05/07/2025 5:23 AM

Translate Language

Home » ಲೈವ್ ನ್ಯೂಸ್ » ರಾಜ್ಯ ಸರ್ಕಾರಕೆ 5000 ಅತಿಥಿ ಉಪನ್ಯಾಸಕರ ಭವಿಷ್ಯ ಏನು ಎಂಬುದು ಪ್ರಶ್ನೆಯಾಗಿದೆ.

ರಾಜ್ಯ ಸರ್ಕಾರಕೆ 5000 ಅತಿಥಿ ಉಪನ್ಯಾಸಕರ ಭವಿಷ್ಯ ಏನು ಎಂಬುದು ಪ್ರಶ್ನೆಯಾಗಿದೆ.

Facebook
X
WhatsApp
Telegram

ರಾಜ್ಯಾದ್ಯಂತ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳು ಆರಂಭವಾಗಿದ್ದು, ಅತಿಥಿ ಉಪನ್ಯಾಸಕರ ನೇಮಕ ಮತ್ತೊಮ್ಮೆ ಕಗ್ಗಂಟಾಗಿ ಪರಿಣಮಿಸಿದೆ. ಕಳೆದ ವರ್ಷ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಕೆಲವು ಮಾನದಂಡಗಳನ್ನು ಪ್ರಕಟ ಮಾಡಿತ್ತು. ಆದರೆ, ನ್ಯಾಯಾಲಯ ತಡೆಯಾಜ್ಞೆ ನೀಡಿದ್ದರಿಂದ 2023-24ನೇ ಸಾಲಿನ ಉಪನ್ಯಾಸಕರನ್ನೇ 2024-25ಕ್ಕೂ ಮುಂದುವರಿಸಲಾಗಿತ್ತು. ಈ ವರ್ಷ ಮತ್ತೆ ಯುಜಿಸಿ ನಿರುಮಗಳ ಅನ್ವಯ ಅತಿಥಿ ಶಿಕ್ಷಕರ ನೇಮಕ ಮಾಡಿಕೊಳ್ಳಬೇಕು ಎಂದು ಕಾಲೇಜು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಇದು ಹತ್ತಕ್ಕೂ ಹೆಚ್ಚು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಹಿರಿದು ಉಪನ್ಯಾಸಕರನ್ನು ದೂರ ಸರಿಸಲು ಮಾಡುತ್ತಿರುವ ತಂತ್ರ ಎಂದು ದೂರಲಾಗಿದೆ. ಎನಿದು ಮಾನದಂಡ?: ಕಳೆದ ವರ್ಷದ ಯುಜಿಸಿಯ ಆದೇಶದಂತೆ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರ ಹುದ್ದೆಗೆ ನೇಮಕ ಮಾಡಿಕೊಳ್ಳಲು ಪಿಎಚ್.ಡಿ. ಕೆ-ಸೆಟ್, ನೆಟ್ ಹಾಗೂ ಎಂಫಿಲ್ ವಡೆದ ಅಭ್ಯರ್ಥಿಗಳಿಗೆ ಆದ್ಯತೆ ನೀಡಬೇಕು ಎಂದು ತಿಳಿಸಲಾಗಿದೆ.

ಕಲ್ಯಾಣ ಕರ್ನಾಟಕದ ನಾನಾ ಜಿಲ್ಲೆಗಳ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 20 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಗ ಏಕಾಏಕೀ ನಮ್ಮನ್ನು ಹೊರಗಿಟ್ಟರೆ ನಾವೇನು ಮಾಡಬೇಕು?. ಕುಟುಂಬ ನಡೆಸಲು ಕೂಡ ನಾವು ಕಷ್ಟ ಪಡಬೇಕಾದ ಸ್ಥಿತಿ ಇದೆ. – ರಮೇಶ ಆರ್. ಕವಡಿ. ಹಿರಿಯ ಅತಿಥಿ ಉಪನ್ಯಾಸಕ

ಈಗ ಇದೇ ಒಂದು ಸಮಸ್ಯೆಯಾಗಿ ಮಾರ್ಪಟ್ಟಿದೆ. ರಾಜ್ಯದಲ್ಲಿ ಸುಮಾರು 11 ಸಾವಿರಕ್ಕೂ ಹೆಚ್ಚಿನ ಅತಿಥಿ ಉಪನ್ಯಾಸಕರ ನೇಮಕ ಮಾಡಿಕೊಳ್ಳಲಾಗುತ್ತಿದೆ. ಇದರಲ್ಲಿ ಶೇ.40ಕ್ಕೂ ಹೆಚ್ಚಿನ ಅಭ್ಯರ್ಥಿಗಳು ಯುಜಿಸಿ ಮಾನದಂಡದಂತೆ ಪಿಎಚ್ ಡಿ, ಕೆ-ಸೆಟ್, ನೆಟ್ ಹಾಗೂ ಎಂಫಿಲ್ ಮದವಿ ಹೊಂದಿಲ್ಲ ನೇಮಕಾತಿ ಪ್ರಕ್ರಿಯೆ ನಡೆದರೆ ಇಂತಹವರ

ಭವಿಷ್ಯ ಏನು ಎಂಬುದು ಪ್ರಶ್ನೆಯಾಗಿದೆ. 15-20 1900 ಎಂ.ಇಡಿ ಸೇರಿ ಸ್ನಾತಕೋತ್ತರ ವಿದ್ಯಾರ್ಹತೆ ಮೇಲೆ ಸಾವಿರಾರು ಅತಿಥಿ ಉಪನ್ಯಾಸಕರು ಕೆಲಸ ಮಾಡಿ, ಸೇವಾ ಅನುಭವನ್ನು ಹೊಂದಿದ್ದಾರೆ. ಈಗ ಯುಜಿಸಿ ನೆಪ ಹೇಳಿ ಕೆಲಸವಿಲ್ಲದೆ ಅನಾಥರನ್ನಾಗಿ ಮಾಡಲಾಗುತ್ತಿದೆ ಎಂಬುದು ಹಲವು ಅಶಿಥಿ ಉಪನ್ಯಾಸಕರ ಅಳಲು.

ತಡೆ ನೀಡಿರುವ ಹೈಕೋರ್ಟ್ಕ.  ಕಲ್ಯಾಣ ಕರ್ನಾಟಕದ ನಾನಾ ಜಿಲ್ಲೆಗಳ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 20 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಗ ಏಕಾಏಕೀ ನಮ್ಮನ್ನು ಹೊರಗಿಟ್ಟರೆ ನಾವೇನು ಮಾಡಬೇಕು?. ಕುಟುಂಬ ನಡೆಸಲು ಕೂಡ ನಾವು ಕಷ್ಟ ಪಡಬೇಕಾದ ಸ್ಥಿತಿ ಇದೆ. – ರಮೇಶ ಆರ್. ಕವಡಿ. ಹಿರಿಯ ಅತಿಥಿ ಉಪನ್ಯಾಸಕ

ಕಾಲೇಜು ನಡೆಯುವುದು ಕಷ್ಟ ರಾಜ್ಯದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳು ಶೇ.80ರಷ್ಟು ಅತಿಥಿ ಉಪನ್ಯಾಸಕರ ಮೇಲೆ ಅವಲಂಬಿತವಾಗಿವೆ. ಈಗ ಹಳೆಯ ಉಪನ್ಯಾಸಕರನ್ನು ಕೈ ಬಿಟ್ಟರೆ ಕಾಲೇಜುಗಳು ಸರಾಗವಾಗಿ ನಡೆಯುವುದು ಕಷ್ಟ ಸಾಧ್ಯ ಎಂದು ಹೇಳಲಾಗುತ್ತಿದೆ. 20 ವರ್ಷಗಳಿಂದ ಕೆಲಸ ಮಾಡಲಾಗುತ್ತಿದ್ದೇವೆ. ನಿವೃತ್ತಿ ನಂತರ ಇಡುಗಂಟು ಸೇರಿ ನಾನಾ ಸೌಲಭ್ಯ ನೀಡಬೇಕು. ಎಂಬುದರಿಂದ ತಪ್ಪಿಸಿಕೊಳ್ಳಲು ನಮ್ಮ ಬಾಳಿಗೆ ಕೊಳ್ಳಿ ಇಡುವ ಕೆಲಸ ಮಾಡಲಾಗುತ್ತಿದೆ,” ಎಂದು ಉಪನ್ಯಾಸಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!