ನಾಯಿ ಕಡಿತ: ಬ್ರಿಮ್ಸ್‍ಗೆ ಜಿಲ್ಲಾಧಿಕಾರಿ ಭೇಟಿ
ಬೀದರ.07.ಆಗಸ್ಟ್.25:- ಚಿಟಗುಪ್ಪಾ ತಾಲ್ಲೂಕಿನ ಮುನ್ನಾಏಖೇಳ್ಳಿ ಗ್ರಾಮದಲ್ಲಿ ಮೂವರು ನಿನ್ನೆ ನಾಯಿ ಕಡಿತದಿಂದ ಗಂಭೀರವಾಗಿ ಗಾಯಗೊಂಡು ಬ್ರಿಮ್ಸ್‍ನಲ್ಲಿ ದಾಖಲಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ರೇಬಿಸ್‍ಗೆ ನೀಡಲಾಗುವ ರೇಬೋಪೋರ ಹಾಗೂ ಇಮ್ಯುನೋಗ್ಲೊಬಿನ್ ಇಂಜೆಕ್ಷನ್‍ಗಳು ಕೊರತೆಯಾಗದಂತೆ ಕನಿಷ್ಠ 100 ವೈಲ್ಸಗಳನ್ನು ಇಡುವಂತೆ ಜಿಲ್ಲಾಧಿಕಾರಿಗಳು ಬ್ರಿಮ್ಸ್ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು. ತುರ್ತು ಪರಿಸ್ಥಿತಿಯಲ್ಲಿ ಎಲ್ಲ ಅಗತ್ಯ ಔಷಧಿಗಳು ಲಭ್ಯವಾಗಬೇಕು. ಔಷಧಿಗಳನ್ನು ಹೊರಗಡೆ ತರುವಂತೆ ಸೂಚಿಸಬಾರದೆಂದು ತಿಳಿಸಿದರು. ಚರಣ ರೆಡ್ಡಿ ಬಾಲಕ ಗಂಭೀರ ಗಾಯಗೊಂಡ ಹಿನ್ನೆಲೆಯಲ್ಲಿ…