26/06/2025 1:41 AM

Translate Language

Home » ಲೈವ್ ನ್ಯೂಸ್ » 2025-26ನೇ ಶೈಕ್ಷಣಿಕ ಸಾಲಿಗೆ ಅತಿಥಿ ಉಪನ್ಯಾಸಕರು ಹುದ್ದೆಗೆ ಅರ್ಜಿ ಆಹ್ವಾನ

2025-26ನೇ ಶೈಕ್ಷಣಿಕ ಸಾಲಿಗೆ ಅತಿಥಿ ಉಪನ್ಯಾಸಕರು ಹುದ್ದೆಗೆ ಅರ್ಜಿ ಆಹ್ವಾನ

Facebook
X
WhatsApp
Telegram

ಬೆಂಗಳೂರು.25.ಜೂನ್.25:- 2025-26ನೇ ಶೈಕ್ಷಣಿಕ ಸಾಲಿನಲ್ಲಿ ಇಲಾಖಾ ವ್ಯಾಪ್ತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ (ಸರ್ಕಾರಿ ಸಂಸ್ಕೃತ ಹಾಗೂ ಚಿತ್ರಕಲಾ ಕಾಲೇಜುಗಳೂ ಒಳಗೊಂಡಂತೆ) ಖಾಯಂ ಉಪನ್ಯಾಸಕರಿಗೆ ಕಾರ್ಯಭಾರ ಹಂಚಿಕೆ ಮಾಡಿದ ನಂತರ ಉಳಿಕೆಯಾಗುವ ಬೋಧನಾ ಕಾರ್ಯಭಾರಕ್ಕನುಗುಣವಾಗಿ ಅತಿಥಿ ಉಪನ್ಯಾಸಕರನ್ನು (ಅತಿಥಿ ಗ್ರಂಥಪಾಲಕರು ಹಾಗೂ ಅತಿಥಿ ದೈಹಿಕ ಶಿಕ್ಷಣ ಅತಿಥಿ ಉಪನ್ಯಾಸಕರು ಸೇರಿದಂತೆ) ಉಲ್ಲೇಖ-(3) ರಲ್ಲಿ ಸರ್ಕಾರವು ನೀಡಿರುವ ಅನುಮತಿ ಮೇರೆಗೆ ಆನ್‌ಲೈನ್ ಕೌನ್ಸಿಲಿಂಗ್ ಮೂಲಕ ಆಯ್ಕೆ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ.

ಸರ್ಕಾರದ ಆದೇಶ ಸಂಖ್ಯೆ: ಇಡಿ 242 ಡಿಸಿಇ 2021, ದಿನಾಂಕ:14.01.2022 ರ ಕಂಡಿಕೆ (6) ರಲ್ಲಿ “ಯುಜಿಸಿ ನಿಗಧಿಪಡಿಸಿದ ವಿದ್ಯಾರ್ಹತೆ ಹೊಂದಿಲ್ಲದ ಅತಿಥಿ ಉಪನ್ಯಾಸಕರಿಗೆ ನಿಗಧಿತ ವಿದ್ಯಾರ್ಹತೆಯನ್ನು ಹೊಂದಲು 3 ವರ್ಷಗಳ ಕಾಲಾವಧಿ ನೀಡುವುದು, 3 ವರ್ಷಗಳ ನಂತರ ಯುಜಿಸಿ ನಿಗಧಿಪಡಿಸಿದ ವಿದ್ಯಾರ್ಹತೆ ಹೊಂದಿಲ್ಲದ ಅತಿಥಿ ಉಪನ್ಯಾಸಕರ ನೇಮಕಾತಿಯನ್ನು ಸಂಪೂರ್ಣವಾಗಿ ನಿರ್ಬಂಧಿಸುವುದು” ಆದೇಶಿಸಲಾಗಿರುತ್ತದೆ. ಎಂಬುದಾಗಿ

ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮಾನ್ಯ ಉಚ್ಚ ನ್ಯಾಯಾಲಯವು ರಿಟ್ ಅರ್ಜಿ ಸಂಖ್ಯೆ:23600/2023 ರಲ್ಲಿ ದಿನಾಂಕ:05.09.2024 ರಂದು ನೀಡಿದ ತೀರ್ಪಿನಲ್ಲಿ ಈ ಕೆಳಕಂಡಂತೆ ನಿರ್ದೇಶನ ನೀಡಿರುತ್ತದೆ.

i) This writ petition is allowed in part.

ii) The respondent Nos. 1 and 2 are directed to ensure complete compliance of the minimum qualification as prescribed by the UGC/respondent No.3 under the UGC Regulations, 2018 before selecting any candidates for the post of Guest Lecturer.

iii) It is made clear that in view of the order passed in W.P.No.3079/2022 and connected cases, the marks prescribed for past service for a maximum period of 16 years at the rate of 3 marks shall continue to be applied.

iv) It is also made clear that the respondent Nos. 1 and 2 shall not select any candidate who does not possess minimum qualification as prescribed in the UGC Regulations, 2018 and shall not select any candidate by placing a condition on him/her that he/she shall obtain requisite qualification namely NET/SLET/SET before 13.01.2025, unless he/she is awarded with a doctorate or is registered for a doctoral program prior to July 2009.

In view of the disposal of the petition, pending I.As., if any, do not survive for consideration and the same stand disposed off. ಷರತ್ತುಗಳು:

1. ಯು.ಜಿ.ಸಿ. 2018 ರ ಮಾರ್ಗಸೂಚಿಗಳಲ್ಲಿರುವಂತೆ ಅತಿಥಿ ಉಪನ್ಯಾಸಕರ ಆಯ್ಕೆಗೆ ಅರ್ಜಿ ಸಲ್ಲಿಸಲು ಸ್ನಾತಕೋತ್ತರ ಪದವಿಯಲ್ಲಿ ಶೇ.55 ಅಂಕಗಳೊಂದಿಗೆ (ಎಸ್‌ಸಿ/ಎಸ್ ಟಿ/ಒಬಿಸಿ/ವಿಶೇಷ ಚೇತನರಿಗೆ ಶೇ.50) ಮತ್ತು ಎನ್‌ಇಟಿ/ಎಸ್ಎಲ್‌ಇಟಿ/ಕೆಸೆಟ್/ಪಿಹೆಚ್.ಡಿ ವಿದ್ಯಾರ್ಹತೆ ಹೊಂದಿರುವುದು ಕಡ್ಡಾಯವಾಗಿರುತ್ತದೆ.

2. 2024-25ನೇ ಸಾಲಿಗೆ ಈಗಾಗಲೇ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು Guest Faculty ID ಮತ್ತು OTP ಬಳಸಿ ಆನ್-ಲೈನ್ ಅರ್ಜಿಗಳನ್ನು UPDATE ಮಾಡುವ ಅವಕಾಶ ಕಲ್ಪಿಸಲಾಗಿರುತ್ತದೆ. ಹೊಸದಾಗಿ ಅರ್ಜಿ ಸಲ್ಲಿಸಬಯಸುವ ಆಕಾಂಕ್ಷಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

3. ಮೇಲೆ ತಿಳಿಸಿದ ಮಾನದಂಡಗಳನ್ನು ಅನುಸರಿಸಿ ಅಭ್ಯರ್ಥಿಗಳು ಅರ್ಜಿಯಲ್ಲಿ ನಮೂದಿಸಿರುವ ವಿದ್ಯಾರ್ಹತೆ ಮತ್ತು ಸೇವಾ ವಿವರಗಳ ಆಧಾರದ ಮೇಲೆ ರಾಜ್ಯವ್ಯಾಪಿ ಮೆರಿಟ್ ಪಟ್ಟಿ (State-level Merit List) ಅನ್ನು ಪ್ರಕಟಿಸಲಾಗುವುದು.

4. ವಿಷಯವಾರು ಲಭ್ಯವಿರುವ ಕಾರ್ಯಭಾರಕ್ಕನುಗುಣವಾಗಿ ಅಗತ್ಯವಿರುವ ಸಂಖ್ಯೆಯ ಅರ್ಹ ಅಭ್ಯರ್ಥಿಗಳ (Provisional Selection List) ថ ಆಯ್ಕೆಪಟ್ಟಿಯಲ್ಲಿನ ಅಭ್ಯರ್ಥಿಗಳಿಗೆ ಆನ್‌ಲೈನ್ ಕೌನ್ಸಿಲಿಂಗ್ ಮೂಲಕ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು.

5. ಸರ್ಕಾರದ ಪತ್ರ ಸಂಖ್ಯೆ: ಇಡಿ 171 ಡಿಸಿಇ 2023, ದಿನಾಂಕ:13.09.2023. ರಲ್ಲಿ ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆಯಲ್ಲಿ ಕರ್ನಾಟಕ ಸಾರ್ವಜನಿಕ ಉದ್ಯೋಗ (ಹೈದ್ರಾಬಾದ್-ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ) ಆದೇಶ, 2013 ರ ಕಂಡಿಕೆ (3) ಮತ್ತು (13) ರಂತೆ ಅನ್ವಯವಾಗುವ ಮೀಸಲಾತಿ ನಿಗಧಿಪಡಿಸಿ, ಮೀಸಲಾತಿಗೊಳಪಡುವ ಹುದ್ದೆಗಳನ್ನು ಸ್ಥಳೀಯ ವ್ಯಕ್ತಿಗಳಿಂದಲೇ ಭರ್ತಿ ಮಾಡಿಕೊಳ್ಳುವಂತೆ ಸೂಚಿಸಲಾಗಿದ್ದು, ಅದರಂತೆ ಕ್ರಮವಹಿಸಲಾಗುವುದು.

6. ಆಯ್ಕೆಯಾಗುವ ಅತಿಥಿ ಉಪನ್ಯಾಸಕರಿಗೆ ಸರ್ಕಾರದ ಆದೇಶ ಸಂಖ್ಯೆ:ಇಡಿ 36 ಡಿಸಿಇ 2024(ಇ) (ಭಾಗ-1), ದಿನಾಂಕ:04.03.2024 ಮತ್ತು ತಿದ್ದುಪಡಿ ಆದೇಶ ದಿನಾಂಕ:16.03.2024 ರನ್ವಯ ಅತಿಥಿ ಉಪನ್ಯಾಸಕರಾಗಿ ನಿರ್ವಹಿಸುವ ಕಾರ್ಯಭಾರಕ್ಕೆ ಹಾಗೂ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಹೊಂದಿದ್ದ ಅರ್ಹತೆಗೆ (ವಿದ್ಯಾರ್ಹತೆ/ಸೇವಾ ಅವಧಿ) ಅನುಗುಣವಾಗಿ ಗೌರವಧನವನ್ನು ಪಾವತಿಸಲಾಗುವುದು.

7. ಅತಿಥಿ ಉಪನ್ಯಾಸಕರಿಗೆ ಪ್ರಾಯೋಗಿಕ ತರಗತಿ/Field Work ಇಲ್ಲದೆ ಇರುವ ಕಲಾ/ ವಾಣಿಜ್ಯ/ ಭಾಷಾ ವಿಷಯಗಳಿಗೆ ವಾರಕ್ಕೆ ಕನಿಷ್ಟ 4 ಗಂಟೆಗಳ ಮತ್ತು ಗರಿಷ್ಠ 15 ಗಂಟೆಗಳ ಹಾಗೂ ಪ್ರಾಯೋಗಿಕ ತರಗತಿ/ Field Work ಇರುವ ವಿಜ್ಞಾನ ಹಾಗೂ ಇತರೆ ವಿಷಯಗಳಿಗೆ ವಾರಕ್ಕೆ ಕನಿಷ್ಟ 4 ಗಂಟೆಗಳ ಮತ್ತು ಗರಿಷ್ಠ 19 ಗಂಟೆಗಳ ಕಾರ್ಯಭಾರವನ್ನು ಹಂಚಿಕೆ ಮಾಡಲಾಗುವುದು. ದೈಹಿಕ ಶಿಕ್ಷಣ (Physical Education) ಹಾಗೂ ಗ್ರಂಥಾಲಯ ವಿಜ್ಞಾನ (Library Science) ವಿಷಯಗಳನ್ನು ಬೋಧಿಸಲು ಆಯ್ಕೆಗೊಳ್ಳುವ ಅತಿಥಿ ಉಪನ್ಯಾಸಕರಿಗೆ ಗರಿಷ್ಠ 19 ಗಂಟೆಗಳ ಕಾರ್ಯಭಾರವನ್ನು ಹಂಚಿಕೆ ಮಾಡಲಾಗುವುದು.

8. ನಿಗಧಿಪಡಿಸಿರುವ 15/19 ಗಂಟೆಗಳಿಗಿಂತ ಕಡಿಮೆ ಕಾರ್ಯಭಾರವಿದ್ದಲ್ಲಿ ಎಷ್ಟು ಗಂಟೆಗಳ ಕಾರ್ಯಭಾರ ಲಭ್ಯವಿದೆಯೋ ಅಷ್ಟಕ್ಕೆ ಅನುಗುಣವಾಗಿ ಗೌರವಧನವನ್ನು ನೀಡಲಾಗುವುದು.

9. ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕರು ಹಾಗೂ ಗ್ರಂಥಪಾಲಕರ ಹುದ್ದೆಗಳು ಖಾಲಿ ಇರುವ ಕಾಲೇಜುಗಳಲ್ಲಿ ಅತಿಥಿ ದೈಹಿಕ ಶಿಕ್ಷಣ ನಿರ್ದೇಶಕರು ಹಾಗೂ ಅತಿಥಿ ಗ್ರಂಥಪಾಲಕರ ಸೇವೆಯನ್ನು ಬಳಸಿಕೊಳ್ಳಲು ಉದ್ದೇಶಿಸಲಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ವಿಷಯಗಳನ್ನು ಬೋಧಿಸಲು ಆಯ್ಕೆಗೊಳ್ಳುವ ಅತಿಥಿ ಉಪನ್ಯಾಸಕರಿಗೆ ನೀಡುವ ಗೌರವಧನಕ್ಕೆ ಸಮನಾಗಿ ಗೌರವಧನವನ್ನು ನೀಡಲಾಗುವುದು.

10. ಅಭ್ಯರ್ಥಿಗಳು ಅತಿಥಿ ಉಪನ್ಯಾಸಕರಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಈ ಹಿಂದೆ ಸಲ್ಲಿಸಿರುವ ಸೇವೆಯ ಸೇವಾನುಭವ ವಿವರಗಳನ್ನು ಪ್ರಾಂಶುಪಾಲರಿಂದ ನಿಗಧಿತ ನಮೂನೆಯಲ್ಲಿ ಪಡೆದು, ಸದರಿ ಸೇವಾ ವಿವರಗಳನ್ನು ಆನ್‌ಲೈನ್ ಅರ್ಜಿಯಲ್ಲಿ ಯಥಾವತ್ತಾಗಿ ನಮೂದಿಸುವುದು. (ಸೇವಾ ಪ್ರಮಾಣ ಪತ್ರದ ನಮೂನೆಯನ್ನು ಇದರೊಂದಿಗೆ ಲಗತ್ತಿಸಿದೆ)

11. 2024-25ನೇ ಸಾಲಿನಲ್ಲಿ ಕರ್ತವ್ಯ ನಿರ್ವಹಿಸಿರುವ ಅಭ್ಯರ್ಥಿಗಳು ಆನ್ ಲೈನ್ ಅರ್ಜಿ ಸಲ್ಲಿಸುವ/ ಸಲ್ಲಿಸಿರುವ ಅರ್ಜಿಯನ್ನು EDIT ಮಾಡುವ ದಿನಾಂಕದವರೆಗೆ ಮಾತ್ರ ಸೇವಾ ವಿವರಗಳನ್ನು ಸಂಬಂಧಪಟ್ಟ ಕಾಲೇಜಿನ ಪ್ರಾಂಶುಪಾಲರಿಂದ ಪಡೆದು, ಆನ್‌ಲೈನ್ ಅರ್ಜಿಯಲ್ಲಿ ನಮೂದಿಸುವುದು.

12. ಅತಿಥಿ ಉಪನ್ಯಾಸಕ ಸೇವೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 01 ವಿಷಯಕ್ಕೆ ಒಂದೇ ಅರ್ಜಿಯನ್ನು ಮಾತ್ರ ಸಲ್ಲಿಸುವುದು. ಒಂದಕ್ಕಿಂತ ಹೆಚ್ಚಿನ ಅರ್ಜಿಗಳನ್ನು ಸಲ್ಲಿಸಿದಲ್ಲಿ ಅಂತಹ ಅಭ್ಯರ್ಥಿಗಳ ಅರ್ಜಿಗಳನ್ನು ಆಯ್ಕೆಗೆ ಪರಿಗಣಿಸಲಾಗುವುದಿಲ್ಲ.

13. ಕರ್ನಾಟಕ ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅರೆಕಾಲಿಕ/ ಅತಿಥಿ ಉಪನ್ಯಾಸಕರಾಗಿ ಸಲ್ಲಿಸಿದ ಸೇವೆಯನ್ನು ಮಾತ್ರ ಆಯ್ಕೆಗೆ ಪರಿಗಣಿಸಲಾಗುವುದು ಹಾಗೂ ಇತರೆ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಸಲ್ಲಿಸಿದ ಸೇವೆಯನ್ನು ಆಯ್ಕೆಗೆ ಪರಿಗಣಿಸಲಾಗುವುದಿಲ್ಲ.

14. ಮೆರಿಟ್ ಪಟ್ಟಿ ಪ್ರಕಾರ ಕೌನ್ಸಿಲಿಂಗ್ ನಡೆಸಿ ಕಾಲೇಜುಗಳಿಗೆ ಹಂಚಿಕೆಯಾಗುವ ಅಭ್ಯರ್ಥಿಗಳು ಹಂಚಿಕೆ ಪಟ್ಟಿ (Allotment List) ಪ್ರಕಟಣೆಯಾದ ನಂತರ 03 ಕೆಲಸದ ದಿನಗಳೊಳಾಗಿ ಸಂಬಂಧಪಟ್ಟ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಬೇಕಾಗಿರುತ್ತದೆ. ಕರ್ತವ್ಯಕ್ಕೆ ವರದಿ ಮಾಡಿಕೊಂಡು ನಿಗಧಿಪಡಿಸಿರುವ 15/19 ಗಂಟೆಗಳ ಕಾರ್ಯಭಾರವಿರುವ ಅತಿಥಿ ಉಪನ್ಯಾಸಕರು ಇತರೆ ಕಾಲೇಜು/ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸಲು ಅವಕಾಶವಿರುವುದಿಲ್ಲ.

15. ಅಭ್ಯರ್ಥಿಗಳು ಅನ್‌ಲೈನ್ ಅರ್ಜಿಯಲ್ಲಿ ನೀಡಿರುವ ವಿವರಗಳಂತೆ, ಅಗತ್ಯ ದಾಖಲೆಗಳನ್ನು ಕಾಲೇಜಿನಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವ ಸಮಯದಲ್ಲಿ ಪ್ರಾಂಶುಪಾಲರ ಸಮಕ್ಷಮ ಹಾಜರುಪಡಿಸುವುದು ಕಡ್ಡಾಯವಾಗಿರುತ್ತದೆ. ಮುಂದುವರೆದು, ಕರ್ತವ್ಯಕ್ಕೆ ವರದಿ ಮಾಡಿಕೊಂಡ ಅತಿಥಿ ಉಪನ್ಯಾಸಕರು ಪ್ರಾಂಶುಪಾಲರ ಸಮಕ್ಷಮ ಹಾಜರುಪಡಿಸುವ ವಿದ್ಯಾರ್ಹತೆ / ಕಲ್ಯಾಣ ಕರ್ನಾಟಕ ಸ್ಥಳೀಯ ಅಭ್ಯರ್ಥಿಯ ಪ್ರಮಾಣ ಪತ್ರ / ಸೇವಾ ಪ್ರಮಾಣ ಪತ್ರ ಮತ್ತಿತರೆ ದಾಖಲೆಗಳನ್ನು ಪ್ರಾಂಶುಪಾಲರ ಮೂಲಕ ಇಲಾಖೆಯ ಇಐಎಂಎಸ್ ನಲ್ಲಿ ಒಂದು ಬಾರಿಯ ಕ್ರಮವಾಗಿ upload ಮಾಡಲಾಗುವುದು.

16. ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ವಿದ್ಯಾರ್ಹತೆ, ಸೇವಾ ವಿವರಗಳು ಹಾಗೂ ಇನ್ನಿತರೆ ಅಗತ್ಯ ಮಾಹಿತಿಗಳನ್ನು ನಮೂದಿಸುವಾಗ ತಪ್ಪಾಗದಂತೆ ಗಮನಹರಿಸಿ ಸರಿಯಾದ/ ನಿಖರ ಮಾಹಿತಿಯನ್ನು ದಾಖಲಿಸುವುದು.

17. ಆದಾಗ್ಯೂ, ಕಣ್ ತಪ್ಪಿನಿಂದಾಗಿ ತಪ್ಪಾದ ಮಾಹಿತಿಯನ್ನು ನಮೂದಿಸಿರುವುದು ಕಂಡುಬಂದಲ್ಲಿ ಕೂಡಲೇ ಗಮನಹರಿಸಿ, ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗಾಗಿ ಸಲ್ಲಿಸಿರುವ ಅರ್ಜಿಯನ್ನು EDIT ಮಾಡುವ ಮೂಲಕ ಸರಿಪಡಿಸಿಕೊಳ್ಳಲು ಅವಕಾಶವಿರುತ್ತದೆ. ಒಂದು ವೇಳೆ ಕೊನೆಯ ದಿನಾಂಕದ ನಂತರ ಮಾಹಿತಿಯನ್ನು ಸರಿಪಡಿಸಿಕೊಳ್ಳಲು ಮನವಿ/ ಕೋರಿಕೆ ಸಲ್ಲಿಸಿದಲ್ಲಿ ಅಂತಹ ಯಾವುದೇ ಕೋರಿಕೆ/ಮನವಿಗಳನ್ನು ಪರಿಗಣಿಸುವುದಿಲ್ಲ ಎಂಬುದನ್ನು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ.

18. ಅಭ್ಯರ್ಥಿಗಳು ಅತಿಥಿ ಉಪನ್ಯಾಸಕರ ಸೇವೆಗಾಗಿ ಅನ್‌ಲೈನ್ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗೆ ಪಡೆದಿಟ್ಟುಕೊಂಡಿರುವ ಶೈಕ್ಷಣಿಕ ಅರ್ಹತೆ ಹಾಗೂ ಸೇವಾ ವಿವರಗಳನ್ನು ಮಾತ್ರ 2024-25ನೇ ಸಾಲಿಗೆ ಪರಿಗಣಿಸಲಾಗುವುದು. ಅರ್ಜಿ ಸಲ್ಲಿಸಿದ ಕೊನೆಯ ದಿನಾಂಕದ ನಂತರ ಅಥವಾ ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಪಡೆಯಬಹುದಾದ ಯಾವುದೇ ಶೈಕ್ಷಣಿಕ ಅರ್ಹತೆ ಹಾಗೂ ಸೇವಾ ವಿವರಗಳ ದಾಖಲೆಗಳನ್ನು ಆಯ್ಕೆ ಪ್ರಕ್ರಿಯೆಗೆ, ಗೌರವಧನ ಪರಿಷ್ಕರಣೆಗೆ ಹಾಗೂ ಮೆರಿಟ್ ಪಟ್ಟಿಗೆ ಪರಿಗಣಿಸುವುದಿಲ್ಲ.

19. ಅತಿಥಿ ಉಪನ್ಯಾಸಕ ಆಕಾಂಕ್ಷಿಗಳು ವೆಬ್‌ಸೈಟ್‌ನಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಪ್ರತೇಕವಾಗಿ ಲಭ್ಯವಿರುವ Online Application Link ಮೂಲಕ ಮತ್ತು ಸರ್ಕಾರಿ ಚಿತ್ರಕಲಾ / ಸಂಸ್ಕೃತ ಕಾಲೇಜುಗಳಿಗೆ ಸಂಬಂಧಿಸಿಂತೆ ಲಭ್ಯವಿರುವ Online Application Link ಮೂಲಕ ಮಾತ್ರ ಅರ್ಜಿಯನ್ನು ಸಲ್ಲಿಸುವುದು.

20. ಕೌನ್ಸಿಲಿಂಗ್‌ ಮೂಲಕ ಆಯ್ಕೆಗೊಂಡ ಅಭ್ಯರ್ಥಿಗಳು ಆಯಾ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದಿದ್ದಲ್ಲಿ ಅವರ ಬದಲಿಗೆ ಮೆರಿಟ್ ಪಟ್ಟಿಯಲ್ಲಿನ ನಂತರದ ಅಭ್ಯರ್ಥಿಯನ್ನು ಕೌನ್ಸಿಲಿಂಗ್‌ ಮೂಲಕ ಆಯ್ಕೆ ಮಾಡಲಾಗುವುದು.

21. ವಿವಿಧ ಕಾರಣಗಳಿಂದ ನಿಗಧಿತ ಕೌನ್ಸಿಲಿಂಗ್‌ನಲ್ಲಿ ಭಾಗವಹಿಸದ ಅಥವಾ ಭಾಗವಹಿಸಿ ಕಾಲೇಜು ಆಯ್ಕೆ ಮಾಡಿಕೊಳ್ಳದ ಹಾಗೂ ಕೌನ್ಸಿಲಿಂಗ್‌ನಲ್ಲಿ ಕಾಲೇಜು ಆಯ್ಕೆ ಮಾಡಿಕೊಂಡು ಕಾಲೇಜಿನಲ್ಲಿ ಕರ್ತವ್ಯಕ್ಕೆ ಹಾಜರಾಗದ ಅಭ್ಯರ್ಥಿಗಳಿಗೆ ಪುನಃ ಎರಡನೇ ಬಾರಿಗೆ ಕೌನ್ಸಿಲಿಂಗ್‌ನಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದಿಲ್ಲ.

22. ಆನ್‌ಲೈನ್ ಅರ್ಜಿಯಲ್ಲಿ ಕಲ್ಯಾಣ-ಕರ್ನಾಟಕ ಮೀಸಲಾತಿ ಕೋರಿಕೆ ಸಲ್ಲಿಸಿ, ಅದರನ್ವಯ ಆಯ್ಕೆಗೊಂಡು ಸಂಬಂಧಪಟ್ಟ ಕಾಲೇಜಿನಲ್ಲಿ ಕರ್ತವ್ಯಕ್ಕೆ ಹಾಜರಾಗುವ ಸಂದರ್ಭದಲ್ಲಿ ಕಲ್ಯಾಣ-ಕರ್ನಾಟಕ ಮೀಸಲಾತಿ ಪ್ರಮಾಣ ಪತ್ರವನ್ನು ಪ್ರಾಂಶುಪಾಲರ ಸಮಕ್ಷಮ ಹಾಜರುಪಡಿಸಲು ವಿಫಲರಾದಲ್ಲಿ ಅಥವಾ

ಹಾಜರುಪಡಿಸಿದ ಪ್ರಮಾಣ ಪತ್ರವು ತಿರಸ್ಕೃತಗೊಂಡಲ್ಲಿ ಅಂತಹ ಅಭ್ಯರ್ಥಿಗಳನ್ನು ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆಯಿಂದ ಅನರ್ಹಗೊಳಿಸಲಾಗುವುದು.

O

23. ಆಯ್ಕೆಯಾದ ಅತಿಥಿ ಉಪನ್ಯಾಸಕರು ಆನ್‌ಲೈನ್ ಅರ್ಜಿಯಲ್ಲಿ ತಪ್ಪು ಮಾಹಿತಿ ನೀಡಿದಲ್ಲಿ, ಅಂತಹ ತಪ್ಪು ಮಾಹಿತಿ / ನ್ಯೂನ್ಯತೆಗಳಿಗೆ ಸಂಬಂದಪಟ್ಟ ಅತಿಥಿ ಉಪನ್ಯಾಸಕರೇ ಜವಾಬ್ದಾರರಾಗಿರುತ್ತಾರೆ. ಆಯ್ಕೆಯಾದ ಅತಿಥಿ ಉಪನ್ಯಾಸಕರು ಕಾಲೇಜಿನಲ್ಲಿ ಹಾಜರುಪಡಿಸುವ ವಿದ್ಯಾರ್ಹತೆಯ ಅಂಕಪಟ್ಟಿಗಳು, ವಿಕಲಚೇತನರ ಪ್ರಮಾಣ ಪತ್ರ, ಕಲ್ಯಾಣ ಕರ್ನಾಟಕ ಮೀಸಲಾತಿ ಪ್ರಮಾಣ ಪತ್ರ, ಸೇವಾ ಅವಧಿಯ ಪ್ರಮಾಣ ಪತ್ರಗಳು ಹಾಗೂ ಇತರೆ ಅಗತ್ಯ ದಾಖಲೆಗಳು ತಪ್ಪು/ನ್ಯೂನ್ಯತೆ ಅಥವಾ ‘ನಕಲಿ’ ಎಂದು ಕಂಡುಬಂದಲ್ಲಿ ಅಂತಹ ಅಭ್ಯರ್ಥಿಗಳನ್ನು ಆಯ್ಕೆ ಪ್ರಕ್ರಿಯೆಯಿಂದ ಕೈಬಿಟ್ಟು, ಅವರುಗಳ ವಿರುದ್ಧ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುವುದು.

24. ಕೌನ್ಸಿಲಿಂಗ್ ಪ್ರಕ್ರಿಯೆಯಲ್ಲಿ ಕಾಲೇಜು ಆಯ್ಕೆಮಾಡಿಕೊಂಡು ಕಾಲೇಜಿನಲ್ಲಿ ಕರ್ತವ್ಯಕ್ಕೆ ಹಾಜರಾದ ನಂತರದಲ್ಲಿ ಗರಿಷ್ಠ 6 ತಿಂಗಳ ಕಾಲಾವಧಿಗೆ ಗೌರವಧನ ರಹಿತ Maternity Leave ಪಡೆಯಲು ಅವಕಾಶ ನೀಡಲಾಗಿದ್ದು, ಸಾಮಾನ್ಯ ಮುಕ್ತಾಯ ದಿನಾಂಕದವರೆಗೆ ಸೀಮಿತಗೊಳಿಸಿ ಸದರಿ ಅವಧಿಯನ್ನು ಸೇವಾ ಅವಧಿ ಎಂದು ಪರಿಗಣಿಸಲಾಗುವುದು. Maternity Leave ಪಡೆದ ಅತಿಥಿ ಉಪನ್ಯಾಸಕರ ಬೋಧನಾ ಕಾರ್ಯಭಾರವನ್ನು ನಿರ್ವಹಿಸಲು ಬದಲಿ ಅತಿಥಿ ಉಪನ್ಯಾಸಕರನ್ನು ತಾತ್ಕಾಲಿಕವಾಗಿ ಆಯ್ಕೆಮಾಡಿಕೊಳ್ಳಲಾಗುವುದು. ಬದಲಿ ಅತಿಥಿ ಉಪನ್ಯಾಸಕರನ್ನು Maternity Leave ಪಡೆದಿರುವ ಅತಿಥಿ ಉಪನ್ಯಾಸಕರು ವರದಿ ಮಾಡಿಕೊಂಡ ನಂತರ ಬಿಡುಗಡೆ ಮಾಡಲಾಗುವುದು.

25. ವರ್ಗಾವಣೆ/ ನಿಯೋಜನೆ/ ಮರುಹಂಚಿಕೆ (Redeployment) ಹಾಗೂ ಇನ್ನಿತರ ಕಾರಣದಿಂದಾಗಿ ಖಾಯಂ ಅದ್ಯಾಪಕರು ಕಾಲೇಜಿನಲ್ಲಿ ಕರ್ತವ್ಯಕ್ಕೆ ಹಾಜರಾದಾಗ ಅಥವಾ ಸಮಿಸ್ಮರ್ ಅವಧಿಯಲ್ಲಿ ಕಾರ್ಯಭಾರ ಕಡಿಮೆಯಾದಾಗ ಅಥವಾ ಇತರೆ ಕಾರಣಗಳಿಂದ ಹೆಚ್ಚುವರಿ ಕಾರ್ಯಭಾರದಲ್ಲಿ ವ್ಯತ್ಯಯವಾದಾಗ ಆ ಕಾಲೇಜಿಗೆ ಸಂಬಂಧಪಟ್ಟ ವಿಷಯದಲ್ಲಿ ಕೊನೆಯದಾಗಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವ ಅತಿಥಿ ಉಪನ್ಯಾಸಕರನ್ನು ಸೇವೆಯಿಂದ ಬಿಡುಗಡೆಗೊಳಿಸಲಾಗುವುದು.

26. ಅತಿಥಿ ಉಪನ್ಯಾಸಕರನ್ನು ಹೆಚ್ಚುವರಿ ಕಾರ್ಯಭಾರಕ್ಕನುಗುಣವಾಗಿ ತಾತ್ಕಾಲಿಕ ವ್ಯವಸ್ಥೆಯಡಿ ಆಯ್ಕೆ ಮಾಡಿಕೊಳ್ಳುವುದರಿಂದ ಸದರಿ ತಾತ್ಕಾಲಿಕ ಸೇವೆಯನ್ನು ಪರಿಗಣಿಸಿ ಖಾಯಂ ಮಾಡಲು ಮತ್ತು ಸಹಾಯಕ ಪ್ರಾಧ್ಯಾಪಕರ ಹುದ್ದೆಯ ನೇಮಕಾತಿಯಲ್ಲಿ ಆದ್ಯತೆ ನೀಡಲು ಅವಕಾಶ ಇರುವುದಿಲ್ಲ ಹಾಗೂ ಈ ಬಗ್ಗೆ ಕೃಪಾಂಕ ಕೋರಲು ಸಹ ಯಾವುದೇ ಹಕ್ಕು ಇರುವುದಿಲ್ಲ.

27. ಆನ್‌ಲೈನ್ ಮೂಲಕ ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಿಕೊಳ್ಳುತ್ತಿರುವ ಕುರಿತು ಎಲ್ಲಾ ಸರ್ಕಾರಿ ಕಾಲೇಜುಗಳ ಪ್ರಾಂಶುಪಾಲರು ತಮ್ಮ ಕಾಲೇಜುಗಳ ನೋಟೀಸ್ ಬೋರ್ಡ್ನಲ್ಲಿ ಪ್ರಕಟಿಸುವುದರೊಂದಿಗೆ, ಅಭ್ಯರ್ಥಿಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು/ EDIT ಮಾಡಲು ಮಾಹಿತಿಯನ್ನು ನೀಡುವುದು.

28. ಅತಿಥಿ ಉಪನ್ಯಾಸಕರ ಆಯ್ಕೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಇಲಾಖೆಯ ಅಂತರ್ಜಾಲ ತಾಣ https://dce.karnataka.gov.in ರಲ್ಲಿ ಪ್ರಕಟಿಸಲಾಗುವುದು. ಆದ್ದರಿಂದ ಅಭ್ಯರ್ಥಿಗಳು ಸದರಿ ಅಂತರ್ಜಾಲ ತಾಣವನ್ನು ಪ್ರತಿನಿತ್ಯ ಗಮನಿಸಲು ತಿಳಿಸಲಾಗಿದೆ.

29. ಈ ಪ್ರಕಟಣೆಯಲ್ಲಿ ಮೇಲಿನಂತೆ ತಿಳಿಸಿರುವ ಅಂಶಗಳನ್ನು ಹೊರತುಪಡಿಸಿ ಇತರೆ ಎಲ್ಲಾ ವಿಷಯಗಳಿಗೆ ಈ ಹಿಂದೆ ಹೊರಡಿಸಲಾಗಿರುವ ಸುತ್ತೋಲೆ/ ಸರ್ಕಾರದ ಆದೇಶಗಳಲ್ಲಿನ ಅಂಶಗಳು ಅನ್ವಯವಾಗುತ್ತವೆ..

ಮುಂದುವರೆದು, ಮಾನ್ಯ ರಾಜ್ಯ ಉಚ್ಚ ನ್ಯಾಯಾಲಯವು ಉಲ್ಲೇಖ-(1) ರ ಪ್ರಕರಣದಲ್ಲಿ ನೀಡಿರುವ ತೀರ್ಪಿನಂತೆ ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆಯನ್ನು ಕೈಗೊಳ್ಳುವ ಸಲುವಾಗಿ ದಿನಾಂಕ:02.01.2025 ರ ಪ್ರಕಟಣೆಯನ್ನು ನೀಡಿದ್ದು, ಕರ್ತವ್ಯ ನಿರತರಾದ ಅತಿಥಿ ಉಪನ್ಯಾಸಕರು ರಾಜ್ಯ ಉಚ್ಚ ನ್ಯಾಯಾಲಯ, ಬೆಂಗಳೂರು ಇಲ್ಲಿ ರಿಟ್ ಅರ್ಜಿ ಸಂಖ್ಯೆ:1398/2025 ಹಾಗೂ ಇತರೆ ಪ್ರಕರಣಗಳನ್ನು ದಾಖಲಿಸಿ, ದಿನಾಂಕ:02.01.2025 ರ ಪ್ರಕಟಣೆಯನ್ನು ವಜಾಗೊಳಿಸಿ, ತಮ್ಮನ್ನು ಸೇವೆಯಲ್ಲಿ ಮುಂದುವರೆಸುವಂತೆ ಕೋರಿದ ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಾಲಯದಲ್ಲಿ ದಿನಾಂಕ:20.01.2025 ರಂದು ವಿಚಾರಣೆಗೆ ಬಂದಾಗ, ಮಾನ್ಯ ನ್ಯಾಯಾಲಯವು ರಿಟ್ ಅರ್ಜಿ ಸಂಖ್ಯೆ: 1398/2025 ಮತ್ತು ಇತರೆ ರಿಟ್ ಅರ್ಜಿಗಳಲ್ಲಿ ನೀಡಿದ ಮಧ್ಯಂತರ ಆದೇಶದಂತೆ ಈ ಕಛೇರಿಯ ದಿನಾಂಕ:02.01.2025 ರ ಪ್ರಕಟಣೆಗೆ ತಡೆಯಾಜ್ಞೆ ನೀಡಲಾಗಿತ್ತು.

ತದನಂತರ, ಸದರಿ ರಿಟ್ ಅರ್ಜಿಗಳಲ್ಲಿ ನೀಡಿದ ತಡೆಯಾಜ್ಞೆಯನ್ನು ತೆರವುಗೊಳಿಸುವ ಸಲುವಾಗಿ ಮಾನ್ಯ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಈ ಸಂಬಂಧ ದಿನಾಂಕ:22.04.2025 ರಂದು ಕರ್ತವ್ಯ ನಿರತ ರಿಟ್ ಅರ್ಜಿದಾರರಾದ ಅತಿಥಿ ಉಪನ್ಯಾಸಕರನ್ನು 10 ತಿಂಗಳ ಅವಧಿ ಮುಗಿಯುವವರೆಗೆ ಮುಂದುವರೆಸಿ ಹಾಗೂ ಅವಶ್ಯವಿರುವ ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆಯನ್ನು ಕೈಗೊಳ್ಳಲು ಆದೇಶಿಸಲಾಯಿತು.

ಮುಂದುವರೆದು, ಮಾನ್ಯ ನ್ಯಾಯಾಲಯವು 063 ಅರ್ಜಿ ಸಂಖ್ಯೆ:13282/2025 ರಲ್ಲಿ ದಿನಾಂಕ:29.04.2025 ರಂದು ಅತಿಥಿ ಉಪನ್ಯಾಸಕರ ಪ್ರಕರಣವನ್ನು ಪರಿಶೀಲಿಸಿ, “the State Government is permitted to undertake counselling of 8561 posts of guest lecturers and permit the petitioners also to participate in the counselling process and if eligible, the petitioners shall be entitled to be appointed and continued as guest lecturers. It is made clear that until the present term of the petitioners as guest lectures expires, they shall not be dislodged and no appointment order shall be issued to any other selectee to replace the petitioners.” ಎಂಬುದಾಗಿ ನಿರ್ದೇಶನ ನೀಡಲಾಗಿರುತ್ತದೆ.

ಪ್ರಸ್ತುತ, ರಿಟ್ ಅರ್ಜಿ ಸಂಖ್ಯೆ:13282/2025 ರಲ್ಲಿ ದಿನಾಂಕ:29.04.2025 ರಂದು ನೀಡಿರುವ ಮಧ್ಯಂತರ ಆದೇಶದಂತೆ ಹಾಗೂ 2024-25ನೇ ಶೈಕ್ಷಣಿಕ ಸಾಲು ಅಂತ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತು 2025-26ನೇ ಶೈಕ್ಷಣಿಕ ಸಾಲಿನಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ 2025-26ನೇ ಸಾಲಿಗೆ ಅತಿಥಿ ಉಪನ್ಯಾಸಕರ (ಅತಿಥಿ ಗ್ರಂಥಪಾಲಕರು ಹಾಗೂ ಅತಿಥಿ ದೈಹಿಕ ಶಿಕ್ಷಣ ಅತಿಥಿ ಉಪನ್ಯಾಸಕರು ಸೇರಿದಂತೆ) ಆಯ್ಕೆ ಪ್ರಕ್ರಿಯೆಯನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ.

ಪ್ರಸ್ತುತ, ಜಾರಿಯಲ್ಲಿರುವ ಯು.ಜಿ.ಸಿ. 2018 ರ ಮಾರ್ಗಸೂಚಿಗಳಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಸ್ನಾತಕೋತ್ತರ ಪದವಿಯಲ್ಲಿ ಶೇ 55 ಅಂಕಗಳೊಂದಿಗೆ (ಎಸ್‌ಸಿ/ಎಸ್ ಟಿ/ಓಬಿಸಿ/ ವಿಶೇಷ ಚೇತನರಿಗೆ ಶೇ.50) ಮತ್ತು ಎನ್‌ಇಟಿ/ಎಸ್‌ಎಲ್‌ಇಟಿ/ಕೆಸೆಟ್/ಪಿಹೆಚ್.ಡಿ ವಿದ್ಯಾರ್ಹತೆಯನ್ನು ನಿಗಧಿಪಡಿಸಲಾಗಿರುತ್ತದೆ.

ಪ್ರಸ್ತುತ 2025-26ನೇ ಶೈಕ್ಷಣಿಕ ಸಾಲಿಗೆ ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆಯನ್ನು ಕೆಳಕಂಡ ಮಾನದಂಡಗಳನ್ಮಯ ಅಭ್ಯರ್ಥಿಗಳ ವಿಷಯವಾರು ಮೆರಿಟ್ ಲಿಸ್ಟ್ (Merit List) ಅನ್ನು ತಯಾರಿಸಲಾಗುವುದು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!