ಇಂದು ಉಪ ರಾಷ್ಟ್ರಪತಿ ಸ್ಥಾನಕ್ಕೆ  ಜಗದೀಪ್ ಧನ್ಕರ್ಅವರು ರಾಜೀನಾಮೆ.
|

ಇಂದು ಉಪ ರಾಷ್ಟ್ರಪತಿ ಸ್ಥಾನಕ್ಕೆ  ಜಗದೀಪ್ ಧನ್ಕರ್ಅವರು ರಾಜೀನಾಮೆ.

ಹೊಸ ದೆಹಲಿ.21.ಜುಲೈ.25:-ಉಪ ರಾಷ್ಟ್ರಪತಿ ಸ್ಥಾನಕ್ಕೆ ಜಗದೀಪ್ ಧನ್ಕರ್ಅವರು ರಾಜೀನಾಮೆ. ಅನಾರೋಗ್ಯದ ಕಾರಣದಿಂದಾಗಿ ಈ ಮೂಲಕ ಉಪರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಭಾರತದ ಉಪಾಧ್ಯಕ್ಷ ಜಗದೀಪ್ ಧನ್ಕರ್ ಸೋಮವಾರ ಆರೋಗ್ಯ ಕಾರಣಗಳನ್ನು ನೀಡಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ನೀಡಿದ ರಾಜೀನಾಮೆಯಲ್ಲಿ ಅವರು ಹೀಗೆ ಹೇಳಿದರು: “ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಲು ಮತ್ತು ವೈದ್ಯಕೀಯ ಸಲಹೆಯನ್ನು ಪಾಲಿಸಲು, ಸಂವಿಧಾನದ 67(ಎ) ವಿಧಿಗೆ ಅನುಗುಣವಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಭಾರತದ ಉಪಾಧ್ಯಕ್ಷ ಸ್ಥಾನಕ್ಕೆ ನಾನು…

ಸೇವಾ ಭದ್ರತೆಯೊಂದಿಗೆ ಸೇವಕಾಯ ಮಾತೆ ಗೊಳಿಸುವುದು ಈ ಎರಡು ಬೇಡಿಕೆಗಳ ಈಡೇರಿಕೆಗಾಗಿ ಅಂದು ಪ್ರತಿಭಟನೆಯ ಮೂಲಕ ಸರಕಾರಕ್ಕೆ ಮನವಿ
|

ಸೇವಾ ಭದ್ರತೆಯೊಂದಿಗೆ ಸೇವಕಾಯ ಮಾತೆ ಗೊಳಿಸುವುದು ಈ ಎರಡು ಬೇಡಿಕೆಗಳ ಈಡೇರಿಕೆಗಾಗಿ ಅಂದು ಪ್ರತಿಭಟನೆಯ ಮೂಲಕ ಸರಕಾರಕ್ಕೆ ಮನವಿ

ಕೊಪ್ಪಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಮತ್ತು ನೆರೆಹೊರೆಯ ಜಿಲ್ಲೆಗಳ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರುಗಳಲ್ಲಿ ವಿನಂತಿ ಏನಂದರೆ ಈಗಾಗಲೇ ನಿರ್ಧರಿಸಿದಂತೆ ರಾಜ್ಯ ವ್ಯಾಪಿ ಅತಿಥಿ ಉಪನ್ಯಾಸಕರ ಪ್ರತಿಭಟನೆಯು ಗದಗ್ ಜಿಲ್ಲೆ ಜಿಲ್ಲಾಡಳಿತ ಭವನದ ಎದುರು ದಿನಾಂಕ್ 22 ಜುಲೈ ದಂದು ಇದ್ದು ಪ್ರತಿಭಟನೆಯ ಮುಖ್ಯ ಉದ್ದೇಶ ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರುಗಳಿಗೆ ಎಲ್ಲರಿಗೂ ನ್ಯಾಯ ಸಿಗುವಂತೆ ಜನರಲ್ ಕೌನ್ಸಿಲಿಂಗ್ ಕಡ್ಡಾಯವಾಗಿ ಆಗಲೇಬೇಕು ಮತ್ತು ಸೇವಾ ಭದ್ರತೆಯೊಂದಿಗೆ ಸೇವಕಾಯ…

ಕರ್ನಾಟಕ ರಾಜ್ಯದಲ್ಲಿ ಇನ್ನು ಮುಂದೆ VIP ವಾಹನಗಳು ಸೈರನ್ ಬಳಸುವಂತಿಲ್ಲ
|

ಕರ್ನಾಟಕ ರಾಜ್ಯದಲ್ಲಿ ಇನ್ನು ಮುಂದೆ VIP ವಾಹನಗಳು ಸೈರನ್ ಬಳಸುವಂತಿಲ್ಲ

ಬೆಂಗಳೂರು.21.ಜುಲೈ.25:- ರಾಜ್ಯದಲ್ಲಿ ಇನ್ನು ಮುಂದೆ ರಾಜ್ಯಾದ್ಯಂತ ಗಣ್ಯ ವ್ಯಕ್ತಿಗಳ ವಾಹನಗಳಲ್ಲಿ ಸೈರನ್‌ಗಳ ಬಳಕೆಯನ್ನು ಕಡ್ಡಾಯ ನಿರ್ಬಂಧಿಸಲಾಗಿದೆ.  ಅನಗತ್ಯ ಶಬ್ದ ಮಾಲಿನ್ಯಕ್ಕೆ ಕಡಿವಾಣ ಹಾಕುವ ಮತ್ತು ‘ವಿಐಪಿ ಸಂಸ್ಕೃತಿಗೆ’ ಅಂತ್ಯ ಹಾಡುವ ದಿಟ್ಟ ಹೆಜ್ಜೆಯೊಂದರಲ್ಲಿ, ಕರ್ನಾಟಕದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಎಂ.ಎ. ಸಲೀಂ ಅವರು ಮಹತ್ವದ ಆದೇಶ ಹೊರಡಿಸಿದ್ದಾರೆ. ಶನಿವಾರ ಈ ಕುರಿತು ಅಧಿಕೃತ ಜ್ಞಾಪನಾ ಪತ್ರ (ಮೆಮೋ) ಹೊರಡಿಸಿರುವ ಸಲೀಂ, ಈ ನಿರ್ಧಾರದ ಹಿಂದಿನ ವೈಜ್ಞಾನಿಕ ಕಾರಣಗಳನ್ನು ಸ್ಪಷ್ಟಪಡಿಸಿದ್ದಾರೆ. 2016ರಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ…

ಭಾರತದಲ್ಲಿ 8ರಿಂದ 10 ರೂ ಹೆಚ್ಚಳವಾಗುತ್ತಾ ಪೆಟ್ರೋಲ್, ಡೀಸೆಲ್‌ ಬೆಲೆ… ಹೆಚ್ಚಳ ಸಾಧ್ಯತೆ.
|

ಭಾರತದಲ್ಲಿ 8ರಿಂದ 10 ರೂ ಹೆಚ್ಚಳವಾಗುತ್ತಾ ಪೆಟ್ರೋಲ್, ಡೀಸೆಲ್‌ ಬೆಲೆ… ಹೆಚ್ಚಳ ಸಾಧ್ಯತೆ.

ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಷ್ಯಾದೊಂದಿಗೆ ವ್ಯಾಪಾರ ಮಾಡುವ ದೇಶಗಳಿಗೆ 100% ದ್ವಿತೀಯಕ ತೆರಿಗೆ ವಿಧಿಸುವ ಧಮಕಿಯನ್ನು ನೀಡಿದ್ದಾರೆ. ಈ ಧಮಕಿಯಿಂದ ಭಾರತದ ಕಚ್ಚಾ ತೈಲ ಪೂರೈಕೆಯ ಮೇಲೆ ಅನಿಶ್ಚಿತತೆ ಉಂಟಾಗಬಹುದೇ ಎಂಬ ಪ್ರಶ್ನೆ ಎದುರಾಗಿದೆ. ಭಾರತ ಮತ್ತು ಚೀನಾವು ರಷ್ಯಾದಿಂದ ತೈಲ ಖರೀದಿಸುವ ಪ್ರಮುಖ ದೇಶಗಳಾಗಿವೆ. ಭಾರತವು ತನ್ನ ಕಚ್ಚಾ ತೈಲದ ಅಗತ್ಯದ 85%ಕ್ಕಿಂತ ಹೆಚ್ಚಿನದನ್ನು ಆಮದು ಮೂಲಕ ಪೂರೈಸುತ್ತದೆ, ಇದನ್ನು ರಿಫೈನರಿಗಳಲ್ಲಿ ಸಂಸ್ಕರಿಸಿ ಪೆಟ್ರೋಲ್ ಮತ್ತು ಡೀಸೆಲ್‌ನಂತಹ ಇಂಧನಗಳನ್ನು ಉತ್ಪಾದಿಸಲಾಗುತ್ತದೆ. ರಷ್ಯಾವು ಭಾರತಕ್ಕೆ ತೈಲ…

ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಉದ್ಯಮಿಗಳಿಗೆ ಎಲ್ಲ ರೀತಿಯ ಸಹಾಯ ಸೌಕರ್ಯ-ಸಚಿವ ಈಶ್ವರ ಬಿ.ಖಂಡ್ರೆ
|

ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಉದ್ಯಮಿಗಳಿಗೆ ಎಲ್ಲ ರೀತಿಯ ಸಹಾಯ ಸೌಕರ್ಯ-ಸಚಿವ ಈಶ್ವರ ಬಿ.ಖಂಡ್ರೆ

ಬೀದರ.21.ಜುಲೈ.25:- ಬೀದರ ಜಿಲ್ಲೆಯಲ್ಲಿ ಕೈಗಾರಿಕಾ ಸ್ಥಾಪನೆಗೆ ಕೈಗಾರಿಕಾ ಉದ್ಯಮಿಗಳಿಗೆ ಅಗತ್ಯವಿರುವ ಎಲ್ಲ ರೀತಿಯ ಸಹಾಯ ಸೌಕರ್ಯಗಳನ್ನು ಒದಗಿಸಲು ಸರಕಾರವು ಬದ್ಧವಿದೆಯೆಂದು ಅರಣ್ಯ ಜೀವಿ ಪರಿಸ್ಥಿತಿ ಮತ್ತು ಪರಿಸರ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ಅವರು ತಿಳಿಸಿದರು. ಅವರು ನಿನ್ನೆ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ) ಬೆಂಗಳೂರು ಹಾಗೂ ಬೀದರ್ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಬೀದರ ಜಂಟಿಯಾಗಿ ಆಯೋಜಿಸುತ್ತಿರುವ ವಿಶೇಷ ಕಾರ್ಯಕಾರಿ ಸಮಿತಿ ಸಭೆ ಹಾಗೂ ಬೀದರ್ ಜಿಲ್ಲೆಯ…

ಮಹಿಳೆಯ ತಲೆ ಮೇಲೆ KSRTC ಬಸ್
|

ಮಹಿಳೆಯ ತಲೆ ಮೇಲೆ KSRTC ಬಸ್

ತುಮಕೂರು.21.ಜುಲೈ .25:- ನಗರದ ಬಾವಿಕಟ್ಟೆ ಕಲ್ಯಾಣ ಮಂಟಪದ ಬಳಿ ಘಟನೆ ನಡೆದಿದ್ದು, ಮೃತರನ್ನು ರಾಜೇಶ್ವರಿ (45) ಅಂತ ಗುರುತಿಸಲಾಗಿದೆ. ಸೋಮವಾರ ಬೆಳ್ಳಂಬೆಳಗ್ಗೆ ತುಮಕೂರಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಹಿಟ್ ಅಂಡ್ ರನ್ ಗೆ ಮಹಿಳೆಯೊಬ್ಬರು ಬಲಿಯಾಗಿದ್ದಾರೆ. ಮಹಿಳೆಯ ತಲೆ ಮೇಲೆ KSRTC ಬಸ್ ಹತ್ತಿದ ಎನ್ನಲಾಗಿದ್ದು , ಸ್ಥಳದಲ್ಲೇ ರಾಜೇಶ್ವರಿ ಪ್ರಾಣಬಿಟ್ಟಿದ್ದಾರೆ. ಮೃತ ರಾಜೇಶ್ವರಿಯನ್ನು ತುಮಕೂರು ತಾಲೂಕಿನ ಅರಕೆರೆ ಗ್ರಾಮದವರು ಎನ್ನಲಾಗಿದೆ. ನಗರದ ಗುಬ್ಬಿ ಗೇಟ್ ಸರ್ಕಲ್ ಬಳಿ ರಾಜೇಶ್ವರಿ ಹೋಟೆಲ್ ನಡೆಸುತ್ತಿದ್ದರು.ಇವತ್ತು ಬೆಳಗ್ಗೆ ಹೋಟೆಲ್ ಗೆ…

ದೂರಶಿಕ್ಷಣ: ಕೆಎಸ್‌ಒಯು ಆನ್‌ಲೈನ್‌ ಕೋರ್ಸ್‌ಗಳಿಗೂ ಅವಕಾಶ
|

ದೂರಶಿಕ್ಷಣ: ಕೆಎಸ್‌ಒಯು ಆನ್‌ಲೈನ್‌ ಕೋರ್ಸ್‌ಗಳಿಗೂ ಅವಕಾಶ

ಮೈಸೂರು.21.ಜುಲೈ.25:- ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ), ಇದೀಗ 10 ಆನ್‌ಲೈನ್‌ ಕೋರ್ಸ್‌ಗಳಿಗೆ ಯುಜಿಸಿ ಅನುಮೋದನೆ ಪಡೆದಿದೆ. ಬಿ.ಎ., ಬಿ.ಕಾಂ., ಎಂ.ಎ.- ಕನ್ನಡ, ಹಿಂದಿ, ಸಂಸ್ಕೃತ, ಇಂಗ್ಲಿಷ್, ಅರ್ಥಶಾಸ್ತ್ರ, ಎಂ.ಕಾಂ., ಎಂಬಿಎ, ಎಂಎಸ್ಸಿ- ಗಣಿತಶಾಸ್ತ್ರ ಶಿಕ್ಷಣ ಕ್ರಮಗಳಿಗೆ ಈ ಅವಕಾಶ ಲಭ್ಯವಾಗಿದೆ. ಮೈಸೂರಿನಲ್ಲಿರುವ ಕೇಂದ್ರ ಕಚೇರಿ ಅಥವಾ ಜಿಲ್ಲೆಗಳಲ್ಲಿ ಇರುವ ಪ್ರಾದೇಶಿಕ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದು. ರಾಜ್ಯ ಅಲ್ಪಸಂಖ್ಯಾತ ಸಚಿವಾಲಯದ ಜೊತೆ ಶೈಕ್ಷಣಿಕ ಒಡಂಬಡಿಕೆಯನ್ನೂ ವಿಶ್ವವಿದ್ಯಾಲಯ ಮಾಡಿಕೊಂಡಿದೆ. ನಿಗದಿತ ಮಾನದಂಡಗಳಿಗೆ ಒಳಪಡುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶಾವಕಾಶ…

ರಾಜ್ಯದ ಜನ ಬದುಕಿರುವುದೇ ಗ್ಯಾರಂಟಿಯಿಂದ, ಮೋದಿ ಸುಳ್ಳಿನ ಸರದಾರ: AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
|

ರಾಜ್ಯದ ಜನ ಬದುಕಿರುವುದೇ ಗ್ಯಾರಂಟಿಯಿಂದ, ಮೋದಿ ಸುಳ್ಳಿನ ಸರದಾರ: AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ಸಾಧನಾ ಸಮಾವೇಶದಲ್ಲಿ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ಧ ಹರಿಹಾಯ್ದರು. ಜನ ಬದುಕಿದ್ದರೆ ಇಂತಹ ಗ್ಯಾರಂಟಿಯಿಂದಲೇ ಹೊರತು, ಸುಳ್ಳು ಪ್ರಚಾರದಿಂದ ಅಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಶನಿವಾರ ಹೇಳಿದ್ದಾರೆ. ಸಾಮಾಜಿಕ ನ್ಯಾಯಕ್ಕೆ ನಾವು ಬದ್ಧ, ಕಾಂಗ್ರೆಸ್ ತನ್ನ ಮೂಲ ಸಿದ್ಧಾಂತವನ್ನು ಎಂದಿಗೂ ಬಿಡುವುದಿಲ್ಲ. ಜನ ಬದುಕಿದ್ದರೆ ಇಂತಹ ಗ್ಯಾರಂಟಿಯಿಂದಲೇ ಹೊರತು, ಸುಳ್ಳು ಪ್ರಚಾರದಿಂದ ಅಲ್ಲ ಎಂದು ಟೀಕಿಸಿದರು. ಇದೇ ವೇಳೆ…

ನನ್ನ ವಿರುದ್ಧ ಪಿತೂರಿ; ಭಗವಂತ ಖೂಬಾ ವಿರುದ್ಧ ಪ್ರಭು ಚೌಹಾಣ್ ಗಂಭೀರ ಆರೋಪ
|

ನನ್ನ ವಿರುದ್ಧ ಪಿತೂರಿ; ಭಗವಂತ ಖೂಬಾ ವಿರುದ್ಧ ಪ್ರಭು ಚೌಹಾಣ್ ಗಂಭೀರ ಆರೋಪ

ಬೀದರ.21.ಜುಲೈ.25:- ಔರಾದ ಶಾಸಕ ಮಾಜಿ ಸಚಿವ ಪ್ರಭು ಚೌಹಾಣ್‌ ಆರೋಪಿಸಿದ್ದಾರೆ. ಮಾಜಿ ಕೇಂದ್ರ ಸಚಿವ ಭಗವಂತ್‌ ಖೂಬಾ ನನ್ನ ವಿರುದ್ಧ ಷಡ್ಯಂತ್ರ ರಚಿಸಿದ್ದಾರೆ ರಾಜಕೀಯವಾಗಿ ನನ್ನ ಮುಗಿಸಬೇಕೆಂದು ಪಿತೂರಿ ಮಾಡಲಾಗುತ್ತಿದೆ  ಎಂದು ಗಂಭೀರ ಆರೋಪ ಮಾಡಿದ್ದಾರೆ. ಬೀದರ್‌ ನಗರದಲ್ಲಿ ನಡೆದ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಲ್ಲಾ ಇತ್ಯರ್ಥವಾಗಿದ್ದರೂ ರಾಜಕೀಯ ಷಡ್ಯಂತ್ರದಿಂದಾಗಿ ಇದನ್ನು ದೊಡ್ಡದು ಮಾಡಲಾಗುತ್ತಿದೆ. ಖೂಬಾರನ್ನು ನಾನು ಸಾಯೋತನಕ ಬಿಡಲ್ಲ ಎಂದು ಶಪಥ ಮಾಡಿದ್ದರು. ಈ ಪ್ರಕರಣದ ಹಿಂದೆ ಭಗವಂತ್ ಖೂಬಾ ಕೈಯಿದೆ. ಹುಡುಗಿ ಬಗ್ಗೆ…