ಔರಾದ|ಇಂದಿನಿಂದ ವಷಾ೯ವಾಸ ಪ್ರಾರಂಭ
ಇಂದಿನಿಂದ ವಷಾ೯ವಾಸ ಪ್ರಾರಂಭ ಪಾಲಿ ಭಾಷೆಯಲ್ಲಿ ‘ವಸ್ಸಾ’ ಎಂದೂ ಕರೆಯಲ್ಪಡುವ ವಷಾ೯ವಾಸವು ಬೌದ್ಧಧರ್ಮದ ಪ್ರಮುಖ ಆಚರಣೆಯಲ್ಲಿ ಒಂದು. ಇದು ಬೌದ್ಧ ಭಿಕ್ಖೂಗಳಿಗಾಗಿ ಮಹತ್ವಪೂಣ೯ವಾದ ಮೂರು ತಿಂಗಳುಗಳ ಅವಧಿಯಾಗಿದ್ದು, ಮಳೆಗಾಲದ ಋತುವಿನಲ್ಲಿ ಭಿಕ್ಖೂಗಳು ಒಂದೇ ಸ್ಥಳದಲ್ಲಿ ಒಂದು ವಿಹಾರದಲ್ಲಿ ಇದ್ದುಕೊಂಡು ಧ್ಯಾನ, ಅಧ್ಯಯನ ಹಾಗೂ ಜ್ಞಾನಾಜ೯ನೆಗಾಗಿ ತಮ್ಮ ಸಮಯವನ್ನು ನಿಡುತ್ತಾರೆ. ಬೌದ್ಧ ಭಿಕ್ಖೂಗಳ ಆಧ್ಯಾತ್ಮಿಕ ಅಭ್ಯಾಸದ ಅಭಿವೃದ್ಧಿ ಹಾಗೂ ಜನಸಮುದಾಯದ ಜೋತೆ ಒಂದು ಉತ್ತಮ ಸಂಬಂಧ ಹಾಗೂ ಒಡನಾಟ ಬೆಳೆಸುವುದೆ ಇದರ ಪ್ರಮುಖ ಉದ್ದೆಶವಾಗಿದೆ. ಈ ಅವಧಿಯು ಬೌದ್ಧ ಧಮ್ಮದಲ್ಲಿ…