ಮಹಿಳೆ ಕಾಣೆ: ಪತ್ತೆಗಾಗಿ ಮನವಿ
|

ಮಹಿಳೆ ಕಾಣೆ: ಪತ್ತೆಗಾಗಿ ಮನವಿ

ಬೀದರ.25.ಜುಲೈ.25:- ಬೀದರನ ದೀನ ದಯಾಳ ನಗರದ ನಿವಾಸಿಯಾದ ಶಿವಾನಿ ದಿಲೀಪ (19) ಇವರು ದಿನಾಂಕ: 10-07-2025 ರಂದು ಮನೆಯಿಂದ ಹೊರಗಡೆ ಹೋಗಿ ಮರಳಿ ಮನೆಗೆ ಬಾರದೇ ಕಾಣೆಯಾಗಿರುತ್ತಾಳೆ. ಕಾಣೆಯಾದ ಮಹಿಳೆಯು ತೆಳ್ಳನೆ ಮುಖಾ ಕಪ್ಪು ಗೋಧಿ ಬಣ್ಣ ಹಲ್ಲುಗಳು ಸ್ವಲ್ಪ ಮುಂದೆ ಇರುತ್ತವೆ. ತಲೆಯಲ್ಲಿ ಕೂದಲು ಸಣ್ಣಗಾಗಿರುವ ಇವಳು ಮರಾಠಿ ಹಾಗೂ ಹಿಂದಿ ಭಾಷೆಯಲ್ಲಿ ಮಾತನಾಡುತ್ತಾಳೆ. ಕಾಣೆಯಾದ ಸಮಯದಲ್ಲಿ ಮೈಮೇಲೆ ಆರೆಂಜ ಕಲರ ಚೂಡಿದಾರ ಪೈಜಾಮ ಧರಿಸಿರುತ್ತಾಳೆ. ಈ ಕಾಣೆಯಾದ ಮಹಿಳೆಯ ಬಗ್ಗೆ ಯಾರಿಗಾದರೂ ಮಾಹಿತಿ ಸಿಕ್ಕಲ್ಲಿ…

ಜು.31 ರಂದು ಪ್ರಗತಿ ಪರಿಶೀಲನಾ ಸಭೆ
|

ಜು.31 ರಂದು ಪ್ರಗತಿ ಪರಿಶೀಲನಾ ಸಭೆ

ಬೀದರ.28.ಜುಲೈ.25:- ಬೀದರ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಅಮೃತರಾವ ಚಿಮಕೋಡೆ ಅವರು ಜುಲೈ.31 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಾದ ಪಂಚ ಗ್ಯಾರಂಟಿ ಯೋಜನೆಗಳ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ. ಸದರಿ ಸಭೆಗೆ ಎಲ್ಲಾ ಅನುಷ್ಠಾನಾಧಿಕಾರಿಗಳು ಖುದ್ದಾಗಿ ಸಭೆಗೆ ಹಾಜರಾಗಬೇಕೆಂದು ಬೀದರ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ.

ಜು.30 ರಂದು ಮಾನವ ಕಳ್ಳ ಸಾಗಾಣಿಕೆ ಕಡೆ ದಿನಾಚರಣೆ: ಪ್ರತಿಜ್ಞಾ ವಿಧಿ ಕೈಗೊಳ್ಳಲು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಸೂಚನೆ
|

ಜು.30 ರಂದು ಮಾನವ ಕಳ್ಳ ಸಾಗಾಣಿಕೆ ಕಡೆ ದಿನಾಚರಣೆ: ಪ್ರತಿಜ್ಞಾ ವಿಧಿ ಕೈಗೊಳ್ಳಲು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಸೂಚನೆ

ಬೀದರ.28.ಜುಲೈ.25:- ಮಹಿಳೆಯ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದ್ದು, ಇದು ಆತಂಕಕಾರಿ ಬೆಳವಣಿಗೆಯಾದ ಹಿನ್ನೆಲೆಯಲ್ಲಿ ಮಾನವ ಸಾಗಾಣಿಕೆಯನ್ನು ತಡೆಗಟ್ಟಲು ಮತ್ತು ಸಾಗಾಣಿಕೆಗೆ ಒಳಪಟ್ಟ ಮಹಿಳೆಯ ಮತ್ತು ಮಕ್ಕಳ ಪುನರ್ ವಸತಿ ಮಾಡುವುದು ನಾಗರಿಕ ಸಮಾಜದ ಪ್ರತಿಯೊಬ್ಬರ ಕರ್ತವ್ಯವಾಗಿರುವುದ್ದರಿಂದ ವಿಶ್ವಸಂಸ್ಥೆ ಜುಲೈ-30ನ್ನು ಮಾನವ ಕಳ್ಳ ಸಾಗಾಣಿಕೆ ತಡೆ ದಿನವೆಂದು ಘೋಷಿಸಿರುತ್ತದೆ. ಹಾಗಾಗಿ ಜುಲೈ.30 ರಂದು ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಸೂಚಿಸಿರುತ್ತಾರೆ. ಭಾರತೀಯ…

ಬೀದರ | ಕೆಡಿಪಿ ಸಭೆ ಮುಂದೂಡಿಕೆ
|

ಬೀದರ | ಕೆಡಿಪಿ ಸಭೆ ಮುಂದೂಡಿಕೆ

ಬೀದರ.28.ಜುಲೈ.25:- ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ.ಖಂಡ್ರೆ ಅವರ ಅಧ್ಯಕ್ಷತೆಯಲ್ಲಿ ಜುಲೈ.29 ರಂದು ಬೀದರ ಜಿಲ್ಲಾ ಸಭಾಂಗಣದಲ್ಲಿ ನಿಗದಿಯಾಗಿದ್ದ ತ್ರೈಮಾಸಿಕ ಕೆಡಿಪಿ ಸಭೆಯನ್ನು ಕಾರಣಾಂತರಗಳಿಂದ ಮುಂದೂಡಿ, ಆಗಸ್ಟ್.1 ರಂದು ಮಧ್ಯಾಹ್ನ 12.30 ಗಂಟೆಗೆ ನಿಗದಿಪಡಿಸಲಾಗಿದೆ ಎಂದು ಸಚಿವರ ಆಪ್ತ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಳಿಯಾಳ ಆರ್‌ಸೆಟಿ ಸಂಸ್ಥೆ: ವಿವಿಧ ತರಬೇತಿಗೆ ಅರ್ಜಿ ಆಹ್ವಾನ
|

ಹಳಿಯಾಳ ಆರ್‌ಸೆಟಿ ಸಂಸ್ಥೆ: ವಿವಿಧ ತರಬೇತಿಗೆ ಅರ್ಜಿ ಆಹ್ವಾನ

ಕೊಪ್ಪಳ.28.ಜುಲೈ 25:- ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟಿ ಸಂಸ್ಥೆಯಿದ ಉಚಿತವಾಗಿ ಟ್ರಾವೆಲ್ಸ್, ಟೂರಿಸ್ಟ್ ಗೈಡ್ ಮತ್ತು ಉಚಿತ ಕಾರ ಡ್ರೈವಿಂಗ್ ತರಬೇತಿಗಾಗಿ ಆಸಕ್ತ ಗ್ರಾಮೀಣ ಭಾಗದ ನಿರುದ್ಯೋಗಿ ಯುವಕ ಯುವತಿರಿಂದ ಅರ್ಜಿ ಆಹ್ವಾನಿಸಲಾಗಿದೆ. 18 ರಿಂದ 45 ವಯೋಮಾನದ ನಿರುದ್ಯೋಗಿ ಯುವಕ ಯುವತಿರಿಗಾಗಿ ಆಗಸ್ಟ್ 11 ರಿಂದ ಉಚಿತವಾಗಿ ಟ್ರಾವೆಲ್ಸ್, ಟೂರಿಸ್ಟ್ ಗೈಡ್ ತರಬೇತಿಗಾಗಿ ಉಚಿತ ತರಬೇತಿಗಳನ್ನು ನೀಡಲಾಗುತ್ತದೆ. ಯುವಕರಿಗಾಗಿ ಆಗಸ್ಟ್ 23 ರಿಂದ ಉಚಿತ ಕಾರ ಡ್ರೈವಿಂಗ್ ತರಬೇತಿಯನ್ನು ನೀಡಲಾಗುವುದು….

ಕುಷ್ಟಗಿ: ಫಿಜಿಯೋತೆರೆಪಿಸ್ಟ್ ಹುದ್ದೆಗೆ ಅರ್ಜಿ ಆಹ್ವಾನ
|

ಕುಷ್ಟಗಿ: ಫಿಜಿಯೋತೆರೆಪಿಸ್ಟ್ ಹುದ್ದೆಗೆ ಅರ್ಜಿ ಆಹ್ವಾನ

ಕೊಪ್ಪಳ.28.ಜುಲೈ 25: ಕುಷ್ಟಗಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಸಮಗ್ರ ಶಿಕ್ಷಣ ಅಭಿಯಾನದ ಪದನಿಮಿತ್ತ ಯೋಜನಾಧಿಕಾರಿಗಳ ಕಛೇರಿಯಿಂದ 2025-26ನೇ ಸಾಲಿನಲ್ಲಿ ಸಮನ್ವಯ ಶಿಕ್ಷಣ ಮಧ್ಯವರ್ತನೆ ಕಾರ್ಯಚಟುವಟಿಕೆಗಳ ಅನುಷ್ಠಾನ ಯೋಜನೆಯಡಿ ತೀವ್ರತರನಾದ ವಿಶೇಷ ಚೇತನ ಮಕ್ಕಳಿಗೆ ಚಿಕಿತ್ಸೆ ನೀಡಲು ಫಿಜಿಯೋತೆರೆಪಿಸ್ಟ್ರ ಹುದ್ದೆಗೆ ತಾತ್ಕಾಲಿಕವಾಗಿ ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಬಹುವಿಧ ನ್ಯೂನತೆ, ಸೆರೆಬ್ರಲ್ ಪಾಲ್ಸಿ, ಹಾಗೂ ಇತರೆ ನ್ಯೂನತೆವುಳ್ಳ ಮಕ್ಕಳಿಗೆ ಫಿಜಿಯೋತೆರೆಪಿ ಚಿಕಿತ್ಸೆ ನೀಡಲು ಅರ್ಹ ಫಿಜಿಯೋತೆರೆಪಿಸ್ಟ್ ನ್ನು ಗೌರವಧನ ಆಧಾರದ ಮೇಲೆ ತಾತ್ಕಾಲಿಕವಾಗಿ ನೇಮಿಸಿಕೊಳ್ಳಲಾಗುವುದು. ಅಂಗಿಕೃತ…

ಕೊಪ್ಪಳ ವಿಶ್ವವಿದ್ಯಾಲಯ: ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕೊಪ್ಪಳ ವಿಶ್ವವಿದ್ಯಾಲಯ: ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕೊಪ್ಪಳ.28.ಜುಲೈ 25: ಕೊಪ್ಪಳ ವಿಶ್ವವಿದ್ಯಾಲಯದ 2025-26ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ವಿಭಾಗಗಳಿಗೆ ಕೊಪ್ಪಳ ವಿಶ್ವವಿದ್ಯಾಲಯದ ವಿವಿಧ ಸ್ನಾತಕೋತ್ತರ ಕೇಂದ್ರಗಳಲ್ಲಿನ ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಕೊಪ್ಪಳ ವಿಶ್ವವಿದ್ಯಾಲಯದ ಮುಖ್ಯ ಆವರಣ, ಸ್ನಾತಕೋತ್ತರ ಕೇಂದ್ರ, ಯಲಬುರ್ಗಾ ಮತ್ತು ಗಂಗಾವತಿಯಲ್ಲಿನ ಸ್ನಾತಕೋತ್ತರ ಪದವಿಯ ವಿವಿಧ ವಿಭಾಗಗಳಿಗೆ ಆಗತ್ಯತೆಗನುಸಾರ ಬೋಧನಾ ಕಾರ್ಯದ ನಿರ್ವಹಣೆಗಾಗಿ ಯು.ಜಿ.ಸಿ ನಿಯಮಾನುಸಾರ ಪೂರ್ಣಕಾಲಿಕ ಮತ್ತು ಅರೆಕಾಲಿಕ ಅತಿಥಿ ಉಪನ್ಯಾಸಕರ ಹುದ್ದೆಗಳಿಗಾಗಿ ಆಸಕ್ತಿಯುಳ್ಳ ಅತಿಥಿ ಉಪನ್ಯಾಸಕರನ್ನು ಪಡೆಯಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಪಡೆಯಲು ಮತ್ತು ಹೆಚ್ಚಿನ ಮಾಹಿತಿಗಾಗಿ…

ಕೊಪ್ಪಳ ವಿಶ್ವವಿದ್ಯಾಲಯ: ವಿವಿಧ ಸ್ನಾತಕೋತ್ತರ ಪದವಿಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ
|

ಕೊಪ್ಪಳ ವಿಶ್ವವಿದ್ಯಾಲಯ: ವಿವಿಧ ಸ್ನಾತಕೋತ್ತರ ಪದವಿಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ

ಕೊಪ್ಪಳ.28.ಜುಲೈ 25:- ಕೊಪ್ಪಳ ವಿಶ್ವವಿದ್ಯಾಲಯದಿಂದ 2025-26ನೇ ಶೈಕ್ಷಣಿಕ ಸಾಲಿನ ವಿವಿಧ ಸ್ನಾತಕೋತ್ತರ ಪದವಿಗಳ ಪ್ರವೇಶಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. 2025-26ನೇ ಸಾಲಿನ ಎಂ.ಎ. ಕನ್ನಡ, ಇಂಗ್ಲೀಷ್, ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಪ್ರದರ್ಶನ ಕಲೆ, ಮಹಿಳಾ ಅಧ್ಯಯನ ವಿಭಾಗ, ಪತ್ರಿಕೋದ್ಯಮ, ಎಂ.ಕಾಂ., ಎಂ.ಎಸ್ಸಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಭೂಗೋಳಶಾಸ್ತ್ರ ಮತ್ತು ಗಣಿತಶಾಸ್ತ್ರ ಕೋರ್ಸುಗಳಿಗೆ ಕೊಪ್ಪಳ ವಿಶ್ವವಿದ್ಯಾಲಯದ ಮುಖ್ಯ ಆವರಣ, ಸ್ನಾತಕೋತ್ತರ ಕೇಂದ್ರ, ಯಲಬುರ್ಗಾ, ಗಂಗಾವತಿ ಸ್ನಾತಕೋತ್ತರ ಕೇಂದ್ರಗಳು ಹಾಗೂ ಕೊಪ್ಪಳ ವಿಶ್ವವಿದ್ಯಾಲಯದ ಸಂಯೋಜಿತ ಸರ್ಕಾರಿ, ಖಾಸಗಿ ಅನುದಾನಿತ ಮತ್ತು ಅನುದಾನೇತರ…

ಉಚಿತ ಬ್ಯೂಟಿ ಪಾರ್ಲರ್, ಮಹಿಳಾ ಟೈಲರ್ ವೃತ್ತಿ ತರಬೇತಿಗೆ ಅರ್ಜಿ ಆಹ್ವಾನ
|

ಉಚಿತ ಬ್ಯೂಟಿ ಪಾರ್ಲರ್, ಮಹಿಳಾ ಟೈಲರ್ ವೃತ್ತಿ ತರಬೇತಿಗೆ ಅರ್ಜಿ ಆಹ್ವಾನ

ರಾಯಚೂರು.28.ಜುಲೈ.25:- ಇಲ್ಲಿನ ಸ್ಟೇಟ್ ಬ್ಯಾಂಕ್‌ಆಫ್‌ಇoಡಿಯಾ, ಗ್ರಾಮೀಣ ಸ್ವಯಂಉದ್ಯೋಗತರಬೇತಿ ಸಂಸ್ಥೆ (ಆರ್‌ಸೇಟಿ) ಇವರ ವತಿಯಿಂದ ಗ್ರಾಮೀಣ ನಿರುದ್ಯೋಗಿ ಮಹಿಳೆಯರಿಗಾಗಿ ಬ್ಯೂಟಿ ಪಾರ್ಲರ್ ಮ್ಯಾನೇಜ್ಮೆಂಟ್ ಹಾಗೂ ಮಹಿಳಾ ಟೈಲರ್ ವೃತ್ತಿ ತರಬೇತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು 8ನೇ ತರಗತಿ ವ್ಯಾಸಂಗ ಮಾಡಿರುವ 18 ರಿಂದ 45 ವರ್ಷದೊಳಗಿನ ವಯಸ್ಸು ಹೊಂದಿರುವ ಗ್ರಾಮೀಣ ಅಭ್ಯರ್ಥಿಗಳು ಆಧಾರ್ ಕಾರ್ಡ್ ಜೆರಾಕ್ಸ್, ಗ್ರಾಮೀಣ ಪಡಿತರ ಚೀಟಿ (ಬಿಪಿಎಲ್, ಪಿಎಚ್‌ಎಚ್, ಎನ್‌ಪಿಎಚ್‌ಎಚ್ ಮತ್ತು ಆಯ್‌ವೈ) ಜೆರಾಕ್ಸ್,. 4 ಫೋಟೋಗಳು, ಬ್ಯಾಂಕ್ ಪಾಸ್‌ಬುಕ್ ಜೆರಾಕ್ಸ್…

ಕಿರು ಟೆಂಡರ್‌ಗೆ ಅಧಿಸೂಚನೆ
|

ಕಿರು ಟೆಂಡರ್‌ಗೆ ಅಧಿಸೂಚನೆ

ರಾಯಚೂರು.28.ಜುಲೈ.25:ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಸೇವಾ ಏಜೆನ್ಸಿಗಳ ಮೂಲಕ ಶುಚಿಗೊಳಿಸುವ ವ್ಯಕ್ತಿಗಳನ್ನು ನೇಮಿಸಿಕೊಳ್ಳಲು ಕಿರು ಟೆಂಡರ್ ಅಧಿಸೂಚನೆ ಹೊರಡಿಸಲಾಗಿದ್ದು, ಅರ್ಹ ಏಜೆನ್ಸಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ನಿಯಮಗಳು ಮತ್ತು ಷರತ್ತುಗಳಿಗನುಗುಣವಾಗಿ ಆಸಕ್ತರು ಏಜೆನ್ಸಿಗಳು ಆಗಸ್ಟ್ 06ರ ಸಂಜೆ 5 ಗಂಟೆಯೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ನ್ಯಾಯಾಲಯದ ವೆಬ್‌ಸೈಟ್ ವಿಳಾಸ:  https://raichur.dcourts.gov.in/notice/short-tender-notification ನೋಡಬಹುದಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.