ಪ್ರವೇಶಾತಿಗಾಗಿ ಆಫ್‌ಲೈನ್ ಅರ್ಜಿ ಆಹ್ವಾನ
|

ಪ್ರವೇಶಾತಿಗಾಗಿ ಆಫ್‌ಲೈನ್ ಅರ್ಜಿ ಆಹ್ವಾನ

ಬೀದರ.15.ಜುಲೈ.25:- 2025ನೇ ಸಾಲಿನ ಶೈಕ್ಷಣಿಕ ಸಾಲಿನ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಬೀದರ ಇಲ್ಲಿ ಖಾಲಿ ಉಳಿದಂತಹ ಸಿಟುಗಳಿಗೆ ಆಫ್‌ಲೈನ್ ಮೂಲಕ ಅರ್ಜಿ ಅಹ್ವಾನಿಸಲಾಗಿದೆ ಎಂದು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇಚ್ಛೆಯುಳ್ಳ ಅಭ್ಯರ್ಥಿಗಳು ಖುದ್ದಾಗಿ ಬಂದು ಎಲ್ಲಾ ಮೂಲದಾಖಲಾತಿಗಳ ಎರಡು ಸೆಟ್ಟು ಝಿರಾಕ್ಸ ಪ್ರತಿಗಳು ಕೊಟ್ಟು ಹಾಗೂ ಮೂಲದಾಖಲಾತಿಗಳ ಪರೀಶೀಲನ ಶುಲ್ಕ 50 ರೂ. ಕೊಟ್ಟು ಪರಿಶೀಲಿಸಿಕೊಳ್ಳುವುದು. ಮೆರಿಟ ಕಮ್ ರಿಜರ್ವೇಶನ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು, ಹತ್ತನೇ ಪಾಸಾದ, 14…

ಕಾರ್ಮಿಕರ ಮಕ್ಕಳಿಗೆ ಪ್ರೋತ್ಸಾಹ ಧನ’ಕಾಗಿ ಅರ್ಜಿ ಆಹ್ವಾನ
|

ಕಾರ್ಮಿಕರ ಮಕ್ಕಳಿಗೆ ಪ್ರೋತ್ಸಾಹ ಧನ’ಕಾಗಿ ಅರ್ಜಿ ಆಹ್ವಾನ

2025-26ನೇ ಸಾಲಿಗೆ ಶೈಕ್ಷಣಿಕ ಪ್ರೋತ್ಸಾಹ ಧನ ಸಹಾಯಕ್ಕಾಗಿ ಮಂಡಳಿಗೆ ವಂತಿಕೆ ಪಾವತಿಸುವ ಸಂಘಟಿತ ಕಾರ್ಮಿಕರ ಅರ್ಹ ಮಕ್ಕಳಿಂದ ಕಾರ್ಮಿಕ ಇಲಾಖೆಯು ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಅನುಷ್ಠಾನಗೊಳ್ಳುತ್ತಿರುವ ಕಲ್ಯಾಣ ಯೋಜನೆಯಡಿ ಆನ್ಲೈನ್ ಅರ್ಜಿ ಆಹ್ವಾನಿಸಿದೆ. ಪ್ರೌಢ ಶಾಲಾಯಿಂದ ಸ್ನಾತಕೋತ್ತರ ಪದವಿಯವರಿಗೆ ಹಾಗೂ ವೈದ್ಯಕೀಯ/ಇಂಜಿಯಿಯರಿಗ್ ವ್ಯಾಸಂಗ ಮಾಡುತ್ತಿರುವ ಹಾಗೂ ಹಿಂದಿನ ವರ್ಷದಲ್ಲಿ ಸಾಮಾನ್ಯ ವರ್ಗ ಶೇ. 50 ರಷ್ಟು, ಪ.ಜಾ/ಪ.ಪಂ ಶೇ. 45% ರಷ್ಟು ಅಂಕ ಪಡೆದು ತೇರ್ಗಡೆಯೊಂದಿರುವ ಮತ್ತು ಕಾರ್ಮಿಕನ ಮಾಸಿಕ ವೇತನ ರೂ. 35,000/- ಗಳಿಗಿಂತ…

PM ಯಶಸ್ವಿ ವಿದ್ಯಾರ್ಥಿ ವೇತನ’ಸಿಗಲಿದೆ ವರ್ಷಕ್ಕೆ 3 ಲಕ್ಷ.!

PM ಯಶಸ್ವಿ ವಿದ್ಯಾರ್ಥಿ ವೇತನ’ಸಿಗಲಿದೆ ವರ್ಷಕ್ಕೆ 3 ಲಕ್ಷ.!

ಹೊಸ ದೆಹಲಿ.15.ಜುಲೈ.25:- ಪಿಎಂ ಯಶಸ್ವಿ ವಿದ್ಯಾರ್ಥಿವೇತನ ಯೋಜನೆ ಎಂದರೇನು? ಹಿಂದುಳಿದ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಮೆಟ್ರಿಕ್ಯುಲೇಷನ್ ಪೂರ್ವ ಅಥವಾ ಮಾಧ್ಯಮಿಕ ಹಂತದಲ್ಲಿ ಅವರ ಶಿಕ್ಷಣವನ್ನು ಬೆಂಬಲಿಸಲು ಆರ್ಥಿಕ ಸಹಾಯವನ್ನು ಒದಗಿಸುವ ಮೂಲಕ ಸಹಾಯ ಮಾಡಲು ಪ್ರಧಾನ ಮಂತ್ರಿ ಯಶಸ್ವಿ ವಿದ್ಯಾರ್ಥಿವೇತನ ಯೋಜನೆಯು ಸರ್ಕಾರವು ಅಳವಡಿಸಿಕೊಂಡ ಪ್ರಮುಖ ಉಪಕ್ರಮವಾಗಿದೆ ಪಿಎಂ ಯಶಸ್ವಿ’ ವಿದ್ಯಾರ್ಥಿ ವೇತನ ಯೋಜನೆಯು ಕೇಂದ್ರ ಪ್ರಾಯೋಜಿತ ಯೋಜನೆಯಾಗಿದ್ದು ಆರ್ಥಿಕವಾಗಿ ಹಿಂದುಳಿದ ವರ್ಗಗಳು (EBC ಗಳು) ಮತ್ತು ಅಧಿಸೂಚಿತ, ಅಲೆಮಾರಿ ಬುಡಕಟ್ಟು ಜನಾಂಗದ (DNT) ವಿದ್ಯಾರ್ಥಿಗಳಿಗೆ ಶೈಕ್ಷಣಿಕ…

ಮಹಿಳೆಯ ದೈಹಿಕ, ಮಾನಸಿಕ ಆರೋಗ್ಯ ಸ್ಥಿರತೆಯು ತಾಯ್ತನಕ್ಕೆ ಸರಿಯಾದ ವಯಸ್ಸು-ಡಾ.ದಿಲೀಪ ಡೋಂ
|

ಮಹಿಳೆಯ ದೈಹಿಕ, ಮಾನಸಿಕ ಆರೋಗ್ಯ ಸ್ಥಿರತೆಯು ತಾಯ್ತನಕ್ಕೆ ಸರಿಯಾದ ವಯಸ್ಸು-ಡಾ.ದಿಲೀಪ ಡೋಂ

ಬೀದರ.15.ಜುಲೈ.25:- ಮಹಿಳೆಯ ದೈಹಿಕ ಮತ್ತು ಮಾನಸಿಕ ಆರೋಗ್ಯ ಸ್ಥಿರತೆಯು ತಾಯ್ತನಕ್ಕೆ ಸರಿಯಾದ ವಯಸ್ಸು ಎಂದು ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ದಿಲೀಪ ಡೋಂಗ್ರೆ ತಿಳಿಸಿದರು. ಅವರು ಸೋಮವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಾರ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರಕೃತಿಯ ಸಂಪನ್ಮೂಲಗಳು ಸೀಮಿತವಾಗಿದ್ದುದರಿಂದ ಜನಸಂಖ್ಯೆಯು ಕೂಡ ಸೀಮಿತವಾಗಿರಬೇಕಾಗುತ್ತದೆ. ಜನಸಂಖ್ಯಾ ಸ್ಪೋಟವನ್ನು ತಡೆಗಟ್ಟಬೇಕಾದರೆ ಪ್ರಕೃತಿಯ ಸಂಪನ್ಮೂಲಗಳನ್ನು ಹೆಚ್ಚಿಸಲು ಸಾಧ್ಯಾವಿಲ್ಲ, ಜನಸಂಖ್ಯೆ ನಿಯಂತ್ರಿಸುವುದೊAದೆ ಏಕ ಮಾತ್ರ ಮಾರ್ಗವಾಗಿರುತ್ತದೆ ಹಾಗೂ ಜನರು ಎಚ್ಚೆತ್ತುಕೊಂಡು…

ಅತಿಥಿ ಉಪನ್ಯಾಸಕರ ನೇಮಕಾತಿಗಿರುವ ತಡೆಯಾಜ್ಞೆ ತೆರವಿಗೆ ಡಾ. ಲಿಂಗರಾಜು,  ಆಗ್ರಹ!
|

ಅತಿಥಿ ಉಪನ್ಯಾಸಕರ ನೇಮಕಾತಿಗಿರುವ ತಡೆಯಾಜ್ಞೆ ತೆರವಿಗೆ ಡಾ. ಲಿಂಗರಾಜು,  ಆಗ್ರಹ!

ಮೈಸೂರು.15.ಜುಲೈ.25:- ರಾಜ್ಯದಲ್ಲಿ ಯುಜಿಸಿ NET/SET ಮತ್ತು PH.D ಅರ್ಹತೆ ಹೊಂದಿರುವ ನಿರು ದ್ಯೋಗಿ ಅಭ್ಯರ್ಥಿಗಳು ರಾಜ್ಯ ಸರ್ಕಾರಮೇಲೇ  ಒತ್ತಾಯ.ಎ.ಸಿ.ಚಂದ್ರ ಶೇಖರ್ ಪತ್ರಿಕಾಗೋಷ್ಠಿ. ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ನಿಗದಿಪಡಿಸಿದ ವಿದ್ಯಾರ್ಹತೆಯನ್ನು ಕಡ್ಡಾಯಗೊಳಿಸಬೇಕು ಎನ್ನುವ ಹೈಕೋರ್ಟ್‌ ಸೂಚನೆ 2024–25ನೇ ಸಾಲಿನ ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆಗೆ ತೊಡಕಾಗಿದೆ. ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ಅತಿಥಿ ಉಪನ್ಯಾ ಸಕರ ಹುದ್ದೆಗಳ ನೇಮಕಕ್ಕೆ ಸರ್ಕಾ ರವೇ ಅಡ್ಡಗಾಲು ಹಾಕುತ್ತಿರು ವುದು ಸರಿಯಲ್ಲ. ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ…

ಸ್ತ್ರೀಯರ ಸಬಲೀಕರಣಕ್ಕೆ ಶಕ್ತಿ ಯೋಜನೆ ಸಹಾಯಕವಾಗಿದೆ- ಅಮೃತರಾವ ಚಿಮಕೋಡೆ
|

ಸ್ತ್ರೀಯರ ಸಬಲೀಕರಣಕ್ಕೆ ಶಕ್ತಿ ಯೋಜನೆ ಸಹಾಯಕವಾಗಿದೆ- ಅಮೃತರಾವ ಚಿಮಕೋಡೆ

ಬೀದರ.15.ಜುಲೈ.25:- ಸ್ತ್ರೀಯರ ಸಬಲೀಕರಣಕ್ಕೆ ಶಕ್ತಿ ಯೋಜನೆ ಸಹಾಯಕವಾಗಿದೆ ಎಂದು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಮೃತರಾವ ಚಿಮಕೋಡೆ ಅವರು ತಿಳಿಸಿದರು. ಅವರು ಸೋಮವಾರ ಬೀದರ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ ಶಕ್ತಿ ಯೋಜನೆಯಲ್ಲಿ ರಾಜ್ಯದಲ್ಲಿ 500 ಕೋಟಿ ಮಹಿಳೆಯರು ಉಚಿತ ಬಸ್ ಪ್ರಯಾಣ ಮಾಡಿರುವ ಸಲುವಾಗಿ ಪೂಜೆ ಸಲ್ಲಿಸಿ, ಸಿಹಿ ಹಂಚಿ ಮಾತನಾಡಿದರು. ಮಹಿಳೆಯರು ಉಚಿತವಾಗಿ ಪ್ರವಾಸಿ ತಾಣಗಳಿಗೆ, ಧಾರ್ಮಿಕ ಸ್ಥಳಗಳಿಗೆ ಮತ್ತು ವ್ಯಾಪಾರ ವಹಿವಾಟುಗಳಿಗಾಗಿ ಪ್ರಯಾಣ ಮಾಡುವುದಾಗಿ ಹಾಗೂ ಪ್ರಯಾಣದಿಂದ ಉಳಿದ ಹಣವನ್ನು…

ರೋಹಿತ್ ವೇಮುಲ ವಿಧೇಯಕ ಅಧಿವೇಶನದಲ್ಲಿ ಮಂಡನೆಗೆ ರಾಜ್ಯ ಸರ್ಕಾರದ ತಯಾರಿ.
|

ರೋಹಿತ್ ವೇಮುಲ ವಿಧೇಯಕ ಅಧಿವೇಶನದಲ್ಲಿ ಮಂಡನೆಗೆ ರಾಜ್ಯ ಸರ್ಕಾರದ ತಯಾರಿ.

ಬೆಂಗಳೂರು.15.ಜುಲೈ.25:- ರಾಜ್ಯ ಸರ್ಕಾರ ರಾಜ್ಯದ ಪರಿಶಿಷ್ಟರು, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರಿಗೆ  ಸಾರ್ವಜನಿಕ, ಖಾಸಗಿ, ಡೀಮ್ಡ್‌ ಸೇರಿದಂತೆ ಎಲ್ಲವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಘನತೆಯ ಹಕ್ಕು ರಕ್ಷಣೆ ಮಾಡಲು ‘ರೋಹಿತ್‌ ವೇಮುಲ’ ಹೆಸರಿನಲ್ಲಿ ಹೊಸ ಕಾಯಿದೆ ಜಾರಿಗೆ  ತರಲು ತಯಾರಿ. ಈ ವಿಧೇಯಕ ಮುಂಬರುವ 2 ಆಗಸ್ಟ್ ತಿಂಗಳಿನಲ್ಲಿ ವಿಧಾನಮಂಡಲ ಅಧಿವೇಶನದಲ್ಲಿ ಮಂಡನೆಗೆ ಸಿದ್ಧತೆ. ವಿಧೇಯಕ -2025′ ಕರಡು ಅಂತಿಮಗೊಂಡಿದ್ದು, ಆಗಸ್ಟ್‌ 2ನೇ ವಾರದಲ್ಲಿ‌ ಆರಂಭವಾಗಲಿರುವ ವಿಧಾನಮಂಡಲ ಅಧಿವೇಶನದಲ್ಲಿ ಮಂಡನೆಗೆ ಬಯಸಿದೆ. ರೋಹಿತ್‌ ವೇಮುಲ ವಿಧೇಯಕ ಕುರಿತು ಈಗಾಗಲೇ ಚರ್ಚೆ…

ಅತಿಥಿ ಉಪನ್ಯಾಸಕರ ಮರಣ’ಕೆ ಕಾರಣ  ಸರ್ಕಾರ!
|

ಅತಿಥಿ ಉಪನ್ಯಾಸಕರ ಮರಣ’ಕೆ ಕಾರಣ  ಸರ್ಕಾರ!

ಬೆಂಗಳೂರು.15.ಜುಲೈ.25- ಸಮಾಜವಾದಿ ಬಡವರಬಂಧು ದೀನ್ ದಲಿತರ ಉದ್ಧಾರಕ ಎಂದೆಲ್ಲಾ ಕರೆಸಿಕೊಳ್ಳುತ್ತಿರುವ ರಾಜ್ಯದ ಘನವೆಕ್ರ ಮುಖ್ಯಮಂತ್ರಿ  ಸಮಸ್ಯೆಗಳ ಬಗ್ಗೆ ಜಾಣ ಕಿವುಡು, ಜಾಣ ಕುರುಡುತನ ತೆಗೆದುಕೊಂಡು ಕೊನೆಗೆ ಅರೆಕಾಲಿಕ ಉಪನ್ಯಾಸಕರಾಗಿ ಸೇವೆ ಸಲ್ಲಿಸಿರುವ [1993-1994 ಯಾವುದೇ ಇಲಾಖೆಗಳಲ್ಲಿ ದಿನಗೂಲಿ. ಗುತ್ತಿಗೆ ಆಧಾರದ ಮಾಡಲೇಬೇಕು ಎಂದು ಸುಪ್ರೀಂ ಕೋರ್ಟ್ ಹೇಳುತ್ತಾ ಬಂದಿದ್ದರೂ ಈಗ ಅತಿಥಿ ಉಪನ್ಯಾಸಕರಿಗೆ ಯುಜಿಸಿಯ ಅವುಗಳನ್ನು ಪಾಸು ಮಾಡದವರನ್ನು ಆನರ್ಪರೆಂದು ಹೊರಗೆ ದೂಡಿ ಬಿಟ್ಟರೆ ಈಗ ಸುಮಾರು ಐದೂವರೆ ಸಾವಿರ ಅತಿಥಿ ಉಪನ್ಯಾಸಕರ ಪಾಡೇನು…? ಸರಕಾರಗಳು ವಯಸ್ಸಿದ್ದಾಗ…

ಇಂಟೆಲಿಜೆನ್ಸ್ ಬ್ಯೂರೋದಲ್ಲಿ 3,717 ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಇಂಟೆಲಿಜೆನ್ಸ್ ಬ್ಯೂರೋದಲ್ಲಿ 3,717 ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಹೊಸ ದೆಹಲಿ.15.ಜುಲೈ.25:- ಕೇಂದ್ರ ಗೃಹ ಸಚಿವಾಲಯವು ಹಾಗೂ ಗುಪ್ತಚರ ಬ್ಯೂರೋ (IB) ACIO (II) ಕಾರ್ಯನಿರ್ವಾಹಕ ಹುದ್ದೆಗಳ ನೇಮಕಾತಿಗಾಗಿ  ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಒಟ್ಟು 3,717 ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸುತ್ತಿದೆ. ಆನ್‌ಲೈನ್ ಅರ್ಜಿ ಪ್ರಕ್ರಿಯೆಯು ಜುಲೈ 19, 2025 ರಂದು ಪ್ರಾರಂಭವಾಗುತ್ತದೆ. ಅರ್ಜಿಗಳನ್ನು ಆಗಸ್ಟ್ 10, 2025 ರವರೆಗೆ ಸಲ್ಲಿಸಬಹುದು. ವಿವಿಧ ವರ್ಗಗಳಲ್ಲಿನ ಗ್ರೇಡ್ II/ಕಾರ್ಯನಿರ್ವಾಹಕ ಹುದ್ದೆಗಳನ್ನು ಈ ಅಧಿಸೂಚನೆಯ ಮೂಲಕ ಭರ್ತಿ ಮಾಡಲಾಗುತ್ತದೆ. ಅರ್ಹತಾ ಮಾನದಂಡಗಳನ್ನು ಪೂರೈಸುವ ಆಸಕ್ತ ಅಭ್ಯರ್ಥಿಗಳು ಗೃಹ…

ಚಿತ್ರದುರ್ಗ : ನಾಲ್ಕು ವರ್ಷಗಳಲ್ಲಿ 8,094 ಕ್ಕೂ ಅಧಿಕ ಬಾಲಗರ್ಭಿಣಿ ಪ್ರಕರಣ : ಎಫ್.ಐ.ಆರ್ ದಾಖಲಿಸಲು ಆಯೋಗ ಚಿಂತನೆ.
|

ಚಿತ್ರದುರ್ಗ : ನಾಲ್ಕು ವರ್ಷಗಳಲ್ಲಿ 8,094 ಕ್ಕೂ ಅಧಿಕ ಬಾಲಗರ್ಭಿಣಿ ಪ್ರಕರಣ : ಎಫ್.ಐ.ಆರ್ ದಾಖಲಿಸಲು ಆಯೋಗ ಚಿಂತನೆ.

ಚಿತ್ರದುರ್ಗ.15.ಜುಲೈ.25: ರಾಜ್ಯದಲ್ಲಿ ದಿನಾಲೂ ಬಾಲ ಗರ್ಭಿಣಿ ಪ್ರಕರಣಗಳು ಹೆಚ್ಚಾಗಿಗೆ ಸರ್ಕಾರ ಮತ್ತು ಇಲಾಖೆಗಳು ಸತತ ಪ್ರಯತ್ನ ನಡೆಸುತ್ತಿದೆ ಆದರೆ ಪ್ರಕರಣಗಳು ಕಡಿಮಆಗುತಿಲ. ನಾಲ್ಕು ವರ್ಷಗಳಲ್ಲಿ 8,094 ಕ್ಕೂ ಅಧಿಕ ಬಾಲಗರ್ಭಿಣಿ ಪ್ರಕರಣ ವೈದ್ಯಾಧಿಕಾರಿಗಳು ಹತ್ತಿರ ಪೊಲೀಸ್ ಠಾಣೆ ಹಾಗೂ ಮಕ್ಕಳ ರಕ್ಷಣಾಧಿಕಾರಿ ಮಾಹಿತಿ ನೀಡಬೇಕು. ಈ ಮಾಹಿತಿ ಆಧರಿಸಿ ಪೊಲೀಸರು ಪೋಕ್ಸೋ ಹಾಗೂ ಬಾಲ್ಯವಿವಾಹ ನಿಷೇಧ ಕಾಯ್ದೆಯಡಿ ಎಫ್.ಐ.ಆರ್ ದಾಖಲಿಸಿ ವಿಚಾರಣೆ ನಡೆಸುವಂತೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ ತಾಕೀತು ಮಾಡಿದರು….