ಹೇಮರೆಡ್ಡಿ ಮಲ್ಲಮ್ಮನ ಬದುಕು ಮನುಕುಲಕ್ಕೆ ಆದರ್ಶ-ಸಚಿವ ರಹೀಮ್ ಖಾನ್
ಬೀದರ.13.ಮೇ.10:-14ನೇ ಶತಮಾನದ ಶಿವಶರಣರಲ್ಲಿ ಪ್ರಜ್ವಲಿಸಿದ ಹೇಮರೆಡ್ಡಿ ಮಲ್ಲಮ್ಮ ದೈವಭಕ್ತಿ, ಕಾಯಕ ನಿಷ್ಠೆ, ದಾನ ಧರ್ಮದಿಂದ, ಆದರ್ಶ ಗೃಹಿಣಿಯಾಗುವ ಮೂಲಕ ಲೋಕ ಪ್ರಸಿದ್ಧಿ ಪಡೆದಿದ್ದರು. ಶ್ರೀಶೈಲ ಮಲ್ಲಿಕಾರ್ಜುನನ್ನು ಸಾಕ್ಷಾತ್ಕರಿಸಿಕೊಂಡ ಹೇಮರೆಡ್ಡಿ ಮಲ್ಲಮ್ಮನ ಬದುಕು ಎಂದಿಗೂ ಅನುಕರಣೀಯ ಹಾಗೂ ಮನುಕುಲಕ್ಕೆ ಆದರ್ಶ ಎಂದು ಪೌರಾಡಳಿತ ಹಾಗೂ ಹಜ್ ಸಚಿವರಾದ ರಹೀಂ ಖಾನ್ ಅವರು ಹೇಳಿದರು. ಅವರು ಶನಿವಾರದಂದು ನಗರದ ಹೇಮರೆಡ್ಡಿ ಮಲ್ಲಮ್ಮ ಸಮುದಾಯ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೀದರ ಇವರ ಸಂಯುಕ್ತಾಶ್ರಯದಲ್ಲಿ…