ಮಗು ಅಪಹರಣ,ಶ್ವಾನದಳ ಸಹಾಯದಿಂದ 24 ಗಂಟೆಗಳಲ್ಲಿ ಮಗುವನ್ನು ಪತ್ತೆಹಚ್ಚಿದ ಪೊಲೀಸರು
ಬೆಂಗಳೂರು.22.ಜೂನ್.25:- ಬೆಂಗಳೂರು ನಗರದ ವಿಶ್ವೇಶ್ವರಯ್ಯ ಲೇಔಟ್‌ನಲ್ಲಿ ಶನಿವಾರ ಸಾಯಂಕಾಲ ನಾಪತ್ತೆಯಾಗಿದ್ದ ಆರು ವರೇ ವರ್ಷದ ಮಗು ಪ್ರಕರಣವನ್ನು 24 ಗಂಟೆಗಳಲ್ಲಿ ಬಗೆಹರಿಸಿದ ಮಹತ್ತರ ಸಾಧನೆಗೆ ಬೆಂಗಳೂರು ಪೊಲೀಸರು ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಶ್ವಾನದಳದ ಸಹಕಾರದೊಂದಿಗೆ ಅವರು ಮಗುವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ನಗರದ ವಿಶ್ವೇಶ್ವರಯ್ಯ ಲೇಔಟ್‍ನಲ್ಲಿ ವಾಸಿಸುತ್ತಿರುವ ರಾಯಚೂರು ಮೂಲದ ವೀರಮ್ಮ ಮತ್ತು ಸಿದ್ದಪ್ಪ ಎಂಬ ದಂಪತಿಗಳ ಸಿಂಚನಾ(5)ಎಂಬ ಮಗು ಜೂ.21ರ ಶನಿವಾರ ಮಧ್ಯಾಹ್ನ 2.00ರ ವೇಳೆಗೆ ನಾಪತ್ತೆಯಾಗಿತ್ತು. ಪೋಷಕರು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ವೀರಮ್ಮ ಮತ್ತು…