ಬಲೂಚಿಸ್ತಾನ್ ಮೇಲೆ ನಡೆದ ಬಾಂಬ್ ದಾಳಿ
ಪಾಕಿಸ್ತಾನದಲ್ಲಿ, ಬಲೂಚಿಸ್ತಾನ್ ಪ್ರದೇಶದ ಖುಜ್ದಾರ್ ಪಟ್ಟಣದಲ್ಲಿ ಇಂದು ಶಾಲಾ ಬಸ್ ಮೇಲೆ ನಡೆದ ಬಾಂಬ್ ದಾಳಿಯಲ್ಲಿ ನಾಲ್ವರು ಮಕ್ಕಳು ಸೇರಿದಂತೆ ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದಾರೆ. ಈ ದಾಳಿಯಲ್ಲಿ ಬಸ್ ಚಾಲಕ ಮತ್ತು ಅವರ ಸಹಾಯಕ ಕೂಡ ಪ್ರಾಣ ಕಳೆದುಕೊಂಡಿದ್ದಾರೆ. ದಾಳಿಯ ಸಮಯದಲ್ಲಿ ಬಸ್ ಮಿಲಿಟರಿ ನಡೆಸುವ ಶಾಲೆಗೆ ಹೋಗುತ್ತಿತ್ತು. ದೂರದ ಖುಜ್ದಾರ್ ಪಟ್ಟಣದ ಹೊರಗೆ ಸ್ಫೋಟಗೊಂಡಾಗ ಬಸ್ ಸುಮಾರು 40 ಶಾಲಾ ಮಕ್ಕಳನ್ನು ಹೊತ್ತೊಯ್ಯುತ್ತಿತ್ತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ….