ಸಮ ಸಮಾಜ ನಿರ್ಮಾಣಕ್ಕೆ ಒಗ್ಗೂಡಿ ಹೋರಾಟ’
ಔರಾದ.19.ಜನವರಿ.25:- ಸಮಾನ ಮನಸ್ಕರು, ಅನ್ಯಾಯ, ಅವ್ಯವಸ್ಥೆಯ ವಿರುದ್ಧ ಧ್ವನಿ ಎತ್ತುವವರು ಒಗ್ಗಟ್ಟಾಗಿ ಸಮ ಸಮಾಜ ನಿರ್ಮಾಣಕ್ಕಾಗಿ ಹೋರಾಟ ಮಾಡುತ್ತಿದ್ದೇವೆ’ ಎಂದು ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಹೇಳಿದರು. ಪಟ್ಟಣದ ಕನ್ನಡ ಭವನದಲ್ಲಿ ಭಾನುವಾರ ಸಮಾನ ಮನಸ್ಕರ ಜೊತೆಗಿನ ಸಂವಾದ ಕಾರ್ಯಕ್ರದಲ್ಲಿ ಮಾತನಾಡಿದರು. ಡಾ.ಬಿ.ಆರ್.ಅಂಬೇಡ್ಕರ್, ಪೆರಿಯಾರ್ ಹಾಗೂ ಕಾನ್ಸಿರಾಮ್ ಬಿಟ್ಟರೆ ಸಮ ಸಮಾಜ ಕಟ್ಟಲು ಯಾರೂ ಮುಂದೆ ಬರಲಿಲ್ಲ. ರಾಜಕಾರಣಿಗಳು ಅಧಿಕಾರದಾಸೆ ಇಟ್ಟುಕೊಂಡು ಬರುತ್ತಾರೆ. ಸಮ ಸಮಾಜ ಕಟ್ಟುವ ಇಚ್ಛಾಶಕ್ತಿ ಅವರಲ್ಲಿಲ್ಲ. ಪರ್ಯಾಯ ರಾಜಕಾರಣದಿಂದ ಮಾತ್ರ…