ಜು.15 ರಿಂದ ಆರ್ಥಿಕ ಅಭಿವೃದ್ದಿ ಸುಸ್ಥಿರತೆ ಕುರಿತು ತರಬೇತಿ: ಹೆಸರು ನೋಂದಣಿಗೆ ಸೂಚನೆ
ಬೀದರ.02.ಜುಲೈ.25:- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತ ಬಾಂಧವರಿಗಾಗಿ/ಪಶುಪಾಲಕರಿಗಾಗಿ ಪಶುವೈದ್ಯಕೀಯ ಮಹಾವಿದ್ಯಾಲಯ, ಬೀದರನಲ್ಲಿ ವೈಜ್ಞಾನಿಕ ಪಶುಪಾಲನೆಯಿಂದ ಆರ್ಥಿಕ ಅಭಿವೃದ್ದಿ ಮತ್ತು ಸುಸ್ಥಿರತೆ ಕುರಿತು ನಾಲ್ಕು ದಿನಗಳ ತರಬೇತಿ ಕಾರ್ಯಕ್ರಮವನ್ನು ಜುಲೈ. 15 ರಿಂದ 18 ರವರೆಗೆ ಆಯೋಜಿಸಲಾಗುತ್ತಿದೆ ಎಂದು ಪಶುವೈದ್ಯಕೀಯ ಮಹಾವಿದ್ಯಾಲಯದ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಬೆಂಗಳೂರು ಪ್ರಾಯೋಜಿಸಿರುವ ಸದರಿ ತರಬೇತಿಯಲ್ಲಿ ಕೇವಲ 30 ರೈತರಿಗೆ ಅವಕಾಶವಿದ್ದು, ಆಸಕ್ತ ರೈತಬಾಂಧವರು/ಪಶುಪಾಲಕರು ಜುಲೈ.7 ರೊಳಗಾಗಿ ಮೊಬೈಲ್ ಸಂಖ್ಯೆ: 8023281592…