ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಅರ್ಜಿ ಆಹ್ವಾನ
ಬೀದರ20.ಜೂನ್.25:- 2025-26 ನೇ ಸಾಲಿಗೆ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ವಿವಿಧ ಘಟಕಗಳಿಗೆ ಸೌಲಭ್ಯ ಪಡೆಯಲು ಜಿಲ್ಲೆಯ ಆಸಕ್ತ ರೈತ ಸಮುದಾಯದಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಬೀದರ (ಜಿಲ್ಲಾ ಪಂಚಾಯತ) ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಸಚೀನ್ ಕೌಠ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಹಾಯಧನ ನೀಡುವ ಯೋಜನೆಗಳ ವಿವರ: ಹಣ್ಣಿನ ತೋಟಗಳ ಸ್ಥಾಪನೆ, ಹೈಬ್ರಿಡ್ ತರಕಾರಿ ಪ್ರದೇಶ ವಿಸ್ತರಣೆಗೆ, ಹೂವಿನ ತೋಟಗಳ ಸ್ಥಾಪನೆಗೆ, ಸುಗಂಧ ದ್ರವ್ಯ ತೋಟಗಳ ಸ್ಥಾಪನೆಗೆ, ಹಣ್ಣಿನ ತೋಟಗಳ ಪುನಶ್ಚೇತನಕ್ಕೆ, ನೀರು ಸಂಗ್ರಹಣ ಘಟಕಕ್ಕೆ,…