ವಾರ್ತಾ ಇಲಾಖೆ: ಬೀದಿನಾಟಕ, ಜಾನಪದ ಸಂಗೀತ ಕಲಾತಂಡಗಳಿoದ ಅರ್ಜಿ ಆಹ್ವಾನ
|

ವಾರ್ತಾ ಇಲಾಖೆ: ಬೀದಿನಾಟಕ, ಜಾನಪದ ಸಂಗೀತ ಕಲಾತಂಡಗಳಿoದ ಅರ್ಜಿ ಆಹ್ವಾನ

ಕೊಪ್ಪಳ.09.ಜುಲೈ.25: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಸರ್ಕಾರದ ಯೋಜನೆಗಳನ್ನು ಬೀದಿನಾಟಕ, ಜಾನಪದ ಸಂಗೀತ ಕಲಾತಂಡಗಳ ಮೂಲಕ ಪ್ರಚಾರ ಮಾಡಲು ಕಲಾ ತಂಡಗಳನ್ನು ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಬೀದಿನಾಟಕ, ಜಾನಪದ ಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸಲು ಅನುಕೂಲವಾಗುವಂತೆ ಪ್ರತಿ ಜಿಲ್ಲೆಯಿಂದ 3 ಬೀದಿನಾಟಕ ಹಾಗೂ 3 ಜಾನಪದ ಸಂಗೀತ ಕಲಾತಂಡಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ಅರ್ಜಿ ಸಲ್ಲಿಸುವ ತಂಡಗಳು ನೋಂದಾಯಿತ ಸಂಸ್ಥೆಯಾಗಿದ್ದು, ನಿಯಮಾನುಸಾರ ಚಾಲ್ತಿಯಲ್ಲಿರಬೇಕು. ಪ್ರತಿ ಬೀದಿ ನಾಟಕ ತಂಡದಲ್ಲಿ 8 ಜನ ಕಲಾವಿದರಿದ್ದು, ಅದರಲ್ಲಿ ಕಡ್ಡಾಯವಾಗಿ ಇಬ್ಬರು…

ಶಿಕ್ಷಕರಿಗೆ ಮುಖ ಚಹರೆ ಹಾಜರಾತಿ ವ್ಯವಸ್ಥೆ ಜಾರಿ: ಸಚಿವ ಮಧು ಬಂಗಾರಪ್ಪ
|

ಶಿಕ್ಷಕರಿಗೆ ಮುಖ ಚಹರೆ ಹಾಜರಾತಿ ವ್ಯವಸ್ಥೆ ಜಾರಿ: ಸಚಿವ ಮಧು ಬಂಗಾರಪ್ಪ

ಬೆಂಗಳೂರು.09.ಜುಲೈ.25:- ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ ಶಾಲೆಗೆ ಚಕ್ಕರ್ ಹಾಕೋದಕ್ಕೆ ಬ್ರೇಕ್ ಬೀಳಲಿದೆ ಇನ್ಮುಂದೇ ಶಿಕ್ಷಕರಿಗೆ ಮುಖ ಚಹರೆ ಹಾಜರಾತಿ ವ್ಯವಸ್ಥೆಯನ್ನು ಶಾಲಾ ಶಿಕ್ಷಣ ಇಲಾಖೆ ಜಾರಿಗೊಳಿಸಿದೆ. ಅಲ್ಲದೇ ಪಾಠ ಮಾಡದೇ ಕಳ್ಳಾಟ ಮಾಡೋದಕ್ಕೆ ಬ್ರೇಕ್ ಹಾಕಲಾಗುತ್ತಿದೆ. ರಾಜ್ಯದಲ್ಲಿ ಶಿಕ್ಷಕರು, ಶಿಕ್ಷಣ ಇಲಾಖೆಯ ಸಿಬ್ಬಂದಿಯ ಆನ್‌ಲೈನ್‌ ಹಾಜರಾತಿಗೆ ಚಾಲನೆ ನೀಡಲಾಗಿದೆ. ಇನ್ನು ಮುಂದೆ ಖೊಟ್ಟಿ ಹಾಜರಾತಿಗೆ ತಡೆ ಬೀಳಲಿದೆ. ಶಾಲೆ ತಲುಪಿದ ಬಳಿಕ ಶಿಕ್ಷಕರು ಆನ್‌ಲೈನ್‌ ಹಾಜರಾತಿ ಹಾಕಬೇಕು. ಇದರಿಂದ ಸಮಯಕ್ಕೆ ಸರಿಯಾಗಿ ಶಿಕ್ಷಕರು ಶಾಲೆಗೆ ಬರುತ್ತಾರೆ….

ಜನನ ಮರಣ ಮಾಹಿತಿ ನಿಖರವಾಗಿರಲಿ – ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ
|

ಜನನ ಮರಣ ಮಾಹಿತಿ ನಿಖರವಾಗಿರಲಿ – ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ

ಕೊಪ್ಪಳ.09.ಜುಲೈ.25: ಜನನ ಮರಣ ಮಾಹಿತಿಯು ನಿಖರವಾಗಿ ಸಂಗ್ರಹಿಸುವುದರ ಜೊತೆಗೆ ಇದನ್ನು ತಂತ್ರಾಶದಲ್ಲಿ ನೋಂದಣಿಯಾಗುವಂತೆ ನೋಡಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಹೇಳಿದರು. ಅವರು ಬುಧವಾರ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಕರೆದ ಜನನ ಮರಣ ನೋಂದಣಿ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ನಾಗರಿಕ ನೋಂದಣಿ ಪದ್ಧತಿಯಡಿ ಜನನ ಮರಣ ಹಾಗೂ ನಿರ್ಜೀವ ಜನನಗಳನ್ನು “ಜನನ ಮರಣ ನೋಂದಣಿ ಅಧಿನಿಯಮಗಳು-1969” ಹಾಗೂ “ಕರ್ನಾಟಕ ಜನನ ಮರಣ ನೋಂದಣಿ ನಿಯಮಗಳು 1999” ರನ್ವಯ ಕಡ್ಡಾಯವಾಗಿ ನೋಂದಣಿ ಮಾಡಬೇಕಾಗಿರುತ್ತದೆ….

ಮೊಹಮ್ಮದ್ ಮಾಜೀದ್ ಬಿಲಾಲ್ ಇವರಿಗೆ ಕರ್ನಾಟಕ ಭೂಷಣ ಪ್ರಶಸ್ತಿ ಪ್ರದಾನ.
|

ಮೊಹಮ್ಮದ್ ಮಾಜೀದ್ ಬಿಲಾಲ್ ಇವರಿಗೆ ಕರ್ನಾಟಕ ಭೂಷಣ ಪ್ರಶಸ್ತಿ ಪ್ರದಾನ.

ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಬೀದರ್‌ನ ಹ್ಯೂಮ್ಯಾನಿಟಿ ಫಸ್ಟ್ ಫೌಂಡೇಷನ್ ಅಧ್ಯಕ್ಷ ಮೊಹಮ್ಮದ್ ಮಾಜೀದ್ ಬಿಲಾಲ್ ಅವರಿಗೆ ರಾಜ್ಯಮಟ್ಟದ ಕರ್ನಾಟಕ ಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು ಮಾಜೀದ್ ಬಿಲಾಲ್‌ಗೆ ಕರ್ನಾಟಕ ಭೂಷಣ ಪ್ರಶಸ್ತಿ ಬೀದರ್: ಇಲ್ಲಿಯ ಹ್ಯೂಮ್ಯಾನಿಟಿ ಫಸ್ಟ್ ಫೌಂಡೇಷನ್ ಅಧ್ಯಕ್ಷ ಮೊಹಮ್ಮದ್ ಮಾಜೀದ್ ಬಿಲಾಲ್ ಅವರಿಗೆ ಸಮಾಜ ಸೇವೆಗಾಗಿ ಕರ್ನಾಟಕ ಮೀಡಿಯಾ ಕ್ಲಬ್ ವತಿಯಿಂದ ಕೊಡಲಾಗುವ ರಾಜ್ಯಮಟ್ಟದ ಕರ್ನಾಟಕ ಭೂಷಣ ಪ್ರಶಸ್ತಿ ಲಭಿಸಿದೆ. ಬೆಂಗಳೂರಿನಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ವಿಶ್ರಾಂತ ಲೋಕಾಯುಕ್ತ ಸಂತೋಷ್ ಹೆಗ್ಡೆ ಪ್ರಶಸ್ತಿ ಪ್ರದಾನ…

ಕೊಪ್ಪಳ: ಅತ್ಯಾಚಾರ ಆರೋಪಿಗೆ 20 ವರ್ಷಗಳ ಜೈಲು ಶಿಕ್ಷೆ
|

ಕೊಪ್ಪಳ: ಅತ್ಯಾಚಾರ ಆರೋಪಿಗೆ 20 ವರ್ಷಗಳ ಜೈಲು ಶಿಕ್ಷೆ

ಕೊಪ್ಪಳ.09.ಜುಲೈ.25:- ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿಗೆ ಕೊಪ್ಪಳ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ಮತ್ತು ತ್ವರಿತ ವಿಲೇವಾರಿ ನ್ಯಾಯಾಲಯ (ಪೋಕ್ಸೋ)ವು 20 ವರ್ಷಗಳ ಜೈಲು ಶಿಕ್ಷೆ ಹಾಗೂ ರೂ.5 ಸಾವಿರ ಗಳ ದಂಡವನ್ನು ವಿಧಿಸಿ ತೀರ್ಪು ಪ್ರಕಟಿಸಿದೆ. ಯಲಬುರ್ಗಾ ಪಟ್ಟಣದ ನಿವಾಸಿ ಮಹೇಶ ಖಂಡ್ರಿ ಎಂಬ ಆರೋಪಿಯು ಅಪ್ರಾಪ್ತ ಬಾಲಕಿಯನ್ನು ಪರಿಚಯಿಸಿಕೊಂಡು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ 2023ರ ಸೆಪ್ಟೆಂಬರ್ 05 ರಿಂದ 2024 ರ ಫೆಬ್ರವರಿ 24 ರವರೆಗೆ ಹಲವಾರು ಬಾರಿ…

ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದವರನ್ನು ಸ್ಮರಿಸುವುದು ಶ್ಲಾಘನೀಯ – ಮಹೇಶ ಮಾಲಗಿತ್ತಿ
|

ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದವರನ್ನು ಸ್ಮರಿಸುವುದು ಶ್ಲಾಘನೀಯ – ಮಹೇಶ ಮಾಲಗಿತ್ತಿ

ಕೊಪ್ಪಳ.09.ಜುಲೈ.25:-ಸೈಯೂಜ್, ಉಮೇಶ ಕಾಮನೂರು, ಇಂಧುದರ ಸೊಪ್ಪಿಮಠ, ಕಾರ್ಯದರ್ಶಿ ನಿಂಗಪ್ಪ ಗಾಣಿಗೇರ, ಮಲ್ಲಿಕಾರ್ಜುನ ಸಜ್ಜನ ಇದ್ದರು. ನಿವೃತ್ತ ಸೈನಿಕರ ಸಂಘದ ಉಪಾಧ್ಯಕ್ಷ ಶ್ರೀಧರ ಪೊಲೀಸ್ ಪಾಟೀಲ್ ಕಾರ್ಯಕ್ರಮ ನಿರೂಪಿಸಿದರು.ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದವರನ್ನು ಸ್ಮರಿಸುವುದು ಶ್ಲಾಘನೀಯ – ಮಹೇಶ ಮಾಲಗಿತ್ತಿ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರನ್ನು ಸ್ಮರಿಸುವುದು ಮತ್ತು ಅವರ ಕುಟುಂಬದವರನ್ನು ಗೌರವಿಸುವ ಕಾರ್ಯ ಶ್ಲಾಘನೀಯ ಎಂದು ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಹೇಳಿದ್ದಾರೆ. ನಗರದ ನಿವೃತ್ತಿ ಸೈನಿಕರ ಸಂಘದ ಕಾರ್ಯಾಲಯದಲ್ಲಿ  ಕೇಂದ್ರ ಸರ್ಕಾರ ಸೇನೆಯ ವತಿಯಿಂದ ಘರ್ ಘರ್…

ಜಿಲ್ಲಾಡಳಿತ ಭವನದ ಕಚೇರಿಗಳ ಸ್ಥಳಾಂತರ
|

ಜಿಲ್ಲಾಡಳಿತ ಭವನದ ಕಚೇರಿಗಳ ಸ್ಥಳಾಂತರ

ಬೀದರ.09.ಜುಲೈ.25:- ಕರ್ನಾಟಕ ಸರ್ಕಾರದ ಆದೇಶದಂತೆ ಜಿಲ್ಲಾಧಿಕಾರಿಗಳ ಕಾರ್ಯಾಲಯ ಕಟ್ಟಡವು ಶಿಥಿಲಗೊಂಡಿರುವ ಹಿನ್ನೆಲೆಯಲ್ಲಿ ಹೊಸ ಪ್ರಜಾ ಸೌಧ ನಿರ್ಮಾಣ ಕಾರ್ಯವು ಪ್ರಾರಂಭಗೊಳ್ಳಿಸಬೇಕಾಗಿರುವುದರಿoದ, ಸದರಿ ಸಂಕಿರ್ಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಛೇರಿಗಳನ್ನು ಪ್ರಜಾ ಸೌಧ ಕಟ್ಟಡ ನಿರ್ಮಾಣ ಕಾರ್ಯ ಮುಕ್ತಾಯವಾಗುವವರೆಗೆ ಜಿಲ್ಲಾಧಿಕಾರಿಗಳ ಕಛೇರಿ ಕಟ್ಟಡದಲ್ಲಿರುವ ವಿವಿಧ ಇಲಾಖೆಗಳ ಕಛೇರಿಗಳನ್ನು ಜುಲೈ.10 ರಂದು ಈ ಕೆಳಕಂಡ ಸ್ಥಳಗಳಲ್ಲಿ ಸ್ಥಳಾಂತರಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸ್ಥಳಾಂತರಗೊಣoಡಿರುವ ಕಚೇರಿಗಳ ವಿವರ: ಬೀದರ ಜಿಲ್ಲಾಧಿಕಾರಿಗಳ ಕಛೇರಿಯನ್ನು ಗಾಂಧಿ ಭವನ ಚಿಕ್ಕಪೇಟ ಬೀದರ ಇಲ್ಲಿಗೆ…

ಬೀದರ | ನಾಳೆ ವಿದ್ಯುತ್ ವ್ಯತ್ಯಯ
|

ಬೀದರ | ನಾಳೆ ವಿದ್ಯುತ್ ವ್ಯತ್ಯಯ

ಬೀದರ.09.ಜುಲೈ.25:- ಉಪ-ವಿಭಾಗದಭಾತಂಬ್ರಾ ಮತ್ತು ಲಖನಗಾಂವ33/11 ಉಪ-ಕೇಂದ್ರದಲ್ಲಿ ತುರ್ತು ಕೆಲಸದ ನಿಮಿತ್ಯ 33 ಕೆ.ವಿ. ಭಾತಂಬ್ರಾ ಉಪ ಕೇಂದ್ರದ ಫೀಡರಗಳಾದ 11 ಕೆ.ವಿ. ತೆಲಗಾಂವ ಎನ್.ಜೆ.ವೈ,  11 ಕೆ.ವಿ.ಕೊರೂರು ಎನ್.ಜೆ.ವೈ.11 ಕೆ.ವಿ.ಮೇತಿ ಮೇಳಕುಂದಾ ಎನ್.ಜೆ.ವೈ.11 ಕೆ.ವಿ.ಭಾತಂಬ್ರಾ ಐ.ಪಿ.11 ಕೆ.ವಿ.ಭಾಟಸಾಂಗವಿ ಐ.ಪಿ.11 ಕೆ.ವಿ.ಜಾಯಗಾಂವ ಹಾಗೂ 33 ಕೆ.ವಿ. ಲಖನಗಾಂವ ಉಪ-ಕೇಂದ್ರದ ಫೀಡರಗಳು 11 ಕೆ.ವಿ.ಕಾಕನಾಳ ಎನ್.ಜೆ.ವೈ. 11 ಕೆ.ವಿ. ಶಿವಣಿ ಎನ್.ಜೆ.ವೈ.,11 ಕೆ.ವಿ.ಕಾಸರತುಗಾಂವ ಐ.ಪಿ. 11 ಕೆ.ವಿ.ಲಂಜವಾಡ ಐ.ಪಿ.11 ಕೆ.ವಿ.ಲಖನಗಾಂವ ಐ.ಪಿ.11 ಕೆ.ವಿ.ಸೋಮೆಶ್ವರ ಐ.ಪಿ.ಫೀಡರಗಳಲ್ಲಿ ದಿನಾಂಕ: 10-07-2025 ರಂದು ಬೆಳಿಗ್ಗೆ…

ರಾಜ್ಯ ಸರ್ಕಾರಿ ನೌಕರರಿಗೆ ವಾರ್ಷಿಕ ವೇತನ ಬಡ್ತಿ,ಸರ್ಕಾರ ಆದೇಶ.!
|

ರಾಜ್ಯ ಸರ್ಕಾರಿ ನೌಕರರಿಗೆ ವಾರ್ಷಿಕ ವೇತನ ಬಡ್ತಿ,ಸರ್ಕಾರ ಆದೇಶ.!

ಬೆಂಗಳೂರು.09.ಜುಲೈ.25:- ಪರಿವೀಕ್ಷಣಾ ಅವಧಿಯಲ್ಲಿ ತಡೆಹಿಡಿಯಲಾದ ವಾರ್ಷಿಕ ವೇತನ ಬಡ್ತಿಗಳನ್ನು ಬಿಡುಗಡೆಗೊಳಿಸಿ ವೇತನ ನಿಗಧೀಕರಿಸುವ ಕುರಿತು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಪರಿವೀಕ್ಷಣಾ ಅವಧಿಯನ್ನು ತೃತ್ತಿಕರವಾಗಿ ಪೂರೈಸಿದ ಕೂಡಲೇ ವಾರ್ಷಿಕ ವೇತನ ಬಡ್ತಿ ಮಂಜೂರು ಮಾಡುವುದಕ್ಕೆ ಸಂಬಂಧಿಸಿದಂತೆ, ಗ್ರೂಪ್-ಸಿ ಮತ್ತು ಗ್ರೂಪ್-ಡಿ ಹುದ್ದೆಗಳಿಗೆ ನೇಮಕಾತಿ ಹೊಂದಿರುವ ಸರ್ಕಾರಿ ನೌಕರರು ಪರಿವೀಕ್ಷಣಾವಧಿಯನ್ನು ತೃಪ್ತಿಕರವಾಗಿ ಪೂರೈಸಿರುವ ಘೋಷಣೆ ನಂತರದಲ್ಲಿ ವಾರ್ಷಿಕ ವೇತನ ಬಡ್ತಿ ಬಿಡುಗಡೆಗೆ ಒಳಗೊಂಡಂತೆ ಸಕ್ಷಮ ಪ್ರಾಧಿಕಾರಗಳಿಂದ ವೇತನ ನಿಗಧಿ ಆದೇಶಗಳನ್ನು ಹೊರಡಿಸಲು ಸಾಮಾನ್ಯವಾಗಿ ವಿಳಂಬವಾಗುತ್ತಿದೆ. ಇದರಿಂದ ಅನಗತ್ಯ ತೊಂದರೆಯುಂಟಾಗುತ್ತಿದೆ….

ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದಿಂದ ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ
|

ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದಿಂದ ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ

ಬೀದರ.09.ಜುಲೈ.25:- ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದಿಂದ 2025-26ನೇ ಸಾಲಿನಲ್ಲಿ ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದಿಂದ ಅನುμÁ್ಠನಗೊಳಿಸಲಾಗುತ್ತಿರುವ ವಿವಿಧ ಯೋಜನೆಗಳಿಗೆ ಸಾಲ ಸೌಲಭ್ಯಕ್ಕೆ ಅರ್ಜಿ ಸಲ್ಲಿಸುವ ಅವಧಿಯನ್ನು ದಿನಾಂಕ: 10-07-2025 ರವರೆಗೆ ವಿಸ್ತರಿಸಲಾಗಿದೆ ಎಂದು ಬೀದರ ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಯೋಜನೆಗಳ ವಿವರ: ಶ್ರೀ ಶಾಹಜೀ ರಾಜೇ ಸಮೃದ್ಧಿ ಯೋಜನೆ, ಜೀಜಾವು ಜಲಭಾಗ್ಯ ಯೋಜನೆ, ರಾಜಶ್ರೀ ಶಾಹುಮಹಾರಾಜ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಸಾಲ ಯೋಜನೆ, ಮರಾಠಮಿಲ್ಟ್ರಿಹೋಟೆಲ್,…