ವಿದ್ಯುತ್ ಕಂಬ ಬಿದ್ದು ಲೈನ್‌ಮ್ಯಾನ್ ಮೃತ ಪ್ರಕರಣ: ಆರೋಪಿಗೆ ಶಿಕ್ಷೆ
ಕೊಪ್ಪಳ.07.ಆಗಸ್ಟ್.25: ಜೆ.ಸಿ.ಬಿ ಕ್ರೆನ್ ಸರಪಳಿ ಜಾರಿ ತೆಲೆ ಮೇಲೆ ಬಿದ್ದಿರುವುದರಿಂದ ಲೈನ್‌ಮ್ಯಾನ್ ಮೃತ ಪಟ್ಟಿರುವ ಪ್ರಕರಣದಲ್ಲಿ ಆರೋಪಿಗೆ ಶಿಕ್ಷೆ ಪ್ರಕಟವಾಗಿದೆ. ಕೊಪ್ಪಳ ನಗರ ಪೊಲೀಸ್ ಠಾಣೆಯ ಸಿ.ಸಿ ಸಂಖ್ಯೆ: 71/2020 (ಗುನ್ನೆ ನಂ: 158/2018) ರಲ್ಲಿ ದಾಖಲಾದ ಪ್ರಕರಣದಲ್ಲಿ ದಿ: 02-08-2018 ರಂದು ಮಧ್ಯಾಹ್ನ 2 ಗಂಟೆ ಸಮಾರಿಗೆ ಕೊಪ್ಪಳ ಗವಿಮಠ ರಸ್ತೆಯ ಆಗಲಿಕರಣ ಕಾಮಗಾರಿ ನಡೆಯುತ್ತಿರುವಾಗ ರಸ್ತೆ ಪಕ್ಕದಲ್ಲಿರುವ ವಿದ್ಯುತ್ ಕಂಬಗಳನ್ನು ಬೇರೆಕಡೆಗೆ ಸ್ಥಳಾಂತರ ಮಾಡುವಾಗ ಜೆ.ಸಿ.ಬಿ ಅಪರೇಟರ್ ಕಮ್ ಮಾಲಿಕನಾದ ಕುಮಾರಸ್ವಾಮಿ ಬಿ. ಇತನು…