ದ್ವಿತೀಯ ಪಿಯುಸಿ ಪರೀಕ್ಷೆ: ಶಾಹೀನ್‍ಗೆ 154 ಅಗ್ರಶ್ರೇಣಿ
ಬೀದರ್: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಗರದ ಶಾಹೀನ್ ಪದವಿಪೂರ್ವವಿಜ್ಞಾನ ಹಾಗೂ ಕಲಾ ಕಾಲೇಜು ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ತೋರಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಅರ್ಚನಾ ಶೇ 96.83 ರಷ್ಟು ಅಂಕ ಗಳಿಸಿ ಕಾಲೇಜಿಗೆ ಟಾಪರ್ ಆಗಿ ಹೊರ ಹೊಮ್ಮಿದ್ದಾರೆ. ಫರಾಹಾ ಶೇ 96, ಖುಷಿ ಮಲ್ಲಿಕಾರ್ಜುನ ಹೂಗಾರ್ ಶೇ 95.50, ಸೃಷ್ಟಿ ಶೇ 95.17 ರಷ್ಟು ಅಂಕ ಪಡೆದು ಗಮನ ಸೆಳೆದಿದ್ದಾರೆ. ಕಲಾ ವಿಭಾಗದಲ್ಲಿ ಶಿಫಾ ಶೇ 92.66 ರಷ್ಟು ಅಂಕ ಪಡೆದು ಕಾಲೇಜಿಗೆ ಮೊದಲಿಗರಾಗಿದ್ದಾರೆ….