ನಾಳೆ (ಫೆ.2) ಅರಣ್ಯ ಇಲಾಖೆಯ 2025ನೇ ಸಾಲಿನ ದಿನಚರಿ*
ಹಾಗೂ ದಿನದರ್ಶಿಕೆ ಬಿಡುಗಡೆ ಸಮಾರಂಭ.!
ಬೀದರ.31.ಜನವರಿ.25:-ಕಲ್ಯಾಣ ಕರ್ನಾಟಕ ಪ್ರದೇಶ ಅರಣ್ಯ ಇಲಾಖೆ ನೌಕರರ ಸಂಘ (ರಿ) ಕಲಬುರಗಿ ಇವರ ವತಿಯಿಂದ ಫೆಬ್ರವರಿ.2 ರಂದು ಬೆಳಿಗ್ಗೆ 11 ಗಂಟೆಗೆ ಲಾವಣ್ಯ ಕಲ್ಯಾಣ ಮಂಟಪ, ಗುರುದ್ವಾರ ಹತ್ತಿರ, ಜನವಾಡ-ಗುರುದ್ವಾರ ರಸ್ತೆ ಬೀದರದಲ್ಲಿ 2025ನೇ ಸಾಲಿನ ‘ದಿನಚರಿ ಹಾಗೂ ‘ದಿನದರ್ಶಿಕೆ’ ಬಿಡುಗಡೆ ಸಮಾರಂಭ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರು ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ.ಖಂಡ್ರೆ ಮಾಡಲಿದ್ದಾರೆ. ಕಾರ್ಯಕ್ರಮದ ವಿಶೇಷ ಆಹ್ವಾನಿತರಾಗಿ ನವದೆಹಲಿ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯ…