ಸಂಪೂರ್ಣ್ ಬೀದರ ನಗರ ಬಂದ.!
ಬೀದರ್: 09.ಜನವರಿ.25. ಬೀದರ ನಗರದಲ್ಲಿ ಡಾ. ಭೀಮರಾವ ಅಂಬೇಡ್ಕರ ಅವರ ರಾಜ್ಯಸಭಾ ಸದನದಲ್ಲಿ ಅವಮಾನಿಸಿದ ಕಾರಣಕ್ಕೆ ದಲಿತ ಪ್ರಗತಿಪರ ಸಂಘಟನೆಗಳು ಕೇಂದ್ರ ಸಚಿವ ಅಮಿತ್ ಶಾ ರಾಜೀನಾಮೆಗೆ ಆಗ್ರಹಿಸಿ ಸ್ವಾಭಿಮಾನಿ ಡಾ. ಬಿ.ಆರ್ ಅಂಬೇಡ್ಕರ್ ಹೋರಾಟ ಸಮಿತಿ ಕರೆ ನೀಡಿರುವ ಬೀದರ್ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆಟೋ ಸೇರಿದಂತೆ ಯಾವುದೇ ವಾಹನಗಳು ರಸ್ತೆಗಿಳಿದಿಲ್ಲ. ಆಸ್ಪತ್ರೆ, ಔಷಧಿ ಮಳಿಗೆಗಳು ಮಾತ್ರ ಎಂದಿನಂತೆ ತೆರೆದಿವೆ. ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ ಸೇರಿ ಪ್ರಮುಖ ವೃತ್ತ, ರಸ್ತೆಗಳಲ್ಲಿ ಪೊಲೀಸ್ ಬಿಗಿ…