ತಾಳೆ ಬೆಳೆ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಮನವಿ
|

ತಾಳೆ ಬೆಳೆ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಮನವಿ

ಬೀದರ.25.ಜುಲೈ.25:- 2025-26ನೇ ಸಾಲಿಗೆ ಕೇಂದ್ರ ಪುರಸ್ಕøತ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ-ತಾಳೆ ಬೆಳೆ ಯೋಜನೆಯಡಿ ಬಸವಕಲ್ಯಾಣ ತಾಲ್ಲೂಕಿಗೆ ಸಾಮಾನ್ಯ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದಡಿ ಒಟ್ಟು 89.50 ಹೆಕ್ಟರ್ ಭೌತಿಕ ಗುರಿ ಇದ್ದು, ನೀರಾವರಿ ಸೌಲಭ್ಯ ಹೊಂದಿರುವ ರೈತ ಫಲಾನುಭವಿಯವರು ಈ ಯೋಜನೆಯ ಲಾಭ ಪಡೆಯಬಹುದಾಗಿದೆ ಎಂದು (ಜಿಲ್ಲಾ ಪಂಚಾಯತ) ಬಸವಕಲ್ಯಾಣ ಹಿರಿಯಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕಾಶಿನಾಥ ಸಹಾಯಕ ತೋಟಗಾರಿಕೆ ಅಧಿಕಾರಿ (9483857416), ಮಲ್ಲಿಕಾರ್ಜುನ ಸಹಾಯಕ ತೋಟಗಾರಿಕೆ ಅಧಿಕಾರಿ (6362412305), ಪ್ರಶಾಂತಕುಮಾರ…

ಸೋಲಪೂರ: ಶಾಲಾಭಿವೃದ್ಧಿ ಸಮಿತಿಗೆ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರ ಆಯ್ಕೆ
|

ಸೋಲಪೂರ: ಶಾಲಾಭಿವೃದ್ಧಿ ಸಮಿತಿಗೆ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರ ಆಯ್ಕೆ

ಬೀದರ.25.ಜುಲೈ.25:- ಬೀದರ ತಾಲ್ಲೂಕಿನ ಗಾದಗಿ ಗ್ರಾಮ ಪಂಚಾಯತ್‍ದಲ್ಲಿ ಬರುವ ಸೋಲಪೂರ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗೆ ಅಧ್ಯಕ್ಷರಾಗಿ ನರಸಗೊಂಡ ಮೇತ್ರೆ ಹಾಗೂ ಉಪಾಧ್ಯಕ್ಷರಾಗಿ ರವಿ ಮಲ್ಕನೋರ ಹಾಗೂ ಸದಸ್ಯರಾಗಿ ನರಸಪ್ಪಾ, ಬಸಂತಪೂರ, ನಾಗಪ್ಪಾ, ಚಂದ್ರಶೇಖರ, ರವೀಂದ್ರ, ಗಣಪತಿ, ಧನಗೊಂಡ, ರಾಜು ಮಡಿವಾಳ, ಕುಬೇರಗೊಂಡ, ದೇವಿಂದ್ರ, ಸಂಗೀತಾ, ಅಂಬಿಕಾ, ಪ್ರೀಯಾಂಕಾ, ಶ್ರೀದೇವಿ ಭರತ, ಶ್ರೀದೇವಿ ರಮೇಶ, ಗುರಮ್ಮಾ, ವಿಜಯಲಕ್ಷ್ಮೀ, ರಾಧಿಕಾ, ಜ್ಯೋತಿ ಅವರುಗಳು ಅವಿರೋಧವಾಗಿ ಆಯ್ಕೆಯಾದರು. ಶುಕ್ರವಾರದಂದು ಸೋಲಪೂರ ಸರಕಾರಿ ಕಿರಿಯ…

ಎಸ್‍ಎಸ್‍ಎಲ್‍ಸಿ ಫಲಿತಾಂಶ ಹೆಚ್ಚಳಕ್ಕೆ 29 ಅಂಶಗಳ ಕಾರ್ಯಕ್ರಮ ಎಲ್ಲಾ ಶಾಲೆಗಳಲ್ಲಿ ಕಡ್ಡಾಯ-ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ
|

ಎಸ್‍ಎಸ್‍ಎಲ್‍ಸಿ ಫಲಿತಾಂಶ ಹೆಚ್ಚಳಕ್ಕೆ 29 ಅಂಶಗಳ ಕಾರ್ಯಕ್ರಮ ಎಲ್ಲಾ ಶಾಲೆಗಳಲ್ಲಿ ಕಡ್ಡಾಯ-ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ

ಬೀದರ.25ಜುಲೈ.25:- ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ. ಫಲಿತಾಂಶ ಹೆಚ್ಚಿಸಲು ಶಿಕ್ಷಣ ಇಲಾಖೆ ಹೊರಡಿಸಿರುವ 29 ಅಂಶಗಳ ಕಾರ್ಯಕ್ರಮಗಳನ್ನು ಎಲ್ಲಾ ಶಾಲೆಗಳಲ್ಲಿ ಕಡ್ಡಾಯವಾಗಿ ಜಾರಿಗೆ ತರಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಸೂಚಿಸಿದರು. ಅವರು ಇತ್ತೀಚಿಗೆ ನಗರದ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ 2024-25 ನೇ ಸಾಲಿನ ಪರಖ ರಾಷ್ಟ್ರೀಯ ಸರ್ವೆಕ್ಷಣಾ ಸಮೀಕ್ಷೆ ಹಾಗೂ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಮತ್ತು ಎಸ್.ಎಸ್.ಎಲ್.ಸಿ. ಫಲಿತಾಂಶವನ್ನು ಉತ್ತಮ ಪಡಿಸುವ ನಿಟ್ಟಿನಲ್ಲಿ ಇಲಾಖೆ ಹೊರಡಿಸಿರುವ 29 ಅಂಶಗಳ ಆದೇಶವನ್ನು  ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ…

ಮಹಿಳಾ ಸ್ವಸಹಾಯ ಗುಂಪುಗಳ ಆರ್ಥಿಕ ಬಲವರ್ಧನೆಗೆ ಮತ್ಸ್ಯ ಸಂಜೀವಿನಿ ಯೋಜನೆ ಸಹಕಾರಿ- ಸಿಇಓ ವರ್ಣಿತ್ ನೇಗಿ
|

ಮಹಿಳಾ ಸ್ವಸಹಾಯ ಗುಂಪುಗಳ ಆರ್ಥಿಕ ಬಲವರ್ಧನೆಗೆ ಮತ್ಸ್ಯ ಸಂಜೀವಿನಿ ಯೋಜನೆ ಸಹಕಾರಿ- ಸಿಇಓ ವರ್ಣಿತ್ ನೇಗಿ

ಕೊಪ್ಪಳ.25.ಜುಲೈ .25: ಮೀನು ಕೃಷಿ ಕೈಗೊಳ್ಳಲು ಮತ್ಸ್ಯ ಸಂಜೀವಿನಿ ಯೋಜನೆಯು ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರಿಗೆ ಆರ್ಥಿಕ ಬಲವರ್ಧನೆಗಾಗಿ ತುಂಬಾ ಸಹಕಾರಿಯಾಗಲಿದೆ ಎಂದು ಕೊಪ್ಪಳ ಜಿಲ್ಲಾ ಪಂಚಾತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ ಹೇಳಿದರು. ಅವರು ಶುಕ್ರವಾರ ಕೊಪ್ಪಳ ಜಿಲ್ಲಾ ಪಂಚಾಯತ್ ಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ ಜಿ.ಪಂ ಹಾಗೂ ಮೀನುಗಾರಿಕೆ ಇಲಾಖೆಗಳ ಸಹಯೋಗದಲ್ಲಿ ಮತ್ಸ್ಯ ಸಂಜೀವಿನಿ ಯೋಜನೆಯಡಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗೆ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಮತ್ಸ್ಯಸಂಜೀವಿನಿ ಯೋಜನೆಯು ಕರ್ನಾಟಕದಲ್ಲಿ ಇದೊಂದು…

ಕೊಪ್ಪಳ: ಫಿಜಿಯೋ ತೆರೆಪಿಸ್ಟ್ ತಾತ್ಕಾಲಿಕ ನೇಮಕಕ್ಕೆ ಅರ್ಜಿ ಆಹ್ವಾನ
|

ಕೊಪ್ಪಳ: ಫಿಜಿಯೋ ತೆರೆಪಿಸ್ಟ್ ತಾತ್ಕಾಲಿಕ ನೇಮಕಕ್ಕೆ ಅರ್ಜಿ ಆಹ್ವಾನ

ಕೊಪ್ಪಳ.25.ಜುಲೈ.25: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಸಮಗ್ರ ಶಿಕ್ಷಣ ಕರ್ನಾಟಕ ಅಡಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಛೇರಿ ವತಿಯಿಂದ ಸಮನ್ವಯ ಶಿಕ್ಷಣ ಚಟುವಟಿಕೆ ಅಡಿಯಲ್ಲಿ ತೀವ್ರ ನ್ಯೂನತೆ ಹೊಂದಿರುವ ಬಹುವಿಧ ನ್ಯೂನತೆ, ಸೆರೆಬ್ರಲ್ ಪಾಲ್ಸಿ ಮಕ್ಕಳಿಗೆ ಫಿಜಿಯೋತೆರೆಪಿ ಚಿಕಿತ್ಸೆ ನೀಡಲು ಅರ್ಹ ಫಿಜಿಯೋತೆರೆಪಿಸ್ಟ್ ಅಭ್ಯರ್ಥಿಗಳನ್ನು ತಾತ್ಕಾಲಿಕವಾಗಿ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಬ್ಯಾಚುಲರ್‌ಆಫ್ ಫಿಜಿಯೋತೆರೆಪಿ (ಬಿ.ಪಿಟಿ) ಅಥವಾ ಡಿಪ್ಲೋಮಾ ಇನ್ ಫಿಜಿಯೋ ತೆರೆಪಿ (ಡಿ.ಪಿಟಿ) ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳನ್ನು ಗೌರವಧನ ಆಧಾರದ ಮೇಲೆ…

ಜು. 30ರಂದು ಕೊಪ್ಪಳದಲ್ಲಿ ವಾಕ್ ಇನ್ ಇಂಟರ್‌ವ್ಯೂವ್
|

ಜು. 30ರಂದು ಕೊಪ್ಪಳದಲ್ಲಿ ವಾಕ್ ಇನ್ ಇಂಟರ್‌ವ್ಯೂವ್

ಕೊಪ್ಪಳ.25.ಜುಲೈ .25: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ವಾಕ್ ಇನ್ ಇಂಟರ್‌ವ್ಯೂವ್ ಅನ್ನು ಜು. 30ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1.30 ರ ವರೆಗೆ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಕೊಪ್ಪಳದಲ್ಲಿ ಈ ವಾಕ್ ಇನ್ ಇಂಟರ್‌ವ್ಯೂವ್‌ನಲ್ಲಿ ಫ್ಲಿಪ್ ಕಾರ್ಟ್ ಪ್ರೈ.ಲಿ (FLIP KART Private Limited) ಭಾಗವಹಿಸಲಿದ್ದು, ಖಾಲಿ ಹುದ್ದೆಗಳನ್ನು ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಿದ್ದಾರೆ. ಭಾಗವಹಿಸಲು ಯಾವುದೇ ಶುಲ್ಕ ಇರುವುದಿಲ್ಲ ಎಲ್ಲರಿಗೂ ಉಚಿತ ಪ್ರವೇಶವಿರುತ್ತದೆ. ಯಾವುದೇ ಪದವಿ…

ಆಗಸ್ಟ್ 2 ರಿಂದ 12ರ ವರೆಗೆ ಡಿ.ಇಎಲ್.ಇಡಿ ಪರೀಕ್ಷೆಗಳು: ನಿಷೇದಾಜ್ಞೆ ಜಾರಿ
|

ಆಗಸ್ಟ್ 2 ರಿಂದ 12ರ ವರೆಗೆ ಡಿ.ಇಎಲ್.ಇಡಿ ಪರೀಕ್ಷೆಗಳು: ನಿಷೇದಾಜ್ಞೆ ಜಾರಿ

ಕೊಪ್ಪಳ25.ಜುಲೈ.25: ಡಿ.ಇಎಲ್.ಇಡಿ ಪರೀಕ್ಷೆಗಳು ಆಗಸ್ಟ್ 2 ರಿಂದ ಆ.12ರ ವರೆಗೆ ಮುನಿರಾಬಾದ್‌ನಲ್ಲಿ ನಡೆಯಲಿದ್ದು, ಪರೀಕ್ಷೆಗಳು ಸುಗಮ ಹಾಗೂ ಶಾಂತಿಯುತವಾಗಿ ನಡೆಯುವ ಉದ್ದೇಶದಿಂದ ಪರೀಕ್ಷಾ ಕೇಂದ್ರದ ಸುತ್ತಲೂ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಸುರೇಶ ಬಿ. ಹಿಟ್ನಾಳ ಅವರು ಆದೇಶ ಹೊರಡಿಸಿದ್ದಾರೆ. ಡಿ.ಇಎಲ್.ಇಡಿ ಪರೀಕ್ಷೆಗಳು ಆಗಸ್ಟ್ 2 ರಿಂದ ಆ.12ರ ವರೆಗೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮುನಿರಾಬಾದ್‌ನಲ್ಲಿರುವ ಕೊಪ್ಪಳ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪಿ.ಎಸ್.ಟಿ.ಇ ವಿಭಾಗದಲ್ಲಿ ಜರುಗಲಿದ್ದು, ಪರೀಕ್ಷಾ…

ಜು. 27 ರಿಂದ ಆಗಸ್ಟ್ 2ರ ವರೆಗೆ ಗಣಕಯಂತ್ರ ಶಿಕ್ಷಣ ಪರೀಕ್ಷೆಗಳು: ನಿಷೇದಾಜ್ಞೆ ಜಾರಿ
|

ಜು. 27 ರಿಂದ ಆಗಸ್ಟ್ 2ರ ವರೆಗೆ ಗಣಕಯಂತ್ರ ಶಿಕ್ಷಣ ಪರೀಕ್ಷೆಗಳು: ನಿಷೇದಾಜ್ಞೆ ಜಾರಿ

ಕೊಪ್ಪಳ.25.ಜುಲೈ.25: ಗಣಕಯಂತ್ರ ಶಿಕ್ಷಣ ಪರೀಕ್ಷೆಗಳು ಜು. 27 ರಿಂದ ಆಗಸ್ಟ್ 2ರ ವರೆಗೆ ಕೊಪ್ಪಳದ ಪರೀಕ್ಷಾ ಕೇಂದ್ರದಲ್ಲಿ ನಡೆಯಲಿದ್ದು, ಪರೀಕ್ಷೆಗಳು ಸುಗಮ ಹಾಗೂ ಶಾಂತಿಯುತವಾಗಿ ನಡೆಯುವ ಉದ್ದೇಶದಿಂದ ಪರೀಕ್ಷಾ ಕೇಂದ್ರದ ಸುತ್ತಲೂ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಸುರೇಶ ಬಿ. ಹಿಟ್ನಾಳ ಅವರು ಆದೇಶ ಹೊರಡಿಸಿದ್ದಾರೆ. ಗಣಕಯಂತ್ರ ಶಿಕ್ಷಣ ಪರೀಕ್ಷೆಗಳು ಜು. 27 ರಿಂದ ಆ.2ರ ವರೆಗೆ ಬೆಳಿಗ್ಗೆ 10.30 ರಿಂದ ಸಂಜೆ 5.30 ಗಂಟೆಯವರೆಗೆ ಕೊಪ್ಪಳ ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ…

ಕೆಪಿಎಂಇ ಕಾಯ್ದೆ ಉಲ್ಲಂಘನೆ: ರಾಯಚೂರ ಜಿಲ್ಲೆಯ ಅನಧೀಕೃತ 19 ಖಾಸಗಿ ಆಸ್ಪತ್ರೆ, ಸಂಸ್ಥೆಗಳಿಗೆ ದಂಡ
|

ಕೆಪಿಎಂಇ ಕಾಯ್ದೆ ಉಲ್ಲಂಘನೆ: ರಾಯಚೂರ ಜಿಲ್ಲೆಯ ಅನಧೀಕೃತ 19 ಖಾಸಗಿ ಆಸ್ಪತ್ರೆ, ಸಂಸ್ಥೆಗಳಿಗೆ ದಂಡ

ದೇವದುರ್ಗ ತಾಲೂಕಿನ 9, ಲಿಂಗಸೂರ ತಾಲೂಕಿನ 4, ಸಿರವಾರ ತಾಲೂಕಿನ 3, ರಾಯಚೂರ ತಾಲೂಕಿನ 2, ಮಾನ್ವಿಯ 1 ಖಾಸಗಿ ಕ್ಲಿನಿಕ್‌ಗೆ ದಂಡ ರಾಯಚೂರು.25.ಜುಲೈ 25: ರಾಯಚೂರ ಜಿಲ್ಲೆಯಲ್ಲಿ ಕೆ.ಪಿ.ಎಂ.ಇ ಕಾಯ್ದೆಯನ್ನು ಉಲ್ಲಂಘನೆ ಮಾಡಿರುವ ಖಾಸಗಿ ಆಸ್ಪತ್ರೆಗಳಿಗೆ ದಂಡ ವಿಧಿಸಿದ್ದು, ನಿಗದಿತ ಅವಧಿಯೊಳಗೆ ದಂಡ ಭರಿಸದೇ ಇದ್ದ ಪಕ್ಷದಲ್ಲಿ ನಿಯಮಾನುಸಾರ ಕಾನೂನಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಡಾ.ಸುರೇಂದ್ರಬಾಬು ಅವರು ಎಚ್ಚರಿಕೆ ನೀಡಿದ್ದಾರೆ. ದೇವದುರ್ಗ ತಾಲೂಕಿನ ನಿಷಾ ಕ್ಲಿನಿಕ್…

ಅಧಿಕಾರಿಗಳು, ಸಿಬ್ಬಂದಿಗೆ ಪ್ರೇರಣಾದಾಯಕ ಉಪನ್ಯಾಸ
|

ಅಧಿಕಾರಿಗಳು, ಸಿಬ್ಬಂದಿಗೆ ಪ್ರೇರಣಾದಾಯಕ ಉಪನ್ಯಾಸ

ರಾಯಚೂರು.25.ಜುಲೈ 25: ಒತ್ತಡ ನಿರ್ವಹಣೆ ಕುರಿತು ಅಂತಾರಾಷ್ಟ್ರೀಯ ಪ್ರೇರಣಾದಾಯಕ ಭಾಷಣಕಾರರಾದ ಡಾ.ಇ.ವಿ.ಸ್ವಾಮಿನಾಥನ್ ಅವರಿಂದ ಪ್ರೇರಣಾದಾಯಕ ಉಪನ್ಯಾಸ ಕಾರ್ಯಕ್ರಮವನ್ನು ನಗರದ ಪಂಡಿತ್ ಜಂಬಲದಿನ್ನಿ ರಂಗಮoದಿರದಲ್ಲಿ ಜುಲೈ 28ರ ಮಧ್ಯಾಹ್ನ 3ಕ್ಕೆ ಏರ್ಪಡಿಸಲಾಗಿದ್ದು, ಜಿಲ್ಲೆಯ ಸರಕಾರಿ ಇಲಾಖೆಯ ಎಲ್ಲಾ ಮುಖ್ಯಸ್ಥರು, ಸಾರ್ವಜನಿಕರು ಪಾಲ್ಗೊಳ್ಳುವಂತೆ ಜಿಲ್ಲಾಧಿಕಾರಿಗಳು ಕೋರಿದ್ದಾರೆ. ರಾಯಚೂರಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಶಾಖೆಯವರು ಡಾ.ಇ.ವಿ. ಸ್ವಾಮಿನಾಥನ್ ಅವರ ಪ್ರೇರಣಾದಾಯಕ ಉಪನ್ಯಾಸವನ್ನು ರಾಯಚೂರು ಜಿಲ್ಲೆಯ ಸಮಸ್ತ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ಏರ್ಪಡಿಸಲು ವಿನಂತಿಸಲಾಗಿದ್ದು, ಅದರಂತೆ ಜಿಲ್ಲೆಯ ಸಮಸ್ತ ಇಲಾಖೆಯ…