ಕ್ಷಯ ರೋಗ ಕಚೇರಿ ಉದ್ಘಾಟನೆ,
ಕ್ಷಯ ರೋಗ ನಿರ್ಮೂಲನೆಗೆ ಅಧಿಕಾರಿಗಳು ಶ್ರಮಿಸಲಿ-ಸಚಿವ ಈಶ್ವರ ಖಂಡ್ರೆ.
ಬೀದರ.13.ಫೆಬ್ರುವರಿ.25:- ವಿಶ್ವ ಸಂಸ್ಥೆಯು 2030 ರೊಳಗಾಗಿ ವಿಶ್ವದಾದ್ಯಂತ ಕ್ಷಯರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆಗೊಳಿಸಲು ಸನ್ನದ್ಧವಾಗಿದ್ದು, ಆರೋಗ್ಯ ಇಲಾಖೆ ಅಧಿಕಾರಿಗಳು ಈ ನಿಟ್ಟಿನಲ್ಲಿ ಪಣತೊಟ್ಟು ಶ್ರಮಿಸಬೇಕೆಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ತಿಳಿಸಿದರು. ಬೀದರ ನಗರದಲ್ಲಿಂದು ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಬೀದರ ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿಗಳ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕ್ಷಯರೋಗವು ಸಾಂಕ್ರಾಮಿಕ ರೋಗವಾಗಿದ್ದು ಸಾರ್ವಜನಿಕರು ಕೆಮ್ಮು, ಜ್ವರ ಸುದೀರ್ಘ…