BSF ಗಡಿ ಭದ್ರತಾ ಪಡೆಯಲ್ಲಿ ಕಾನ್ಸ್‌ಟೇಬಲ್ ಟ್ರೇಡ್ಸ್‌ಮನ್ ಹುದ್ದೆಗಳಿಗೆ ಅರ್ಜಿ ಅಹ್ವಾನ.
|

BSF ಗಡಿ ಭದ್ರತಾ ಪಡೆಯಲ್ಲಿ ಕಾನ್ಸ್‌ಟೇಬಲ್ ಟ್ರೇಡ್ಸ್‌ಮನ್ ಹುದ್ದೆಗಳಿಗೆ ಅರ್ಜಿ ಅಹ್ವಾನ.

ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಕಾನ್ಸ್‌ಟೇಬಲ್ ಟ್ರೇಡ್ಸ್‌ಮನ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಆಸಕ್ತ ಅಭ್ಯರ್ಥಿಗಳು ನಿಗದಿತ ದಿನಾಂಕದಿಂದ ಅಧಿಕೃತ ವೆಬ್‌ಸೈಟ್ bsf.gov.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಜುಲೈ 26 ರಿಂದ ಪ್ರಾರಂಭವಾಗುತ್ತಿದ್ದು, ಆಗಸ್ಟ್ 25ರವರೆಗೆ ನಡೆಯಲಿದೆ. ಆಸಕ್ತ ಈ ನೇಮಕಾತಿ ಪ್ರಕ್ರಿಯೆಯ ಮೂಲಕ, ಬಿಎಸ್‌ಎಫ್ ಒಟ್ಟು 3588 ಕಾನ್ಸ್‌ಟೇಬಲ್ ಟ್ರೇಡ್ಸ್‌ಮನ್ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಿದೆ. ಒಟ್ಟು ಹುದ್ದೆಗಳಲ್ಲಿ 3406 ಹುದ್ದೆಗಳು ಪುರುಷ ಅಭ್ಯರ್ಥಿಗಳಿಗೆ…

ಉದ್ಯೋಗದಾತರು ಮತ್ತು ಉದ್ಯೋಗಿಗಳ ನೋಂದಣಿಯನ್ನುಉತ್ತೇಜಿಸುವ ಯೋಜನೆ (SPREE)  2025
|

ಉದ್ಯೋಗದಾತರು ಮತ್ತು ಉದ್ಯೋಗಿಗಳ ನೋಂದಣಿಯನ್ನು
ಉತ್ತೇಜಿಸುವ ಯೋಜನೆ (SPREE)  2025

ಬೀದರ.23.ಜುಲೈ.25:- ಉದ್ಯೋಗದಾತರು ಮತ್ತು ಉದ್ಯೋಗಿಗಳ ನೋಂದಣಿಯನ್ನು ಉತ್ತೇಜಿಸುವ ಯೋಜನೆ (SPREE)  2025 ಕಾರ್ಮಿಕರ ರಾಜ್ಯ ವಿಮಾ ನಿಗಮವು ಸಾಮಾಜಿಕ ಭದ್ರತಾ ವ್ಯಾಪ್ತಿಯನ್ನು ವಿಸ್ತರಿಸಲು ಅನುಮೋದಿಸಿದ ಒಂದು ವಿಶೇಷ ಉಪಕ್ರಮವಾಗಿದೆ, ದಿನಾಂಕ 1 ನೇ ಜುಲೈನಿಂದ 31 ಡಿಸೆಂಬರ್ 2025 ರಿಂದ ಸಕ್ರಿಯವಾಗಿದ್ದು, ಗುತ್ತಿಗೆ ಹಾಗೂ ತಾತ್ಕಾಲಿಕ ಕಾರ್ಮಿಕರು ಸೇರಿದಂತೆ ಇಎಸ್‍ಇ ಅಡಿಯಲ್ಲಿ ಇನ್ನೂ ನೋಂದಾವಣೆಯಾಗದ ಉದ್ಯೋಗದಾತರು ಮತ್ತು ಉದ್ಯೋಗಿಗಳ ಯಾವುದೇ ಪರಿಶೀಲನೆ ಅಥವಾ ಹಿಂದಿನ ಅವಧಿಯ ಯಾವುದೇ ಬಾಕಿಯ ಬೇಡಿಕೆ ಇಲ್ಲದೇ ನೋಂದಾಯಿಸಲು ಒಂದು ಬಾರಿಯ ಅವಕಾಶವನ್ನು…

ರಾಜ್ಯ ಪ್ರಶಸ್ತಿ : ಅರ್ಜಿ ಆಹ್ವಾನ
|

ರಾಜ್ಯ ಪ್ರಶಸ್ತಿ : ಅರ್ಜಿ ಆಹ್ವಾನ

ಬೆಂಗಳೂರು.23.ಜುಲೈ.25:-ಅಕ್ಟೋಬರ್ 01 ರಂದು ರಾಜ್ಯ ಮಟ್ಟದಲ್ಲಿ ಆಚರಿಸುತ್ತಿದ್ದು ಸೇವೆಸಲ್ಲಿಸುತ್ತಿರುವ ಹಿರಿಯ ನಾಗರಿಕರಿಗೆ ರಾಜ್ಯ ಮಟ್ಟದ ಪ್ರಶಸ್ತಿ ನೀಡಲು ಇಲಾಖೆ ಸಿದ್ಧತೆ. ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು  ಸಲ್ಲಿಸಿರುವ ಅಥವಾ ಸೇವೆ  ನೀಡಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಹೆಚ್.ಗೋವಿಂದಪ್ಪ ಅವರು ತಿಳಿಸಿದ್ದಾರೆ. ರಾಜ್ಯ ಮಟ್ಟದಲ್ಲಿ 06 ವೈಯಕ್ತಿಕ ಪ್ರಶಸ್ತಿಗಳನ್ನು ಹಾಗೂ ಹಿರಿಯ ನಾಗರಿಕ ಕ್ಷೇತ್ರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ 01 ಸಂಸ್ಥೆಗೆ ಪ್ರಶಸ್ತಿ ಸೇರಿದಂತೆ ಒಟ್ಟು 07 ಪ್ರಶಸ್ತಿಗಳನ್ನು ನೀಡಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ….

ಮೊಬೈಲ್ ಕ್ಯಾಂಟಿನ ತೆರೆಯಲು ಪ್ರವಾಸೋದ್ಯಮ ಇಲಾಖೆಯಿಂದ ಸಹಾಯಧನ: ಅರ್ಜಿ ಆಹ್ವಾನ
|

ಮೊಬೈಲ್ ಕ್ಯಾಂಟಿನ ತೆರೆಯಲು ಪ್ರವಾಸೋದ್ಯಮ ಇಲಾಖೆಯಿಂದ ಸಹಾಯಧನ: ಅರ್ಜಿ ಆಹ್ವಾನ

ಬೀದರ.23.ಜುಲೈ.25:- ಪ್ರವಾಸೋದ್ಯಮ ಇಲಾಖೆ ವತಿಯಿಂದ 2024-25ನೇ ಸಾಲಿನಲ್ಲಿ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಣ್ಣ ಉದ್ಯಮಿದಾರರನ್ನು (Entrepreneurship)  ಉತ್ತೇಜಿಸಲು ಒಂದು ತಿಂಗಳ ಉದ್ಯಮಶೀಲತೆ ತರಬೇತಿ ಹಾಗೂ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಮೊಬೈಲ್ ಕ್ಯಾಂಟಿನ್ ನಡೆಸಲು 5 ಲಕ್ಷವರೆಗೆ ಸಹಾಯಧನ ನೀಡಲು ಉದ್ದೇಶಿಸಲಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಈದರ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬೀದರ ಜಿಲ್ಲೆಗೆ ಪರಿಶಿಷ್ಟ ಜಾತಿಗೆ 06 ಅಭ್ಯರ್ಥಿಗಳ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ…

ಹುಮನಾಬಾದ: ಆ.6 ರಂದು ವಾಹನಗಳ ಬಹಿರಂಗ ಹರಾಜು
|

ಹುಮನಾಬಾದ: ಆ.6 ರಂದು ವಾಹನಗಳ ಬಹಿರಂಗ ಹರಾಜು

ಬೀದರ.23.ಜುಲೈ.25:- ಅಬಕಾರಿ ನಿರೀಕ್ಷಕರ ಕಛೇರಿ ಹುಮನಾಬಾದ ವಲಯ ಇಲ್ಲಿ ಅಬಕಾರಿ ಇಲಾಖೆ ವತಿಯಿಂದ ಘೋರ ಪ್ರಕರಣಗಳಲ್ಲಿ ಜಪ್ತು ಪಡಿಸಿದ 06 ವಿವಿಧ ಬಗೆಯ ವಾಹನಗಳನ್ನು ದಿನಾಂಕ: 06-08-2025 ರಂದು ಬಹಿರಂಗ ಹರಾಜು ಮೂಲಕ ವಿಲೇವಾರಿಗಾಗಿ ದಿನಾಂಕವನ್ನು ನಿಗದಿಪಡಿಸಲಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಬಕಾರಿ ನಿರೀಕ್ಷಕರ ಕಛೇರಿ ಹುಮನಾಬಾದ ವಲಯ ಹಾಗೂ ಅಬಕಾರಿ ಉಪ ಅಧೀಕ್ಷಕರ ಕಛೇರಿ ಬೀದರ ಉಪ ವಿಭಾಗ ಇವರುಗಳಿಗೆ ಸಂಪರ್ಕಿಸಲು ಬೀದರ ಡೆಪ್ಯುಟಿ ಕಮೀಷನರ್ ಆಫ್ ಎಕ್ಸೆöÊಜ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೀದರ: ವಾಹನಗಳ ಬಹಿರಂಗ ಹರಾಜು ಆ.5ಕ್ಕೆ
|

ಬೀದರ: ವಾಹನಗಳ ಬಹಿರಂಗ ಹರಾಜು ಆ.5ಕ್ಕೆ

ಬೀದರ.23.ಜುಲೈ.25:- ಅಬಕಾರಿ ನಿರೀಕ್ಷಕರ ಕಛೇರಿ ಬೀದರ ವಲಯ ಇಲ್ಲಿ ಅಬಕಾರಿ ಇಲಾಖೆ ವತಿಯಿಂದ ಘೋರ ಪ್ರಕರಣಗಳಲ್ಲಿ ಜಪ್ತು ಪಡಿಸಿದ 53 ವಿವಿಧ ಬಗೆಯ ವಾಹನಗಳನ್ನು ದಿನಾಂಕ: 05-08-2025 ರಂದು ಬಹಿರಂಗ ಹರಾಜು ಮೂಲಕ ವಿಲೇವಾರಿಗಾಗಿ ದಿನಾಂಕವನ್ನು ನಿಗದಿಪಡಿಸಲಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಬಕಾರಿ ನಿರೀಕ್ಷಕರ ಕಛೇರಿ ಬೀದರ ವಲಯ ಹಾಗೂ ಅಬಕಾರಿ ಉಪ ಅಧೀಕ್ಷಕರ ಕಛೇರಿ ಬೀದರ ಉಪ ವಿಭಾಗ ಇವರುಗಳಿಗೆ ಸಂಪರ್ಕಿಸಲು ಬೀದರ ಡೆಪ್ಯುಟಿ ಕಮೀಷನರ್ ಆಫ್ ಎಕ್ಸೆöÊಜ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೀದರ | ಅಪರಿಚಿತ ವ್ಯಕ್ತಿ ಮೃತ: ವಾರಸುದಾರರ ಪತ್ತೆಗೆ ಮನವಿ
| |

ಬೀದರ | ಅಪರಿಚಿತ ವ್ಯಕ್ತಿ ಮೃತ: ವಾರಸುದಾರರ ಪತ್ತೆಗೆ ಮನವಿ

ಬೀದರ.23.ಜುಲೈ.25:- ಬೀದರನ ಖಾನಾಪೂರ-ಹಲಬರ್ಗಾ ರೈಲು ನಿಲ್ದಾಣಗಳ ಮಧ್ಯ ರೈಲ್ವೆ ರೈಲು ಹಳಿಗಳ ಪಕ್ಕದಲ್ಲಿ ದಿನಾಂಕ: 21-07-2025 ರಂದು ಒಬ್ಬ ಅಪರಿಚಿತ ಗಂಡು ಮನುಷ್ಯನ (40) ಮೃತಪಟ್ಟಿರುವುದು ಕಂಡುಬoದಿದ್ದು, ಈವರೆಗೆ ಮೃತನ ವಾರಸುದಾರರು ಯಾರೆಂದು ಪತ್ತೆಯಾಗಿರುವುದಿಲ್ಲ. ಬೀದರ ರೈಲ್ವೆ ನಿಲ್ದಾಣದ ಡಿ.ವೈ.ಎಸ್.ಎಸ್. ಕುಂದನಕುಮಾರ ಅವರ ಲಿಖಿತ ದೂರಿನನ್ವಯ ಬೀದರ ರೈಲ್ವೆ ಪೊಲೀಸ್ ಠಾಣೆ ಯು.ಡಿ.ಆರ್.ನಂ. 17/2025 ಕಲಂ 194 ಬಿ.ಎನ್.ಎಸ್.ಎಸ್.ಕಾಯ್ದೆರಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿರುತ್ತದೆ. ಮೃತ ವ್ಯಕ್ತಿ 5 ಅಡಿ 4 ಇಂಚ್ ಎತ್ತರ ಇದ್ದು, ತೆಳ್ಳನೇ…

2 ಸಾವಿರಕ್ಕೂ ಅಧಿಕ ಹುದ್ದೆಗಳನ್ನು  ತಕ್ಷಣವೆ ಭರ್ತಿ
|

2 ಸಾವಿರಕ್ಕೂ ಅಧಿಕ ಹುದ್ದೆಗಳನ್ನು  ತಕ್ಷಣವೆ ಭರ್ತಿ

ಧಾರವಾಡ.23.ಜುಲೈ.25:- ರಾಜ್ಯದಲ್ಲಿ ಖಾಲಿಯಿರುವ 2000 ವ್ಯಾಧ್ಯಾಧಿಕಾರಿ ಗುಡ್ಡೆಗಳು ತಕ್ಷಣವೆ ಸರ್ಕಾರ ಭರ್ತಿ ಮಾಡಲು ಮುಂದಾಗಿದೆ. ಆರೋಗ್ಯ ಇಲಾಖೆಯು ಯಾವುದೇ ವ್ಯಕ್ತಿಗಳ ಹಿತಾಸಕ್ತಿ ಕಾಪಾಡಲು ಕೆಲಸ ಮಾಡದೇ, ಸಮುದಾಯದ ಆರೋಗ್ಯಕ್ಕಾಗಿ ಪಾರದರ್ಶಕವಾಗಿ ಕೆಲಸ ಮಾಡುತ್ತಿದೆ. ಪ್ರಥಮ ಬಾರಿಗೆ ಇಲಾಖೆಯಲ್ಲಿ ಐದು ಸಾವಿರಕ್ಕೂ ಹೆಚ್ಚು ವೈದ್ಯ, ಸಿಬ್ಬಂದಿಗಳನ್ನು ಕೌನ್ಸಿಲಿಂಗ್ ಮೂಲಕ ವರ್ಗಾವಣೆ ಮಾಡಲಾಗಿದೆ. ಇದಕ್ಕೆ ಎಲ್ಲರೂ ಸ್ಪಂದಿಸಿ, ಸಾರ್ವಜನಿಕ ಹಿತದೃಷ್ಠಿಯಿಂದ ಉತ್ತಮ ಕರ್ತವ್ಯ ನಿರ್ವಹಿಸಬೇಕೆಂದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ದಿನೇಶ ಗುಂಡೂರಾವ್ ಅವರು ಹೇಳಿದ್ದಾರೆ….

ರಾಜ್ಯದ ಗ್ರಾಮ ಪಂಚಾಯತ್ ‘PDO’ ಗಳ ವರ್ಗಾವಣೆ ಆದೇಶ!
|

ರಾಜ್ಯದ ಗ್ರಾಮ ಪಂಚಾಯತ್ ‘PDO’ ಗಳ ವರ್ಗಾವಣೆ ಆದೇಶ!

ರಾಜ್ಯ ಸರ್ಕಾರ ಗ್ರಾಮ ಪಂಚಾಯತ್ ‘PDO’ ಗಳ ವರ್ಗಾವಣೆ    ಆದೇಶ ಹೊರಡಿಸಿದೆ. ಸರ್ಕಾರದ ಅಧಿಸೂಚನೆಯಲ್ಲಿ ಕರ್ನಾಟಕ ರಾಜ್ಯ ನಾಗರಿಕ ಸೇವೆಗಳು (ಹಿರಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ (ಗ್ರೇಡ್-1 ಮತ್ತು 2) ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ವರ್ಗಾವಣೆಗಳ ನಿಯಂತ್ರಣ) ನಿಯಮಗಳು, 2024 ಅನ್ನು ರಚಿಸಲಾಗಿದ್ದು ಅದರನ್ವಯ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳನ್ನು ಕೌನ್ಸಿಲಿಂಗ್ ಮೂಲಕ ವರ್ಗಾವಣೆ ಮಾಡಲು ಕ್ರಮ ವಹಿಸಲಾಗುತ್ತಿದೆ. ಗ್ರಾಮ ಪಂಚಾಯತಿಗಳ ಪಂಚಾಯತಿ…

ಉನ್ನತ ಶಿಕ್ಷಣ ಇಲಾಖೆಯಲ್ಲಿ ಅಂಗವಿಕಲ ಪ್ರಮಾಣಪತ್ರ ಹಾವಳಿ!
|

ಉನ್ನತ ಶಿಕ್ಷಣ ಇಲಾಖೆಯಲ್ಲಿ ಅಂಗವಿಕಲ ಪ್ರಮಾಣಪತ್ರ ಹಾವಳಿ!

ಬೆಂಗಳೂರು.23.ಜುಲೈ.25:- Govt First Grade College ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಕೆಲವು ಪ್ರಾಧ್ಯಾಪಕರು ವರ್ಗಾವಣೆಗಾಗಿ Disability ಅಂಗವಿಕಲ ರಾಗುತ್ತಿರುವುದು ಇನ್ನು ಕೆಲವರು ವರ್ಗಾವಣೆಯಿಂದ ತಪ್ಪಿಸಿಕೊಳ್ಳಲು ತಮ್ಮ ಅವಲಂಬಿತರನ್ನು ಅಂಗವಿಕಲ Disability ರನ್ನಾಗಿ ಮಾಡಿರುವುದು ಬಹಿರಂಗವಾಗಿದೆ. ಜುಲೈ 2ರಂದು ನಡೆದ ಆನ್‌ಲೈನ್ ಕೌನ್ಸೆಲಿಂಗ್‌ ವರ್ಗಾವಣೆಯಲ್ಲಿ ‘ಸ್ವಯಂ ಅಂಗವಿಕಲರು’ ಎಂದು ಘೋಷಿಸಿಕೊಂಡು ಅಂಗವಿಕಲರ ಹಕ್ಕುಗಳನ್ನು ಉಲ್ಲಂಘಿಸಲು ಯತ್ನಿಸಲಾಗಿದೆ. ವರ್ಗಾವಣೆಯಲ್ಲಿ ಅಂಗವಿಕಲ ನೌಕರರಿಗೆ ಪ್ರಾಶಸ್ತ್ಯ ನೀಡಬೇಕು. ನಂತರ ಅವಲಂಬಿತರು ಅಂಗವಿಕಲರೆಂದು ಹೇಳಿಕೊಂಡಿರುವ ಬೋಧಕರನ್ನು ಪರಿಗಣಿಸಬೇಕು ಎಂಬ ನಿಯಮವನ್ನು ಉಲ್ಲಂಘಿಸಲಾಗಿದೆ ಎಂದು…