04/08/2025 10:51 AM

Translate Language

Home » ಲೈವ್ ನ್ಯೂಸ್ » 2025-26 ನೇ ಸಾಲಿನ ಜಿಲ್ಲಾ ಅತ್ಯುತ್ತಮ ಶಿಕ್ಷಕ’ ಪ್ರಶಸ್ತಿಗಳ.ಶಿಕ್ಷಕರ ದಿನಾಚರಣೆ” ಅಂಗವಾಗಿ, Application Format

2025-26 ನೇ ಸಾಲಿನ ಜಿಲ್ಲಾ ಅತ್ಯುತ್ತಮ ಶಿಕ್ಷಕ’ ಪ್ರಶಸ್ತಿಗಳ.ಶಿಕ್ಷಕರ ದಿನಾಚರಣೆ” ಅಂಗವಾಗಿ, Application Format

Facebook
X
WhatsApp
Telegram

ಬೆಂಗಳೂರು.16.ಜುಲೈ.25:- ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ವತಿಯಿಂದ 2025-26 ನೇ ಸಾಲಿನ 5ನೇ ಸೆಪ್ಟೆಂಬರ್ 2025 ರ ಶಿಕ್ಷಕರ ದಿನಾಚರಣೆ ಅಂಗವಾಗಿ ನೀಡಲಾಗುವ ‘ಜಿಲ್ಲಾ ಅತ್ಯುತ್ತಮ ಶಿಕ್ಷಕ’ ಪ್ರಶಸ್ತಿಗಳ ಬಗ್ಗೆ ಉಲ್ಲೇಖ: ದಿ: 01.02.2018 ರಂದು ನಡೆದ ನಿಧಿಗಳ ರಾಜ್ಯ ಸಮಿತಿ ಸಭೆಯ ನಿರ್ಣಯದಂತೆ.

ಪ್ರತಿ ವರ್ಷದಂತೆ, 2025-26 ನೇ ಸಾಲಿನ 5ನೇ ಸೆಪ್ಟೆಂಬರ್ 2025 ರ “ಶಿಕ್ಷಕರ ದಿನಾಚರಣೆ” ಅಂಗವಾಗಿ ನೀಡಲಾಗುವ “ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ”ಗಳಿಗೆ ಪ್ರಾಥಮಿಕ/ಪ್ರೌಢಶಾಲಾ ಶಿಕ್ಷಕರನ್ನು ಅಯ್ಕೆ ಮಾಡುವ ಸಂಬಂಧ ಹೊರಡಿಸಲಾಗುತ್ತಿರುವ ಈ ಸುತ್ತೋಲೆಯೊಂದಿಗೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಆಯ್ಕೆ ಸಮಿತಿ ಸದಸ್ಯರ ವಿವರ ಹಾಗೂ ಸಮಿತಿಯ ಕರ್ತವ್ಯಗಳ ಮಾರ್ಗಸೂಚಿಯನ್ನು ಲಗತ್ತಿಸಿ ಕಳುಹಿಸಿಕೊಡಲಾಗಿದೆ.

ಪ್ರತಿ ಜಿಲ್ಲೆಗೆ ನಿಗದಿ ಪಡಿಸಿರುವ ಪ್ರಶಸ್ತಿಗಳ ಸಂಖ್ಯಾ ವಿವರವನ್ನು (ವಲಯವಾರು ವಿಂಗಡಿಸಿರುವ ಸಂಖ್ಯೆಯನ್ನು) ಹಾಗೂ ಜಿಲ್ಲಾ ಪ್ರಶಸ್ತಿಗೆ ತಲಾ ರೂ.5000/- ರಂತೆ ನೀಡಲಾಗುವ ನಗದು ಪುರಸ್ಕಾರವನ್ನು ಮತ್ತು ಆಯ್ಕೆ ಸಮಿತಿಯ ಖರ್ಚು/ವೆಚ್ಚಗಳಿಗಾಗಿ ಪ್ರತಿ ಜಿಲ್ಲೆಗೆ ರೂ.2000/- ರಂತೆ ನೀಡಲಾಗುವ ಸಾದಿಲ್ವಾರು ವೆಚ್ಚವನ್ನು ‘ಅನುಬಂಧ-ಅ’ ರಲ್ಲಿ ವಿವರಿಸಿರುವಂತೆ ಜಿಲ್ಲಾ ಉಪನಿರ್ದೇಶಕರು (ಆಡಳಿತ) ಇವರಿಗೆ ಬಿಡುಗಡೆ ಮಾಡಲಾಗುತ್ತಿದೆ.

ರಾಜ್ಯದ ಎಲ್ಲಾ ವಲಯಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತಾಲ್ಲೂಕು ಮಟ್ಟದ “ಶಿಕ್ಷಕರ ದಿನಾಚರಣೆ” ಕಾರ್ಯಕ್ರಮ ಆಯೋಜನೆಗಾಗಿ ರೂ.20,000/- ಗಳನ್ನು ಮತ್ತು ಎಲ್ಲಾ ಜಿಲ್ಲಾ ಉಪನಿರ್ದೇಶಕರು (ಆಡಳಿತ) ರವರಿಗೆ ಜಿಲ್ಲಾ ಮಟ್ಟದ “ಶಿಕ್ಷಕರ ದಿನಾಚರಣೆ” ಕಾರ್ಯಕ್ರಮ ಆಯೋಜನೆಗಾಗಿ ರೂ: 30,000/-ಗಳ ಮೊತ್ತವನ್ನು ಬಿಡುಗಡೆ ಮಾಡಲಾಗುತ್ತಿದ್ದು, ಅದರ ವಿವರಗಳನ್ನು ಈ ಸುತ್ತೋಲೆಯೊಂದಿಗೆ ಲಗತ್ತಿಸಿರುವ “ಅನುಬಂಧ-ಆ” ರಲ್ಲಿ ನೀಡಲಾಗಿದೆ.

ದಿನಾಂಕ: 05.09.2025 ರಂದು ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡು, ಕಾರ್ಯಕ್ರಮದ ಖರ್ಚುವೆಚ್ಚದ ವಿವರಗಳ ದೃಢೀಕೃತ ಪ್ರತಿಯೊಂದಿಗೆ ವೋಚರ್‌ಗಳ ಸಹಿತ ಉಪಯೋಗಿತ ಪ್ರಮಾಣ ಪತ್ರವನ್ನು, ಕಾರ್ಯಕ್ರಮ ಆಯೋಜಿಸಿದ ಬಗ್ಗೆ ಭಾವ ಚಿತ್ರಗಳು, ಸಿ. ಡಿ. ಪ್ರತಿಗಳೊಂದಿಗೆ ದಿನಾಂಕ: 30.09.2025 ರ ಒಳಗಾಗಿ ನಿಧಿಗಳ ಕಛೇರಿಗೆ ಕಳುಹಿಸಿಕೊಡುವಂತೆ ಸೂಚಿಸಿದೆ.

APPLICATION FORMATE

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!