ಸರ್ಕಾರದ ಎರಡು ವರ್ಷ ಸಾಧನೆ ಬಿಂಬಿಸುವ ವಸ್ತು ಪ್ರದರ್ಶನಕ್ಕೆ ಚಾಲನೆ;
|

ಸರ್ಕಾರದ ಎರಡು ವರ್ಷ ಸಾಧನೆ ಬಿಂಬಿಸುವ ವಸ್ತು ಪ್ರದರ್ಶನಕ್ಕೆ ಚಾಲನೆ;

ಪಂಚ ಗ್ಯಾರಂಟಿ ಯೋಜನೆಗಳಿಂದ ಜನರು ಆರ್ಥಿಕವಾಗಿ ಸಬಲರಾಗಿದ್ದಾರೆ-ಅಮೃತರಾವ ಚಿಮಕೋಡೆ ಬೀದರ.11.ಜುಲೈ.25:- ಪಂಚ ಗ್ಯಾರಂಟಿ ಯೋಜನೆಗಳಿಂದ ಜನರಿಗೆ ಆರ್ಥಿಕವಾಗಿ ಸಬಲರಾಗಲು ಅನುಕೂಲವಾಗಿದೆ ಎಂದು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಅಮೃತರಾವ ಚಿಮಕೊಡೆ ಹೇಳಿದರು. ಅವರು ಗುರುವಾರ ಬೀದರ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಜುಲೈ.10 ರಿಂದ 12 ರವರೆಗೆ ಮೂರು ದಿನಗಳ ಕಾಲ ಏರ್ಪಡಿಸಿರುವ ರಾಜ್ಯ ಸರ್ಕಾರದ ಎರಡು ವರ್ಷಗಳ ಸಾಧನೆ ಬಿಂಬಿಸುವ ವಸ್ತು ಪ್ರದರ್ಶನ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಗಳಾದ…

|

ಬಸವಕಲ್ಯಾಣದಲ್ಲಿ ಕೆಪಿಸಿಸಿ ಸಹಕಾರ ವಿಭಾಗದ ಅಧ್ಯಕ್ಷ ಧನರಾಜ ತಾಳಂಪಳ್ಳಿ ಅವರನ್ನು ನಾಗರಿಕ ಸಮಿತಿ ವತಿಯಿಂದ ಅಭಿನಂದಿಸಲಾಯಿತು

ಕೆಪಿಸಿಸಿ ಸಹಕಾರ ವಿಭಾಗದ ಅಧ್ಯಕ್ಷ ಧನರಾಜ ತಾಳಂಪಳ್ಳಿಗೆ ಅದ್ಧೂರಿ ಸನ್ಮಾನ ಬೀದರ.11.ಜುಲೈ.25:- ಬಸವಕಲ್ಯಾಣದಲ್ಲಿ ಮಂಗಳವಾರ ಕೆಪಿಸಿಸಿ ಸಹಕಾರ ವಿಭಾಗದ ಅಧ್ಯಕ್ಷ ಧನರಾಜತಾಳಂಪಳ್ಳಿ ಅವರನ್ನು ನಾಗರಿಕ ಸಮಿತಿ ವತಿಯಿಂದ ಅದ್ಧೂರಿಯಾಗಿ ಸನ್ಮಾನಿಸಲಾಯಿತು.ಬೃಹತ್ ಹೂಮಾಲೆ ಹಾಕಿ, ಪೇಟ ತೊಡಿಸಿ, ಶಾಲು ಹೊದಿಸಿ ಅಭಿನಂದಿಸಲಾಯಿತು.ಇದಕ್ಕೂ ಮುನ್ನ ಸಹಕಾರ ವಿಭಾಗದ ರಾಜ್ಯ ಅಧ್ಯಕ್ಷರಾದ ನಂತರ ಮೊದಲ ಬಾರಿಗೆ ಜಿಲ್ಲೆಗೆಆಗಮಿಸಿದ ಪ್ರಯುಕ್ತ ಬೀದರ್‍ನ ವಿಮಾನ ನಿಲ್ದಾಣದಲ್ಲಿ ಪಕ್ಷದ ಮುಖಂಡರು ಹಾಗೂಕಾರ್ಯಕರ್ತರು ಅವರನ್ನು ಆತ್ಮೀಯವಾಗಿ ಸ್ವಾಗತಿಸಿ ಬರಮಾಡಿಕೊಂಡರು. ಬಳಿಕ ಬಸವಕಲ್ಯಾಣದ ಮಹಾದ್ವಾರದಿಂದ ಬಿಕೆಡಿಬಿ ಸಭಾಂಗಣದ ವರೆಗೆ…

ವಿಕಲಚೇನತರಿಂದ ಅರ್ಜಿ ಆಹ್ವಾನ
|

ವಿಕಲಚೇನತರಿಂದ ಅರ್ಜಿ ಆಹ್ವಾನ

ಬೀದರ.11.ಜುಲೈ.25:- 2025-26ನೇ ಸಾಲಿನ ಶೇ.5% ಯೋಜನೆಯಡಿಯಲ್ಲಿ ವಿಕಲಚೇತನರಿಗೆ ಸೋಲಾರನಿಂದ ನಡೆಯುವ ಯಂತ್ರಗಳನ್ನು ಒದಗಿಸುವ ಸಲುವಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ ಹಳ್ಳಿಖೇಡ (ಬಿ) ಪುರಸಭೆ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಲಗತ್ತಿಸಬೇಕಾದ ದಾಖಲಾತಿಗಳ ವಿವರ: ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ ಕಾರ್ಡ, ಬಿ.ಪಿ.ಎಲ್.ರೇಷನ್ ಕಾರ್ಡ, ವಾಸಸ್ಥಳ, ಇತ್ತೀಚಿನ 2 ಭಾವಚಿತ್ರ, 20 ರೂ. ಛಾಪಾ ಕಾಗದದ ಕರಾರು ಪತ್ರ, ವಿದ್ಯಾರ್ಹತೆ ದಾಖಲೆಗಳು ಹಾಗೂ ಸ್ಟಡಿ ಸರ್ಟಿಫಿಕೇಟ, ಬ್ಯಾಂಕ ಪಾಸ್ ಬುಕ್ಕ, ಅಂಗವಿಕಲಚೇತನರ ಪ್ರಮಾಣ ಪತ್ರ. ಈ ಯೋಜನೆಯ…

ಗಣೇಶ ಉತ್ಸವವನ್ನು ಪರಿಸರ ಸ್ನೇಹಿ ಮತ್ತು ಸೌಹಾರ್ದತೆಯಿಂದ ಆಚರಿಸೋಣ- ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ
|

ಗಣೇಶ ಉತ್ಸವವನ್ನು ಪರಿಸರ ಸ್ನೇಹಿ ಮತ್ತು ಸೌಹಾರ್ದತೆಯಿಂದ ಆಚರಿಸೋಣ- ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ

ಬೀದರ.11.ಜುಲೈ.25:- ಜಿಲ್ಲೆಯಲ್ಲಿ ಮುಂಬರುವ ಗಣೇಶ ಉತ್ಸವವನ್ನು ಪರಿಸರ ಸ್ನೇಹಿ ಮತ್ತು ಸೌಹಾರ್ದತೆಯಿಂದ ಆಚಾರಿಸೋಣ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ತಿಳಿಸಿದರು. ಅವರು ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಗಣೇಶ ಉತ್ಸವ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಪಿ.ಓ.ಪಿ ಹಾಗೂ ರಾಸಾಯನಿಕ ಗುಣಗಳ್ಳುಳ ವಸ್ತುಗಳನ್ನು ಬಳಸಿ ತಯಾರಿಸಲಾದ ಗಣೇಶ ವಿಗ್ರಹಗಳ ಉತ್ಪಾದನೆ, ಸಂಗ್ರಹ, ಮಾರಾಟ ನಿಷೇಧಿಸಿ ಮಣ್ಣಿನಿಂದ ಮಾಡಿದ ವಿಗ್ರಹಗಳನ್ನು ಬಳಕೆ ಮಾಡಬೇಕು. ನೀರಿನ ಮೂಲಗಳಾದ ನದಿ, ತೊರೆ, ಹಳ್ಳ, ಕೆರೆ, ಬಾವಿ…

ಹೃದಯಾಘಾತದಿಂದ ಬೀದರಿನ ಅತಿಥಿ ಉಪನ್ಯಾಸಕ ಡಾ. ರವಿಕುಮಾರ್ ಸಾವು
|

ಹೃದಯಾಘಾತದಿಂದ ಬೀದರಿನ ಅತಿಥಿ ಉಪನ್ಯಾಸಕ ಡಾ. ರವಿಕುಮಾರ್ ಸಾವು

ಬೀದರ್, ಜು.10: ಹೃದಯಾಘಾತದಿಂದ ಜಿಲ್ಲೆಯ ‌ಬಸವಕಲ್ಯಾಣ ತಾಲೂಕಿನ ಹುಲಸೂರ ಸರ್ಕಾರಿ ಪ್ರಥಮ‌ದರ್ಜೆ ಕಾಲೇಜಿನ  ಅತಿಥಿ ಉಪನ್ಯಾಸಕ ಡಾ. ರವಿಕುಮಾರ್ ಅವರು ಗುರುವಾರ ಬೆಳಿಗ್ಗೆ ಸಾವನ್ನಪ್ಪಿದ್ದಾರೆ. ಪರೀಕ್ಷಾ ಕಾರ್ಯಕ್ಕೆ ಮಹಾವಿಧ್ಯಾಲಯಕ್ಕೆ ಹೋಗುವ ಮಾರ್ಗದಲ್ಲಿ ಹೃದಯಘಾತವಾಗಿ ನಿಧನ ಹೊಂದಿದ್ದಾರೆ.      ಮೃತರು ಪತ್ನಿ, ಪುತ್ರ, ಪೋಷಕರು ಸೇರಿದಂತೆ ಅಪಾರ ಬಂಧು‌-ಮಿತ್ರರನ್ನು ಅಗಲಿದ್ದಾರೆ. ಮೂಲತಃ ಕಲಬುರಗಿ ಜಿಲ್ಲೆಯ ಗಡಿಕೇಶ್ವರ ಗ್ರಾಮದ ಡಾ.ರವಿಕುಮಾರ್ ಅವರು ಸಹೋೋದ್ಯೋಗಿಯೊಬ್ಬರಿಗೆ‌ ಕರೆ ಮಾಡಿ ಇಂದು ಪರೀಕ್ಷಾ ಕರ್ತವ್ಯವಿದೆ. ಕಾಲೇಜಿಗೆ‌ ಬರ್ತಾ ಇದ್ದೇನೆ. ಆದರೆ ಸೊಂಟ ಮತ್ತು ಎದೆ ನೋಯುತ್ತಿದೆ…

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎಲ್ಲಾ ಅತಿಥಿ ಉಪನ್ಯಾಸಕರನ್ನು ಮುಂದುವರೆಸಲು ಆಗ್ರಹ.
|

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎಲ್ಲಾ ಅತಿಥಿ ಉಪನ್ಯಾಸಕರನ್ನು ಮುಂದುವರೆಸಲು ಆಗ್ರಹ.

ಬೆಂಗಳೂರು, ಜು.10: ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 2024-25ನೇ ಸಾಲಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಪ್ರಸಕ್ತ ಸಾಲಿಗೂ ಮುಂದುವರೆಸಬೇಕು‌ ಬೇಡಿಕೆ ಸೇರಿದಂತೆ ತಮ್ಮ ಹಲವು ನ್ಯಾಯಯುತ ಬೇಡಿಕೆಗಳನ್ನು ಈಡೇರಿಸ‌ಬೇಕೆಂದು ಆಗ್ರಹಿಸಿ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಕ್ಷೇಮಾಭಿವೃದ್ಧಿ ಸಂಘ ಗುರುವಾರ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು.           ಸಂಘದ ಅಧ್ಯಕ್ಷ ಲೋಕೇಶ್ ಪಿ.ಸಿ, ಗೌರವ ಅಧ್ಯಕ್ಷ ಅರಿಫ್ ಕಾರ್ಲೆ, ಸಹ ಕಾರ್ಯದರ್ಶಿ ಭರತೇಶ ಎಂ.‌ ಮತ್ತಿತರ ಮುಖಂಡರ ನೇತೃತ್ವದಲ್ಲಿ‌…