ಅತಿಥಿ ಉಪನ್ಯಾಸಕರ ಮುಂದುವರಿಕೆಗೆ ಆಗ್ರಹ
|

ಅತಿಥಿ ಉಪನ್ಯಾಸಕರ ಮುಂದುವರಿಕೆಗೆ ಆಗ್ರಹ

ಅತಿಥಿ ಉಪನ್ಯಾಸಕರಿಂದ ನಗರದಲ್ಲಿ ಪ್ರತಿಭಟನೆ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವವರನ್ನು ‘ತಾತ್ಕಾಲಿಕ ನೇಮಕಾತಿ ಪ್ರಕ್ರಿಯೆ’ಗೆ ಒಳಪಡಿಸದೆ ನೇರವಾಗಿ ಸೇವೆಯಲ್ಲಿ ಮುಂದುವರೆ ಸಲು ಆಗ್ರಹಿಸಿ ಉಪನ್ಯಾಸಕರು ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರು. ಬೆಂಗಳೂರು.11.ಜುಲೈ.25:- ಅತಿಥಿ ಉಪನ್ಯಾಸಕರ ಮುಂದುವರಿಕೆಗೆ ಆಗ್ರಹ ಪದವಿ ಕಾಲೇಜು ಶಿಕ್ಷಕರ ಪ್ರತಿಭಟನೆ. ಬೆಂಗಳೂರು ಸರ್ಕಾರಿ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸ ಕರಾಗಿ ಅನೇಕ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ವರನ್ನು ‘ತಾತ್ಕಾಲಿಕ ನೇಮಕಾತಿ ಪ್ರಕ್ರಿಯೆ’ಗೆ ಒಳ ಪಸದೆ ನೇರವಾಗಿ ಸೇವೆಯಲ್ಲಿ ಮುಂದುವರೆಸಬೇಕು ಎಂದು…

ಔರಾದ ಪಟ್ಟಣದಲ್ಲಿ ಧಮ್ಮದೀಪ ಹರಡುವ ನವಚೇತನ: ವರ್ಷಾವಾಸ ಉದ್ಘಾಟನೆಗೆ ಭಕ್ತಿ ಹಾಗೂ ಜಾಗೃತಿಯ ಶ್ರದ್ಧಾಂಜಲಿ
|

ಔರಾದ ಪಟ್ಟಣದಲ್ಲಿ ಧಮ್ಮದೀಪ ಹರಡುವ ನವಚೇತನ: ವರ್ಷಾವಾಸ ಉದ್ಘಾಟನೆಗೆ ಭಕ್ತಿ ಹಾಗೂ ಜಾಗೃತಿಯ ಶ್ರದ್ಧಾಂಜಲಿ

ಔರಾದ (ಬಾ),11.ಜುಲೈ.25:- ಇಂದು ಪವಿತ್ರ ಗುರುಪೂರ್ಣಿಮಾ ದಿನದಂದು ಔರಾದ ಪಟ್ಟಣದ ಡಾ. ಬಿ. ಆರ್. ಅಂಬೇಡ್ಕರ್ ಭವನದಲ್ಲಿ ಬೌದ್ಧ ಧರ್ಮಾನುಯಾಯಿಗಳ ಪಾವನ ಸಾನ್ನಿಧ್ಯದಲ್ಲಿ ವರ್ಷಾವಾಸ ಧಮ್ಮ ಕಾರ್ಯಕ್ರಮವನ್ನು ಭಾವಪೂರ್ಣವಾಗಿ ಉದ್ಘಾಟಿಸಲಾಯಿತು. ಈ ಕಾರ್ಯಕ್ರಮವು ಮೂರು ತಿಂಗಳ ಕಾಲ ನಡೆಯಲಿದ್ದು, ಈ ಅವಧಿಯಲ್ಲಿ ಬುದ್ಧನ ಧರ್ಮದ ತಾತ್ವಿಕ, ಸಾಮಾಜಿಕ ಮತ್ತು ನೈತಿಕ ಮೌಲ್ಯಗಳನ್ನು ಜನತೆಗೆ ತಲುಪಿಸುವ ಉದ್ದೇಶದಿಂದ ಪ್ರಭೋದನಾತ್ಮಕ ಉಪನ್ಯಾಸಗಳು, ಧಮ್ಮದೀಪ ಪ್ರಚಾರ, ಸಾಮಾಜಿಕ ಜಾಗೃತಿ ಚಟುವಟಿಕೆಗಳು ಕೈಗೊಳ್ಳಲಾಗುತ್ತದೆ. ಉದ್ಘಾಟನಾ ಸಮಾರಂಭದಲ್ಲಿ ಭಾರತೀಯ ಬೌದ್ಧ ಮಹಾಸಭೆಯ ಅಧ್ಯಕ್ಷರಾದ ಸೋಪಾನರಾವ್…

ಯಲಬುರ್ಗಾ ಗಣಿತಶಾಸ್ತ್ರದ ಸಹ ಪ್ರಾಧ್ಯಾಪಕಿ ನಂದಾಗೆ ಪಿಎಚ್‌ಡಿ
|

ಯಲಬುರ್ಗಾ ಗಣಿತಶಾಸ್ತ್ರದ ಸಹ ಪ್ರಾಧ್ಯಾಪಕಿ ನಂದಾಗೆ ಪಿಎಚ್‌ಡಿ

ಕೊಪ್ಪಳ.11.ಜುಲೈ.25:- ಯಲಬುರ್ಗಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗಣಿತಶಾಸ್ತ್ರ ದ ಸಹ ಪ್ರಾಧ್ಯಾಪಕಿ ನಂದಾ ಅವರಿಗೆ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿ ನೀಡಿದೆ. ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಗಣಿತಶಾಸ್ತ್ರ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಅಶ್ವಿನ ಕುಮಾರ ಅವರ ಮಾರ್ಗದರ್ಶನದಲ್ಲಿ, ಯಲಬುರ್ಗಾದ ಗಣಿತಶಾಸ್ತ್ರದ ಸಹ ಪ್ರಾಧ್ಯಾಪಕಿ ನಂದಾ ಅವರು ಮಂಡಿಸಿದ “ಸಮ್ ಸ್ಟಡೀಸ್ ಆನ್ ಹೀಟ್ ಆ್ಯಂಡ್ ಮಾಸ್ ಟಾನ್ಸ್ಫರ್ ಕ್ಯಾರಕ್ಟರಿಸ್ಟಿಕ್ಸ್ ಆಫ್ ಮ್ಯಾಗ್ನೆಟೋಹೈಡ್ರೂಡೈನಮಿಕ್ ನಾನ್ ನ್ಯೂಟೋನಿಯನ್ ಫ್ಲೂಯಿಡ್ ಫ್ಲೂಸ್” ಎಂಬ ಮಹಾಪ್ರಬಂಧಕ್ಕೆ…

ಹಿಟ್ ಅಂಡ್ ರನ್ ಪ್ರಕರಣದಲ್ಲಿ ಮರಣ ಹೊಂದಿದ ಮತ್ತು ತೀವ್ರ ಗಾಯಗೊಂಡವರಿಗೆ ಪರಿಹಾರ: ಅರಿವು ಮೂಡಿಸಿ
|

ಹಿಟ್ ಅಂಡ್ ರನ್ ಪ್ರಕರಣದಲ್ಲಿ ಮರಣ ಹೊಂದಿದ ಮತ್ತು ತೀವ್ರ ಗಾಯಗೊಂಡವರಿಗೆ ಪರಿಹಾರ: ಅರಿವು ಮೂಡಿಸಿ

ಕೊಪ್ಪಳ.11.ಜುಲೈ.25:- ಹಿಟ್ ಅಂಡ್ ರನ್ ಪ್ರಕರಣಗಳಲ್ಲಿ ಮರಣ ಹೊಂದಿದವರಿಗೆ ಮತ್ತು ತೀವ್ರ ಗಾಯಗೊಂಡವರಿಗೆ ಪರಿಹಾರ ನೀಡಲು ಅನುಷ್ಠಾನಗೊಳಿಸಲಾಗಿರುವ ಯೋಜನೆಯ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸುರೇಶ ಬಿ. ಇಟ್ನಾಳ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ ಅವರು ಸೂಚನೆ ನೀಡಿದ್ದಾರೆ. ಹಿಟ್ ಅಂಡ್ ರನ್ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರದ ಆದೇಶಗಳನ್ವಯ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಮೋಟಾರು ವಾಹನಗಳ ಕಾಯಿದೆಯಡಿ ಅಪರಿಚಿತ ವಾಹನ…

ಸುಖ ಸಂಸಾರಕ್ಕೆ ಒಂದು ಬೇಕು ಎರಡು ಸಾಕು. ಡಾ// ಜಿ. ಸುರೇಶ
|

ಸುಖ ಸಂಸಾರಕ್ಕೆ ಒಂದು ಬೇಕು ಎರಡು ಸಾಕು. ಡಾ// ಜಿ. ಸುರೇಶ

ವಿಶ್ವ ಜನಸಂಖ್ಯಾ ದಿನವನ್ನು ಪ್ರತಿ ವರ್ಷ ಜುಲೈ 11ರಂದು ಆಚರಿಸುತ್ತಾ ಬರಲಾಗುತ್ತಿದೆ. ಇದರ ಉದ್ದೇಶ ಜಾಗತಿಕಮಟ್ಟದಲ್ಲಿ ಜನಸಂಖ್ಯೆ ಹೆಚ್ಚಳದಿಂದಾಗುವ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸುವುದರ ಜೊತೆಗೆ ಕುಟುಂಬ ಯೋಜನೆ ಪ್ರಾಮುಖ್ಯತೆ, ಲಿಂಗ ಸಮಾನತೆ, ಬಡತನ, ತಾಯಿ ಆರೋಗ್ಯ ಮತ್ತು ಮಾನವ ಹಕ್ಕುಗಳಂತಹ ವಿವಿಧ ಜನಸಂಖ್ಯಾ ಸಮಸ್ಯೆಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದರ ಜೊತೆಗೆ ವ್ಯಕ್ತಿ ಮತ್ತು ಕುಟುಂಬಗಳಿಗೆ ತಮ್ಮ ಸಂತಾನೋತ್ಪತ್ತಿ ಆಯ್ಕೆಗಳ ಮೇಲೆ ನಿಯಂತ್ರಣ ಸಾಧಿಸಲು ಸಹಾಯ ಮಾಡುತ್ತದೆ. ವಿಶ್ವದ ಜನಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇರುವ…

ಕುಟುಂಬ ಕಲ್ಯಾಣ ವಿಧಾನಗಳ ಮೂಲಕ ಹೆರಿಗೆಗಳ ನಡುವೆ ಅಂತರ ಕಾಪಾಡಿಕೊಳ್ಳಿ – ಡಾ. ರವೀಂದ್ರನಾಥ್
|

ಕುಟುಂಬ ಕಲ್ಯಾಣ ವಿಧಾನಗಳ ಮೂಲಕ ಹೆರಿಗೆಗಳ ನಡುವೆ ಅಂತರ ಕಾಪಾಡಿಕೊಳ್ಳಿ – ಡಾ. ರವೀಂದ್ರನಾಥ್

ಕೊಪ್ಪಳ.11.ಜುಲೈ .25:-ಪ್ರತಿಯೊಬ್ಬ ಹೆರಿಗೆಯಾದ ಹೆಣ್ಣುಮಕ್ಕಳು ಯಾವುದಾದರೂ ಒಂದು ಕುಟುಂಬ ಕಲ್ಯಾಣ ಯೋಜನೆಯ ವಿಧಾನಗಳನ್ನ ಬಳಸಿಕೊಂಡು ಹೆರಿಗೆಗಳ ನಡುವೆ ಅಂತರವನ್ನು ಕಾಪಾಡಿಕೊಳ್ಳಬೇಕು ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ರವೀಂದ್ರನಾಥ್ ಎಂ.ಹೆಚ್ ಹೇಳಿದರು. ಅವರು ಬುಧವಾರ ತಾಲ್ಲೂಕಿನ ಕೂಕನಪಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯ ಹಾಗೂ ಕೂಕನಪಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಂಯುಕ್ತಾಶ್ರಯದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ “ದಂಪತಿ…

ಅಧಿಕಾರಿಗಳು ಜನಸ್ನೇಹಿ ಅಧಿಕಾರಿಯಾಗಿ ಕೆಲಸ ಮಾಡಬೇಕು ಆರ. ಟಿ. ಓ. ಜಿಕೆ ಬಿರಾದರ
|

ಅಧಿಕಾರಿಗಳು ಜನಸ್ನೇಹಿ ಅಧಿಕಾರಿಯಾಗಿ ಕೆಲಸ ಮಾಡಬೇಕು ಆರ. ಟಿ. ಓ. ಜಿಕೆ ಬಿರಾದರ

ಬೀದರ್.11.ಜುಲೈ.25:- ಕಚೇರಿಗೆ ಬರುವ ಸಾರ್ವಜನಿಕರ ಜೋತೆ  ಉತ್ತಮ ಸೇವೆ ಸಲ್ಲಿಸಿ ಕಚೇರಿ ಹೆಸರು ಉನ್ನತ ಸ್ಥಾನದಲ್ಲಿ ತರಬೆಕೆಂದು ಬೀದರ ಪ್ರಾದೇಶಿಕ ಸಾರಿಗೆ ಅಧಿಕಾರಿ ಜಿ ಕೆ ಬಿರಾದರ ಅವರು ನುಡಿದರು ಅವರು ದಿನಾಂಕ ೦೯-೦೭-೨೦೨೫ರಂದು ಕಚೇರಿಯಲ್ಲಿ ಸಂಘ ಎರ್ಪಡಿಸಿದ್ದ ಸ್ವಾಗತ ಮತ್ತು ಬಿಳ್ಕೋಡಿಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮುಂದುವರಿದು ಮತನಾಡುತ್ತಾ ಕಚೇರಿಗೆ ಬಂದು ಸೇವೆ ಮಾಡುವುದು ಸಹಜ ವರ್ಗವಾಣ  ಆಗಿ ಹೊಗುವುದು ಅನಿವಾರ್ಯ ಎಂದು ಹೆಳಿದರು  ಅವರು ಬೀದರ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ನೂತನವಾಗಿ ಆಗಮಿಸಿದ ಮೂವರು…

ಕೊಳಾರ ಕೈಗಾರಿಕಾ ಪ್ರದೇಶದಲ್ಲಿನ ವಿದ್ಯುತ್ ಅವ್ಯವಸ್ಥೆಯನ್ನು ಸರಿಪಡಿಸುವ ಕುರಿತು,
|

ಕೊಳಾರ ಕೈಗಾರಿಕಾ ಪ್ರದೇಶದಲ್ಲಿನ ವಿದ್ಯುತ್ ಅವ್ಯವಸ್ಥೆಯನ್ನು ಸರಿಪಡಿಸುವ ಕುರಿತು,

ಬೀದರ.11.ಜುಲೈ.25:- ಕೊಳಾದ ಕೈಗಾರಿಕಾ ಪ್ರದೇಶದಲ್ಲಿರುವ ನೂರಾರು ಕೈಗಾರಿಕಾ ಘಟಕಗಳು ಚೆಸ್ಕಾಂ ಅಧಿಕಾರಿ ಮತ್ತು ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ತೀವ್ರ ತೊಂದರೆ ಎದುರಿಸುತ್ತಿವೆ. ನೂರಾರು ಸಂಪೆನಿಗಳಿರುವ ಈ ಪ್ರದೇಶದಲ್ಲಿನ ಕೈಗಾರಿಕಾ ಚಟುವಟಿಕೆಗೆ ನಿರಂತರ ವಿದ್ಯುತ್ ಪೂರೈಸುವ ಅಗತ್ಯವಿದೆ. ಆದರೆ, ಹಲವು ತಿಂಗಳುಗಳಿಂದ ಈ ಪ್ರದೇಶದಲ್ಲಿನ ಉದ್ಯಮಿಗಳು, ವಿದ್ಯುತ್ ಬಳಕೆದಾರರು ತೀವ್ರ ತೊಂದರೆಗೆ ಒಳಗಾಗಿದ್ದಾರೆ. ಕೊಳಾರ ಕೈಗಾರಿಕಾ ಪ್ರದೇಶ ಸಾಕಷ್ಟು ದೊಡ್ಡದಾಗಿದೆ. ನೂರಾರು ಕೈಗಾರಿಕಾ ಘಟಕಗಳಿವೆ. ಆದರೆ, ಜೆಸ್ಕಾಂನವರು ಈ ಪ್ರದೇಶದಲ್ಲಿ ಒಂದು ಸಣ್ಣ ಕಚೇರಿ ಹೊಂದಿಲ್ಲ, ವಿದ್ಯುತ್ ಪೂರೈಕೆಗೆ ಸಂಬಂಧಿಸಿದ…

ಹಡಪದ ಅಪ್ಪಣ್ಣನವರ ಬದುಕು, ವಿಚಾರಗಳು ಇಂದಿನ ಸಮಾಜಕ್ಕೆ ಅತೀ ಅವಶ್ಯ-ಎಡಿಸಿ ಡಾ.ಈಶ್ವರ ಉಳ್ಳಾಗಡ್ಡಿ
|

ಹಡಪದ ಅಪ್ಪಣ್ಣನವರ ಬದುಕು, ವಿಚಾರಗಳು ಇಂದಿನ ಸಮಾಜಕ್ಕೆ ಅತೀ ಅವಶ್ಯ-ಎಡಿಸಿ ಡಾ.ಈಶ್ವರ ಉಳ್ಳಾಗಡ್ಡಿ

ಬೀದರ.11.ಜುಲೈ.25:- ಹಡಪದ ಅಪ್ಪಣ್ಣನವರ ಬದುಕು ಮತ್ತೆ ವಿಚಾರಗಳು ವಚನಗಳಲ್ಲಿ ಅಡಕವಾಗಿದ್ದು, ಇಂದಿನ ಸಮಾಜಕ್ಕೆ ಅತಿ ಅವಶ್ಯಕವಾಗಿದೆ. ಹಡಪದ ಅಪ್ಪಣ್ಣ ಬಸವಣ್ಣನವರ ಆಪ್ತರಾಗಿದ್ದು ಕಾಯಕ ತತ್ವದಲ್ಲಿ ನಿಷ್ಠೆ ಉಳ್ಳವರಾಗಿದ್ದರೆಂದು ಅಪರ ಜಿಲ್ಲಾಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ ತಿಳಿಸಿದರು. ಅವರು ಗುರುವಾರ ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಪೂಜ್ಯ ಡಾ.ಚನ್ನಬಸವ ಪಟ್ಟದೇವರು ರಂಗಮAದಿರದಲ್ಲಿ ಹಮ್ಮಿಕೊಂಡಿದ್ದ ಶ್ರೀ ಶಿವಶರಣ ಹಡಪದ ಅಪ್ಪಣ್ಣನವರ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಿರಿಯ ಸಾಹಿತಿಗಳಾದ ಶಂಭುಲಿoಗ ವಿ.ಶಾಮಣ್ಣನವರ ಉಪನ್ಯಾಸ ನೀಡಿ ಮಾತನಾಡಿ,…

ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಆಹ್ವಾನ
|

ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಅತಿಥಿ ಉಪನ್ಯಾಸಕರ ಆಯ್ಕೆಗೆ ಈಗಾಗಲೇ ಅರ್ಜಿ ಸಲ್ಲಿಸಿ   ಅತಿಥಿ ಉಪನ್ಯಾಸಕರಿಂದ ಅರ್ಜಿಯನ್ನುವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜು ವಿಶ್ವವಿದ್ಯಾಲಯವು(ಯುವಿಸಿಇ) ಬಿ.ಟೆಕ್‌ ಹಾಗೂ ಎಂ.ಟೆಕ್‌ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲು ಅತಿಥಿ ಉಪನ್ಯಾಸಕರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಎಐಸಿಟಿಇ/ಯುಜಿಸಿ ನಿಯಮಗಳಿಗೆ ಅನುಸಾರವಾಗಿ ಸೂಕ್ತ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈ ವಿಷಯಕ್ಕೆ ಸಂಬಂಧಿಸಿದ ಹೆಚ್ಚಿನ ವಿವರಗಳಿಗಾಗಿ ಯುವಿಸಿಇ ಜಾಲತಾಣಕ್ಕೆ ಭೇಟಿ ನೀಡಬಹುದು. ಆಸಕ್ತ ಅರ್ಹ ಅಭ್ಯರ್ಥಿಗಳು  ಜಾಲತಾಣದಿಂದ ನಿಗದಿತ ಅರ್ಜಿ http://www.uvce.karnataka.gov.in ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿ, ಸಂಬಂಧಿತ ದಾಖಲಾತಿಗಳೊಂದಿಗೆ ಕುಲಸಚಿವರು,…