Home » ಲೈವ್ ನ್ಯೂಸ್ » 2009ರಲ್ಲಿ ಡಿಗ್ರಿ ಕಾಲೇಜು ಸಹಾಯಕ ಪ್ರಾಧ್ಯಾಪಕರ ಪ್ರಮಾಣ ಪತ್ರ ಸಿಂಧುತ್ವ ಪರಿಶೀಲನೆ | ನಕಲಿ ಇದ್ದರೆ ಕ್ರಿಮಿನಲ್ ಕೇಸಿಗೆ ಸೂಚನೆ

2009ರಲ್ಲಿ ಡಿಗ್ರಿ ಕಾಲೇಜು ಸಹಾಯಕ ಪ್ರಾಧ್ಯಾಪಕರ ಪ್ರಮಾಣ ಪತ್ರ ಸಿಂಧುತ್ವ ಪರಿಶೀಲನೆ | ನಕಲಿ ಇದ್ದರೆ ಕ್ರಿಮಿನಲ್ ಕೇಸಿಗೆ ಸೂಚನೆ

Facebook
X
WhatsApp
Telegram

2009ರಲ್ಲಿ ಡಿಗ್ರಿ ಕಾಲೇಜು ಸಹಾಯಕ ಪ್ರಾಧ್ಯಾಪಕರ ಪ್ರಮಾಣ ಪತ್ರ ಸಿಂಧುತ್ವ ಪರಿಶೀಲನೆ | ನಕಲಿ ಇದ್ದರೆ ಕ್ರಿಮಿನಲ್ ಕೇಸಿಗೆ ಸೂಚನೆ

2009 ನೇಮಕ ವಿವಾದವಾಗಿದ್ದೇಕೆ ?

ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರಾಗಿ ನೇಮಕವಾಗಲು 2008 ಹಾಗೂ 2009ರ ಸಾಲಿನಲ್ಲಿ ಯುಜಿಸಿ ನಿಗದಿ ಪಡಿಸಿದ್ದ ಶೈಕ್ಷಣಿಕ ಅರ್ಹತೆಯೇ ವಿವಾದದ ಮೂಲ. ತಾನು ನಡೆಸುವ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್‌ಇಟಿ), ಕೆ-ಸೆಟ್ ಪೂರ್ಣಗೊಳಿಸಿರಬೇಕು. ಇಲ್ಲವೇ ಪಿಎಚ್. ಡಿ, ಎಂ.ಫಿಲ್ ಪದವಿಗಳಿಸಿದವರು ಬೋಧಕರಾಗಲು ಅರ್ಹ ಎನ್ನುತ್ತಿದ್ದಂತೆಯೇ, ಬಹುತೇಕ ಅಭ್ಯರ್ಥಿಗಳು ಎಂ.ಫಿಲ್ ಹಿಂದೆ ಬಿದ್ದರು. ನೆಟ್, ಕೆ-ಸೆಟ್ ಪರೀಕ್ಷೆಗಳನ್ನು ಹಣ ಹಾಗೂ ಶ್ರಮರಹಿತವಾಗಿ ಪೂರ್ಣಗೊಳಿಸುವುದು ಕಷ್ಟಸಾಧ್ಯ. ಆದರೆ, ಎಂ.ಫಿಲ್ ಮತ್ತು ಪಿಎಚ್.ಡಿಯನ್ನು ಪಡೆ ಯುವುದು ಧನಬಲವಿದ್ದರೆ ಕಷ್ಟಸಾಧ್ಯವಿರಲಿಲ್ಲ. ಇಂಥವರಿ ಗಾಗಿ ಹೊರರಾಜ್ಯದಲ್ಲಿ ಕೆಲವು ನಕಲಿ ವಿವಿಗಳು ಎಂ.ಫಿಲ್ ಮಾರಾಟಕ್ಕಿಟ್ಟವು. ಹಾಗಾಗಿ, ಬಹಳಷ್ಟು ಮಂದಿ ವರ್ಷ ಕಳೆಯುವುದರೊಳಗೆ ಎಂ.ಫಿಲ್ ಗಿಟ್ಟಿಸಿಕೊಂಡರು. ಹೆಚ್ಚಿನವರು ಪದವಿ ಪಡೆದಿದ್ದೇ ವಾಮಮಾರ್ಗದಲ್ಲಿ ಇದು ವಿವಾದವಾದ ಬಳಿಕ, ಯುಜಿಸಿ ಶೈಕ್ಷಣಿಕ ಅರ್ಹತೆಯ ಮಾನದಂಡದಿಂದ ಎಂ.ಫಿಲ್ ಅನ್ನು ಕೈ ಬಿಟ್ಟಿದೆ.

ಹೊರರಾಜ್ಯಗಳ ವಿಶ್ವವಿದ್ಯಾಲಯಗಳಿಂದ ಪಿಎಚ್.ಡಿ, ಎಂ.ಫಿಲ್ ಪಡೆದು ಸರಕಾರಿ ಪದವಿ ಕಾಲೇಜುಗಳಲ್ಲಿ ಪ್ರಸ್ತುತ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಬೋಧಕ ವೃಂದದ ಪದವಿ ಪ್ರಮಾಣ ಪತ್ರಗಳ ಸಿಂಧುತ್ವವನ್ನು ಪರಿಶೀಲಿಸಲು ಕಾಲೇಜು ಶಿಕ್ಷಣ ಇಲಾಖೆ ಮುಂದಾಗಿದೆ.

ಪರಿಶೀಲನೆ ವೇಳೆ ಯಾವುದೇ ಬೋಧಕ ಸಿಬ್ಬಂದಿಯ ಪ್ರಮಾಣ ಪತ್ರದಲ್ಲಿ ನ್ಯೂನತೆ ಇಲ್ಲವೇ ನಕಲಿತನ ಕಂಡು ಬಂದರೆ, ಕೂಡಲೇ ಅಂಥವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವಂತೆ ಇಲಾಖೆ ಸೂಚಿಸಿದೆ. ಈ ಕುರಿತು ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ತುಕರಾಮ ಕಲ್ಯಾಣಕರ ಅವರು ಸುತ್ತೋಲೆ ಹೊರಡಿಸಿದ್ದಾರೆ.

ದೂರ ಶಿಕ್ಷಣ ಪದ್ಧತಿಯಲ್ಲಿ ಮುಕ್ತ ವಿವಿಗಳು ನೀಡುವ ಪದವಿ ಪ್ರಮಾಣಗಳ ಸಿಂಧುತ್ವದ ಕುರಿತು ಅನುಮಾನ ಎದ್ದಿವೆ. ಇದರ ಬೆನ್ನಲ್ಲಿಯೇ, ಶಿಕ್ಷಣ ಇಲಾಖೆ ಈ ಕಾವ್ಯಕ್ಕೆ ಕೈ ಹಾಕಿದೆ. ಇದು

ಶಿಕ್ಷಣ ಇಲಾಖೆಯ ಸುತ್ತೋಲೆ ಪ್ರತಿ

ನಕಲಿ ಪ್ರಮಾಣ ಪತ್ರ ಪಡೆದಿರುವ ಇಲ್ಲವೇ ಮಾನ್ಯತೆ ಇಲ್ಲದ ವಿವಿಗಳಲ್ಲಿ ಪಿಎಚ್.ಡಿ., ಎಂ. ಫಿಲ್ ಪದವಿ ಪಡೆದು, ಸರಕಾರಿ ನೌಕರಿ ಗಿಟ್ಟಿಸಿಕೊಂಡಿರುವ

‘ನಕಲಿ ಪದವೀಧರ’ಬೋಧಕರಲ್ಲಿ ನಡುಕ ಮೂಡಿಸಿದೆ.

ಸರಕಾರಿ ಪ್ರಥಮ ದರ್ಜೆ ಕಾಲೇಜು, ಖಾಸಗಿ ಅನುದಾನಿತ ಕಾಲೇಜುಗಳ ಬೋಧಕ ಹುದ್ದೆಗಳಿಗೆ ನೇಮಕವಾಗಿರುವವರು, ಹುದ್ದೆಗೆ ನಿಗದಿಪಡಿಸಿರುವ ಪಿಎಚ್. ಡಿ ಹಾಗೂ ಎಂ.ಫಿಲ್ ಪದವಿ ಹೊಂದಿದ್ದಾರೆ. ಪದವಿ ಪತ್ರಗಳನ್ನು ಪರಿಶೀಲಿಸಿದಾಗ, ಹಲವು ಪ್ರಕರಣಗಳಲ್ಲಿ ಹೊರರಾಜ್ಯಗಳ ವಿವಿಗಳ ಪದವಿ ಪ್ರಮಾಣ ಪತ್ರಗಳು ಕಂಡು ಬಂದಿವೆ. ಆದರೆ ಇವುಗಳ ಸಿಂಧುತ್ವ ಇನ್ನೂ ದೃಢೀಕರಣಗೊಂಡಿಲ್ಲ,

”ಸಂಬಂಧಿಸಿದ ವಿವಿ ಇಲ್ಲವೇ ಪ್ರಾಧಿ ಕಾರದಿಂದ ಈ ಬಗ್ಗೆ ದೃಢೀಕರಣ ಪಡೆಯುವುದು, ನಕಲಿ ಎಂದು ಕಂಡಬಂದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಸೂಕ್ತ ಕ್ರಮಕ್ಕೆ ಶಿಫಾರಸು ಮಾಡಿ,”ಎಂದು ಪ್ರಿನ್ಸಿಪಾಲ್‌ರಿಗೆ ನಿರ್ದೇಶನ ನೀಡಲಾಗಿದೆ. ಈ ಎಲ್ಲದರ ಕುರಿತು ಸೆ. 30ರೊಳಗೆ ವಿವರ ಸಲ್ಲಿಸುವಂತೆಯೂ ಸೂಚಿಸಿದ್ದಾರೆ.

ಹೊರರಾಜ್ಯದ ವಿವಿ ಪದವಿ ಪಡೆದವರು..:

ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ 2,550 ಹುದ್ದೆಗಳಿಗೆ ರಾಜ್ಯಸರಕಾರ 2009ರಲ್ಲಿ ನಡೆಸಿದ ನೇಮಕ ಪ್ರಕ್ರಿಯೆಯಲ್ಲಿ ಸಾಕಷ್ಟು ಆಕ್ರಮಗಳು ನಡೆದಿವೆ ಎಂಬ ದೂರು ಕೇಳಿಬಂದಿತ್ತು. ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ನಡೆದ ನೇಮಕ ಪ್ರಕ್ರಿಯೆಯಲ್ಲಿ ಆಯ್ಕೆಯಾದ 1,500ಕ್ಕೂ ಹೆಚ್ಚು ಅಭ್ಯರ್ಥಿಗಳು ಹೊರರಾಜ್ಯದ ವಿವಿಗಳಿಂದ ಪದವಿ ಪಡೆದವರು..! ಹೊರರಾಜ್ಯದ ವಿವಿಗಳಿಂದ ಪದವಿ ಪಡೆದವರಲ್ಲಿ ಬಹುತೇಕರು ಹೊರರಾಜ್ಯದ ಅಳಗಪ್ಪ, ಪೆರಿಯರ್ ವಿವಿ, ಭಾರತಿದಾಸನ್‌ ವಿವಿ, ವಿನಾಯಕ ಮಿಷನ್ ವಿವಿಯಂತಹ 19 ವಿವಿಗಳಿಂದ ಎಂ.ಫಿಲ್ ಪದವಿ ಪಡೆದಿದ್ದರು. ವಿಶೇಷವಾಗಿ ವಾಣಿಜ್ಯಶಾಸ್ತ್ರ, ಗಣಕ ವಿಜ್ಞಾನ, ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಇಂಗ್ಲಿಷ್ ವಿಷಯಗಳ ಸಹಾಯಕ ಪ್ರಾಧ್ಯಾಪಕರಾಗಿ ಆಯ್ಕೆಯಾದವರಲ್ಲಿ ಹೊರರಾಜ್ಯದ ವಿವಿಗಳ ಪದವಿ ಸಂಪಾದಿತರೇ ಹೆಚ್ಚಿದ್ದರು.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology