ಇತಿಹಾಸ ಪ್ರಸಿದ್ಧ ತಾಲ್ಲೂಕಿನ ಕರ್ಕಿಹಳ್ಳಿಹಲ್ಲಿರುವ ಮೃತ್ಯುಂಜಯೇಶ್ವರ (ಶಿವಚಿದಂಬರೇಶ್ವರ) ಕ್ಷೇತ್ರದಲ್ಲಿ ಗುರುಪೂರ್ಣಿಮೆ
ಕೊಪ್ಪಳ, 10- ಇತಿಹಾಸ ಪ್ರಸಿದ್ಧ ತಾಲ್ಲೂಕಿನ ಕರ್ಕಿಹಳ್ಳಿಹಲ್ಲಿರುವ ಮೃತ್ಯುಂಜಯೇಶ್ವರ (ಶಿವಚಿದಂಬರೇಶ್ವರ) ಕ್ಷೇತ್ರದಲ್ಲಿ ಗುರುಪೂರ್ಣಿಮೆ ಅಂಗವಾಗಿ ಗುರುವಾರ 21ನೇ ವರ್ಷದ ಮಹಾರಥೋತ್ಸವ ಸಂಭ್ರಮದಿಂದ ನೆರವೇರಿತು. ಕರ್ನಾಟಕ ಹಾಗೂ ಮಹಾರಾಷ್ಟ್ರದ ಭಕ್ತರು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ರಥೋತ್ಸವಕ್ಕೂ ಮೊದಲು ನಡೆದ ಹೋಮದ ಪೂರ್ಣಾಹುತಿಯ ಬಳಿಕ ಆಶೀರ್ವಚನ ನಿಡಿದ ಕ್ಷೇತ್ರದ ಗುರುಗಳಾದ ಸುರೇಶ ಪಾಟೀಲ್ ‘ಕರ್ಕಿಹಳ್ಳಿ ಸಿದ್ಧಿಕ್ಷೇತ್ರವಾಗಿದೆ. ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವೆ ಶಕ್ತಿಯಿದೆ. ಭಕ್ತರು ಪಾದಯತ್ರೆ ಮೂಲಕ ಬಂದಿದ್ದಾರೆ. ಅಖಂಡ ವೀಣಾ ಪಾರಾಯಣದಲ್ಲಿ ಪಾಲ್ಗೊಂಡಿದ್ದ ಭಕ್ತರು ಅದೃಷ್ಟವಂತರು’ ಎಂದರು. ‘ಭಗವಂತನ ಸೇವೆ ಮಾಡುವುದು…