ಬೀದರ್ ವಿಶ್ವವಿದ್ಯಾಲಯದ ಕುಲಪತಿಗಳಾದ ಸುರೇಖಾ ಏಂ ಎಸ್ ಅವರ ಮುಡಿಗೆ ರಾಜ್ಯಮಟ್ಟದ “ರಾಣಿ ಅಬ್ಬಕ್ಕದೇವಿ” ಪ್ರಶಸ್ತಿ.
ಬೀದರ್ ಮಾ ೦೪ಃ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಕೊಡ ಮಾಡುವ ರಾಜ್ಯಮಟ್ಟದ “ರಾಣಿ ಅಬ್ಬಕ್ಕದೇವಿ” ಪ್ರಶಸ್ತಿಗೆ ಬೀದರ ವಿಶ್ವವಿದ್ಯಾಲಯದ ಕುಲಪತಿಗಳಾದ ಸುರೇಖಾ ಏಂS ಭಾಜನರಾಗಿದ್ದಾರೆ. ಕರ್ನಾಟಕ ರಾಜ್ಯ ಸರಕಾರಿ ನೌಕರರ ಮಹಿಳಾ ಸಂಘವು ಕಲಬುರ್ಗಿಯಲ್ಲಿ ಮಹಿಳಾ ದಿನಾಚರಣೆಯ ಅಂಗವಾಗಿ ರಾಜ್ಯಮಟ್ಟದ ಮಹಿಳಾ ಸಮಾವೇಶವನ್ನು ಮಾಡುತ್ತಿದೆ. ಸಮಾವೇಶದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತಿದೆ. ಈ ಪ್ರಶಸ್ತಿಗೆ ಭಾಜನರಾದ ಸಾಧಕರ ಸಾಲಿನಲ್ಲಿ ಬೀದರ ವಿಶ್ವ ವಿದ್ಯಾಲಯದ ಕುಲಪತಿಗಳಾದ ಸುರೇಕಾ ಏಂS ಅವರಿರುವುದು ನಮಗೆಲ್ಲರಿಗೂ ಅತ್ಯಂತ…