ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ವತಿಯಿಂದ ಕಾರ್ಯಾಗಾರ.!
ಮುಳಬಾಗಿಲು.10.ಫೆ.25:- ಮುಳಬಾಗಿಲು ತಾಲ್ಲೂಕಿನ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ನಗರದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ವತಿಯಿಂದ ಸೋಮವಾರ ಪರೀಕ್ಷಾ ಕಾರ್ಯಾಗಾರ ಹಾಗೂ ಪ್ರವೇಶಾತಿ ಅಭಿಯಾನ ನಡೆಯಿತು. ದ್ವಿತೀಯ ಪಿಯು ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ಶೈಕ್ಷಣಿಕವಾಗಿ ಓದುವ ಹಾಗೂ ತಯಾರಾಗುವ ವಿಧಾನಗಳ ಕುರಿತು ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರು ಪ್ರೊಜೆಕ್ಟರ್ ಮೂಲಕ ಪ್ರಾಯೋಗಿಕವಾಗಿ ತೋರಿಸಿಕೊಟ್ಟರು. ನಂತರ ಪ್ರಾಂಶುಪಾಲ ಜಿ.ಮುನಿವೆಂಕಟಪ್ಪ ಮಾತನಾಡಿ, ದ್ವಿತೀಯ ಪಿಯು ಎನ್ನುವುದು ವಿದ್ಯಾರ್ಥಿಗಳ ಜಿವನದ ಮಹತ್ವದ ಘಟ್ಟವಾಗಿದ್ದು ಸತತ ಓದು, ಓದಿದ್ದನ್ನು ಬರೆಯುವ ಹಾಗೂ ಮನನ ಮಾಡಿಕೊಳ್ಳುವ…