ಬೆಂಗಳೂರು.31.ಡಿಸೆಂಬರ್.25: 2026 ಹೊಸ ವರ್ಷದ ಸಂಭ್ರಮಾಚರಣೆ ಸಂದರ್ಭ ಮದ್ಯ ಸೇವಿಸಿದವರನ್ನೆಲ್ಲ ಮನೆಗೆ ಬಿಡುವುದಿಲ್ಲ. ಅತಿಯಾಗಿ ಕುಡಿದು ನಡೆಯಲು ಸಾಧ್ಯವಾಗದಂತಹ ಪರಿಸ್ಥಿತಿಯಲ್ಲಿದ್ದರೆ, ಪ್ರಜ್ಞೆ ತಪ್ಪಿದ್ದರೆ ಮೊದಲು ಅವರನ್ನು ವಿಶ್ರಾಂತಿ ಕೇಂದ್ರಕ್ಕೆ ಕರೆದೊಯ್ಯಲಾಗುವುದು. ಸುಮಾರು 15 ಕಡೆಗಳಲ್ಲಿ ಇಂತಹ ವಿಶ್ರಾಂತಿ ಕೇಂದ್ರಗಳನ್ನು ತೆರೆಯಲಾಗಿದೆ.
ಪ್ರಮುಖವಾಗಿ ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿದ್ದೇವೆ. ವರ್ಷಾಚರಣೆಯ ಸಂತೋಷದಲ್ಲಿ ಹೆಚ್ಚು ಕುಡಿದು ತಮ್ಮ ನಿಯಂತ್ರಣದಲ್ಲಿ ಇರದ ಮಹಿಳೆಯರನ್ನು ದುರುಪಯೋಗಪಡಿಸಿಕೊಳ್ಳುವ ಕೃತ್ಯಗಳನ್ನು ತಪ್ಪಿಸಿ, ಅವರಿಗೆ ರಕ್ಷಣೆ ನೀಡುವುದು ಉದ್ದೇಶವಾಗಿದೆ ಎಂದು ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.






Any questions related to 15 ವಿಶ್ರಾಂತಿ ಕೇಂದ್ರಗಳನ್ನು ತೆರೆಯಲಾಗಿದೆ.?