ಸಹಕಾರಿಗಳ ನೋಂದಣಿ ಸಮಾಪನೆ: ಆಕ್ಷೇಪಣೆ ಸಲ್ಲಿಸಲು 15ದಿನ ಕಾಲ ಅವಕಾಶ
|

ಸಹಕಾರಿಗಳ ನೋಂದಣಿ ಸಮಾಪನೆ: ಆಕ್ಷೇಪಣೆ ಸಲ್ಲಿಸಲು 15ದಿನ ಕಾಲ ಅವಕಾಶ

ಬೀದರ.25.ಜುಲೈ.25:- ಕರ್ನಾಟಕ ಸೌಹಾರ್ದ ಕಾಯ್ದೆ 1997 ರಲ್ಲಿ ನೊಂದಣಿಯಾದ ಕೆಲವು ಸಹಕಾರಿಗಳ ನೊಂದಣಿಯನ್ನು ಸಮಾಪನೆಗೊಳಿಸಲಾಗಿದೆ. ಇವುಗಳನ್ನು ಸಮಾಪನೆ ಪೂರ್ವದಲ್ಲಿ ಆಕ್ಷೇಪಣೆಗಳು ಇದ್ದಲ್ಲಿ ಸೌಹಾರ್ದ ಸಹಕಾರಿಗಳ ಸಹಾಯಕ ನಿಬಂಧಕರು, ಬೀದರ ಉಪ ವಿಭಾಗ, ಬೀದರ ಕಛೇರಿಗೆ 15 ದಿನಗೊಳಗಾಗಿ ಆಕ್ಷೇಪಣೆ ಸಲ್ಲಿಸಲು ಸಹಕಾರ ಸಂಘಗಳ ಸಹಾಯಕ ನಿಬಂಧಕರವರ ಕಾರ್ಯಾಲಯ ಬೀದರ, ಉಪ ವಿಭಾಗ ಬೀದರ ಕಚೇರಿಯ ಪ್ರಕಟಣೆಯಲ್ಲಿ ತಿಳಿಸಿದೆ. ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಬೀದರ ಉಪ ವಿಭಾಗ ಬೀದರ ಈ ಕಛೇರಿಯಲ್ಲಿ ನೊಂದಣಿಯಾಗಿರುವ ಸೌಹಾರ್ದ ಸಹಕರಿಗಳಾದ ಮಹಿಳಾ…

ಬೀದರ್ | ಬ್ರಿಮ್ಸ್ ಆಸ್ಪತ್ರೆಗಿಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಭೇಟಿ
|

ಬೀದರ್ | ಬ್ರಿಮ್ಸ್ ಆಸ್ಪತ್ರೆಗಿಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಭೇಟಿ

ಬೀದರ.25.ಜುಲೈ.25:- ಇತ್ತೀಚಿಗೆ ನಗರದ ಅಂಬೇಡ್ಕರ ಸರ್ಕಲ್ ಬಳಿ ಭಿಕ್ಷಾಟನೆಯಲ್ಲಿ ತೊಡಗಿದ್ದ ಮಗುವನ್ನು ರಕ್ಷಿಸಿ ಬ್ರಿಮ್ಸ್ ಮಕ್ಕಳ ಘಟಕಕ್ಕೆ ದಾಖಲು ಮಾಡಲಾಗಿದ್ದ ಮಗುವಿನ ಆರೋಗ್ಯ ವಿಚಾರಿಸಲು ಬ್ರಿಮ್ಸ್ ಆಸ್ಪತ್ರೆಗಿಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಭೇಟಿ ನೀಡಿ ಮಗುವನ್ನು ಎತ್ತಿಕೊಂಡು ಯೋಗಕ್ಷೇಮ ವಿಚಾರಿಸಿದರು.

ಜುಲೈ 27ರಿಂದ ಗಣಕಯಂತ್ರಶಿಕ್ಷಣ ಪರೀಕ್ಷೆ: ನಿಷೇಧಾಜ್ಞೆ ಜಾರಿ
|

ಜುಲೈ 27ರಿಂದ ಗಣಕಯಂತ್ರ
ಶಿಕ್ಷಣ ಪರೀಕ್ಷೆ: ನಿಷೇಧಾಜ್ಞೆ ಜಾರಿ

ರಾಯಚೂರು.ಜುಲೈ.25: ಗಣಕಯಂತ್ರ ಶಿಕ್ಷಣ ಪರೀಕ್ಷೆಯು ಜುಲೈ 27 ರಿಂದ ಆಗಸ್ಟ್ 02ರವರೆಗೆ ಸುರಕ್ಷಿತವಾಗಿ ನಡೆಸಲು ರಾಯಚೂರ ತಾಲೂಕಿನ ಯರಮರಸ್ ಡಯಟ್‌ನ ಪರೀಕ್ಷಾ ಕೇಂದ್ರದ ಸುತ್ತಲು 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿ, ನಿಷೇಧಾಜ್ಞೆ ಜಾರಿಗೊಳಿಸಿ ಮತ್ತು ಪರೀಕ್ಷಾ ಕೇಂದ್ರಗಳ ಸುತ್ತಲಿನ ಎಲ್ಲಾ ಝರಾಕ್ಸ ಅಂಗಡಿಗಳನ್ನು ಮತ್ತು ಸೈಬರ್ ಕೆಫೆಗಳನ್ನು ಪರೀಕ್ಷಾ ಸಮಯದಲ್ಲಿ ಕಡ್ಡಾಯವಾಗಿ ಮುಚ್ಚುವಂತೆ ಜಿಲ್ಲಾ ದಂಡಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರು ಆದೇಶ ಹೊರಡಿಸಿದ್ದಾರೆ.

ಇಂದು ಕನ್ನಡ ಭಾಷಾ ಪರೀಕ್ಷೆ: ಪರೀಕ್ಷಾ ಕೇಂದ್ರಗಳ ಸುತ್ತಲು ನಿಷೇಧಾಜ್ಞೆ ಜಾರಿ
|

ಇಂದು ಕನ್ನಡ ಭಾಷಾ ಪರೀಕ್ಷೆ: ಪರೀಕ್ಷಾ
ಕೇಂದ್ರಗಳ ಸುತ್ತಲು ನಿಷೇಧಾಜ್ಞೆ ಜಾರಿ

ರಾಯಚೂರು.25.ಜುಲೈ 25: ಕರ್ನಾಟಕ ಲೋಕಸೇವಾ ಆಯೋಗವು ದಿನಾಂಕ 13-3-2024ರಂದು ಅಧಿಸೂಚಿಸಿರುವ ವಿವಿಧ ಇಲಾಖೆಗಳ ಹೈ.ಕ.ವೃಂದದ ಗ್ರೂಪ್ ಬಿ ಹುದ್ದೆಗಳಿಗೆ ಕನ್ನಡ ಭಾಷಾ ಪರೀಕ್ಷೆಯು ರಾಯಚೂರ ತಾಲೂಕಿನ 8 ಪರೀಕ್ಷಾ ಕೇಂದ್ರಗಳಲ್ಲಿ ಜುಲೈ 26ರಂದು ನಡೆಯಲಿದೆ. ಈ ಪರೀಕ್ಷೆಯು ಸುರಕ್ಷಿತವಾಗಿ ನಡೆಸುವ ಉದ್ದೇಶದಿಂದ ಪರೀಕ್ಷಾ ಕೇಂದ್ರಗಳ ಸುತ್ತಲು 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾ ದಂಡಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರು ಆದೇಶ ಹೊರಡಿಸಿದ್ದಾರೆ. ಈ ಪರೀಕ್ಷಾ ಕೇಂದ್ರಗಳ ಸುತ್ತಲಿನ ಎಲ್ಲಾ…

ಕೈಗಾರಿಕೋದ್ಯಮಿಗಳಿಗಾಗಿ ರಾಯಚೂರಲ್ಲಿ ಜುಲೈ 30ಕ್ಕೆ ವಿಶೇಷ ಕಾರ್ಯಕ್ರಮ: ಕಾಶಿಯಾ ಅಧ್ಯಕ್ಷ ಬಿ.ಆರ್.ಗಣೇಶ್ ರಾವ್
|

ಕೈಗಾರಿಕೋದ್ಯಮಿಗಳಿಗಾಗಿ ರಾಯಚೂರಲ್ಲಿ ಜುಲೈ 30ಕ್ಕೆ ವಿಶೇಷ ಕಾರ್ಯಕ್ರಮ: ಕಾಶಿಯಾ ಅಧ್ಯಕ್ಷ ಬಿ.ಆರ್.ಗಣೇಶ್ ರಾವ್

ರಾಯಚೂರು.25.ಜುಲೈ 25: ಲೀನ್ ಯೋಜನೆ ಮತ್ತು ಝಡ್‌ಇಡಿ ಹಾಗೂ ರಫ್ತು ಕುರಿತು ಒಂದು ದಿನದ ಅರಿವು ಕಾರ್ಯಕ್ರಮವನ್ನು ರಾಯಚೂರು ಜಿಲ್ಲೆಯ ಕೈಗಾರಿಕೋದ್ಯಮಿಗಳಲ್ಲಿ ಅರಿವು ಮೂಡಿಸುವ ಸಲುವಾಗಿ ಜುಲೈ 30ರಂದು ಬೆಳಗ್ಗೆ 10 ಗಂಟೆಗೆ ಸ್ಟೇಷನ್ ರಸ್ತೆಯ ಅಜಾದ್ ನಗರದಲ್ಲಿ ಹೋಟೆಲ್ ರಂಜಿತಾ ಪ್ಯಾಲೆಸ್‌ನಲ್ಲಿ ಆಯೋಜಿಸಲಾಗಿದೆ. ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ ಮತ್ತು ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನಾ ಕೇಂದ್ರ ಹಾಗೂ ಕರ್ನಾಟಕ ವೈದ್ಯಕೀಯ ಸಣ್ಣ ಕೈಗಾರಿಕೆಗಳ ಸಂಘದ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು…

ರಿಮ್ಸ್ ಆಸ್ಪತ್ರೆಯಲ್ಲಿ ಪ್ರಥಮ ಬಾರಿಗೆ ವಿಶೇಷ ಶಸ್ತ್ರ ಚಿಕಿತ್ಸೆ ಯಶಸ್ವಿ
|

ರಿಮ್ಸ್ ಆಸ್ಪತ್ರೆಯಲ್ಲಿ ಪ್ರಥಮ ಬಾರಿಗೆ ವಿಶೇಷ ಶಸ್ತ್ರ ಚಿಕಿತ್ಸೆ ಯಶಸ್ವಿ

• ಅಂಡಾಣುದಲ್ಲಿ ನೀರು ತುಂಬಿದ ಚೀಲದ ಶಸ್ಸ್ತಚಿಕಿತ್ಸೆ• ಜಿಲ್ಲಾಧಿಕಾರಿಗಳಿಂದ ಶಸ್ಸ್ತ ಚಿಕಿತ್ಸೆಯ ವೀಕ್ಷಣೆ• ರಿಮ್ಸ್ ವೈದ್ಯರಿಗೆ ಜಿಲ್ಲಾಧಿಕಾರಿಗಳಿಂದ ಶುಭಾಶಯ• ರಿಮ್ಸಗೆ ಆಗಮಿಸಿ ಸೇವೆ ಪಡೆಯಲು ಜನತೆಗೆ ಸಲಹೆ ರಾಯಚೂರು ಜುಲೈ 25 (ಕರ್ನಾಟಕ ವಾರ್ತೆ): ಅಂಡಾಣುವಿನಲ್ಲಿ ನೀರು ತುಂಬಿದ ಚೀಲದ ಶಸ್ತ್ರ ಚಿಕಿತ್ಸೆಯು ರಾಯಚೂರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ರಿಮ್ಸ್) ಬೋಧಕ ಆಸ್ಪತ್ರೆಯಲ್ಲಿ ಪ್ರಥಮ ಬಾರಿಗೆ ಜುಲೈ 25ರಂದು ಯಶಸ್ವಿಯಾಗಿ ನಡೆಯಿತು. ಈ ಶಸ್ತ್ರ ಚಿಕಿತ್ಸೆಯ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಅವರು ಬೆಳಗ್ಗೆ ಆಸ್ಪತ್ರೆಗೆ ಭೇಟಿ…

ಹೋಮ್-ಸ್ಟೇ ನಿರ್ಮಾಣಕ ಹಾಗೂ ನವೀಕರಣಕ್ಕಾಗಿ ಸಹಾಯದನ: ಬುಡಕಟ್ಟು ಸಮುದಾಯಗಳಿಂದ ಅರ್ಜಿ ಆಹ್ವಾನ
|

ಹೋಮ್-ಸ್ಟೇ ನಿರ್ಮಾಣಕ ಹಾಗೂ ನವೀಕರಣಕ್ಕಾಗಿ ಸಹಾಯದನ: ಬುಡಕಟ್ಟು ಸಮುದಾಯಗಳಿಂದ ಅರ್ಜಿ ಆಹ್ವಾನ

ಕೊಪ್ಪಳ.25.ಜುಲೈ 25: ಕೊಪ್ಪಳ ಪ್ರವಾಸೋದ್ಯಮ ಇಲಾಖೆಯಿಂದ ಪರಿಶಿಷ್ಟ ಪಂಗಡದ ಬುಡಕಟ್ಟು ಅಥವಾ ಆದಿವಾಸಿ ಸಮುದಾಯವಿರುವ ಗ್ರಾಮಗಳಲ್ಲಿ ಆತಿಥ್ಯಾಧಾರಿತ ಪ್ರವಾಸೋದ್ಯಮವನ್ನು ಉತ್ತೇಜಿಸುವುದು, ಸ್ಥಳೀಯ ಜನರಿಗೆ ಸ್ವಯಂ ಉದ್ಯೋಗಾವಕಾಶವನ್ನು ಒದಗಿಸುವುದು ಹಾಗೂ ಬುಡಕಟ್ಟು ಸಮುದಾಯದ ಸಂಸ್ಕೃತಿ, ಪರಂಪರೆ ಮತ್ತು ನೈಸರ್ಗಿಕ ಸಂಪತ್ತನ್ನು ಪ್ರವಾಸಿಗರಿಗೆ ಪರಿಚಯಿಸುವ ದೃಷ್ಟಿಯಿಂದ ಪ್ರತಿ ಹೋಂ-ಸ್ಟೇ ನಿರ್ಮಾಣಕ್ಕಾಗಿ 5 ಲಕ್ಷ ರೂ. ಹಾಗೂ ನವೀಕರಣಕ್ಕಾಗಿ 3 ಲಕ್ಷ ರೂ.ಗಳ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಹೋಂ-ಸ್ಟೇ ನಿರ್ಮಾಣಕ್ಕಾಗಿ ಒಟ್ಟು 39 ಗ್ರಾಮಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ವಜ್ರಬಂಡಿ…

ಬಿಡಿಎಗೆ ಎಂ.ಎ. ಸಮಿ ಸೇರಿ ನಾಲ್ವರ ನಾಮ ನಿರ್ದೇಶನ
|

ಬಿಡಿಎಗೆ ಎಂ.ಎ. ಸಮಿ ಸೇರಿ ನಾಲ್ವರ ನಾಮ ನಿರ್ದೇಶನ

ಬೀದರ.25.ಜುಲೈ.25:- ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿ ನಗರದ ಎಂ.ಎ. ಸಮಿ ಸೇರಿ ನಾಲ್ವರನ್ನು ರಾಜ್ಯ ಸರ್ಕಾರ ನಾಮ ನಿರ್ದೇಶನ ಮಾಡಿದೆ. ಜನವಾಡದ ಭಗವಾನರಾವ್ ಪಾಂಡ್ರೆ, ಬೀದರ್‍ನ ಮಂಗಲಪೇಟ್‍ನ ಏಲಿಜೆಬೆತ್ ಜಯಸೂರ್ಯ ಹಾಗೂ ಭೀಮನಗರದ ವಿನೋದಕುಮಾರ ಗಣಪತರಾವ್ ನಾಮ ನಿರ್ದೇಶನಗೊಂಡ ಇವರು ಮೂವರು. ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಲತಾ ಕೆ. ಈ ಕುರಿತು ಆದೇಶ ಹೊರಡಿಸಿದ್ದಾರೆ. ಎಂ.ಎ. ಸಮಿ ಅವರು ಜಿಲ್ಲೆಯ ಕಾಂಗ್ರೆಸ್ ಹಿರಿಯ ಮುಖಂಡರಲ್ಲೊಬ್ಬರಾಗಿದ್ದಾರೆ. ಸದ್ಯ ಪಕ್ಷದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಉಳಿದವರೂ…

ಅಪರಿಚಿತ ಹೆಣ್ಣು ಮಗುವಿನ ವಾರಸುದಾರರ ಪತ್ತೆಗಾಗಿ ಮನವಿ
|

ಅಪರಿಚಿತ ಹೆಣ್ಣು ಮಗುವಿನ ವಾರಸುದಾರರ ಪತ್ತೆಗಾಗಿ ಮನವಿ

ಬೀದರ.25.ಜುಲೈ.25 :- ಬೀದರ ರೈಲ್ವೆ ನಿಲ್ದಾಣದ ವೇದಿಕೆ ಸಂಖ್ಯೆ: 2 ರಲ್ಲಿ ದಿನಾಂಕ: 13-07-2025 ರಂದು ಒಂದೂವರೆ ವರ್ಷದ ಹೆಣ್ಣು ಮಗು ಒಂಟಿಯಾಗಿ ಪತ್ತೆಯಾಗಿದ್ದು, ಈವರೆಗೆ ಮಗುವಿನ ವಾರಸುದಾರರು ಯಾರೆಂದು ಪತ್ತೆಯಾಗಿರುವುದಿಲ್ಲ. ಬೀದರ ರೈಲ್ವೆ ನಿಲ್ದಾಣ ಮಕ್ಕಳ ಸಹಾಯವಾಣಿ ಕೇಂದ್ರದವರ ದೂರಿನನ್ವಯ ಬೀದರ ರೈಲ್ವೆ ಪೊಲೀಸ್ ಠಾಣೆಯ ಗುನ್ನೆ ಗುನ್ನೆ ಸಂಖ್ಯೆ: 20/2025 ಕಲಂ 93 ಬಿ.ಎನ್.ಎಸ್.ನೇದ್ದರಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿರುತ್ತದೆ.  ಅಪರಿಚಿತ ಹೆಣ್ಣು ಮಗು 2 ಅಡಿ 3 ಇಂಚ ಎತ್ತರ ಇದ್ದು, ಮೈಯಿಂದ…

ಬೀದರ ನಗರಸಭೆ: ಅರ್ಜಿ ಆಹ್ವಾನ
|

ಬೀದರ ನಗರಸಭೆ: ಅರ್ಜಿ ಆಹ್ವಾನ

ಬೀದರ.25.ಜುಲೈ.25:- 2022-23ನೇ ಸಾಲಿನ ಎಸ್.ಎಫ್.ಸಿ. ಮತ್ತು 2024-25ನೇ ಸಾಲಿನ ನಗರಸಭೆ ನಿಧಿ 24.10%, 7.25% ಮತ್ತು 5% ಯೋಜನೆಯಡಿ ಫಲಾನುಭವಿಗಳ ಆಯ್ಕೆಗಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ವೈಯಕ್ತಿಕ ಫಲಾನುಭವಿಗಳ ಬಡವರ ಕಲ್ಯಾಣ ಕಾರ್ಯಕ್ರಮಗಳ ಫಲಾನುಭವಿಗಳ ಆಯ್ಕೆಗಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಬೀದರ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಯೋಜನೆಗಳ ವಿವರ: ಎಸ್‍ಎಫ್‍ಸಿ-ನಗರಸಭೆ ವ್ಯಾಪ್ತಿಯ ಅಂಗವೀಕಲ ಜನರಿಗೆ ಹಣಕಾಸಿನ ಸಹಾಯ ಧನ(7.25% ಯೋಜನೆ), ನಗರಸಭೆ ನಿಧಿ- ಐಎಎಸ್/ಕೆಎಎಸ್ ಪರೀಕ್ಷಯ ತೈಯಾರಿ ಮಾಡಲು ಬಯಸುವ ಪರಿಶಿಷ್ಟ ಜಾತಿಯ ಆಕಾಂಕ್ಷಿಗಳಿಗೆ/ವಸತಿ…