ಜೂ. 24ರಂದು ಉದ್ಯಮ ಶೀಲತಾಭಿವೃದ್ಧಿ ಕಾರ್ಯಕ್ರಮ
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ., ವಿಜನ್ ಕರ್ನಾಟಕ ಫೌಂಡೇಶನ್ ಹಾಗೂ ಜಿಲ್ಲಾ ಕೌಶಲ್ಯ ಮಿಷನ್, ಕೊಪ್ಪಳ ರವರ ಸಹಯೋಗದೊಂದಿಗೆ ಉದ್ಯಮ ಶೀಲತಾಭಿವೃದ್ಧಿ ಕಾರ್ಯಕ್ರಮವನ್ನು ಜೂನ್ 24ರಂದು ಬೆಳಿಗ್ಗೆ 10.30ಕ್ಕೆ ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ಆಯೋಜಿಸಲಾಗುತ್ತಿದೆ. ಶಿಕ್ಷಣ ವಂಚಿತ ಯುವಕರು, ಐದಾರು ಜನ ಯುವಕರು ಸೇರಿ ಮಾಡಬಹುದಾದಂತಹ ಉದ್ಯಮಗಳು, ಸಂಘ-ಸಂಸ್ಥೆಗಳು ಅವರ ಸದಸ್ಯರಿಗೆ ಆರ್ಥಿಕವಾಗಿ ಸ್ವಾವಲಂಬಿಯಾಗಲು ಅವಕಾಶ, ಮಹಿಳೆಯರಿಗೆ ಸ್ವಯಂ ಉದ್ಯಮಗಳ ಮಾಹಿತಿ, ಸುಲಭವಾಗಿ ಬ್ಯಾಂಕ್ ಲೋನ್ ಪಡೆಯುವಲ್ಲಿ ವಿಕೆಫ್ ವತಿಯಿಂದ ಗ್ಯಾರಂಟಿ ಸಹಾಯ ಹಾಗೂ…