ಖಾಸಗಿ ಅನುದಾನಿತ ಪ್ರೌಢಶಾಲೆಗಳಲ್ಲಿ ಬೋಧಕ ಹುದ್ದೆಗಳ ಭರ್ತಿ
|

ಖಾಸಗಿ ಅನುದಾನಿತ ಪ್ರೌಢಶಾಲೆಗಳಲ್ಲಿ ಬೋಧಕ ಹುದ್ದೆಗಳ ಭರ್ತಿ

ಬೆಂಗಳೂರು.15.ಜನವರಿ.25:- ರಾಜ್ಯದ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರ ಕಛೇರಿ, ಬೆಂಗಳೂರು ಅನುದಾನಿತ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು ಆದೇಶವನ್ನು ಹೊರಡಿಸಿದೆ. ಈ ಪ್ರಕ್ರಿಯೆಯನ್ನು ತಂತ್ರಾಂಶದ ಮೂಲಕ ಮಾಡಬೇಕು ಎಂದು ಸೂಚಿಸಲಾಗಿರುತ್ತದೆ. ಈ ತಂತ್ರಾಂಶ ಹೇಗೆ ಕಾರ್ಯ ನಿರ್ವಹಣೆ ಮಾಡಲಿದೆ? ಎಂದು ತಿಳಿಸಲಾಗಿದೆ. ಈ ಆದೇಶ ರಾಜ್ಯದ ಖಾಸಗಿ ಅನುದಾನಿತ ಪ್ರೌಢ ಶಾಲೆಗಳಲ್ಲಿ ನಿಧನ, ರಾಜೀನಾಮೆ ಹಾಗೂ ಇತರ ಕಾರಣಗಳಿಂದ ಖಾಲಿಯಾದ ಬೋಧಕ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ….

ಬೀದರ,ಇಂದು ದಿಶಾ ಸಮಿತಿ ಸಭೆ.!
|

ಬೀದರ,ಇಂದು ದಿಶಾ ಸಮಿತಿ ಸಭೆ.!

ಬೀದರ.16.ಜನವರಿ.25:- ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಮೇಲ್ವಿಚಾರಣಾ ಸಮಿತಿ (ದಿಶಾ) ಸಭೆಯು ಜಿಲ್ಲೆಯ ಅಭಿವೃದ್ಧಿ ಸಮರ್ಥ ಮತ್ತು ಸಮಯೋಚಿತವಾಗಿದೆ ಎಂದು ಖಚಿತಪಡಿಸಿಕೊಳ್ಳಲು ತ್ರೈಮಾಸಿಕ ಸಭೆಯಾಗಿದೆ. ಬೀದರ ಲೋಕಸಭಾ ಸಂಸದರು ಹಾಗೂ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಮೇಲುಸ್ತುವಾರಿ (ದಿಶಾ) ಸಮಿತಿಯ (ಆಆಅಒಅ) (ಆISಊಂ) ಅಧ್ಯಕ್ಷರವರ ಅಧ್ಯಕ್ಷತೆಯಲ್ಲಿ ಜನವರಿ.16 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಮೇಲುಸ್ತುವಾರಿ (ದಿಶಾ) ಸಮಿತಿ ಸಭೆಯನ್ನು ನಿಗದಿಪಡಿಸಲಾಗಿದೆ. ಕಾರಣ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ…

ಜನವರಿ.17, 18ರಂದು 5ನೇ ರಾಜ್ಯ ಹಣಕಾಸು ಆಯೋಗದಅಧ್ಯಕ್ಷರು ಹಾಗೂ ಸದಸ್ಯರುಗಳ ಬೀದರ ಜಿಲ್ಲಾ ಪ್ರವಾಸ ಕಾರ್ಯಕ್ರಮ.!
|

ಜನವರಿ.17, 18ರಂದು 5ನೇ ರಾಜ್ಯ ಹಣಕಾಸು ಆಯೋಗದ
ಅಧ್ಯಕ್ಷರು ಹಾಗೂ ಸದಸ್ಯರುಗಳ ಬೀದರ ಜಿಲ್ಲಾ ಪ್ರವಾಸ ಕಾರ್ಯಕ್ರಮ.!

ಬೀದರ.15.ಜನವರಿ.25,:- 5ನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷರು (ಸಂಪುಟ ದರ್ಜೆ ಸಚಿವರ ಸ್ಥಾನಮಾನ) ಮತ್ತು ಸದಸ್ಯರುಗಳು ಗ್ರಾಮೀಣ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಸಾಂಸ್ಥಿಕ ರಚನೆ, ಕಾರ್ಯಚಟುವಟಿಕೆಗಳು, ಆರ್ಥಿಕ ಸ್ಥಿತಿ, ಸಂಪನ್ಮೂಲಗಳ ಕ್ರೋಢೀಕರಣ, ಹಂಚಿಕೆ ಮತ್ತು ಮೂಲ ಸೌಕರ್ಯ ಹಾಗೂ ಸೇವೆಗಳ ಒದಗಿಸುವಿಕೆಯಲ್ಲಿ ತಾಂತ್ರಿಕ ಕೌಶಲ್ಯ, ಸಾಮರ್ಥ್ಯ ಇತ್ಯಾದಿಗಳನ್ನು ಅಧ್ಯಯನ ಮಾಡುತ್ತಿರುವುದರಿಂದ ಜನವರಿ. 17 ಮತ್ತು 18 ರಂದು ಬೀದರ ಜಿಲ್ಲೆಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ ಎಂದು 5ನೇ ರಾಜ್ಯ ಹಣಕಾಸು ಆಯೋಗದ ಅಧೀನ…

ಬಸವಣ್ಣರ ಪ್ರತಿಮೆಯ ಕೈ ಮುರಿದ ಘಟನೆ ಭಾಲ್ಕಿ ತಾಲ್ಲೂಕಿನ ದಾಡಗಿ ಕ್ರಾಸ್ ಬಳಿ.
|

ಬಸವಣ್ಣರ ಪ್ರತಿಮೆಯ ಕೈ ಮುರಿದ ಘಟನೆ ಭಾಲ್ಕಿ ತಾಲ್ಲೂಕಿನ ದಾಡಗಿ ಕ್ರಾಸ್ ಬಳಿ.

ಬೀದರ.15.ಜನವರಿ.25:- ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ದಾಡಗಿ ಗ್ರಾಮ ಬಳಿ ತಡರಾತ್ರಿ ನಡೆದ ಈ ಘಟನೆಯ ವಿರುದ್ಧ ಇಂದು ಬೆಳಿಗ್ಗೆ ಭಾಲ್ಕಿ-ಹುಮನಾಬಾದ-ಬಸವಕಲ್ಯಾಣ ಮುಖ್ಯ ರಸ್ತೆ ತಡೆದು ದಾಡಗಿ ಗ್ರಾಮದ ಬಸವ ಅನುಯಾಯಿಗಳು ಪ್ರತಿಭಟನೆ ನಡೆಸುತ್ತಿದ್ದರು. ಘಟನೆ ತಿಳಿದು ಸ್ಥಳಕ್ಕೆ ಧಾವಿಸಿದ ಭಾಲ್ಕಿಯ ತಹಶೀಲ್ದಾರ್, ಡಿವೈಎಸ್ಪಿ ಹಾಗೂ ಖಟಕಚಿಂಚೋಳಿ ಪೊಲೀಸ್ ಠಾಣೆಯ ಪಿ ಎಸ್ ಐ, 45 ದಿನದಲ್ಲಿ ಬಸವಣ್ಣನವರ ಹೊಸ ಪ್ರತಿಮೆ ಪ್ರತಿಷ್ಠಾಪನೆ ಮಾಡಲಾಗುವುದು ಹಾಗೂ ಎರಡು ದಿನದಲ್ಲಿ ಪ್ರತಿಮೆ ಇದ್ದ ಸ್ಥಳದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗುವುದು…

5000ಕೋ ಹೆಚ್ಚು ಅತಿಥಿ ಉಪನ್ಯಾಸಕಗೆ  UGC ನಿಯಮಾವಳಿ  ಸಂಕಟ್.!
|

5000ಕೋ ಹೆಚ್ಚು ಅತಿಥಿ ಉಪನ್ಯಾಸಕಗೆ  UGC ನಿಯಮಾವಳಿ  ಸಂಕಟ್.!

15.ಜನವರಿ.25:- ರಾಜ್ಯ ಸರ್ಕಾರ ಉನ್ನತ ಶಿಕ್ಷಣ ಇಲಾಖೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 15 ರಿಂದ 20 ವರ್ಷ ಸೇವಾ ಅನುಭವ ಇದೆ ಇದ್ವರಿಗೆ ಸೇವಾ ಭದ್ರತೆ ನೀಡುವ ಬದಲಾಗಿ  ಸರ್ಕಾರ ಅತಿಥಿ ಉಪನ್ಯಾಸಕರ ಮೇಲೆ ಅನ್ಯಾಯ ಮಾಡುತ್ತಿದೆ. ಅತಿಥಿ ಉಪನ್ಯಾಸಕರ ಹುದ್ದೆಗೆ ಯಾವುದೇ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದಕ್ಕೂ ಮುನ್ನ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಪಿ) ನಿಗದಿಪಡಿಸಿರುವ ಕನಿಷ್ಠ ವಿದ್ಯಾರ್ಹತೆ ನಿಯಮಾವಳಿ ಅನುಸರಿಸುವಂತೆ ಹೈಕೋರ್ಟ್ ಉನ್ನತ ಶಿಕ್ಷಣ ಇಲಾಖೆ ಮತ್ತು ಕಾಲೇಜು ಶಿಕ್ಷಣ ಇಲಾಖೆಗೆ ಹೈಕೋರ್ಟ್ ನಿರ್ದೇಶನ ನೀಡಿದೆ….

ಗ್ರೂಪ್ ಬಿ ಹುದ್ದೆಗಳ  ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆ, ಕರ್ನಾಟಕ ಲೋಕ ಸೇವಾ ಆಯೋಗ .!
|

ಗ್ರೂಪ್ ಬಿ ಹುದ್ದೆಗಳ  ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆ, ಕರ್ನಾಟಕ ಲೋಕ ಸೇವಾ ಆಯೋಗ .!

ಬೆಂಗಳೂರು: 15.ಜನವರಿ.25:-ಕರ್ನಾಟಕ ಲೋಕ ಸೇವಾ ಆಯೋಗ ವತಿಯಿಂದ ನಡೆಯಲಿರುವ ಗ್ರೂಪ್ ಬಿ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆ ಮಾಡಲಾಗಿದ್ದು, ಅಭ್ಯರ್ಥಿಗಳು ವೇಶ ಪತ್ರ ಡೌನ್ ಲೋಡ್ ಮಾಡಬಹುದಾಗಿದೆ. ವಿವಿಧ ಇಲಾಖೆಗಳಲ್ಲಿನ ಹುದ್ದೆಗಳಿಗೆ, ಪತ್ರಿಕೆ-1: ಸಾಮಾನ್ಯ ಪತ್ರಿಕೆಯ ಸ್ಪರ್ಧಾತ್ಮಕ ಪರೀಕ್ಷೆಯನ್ನು ದಿನಾಂಕ 19-01-2025 ರಂದು ಮತ್ತು ಪತ್ರಿಕೆ-2: ನಿರ್ದಿಷ್ಟ ಪತ್ರಿಕೆಯ ಸ್ಪರ್ಧಾತ್ಮಕ ಪರೀಕ್ಷೆಯನ್ನು ದಿನಾಂಕ 25-01-2025 ರಂದು ನಡೆಸಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳು ಪ್ರವೇಶ ಪತ್ರಗಳನ್ನು ಆಯೋಗದ ವೆಬ್ ಸೈಟ್ https://kpsc.kar.nic.in ರ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು….

ಬೀದರ್: ಬಸವಣ್ಣನ ಮೂರ್ತಿಗೆ ಅವಮಾನ; ರಸ್ತೆ ತಡೆದು ಪ್ರತಿಭಟನೆ.!
|

ಬೀದರ್: ಬಸವಣ್ಣನ ಮೂರ್ತಿಗೆ ಅವಮಾನ; ರಸ್ತೆ ತಡೆದು ಪ್ರತಿಭಟನೆ.!

ಬೀದರ.15.ಜನವರಿ.25:-  ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ದಾಡಗಿ ಕ್ರಾಸ್ ಬಳಿ ನಡೆದಿದ್ದು, ದಧಿಬಸವಣ್ಣ ಪ್ರತಿಮೆಯ ಕೈ ಮುರಿದ ಘಟನೆ “ದಾಡಗಿ” ಕ್ರಾಸ್ ಬಳಿ ನಡೆದಿದ್ದು, ಕೃತ್ಯದ ವಿರುದ್ಧ ಆಕೋಶಗೊಂಡ ಬಸವ ಅನುಯಾಯಿಗಳು ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ. ಮಂಗಳವಾರ ತಡ ರಾತ್ರಿಯ ಸಮಯದಲ್ಲಿ ಕಿಡಿಗೇಡಿಗಳು ಬಸವಣ್ಣನ ಪ್ರತಿಮೆಯ ಕೈ ಮುರಿದಿದ್ದಾರೆ ಎನ್ನಲಾಗಿದೆ. ಈ ಘಟನೆ ವಿರುದ್ಧ ದಾಡಗಿ ಗ್ರಾಮದ ಬಸವ ಅನುಯಾಯಿಗಳು ಭಾಲ್ಕಿ-ಹುಮನಾಬಾದ್-ಬಸವಕಲ್ಯಾಣ ಮೂರು ತಾಲ್ಲೂಕುಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಮೇಲೆ ಬೆಂಕಿ ಹಾಕಿ ಪ್ರತಿಭಟನೆ…

50 ಪ್ರಯಾಣಿಕರಿದ್ದ ಬಸ್ ಗೆ ಬೆಂಕಿ ಬಿದ್ದು ಓರ್ವ ಸಜೀವ ದಹನ.!
|

50 ಪ್ರಯಾಣಿಕರಿದ್ದ ಬಸ್ ಗೆ ಬೆಂಕಿ ಬಿದ್ದು ಓರ್ವ ಸಜೀವ ದಹನ.!

ಮಹಾಕುಂಭಮೇಳಕ್ಕೆ ಹೋಗುತ್ತಿದ್ದ ಯಾತ್ರಿಕರ ಬಸ್ ವೊಂದು ನಡು ರಸ್ತೆಯಲ್ಲೇ ಹೊತ್ತಿ ಉರಿದಿದ್ದು, ಓರ್ವ ಪ್ರಯಾಣಿಕ ಸಜೀವ ದಹನವಾಗಿರುವ ಘಟನೆ ಉತ್ತರ ಪ್ರದೇಶದ ಬೃಂದಾವನದಲ್ಲಿ ನಡೆದಿದೆ. ಕುಂಭಮೇಳಕ್ಕೆ ತೆರಳುತ್ತಿದ್ದ ಬಸ್ ಸುಟ್ಟು ಕರಕಲಾಗಿದೆ. ಆ ಸಮಯದಲ್ಲಿ 50 ಯಾತ್ರಿಕರು ಇದ್ದರು ಎಂದು ಹೇಳಲಾಗುತ್ತಿದೆ. ಕುಂಭಮೇಳಕ್ಕೆ ತೆರಳುವ ಮಾರ್ಗದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಬಸ್ ನಲ್ಲಿ 50 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದುರಂತದಲ್ಲಿ ಕುಭಿರ್ ಮಂಡಲದ ಪಾಲ್ಸಿ ಗ್ರಾಮದ ವೃದ್ಧರೊಬ್ಬರು ಸಜೀವ ದಹನವಾಗಿದ್ದಾರೆ. https://x.com/bigtvtelugu/status/1879332676228026616?ref_src=twsrc%5Etfw%7Ctwcamp%5Etweetembed%7Ctwterm%5E1879332676228026616%7Ctwgr%5E%7Ctwcon%5Es1_c10&ref_url=https%3A%2F%2Fapi-news.dailyhunt.in%2F

ರಸ್ತೆ ಅಪಘಾತದಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದರೆ ₹25,000 ಬಹುಮಾನ. ಕೇಂದ್ರ ಸರಕಾರ.!
|

ರಸ್ತೆ ಅಪಘಾತದಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದರೆ ₹25,000 ಬಹುಮಾನ. ಕೇಂದ್ರ ಸರಕಾರ.!

ಭಾರತ ಸರ್ಕಾರ ಹೊಸ ಹೊಸ ಯೋಜನೆಗಳ ರೋಪಿಸ್ತಿದೆ ಈ ಕೇಂದ್ರ ರಸ್ತೆ ಸರಿಗೆ ಸಚಿವರಾದ ನಿತಿನ್ ಗಡ್ಕರಿ  ಅವರು ಈ ಒಂದು ಹೊಸ ಯೋಜನೆ ಬಗೆ ಮಾತನಾಡಿ ಹೇಳಿದರು. ರಸ್ತೆ ಅಪಘಾತಗಳಲ್ಲಿ ಗಾಯಗೊಂಡವರನ್ನು ಗೋಲ್ಡನ್ ಅವರ್ (ಮೊದಲ ಗಂಟೆ) ಸಮಯದಲ್ಲಿ ಆಸ್ಪತ್ರೆಗೆ ದಾಖಲಿಸುವ ಉತ್ತಮ ನಾಗರಿಕರಿಗೆ ನೀಡುವ ಬಹುಮಾನದ ಮೊತ್ತವನ್ನು ಕೇಂದ್ರ ಸರ್ಕಾರ ₹5,000ರಿಂದ ₹25,000ಕ್ಕೆ ಹೆಚ್ಚಿಸಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಈ ಬಗ್ಗೆ ಮಾತನಾಡಿ, ಗಾಯಾಳುಗಳಿಗೆ ಗಂಟೆಯೊಳಗೆ ತುರ್ತು ಚಿಕಿತ್ಸೆ ದೊರೆತರೆ ಚೇತರಿಕೆ ಸಾಧಿಸಲು…

ದಲಿತ ಸಮುದಾಯ ಮಾಜಿ ಶಾಸಕರು ಹಾಗು ಹಾಲಿ ಶಾಸಕರ ಸಭೆ ಮಾಡಲು ಬ್ರೇಕ.!
|

ದಲಿತ ಸಮುದಾಯ ಮಾಜಿ ಶಾಸಕರು ಹಾಗು ಹಾಲಿ ಶಾಸಕರ ಸಭೆ ಮಾಡಲು ಬ್ರೇಕ.!

ರಾಜ್ಯ ಮುಖ್ಯಮಂತ್ರಿಯ ಸಿದ್ಧರಾಮಯ್ಯ ನಂತರ ನೆಸ್ಟ್ ಮುಖ್ಯಮಂತ್ರಿ ಯಾರು ಅಂತಾ ದಲಿತ ಮುಖ್ಯಮಂತ್ರಿ ಸಚಿವ ಡಾ ಜಿ ಪರಮೇಶ್ವರ್‌ ನೇತೃತ್ವದಲ್ಲಿ ದಲಿತ ಸಮುದಾಯ ಮಾಜಿ ಶಾಸಕರು ಹಾಗು ಹಾಲಿ ಶಾಸಕರ ಸಭೆ ಮಾಡಲು ನಿರ್ಧಾರ ಮಾಡಲಾಗಿತ್ತು. ಆದರೆ ದೆಹಲಿಯಲ್ಲಿದ್ದ ಡಿಸಿಎಂ ಡಿ.ಕೆ ಶಿವಕುಮಾರ್‌, ಸುರ್ಜೇವಾಲಗೆ ದೂರು ಕೊಡುವ ಮೂಲಕ ದಲಿತ ಸಮುದಾಯದ ಸಭೆಗೆ ಬ್ರೇಕ್‌ ಹಾಕುವಲ್ಲಿ ಯಶಸ್ವಿಯಾಗಿದ್ದರು. ಆ ಬಳಿಕ ದಲಿತ ಸಮುದಾಯದ ನಾಯಕರು ಹೈಕಮಾಂಡ್‌ ಹಾಗು ಡಿ.ಕೆ ಶಿವಕುಮಾರ್‌ ವಿರುದ್ಧ ಸಿಡಿಮಿಡಿಗೊಂಡಿದ್ದರು. ಆ ಬಳಿಕ ಡಿ.ಕೆ…