೋಪ ಸಾಭಿತಾಗಿದೆ ಎಂದು ಕೊಪ್ಪಳ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ ನ್ಯಾಯಾಲಯದ (ಪೋಕ್ಸೊ) ನ್ಯಾಯಾಧೀಶರು ಅಪರಾಧಿಗೆ ಶಿಕ್ಷೆ ವಿಧಿಸಿರುತ್ತಾರೆ. ಅಮರೇಶ ಬಡಿಗೇರ ಸಿಂಧನೂರ ತಾಲೂಕಿನ ಕನಿಹಾಳ ಗ್ರಾಮದವನಿದ್ದು ಬಾಧಿತಳು ಕೂಡ ಕನಿಹಾಳ ಗ್ರಾಮದ ತನ್ನ ಅಜ್ಜಿಯ ಮನೆಯಲ್ಲಿದ್ದ. ಪ್ರತಿದಿನ ಬಾಧಿತಳು ಸಿಂಧನೂರಿನ ಕಾಲೇಜಿಗೆ ಹೋಗಿ ಬರುವಾಗ ಆರೋಪಿತನು ದಾರಿಯಲ್ಲಿ ಬಾಧಿತಳಿಗೆ ನೋಡಿ ಸಲುಗೆಯಿಂದ ಮಾತನಾಡಿಸುತ್ತ…

ಆ. 15 ರಂದು ಕೊಪ್ಪಳ ನಗರಸಭೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ
|

ಆ. 15 ರಂದು ಕೊಪ್ಪಳ ನಗರಸಭೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಕೊಪ್ಪಳ.07.ಆಗಸ್ಟ್.25: ಕೊಪ್ಪಳ ನಗರಸಭೆಯಿಂದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಆಗಸ್ಟ್ 15 ರಂದು ಹಮ್ಮಿಕೊಳ್ಳಲಾಗಿದೆ. ಸ್ವಾತಂತ್ರ್ಯೋತ್ಸವ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮವನ್ನು ಆ. 15 ರಂದು ಬೆಳಗ್ಗೆ 8.30 ಗಂಟೆಗೆ ನಗರಸಭೆ ಕಾರ್ಯಾಲಯದ ಆವರಣದಲ್ಲಿ ಆಯೋಜಿಸಲಾಗಿದ್ದು, ಕೊಪ್ಪಳ ನಗರಸಭೆ ಅಧ್ಯಕ್ಷರಾದ ಅಮ್ಜದ್ ಪಟೇಲ್ ಅವರು ಧ್ವಜಾರೋಹಣ ನೆರವೇರಿಸುವರು ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.