ಬಂಧುಗಳೇ,
ತಮಗೆಲ್ಲಾ ತಿಳಿದಂತೆ ಡಾ. ಹ.ರಾ.ಮಹೇಶ್ ಅವರು ಕರ್ನಾಟಕ ಕಂಡ ಧೀಮಂತ ಹೋರಾಟಗಾರ, ಸಾಮಾಜಿಕ ಚಿಂತಕ, ನೊಂದರವರ ಪಾಲಿಗೆ ಹೆಗಲಾಗುವ ಅಪ್ಪಟ ಮನುಷ್ಯ. ಉತ್ತಮಗಾಯಕ, ಸತ್ವಯುತ ಲೇಖಕ, ಸೂಕ್ಷ್ಮಮನದ ಕವಿ, ನಟ, ರಂಗ ನಿರ್ದೇಶಕ, ಸಂಗೀತ ವಾದಕ, ಅನುಭಾವಿ ಶಿಕ್ಷಕ, ಅತ್ಯುತ್ತಮ ಸಂಘಟಕ ಪ್ರಭಾವಿ ಮಾತುಗಾರ ಅಪ್ರತಿಮ ಭಾಷಣಕಾರ ಬಹುಜನ ಚಿಂತಕ, ನಾಯಕ, ಬುದ್ಧಧಮ್ಮಸೇವಕ ಫುಲೆ ಅಂಬೇಡ್ಕರ್ವಾದಿ ಬಹುಜನ ಚಳವಳಿಯ ಪ್ರಾಮಾಣಿಕ ಕಾರ್ಯಕರ್ತ, ಸಂಪನ್ಮೂಲವ್ಯಕ್ತಿ ಹೀಗೆ ಹತ್ತು ಹಲವು ಬಗೆಯ ಆಯಾಮದ ಕಲೆ ಪ್ರತಿಭೆಗಳನ್ನು ಕರಗತ ಮಾಡಿಕೊಂಡಿರುವ ನಯವಾದ ನಡೆನುಡಿಯುಳ್ಳ ಬಹುಮುಖ ಪ್ರತಿಭಾವಂತ.
ಇವರು ಬುದ್ಧ, ಬಸವ, ಬಾಬಾಸಾಹೇಬ್ ಅಂಬೇಡ್ಕರ್‌ರವರ ತತ್ವ ಸಿದ್ಧಾಂತಗಳನ್ನು ಮನೆ ಮನೆಗೆ, ಮನ ಮನಕ್ಕೆ ಮುಟ್ಟಿಸುವಲ್ಲಿ ರಾಜ್ಯದಾದ್ಯಂತ ದಣಿವರಿಯದೆ ಹಗಲಿರುಳು ದುಡಿಯುತ್ತಿರುವುದು ತಮ್ಮಗೆಲ್ಲಾ ತಿಳಿದಿರುವ ಸಂಗತಿಯೇ ಸರಿ.
ಡಾ. ಹ.ರಾ. ಮಹೇಶ್ ರವರು ಇದೇ ಅಗಸ್ಟ್ 20, 2025ಕ್ಕೆ ಐವತ್ತರ ಹೊಸ್ತಿಲಿಗೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಅವರ ಐವತ್ತನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ತಮ್ಮ ವೃತ್ತಿಜೀವನಕ್ಕೆ ವಿದಾಯ ಹೇಳಿ ಇನ್ನುಳಿದ ಜೀವನವನ್ನು ಬುದ್ದ ಬಾಬಾಸಾಹೇಬರ ಬಹುಜನ ಚಳವಳಿಗಾಗಿ ತಮ್ಮನ್ನು ತಾವು ಪೂರ್ಣಾವಧಿ ಕಾರ್ಯಕರ್ತರಾಗಿ ತೊಡಗಿಸಿಕೊಳ್ಳುವ ಒಂದು ಮಹತ್ವದ ನಿರ್ಧಾರವನ್ನು ಘೋಷಿಸಲು ಸಜ್ಜಾಗಿದ್ದಾರೆ.
ಈ ಐತಿಹಾಸಿಕ ಘೋಷಣೆಯ ದಿನ ಬಿಡುಗಡೆ ಮಾಡಲು ಡಾ. ಹ.ರಾ.ಮಹೇಶ್ ರವರ ಅಭಿನಂದನಾ ಗ್ರಂಥವನ್ನು ಹೊರತರಲು ಅವರ ಆಪ್ತಬಳಗವು ಆಲೋಚನೆ ಮಾಡಿದ್ದು, ಆ ಆಪ್ತಬಳಗದಲ್ಲಿ ತಾವೂ ಸಹ ಒಬ್ಬರಾಗಿರುವುದರಿಂದ
ಅವರ ಈ ತ್ಯಾಗಮಯ ಬದ್ಧತೆಯ ಐತಿಹಾಸಿಕ ನಿಲುವನ್ನು ಪ್ರಶಂಸಿಸುವ ಮತ್ತು ಅವರ ಜೊತೆನಿಲ್ಲುವ ಹಾರೈಸುವ ಒಂದಷ್ಟು ಸಾಲುಗಳನ್ನು
*“ನಾನು ಕಂಡಂತೆ ಡಾ. ಹ. ರಾ. ಮಹೇಶ್”* ಈ ವಿಷಯಾಧಾರಿತವಾಗಿ ಒಂದು ಲೇಖನವನ್ನು ಇದೇ ತಿಂಗಳ 17ರ ಒಳಗಾಗಿ ಈ ಕೆಳಗೆ ನೀಡಿರುವ ವಾಟ್ಸಾಪ್ ನಂಬರ್ ಗಳಲ್ಲಿ ಯಾವುದಾದರು ಒಂದಕ್ಕೆ ಅಥವಾ ಈ ಮೇಲ್ ಗೆ ತಮ್ಮ ಹೆಸರು ಫೋಟೋ ವಿಳಾಸ ಇನ್ನಿತರ ವಿವರಗಳೊಂದಿಗೆ ಕಳುಹಿಸಿ ಸಹಕರಿಸಲು ಮತ್ತು ಬಿಡುಗಡೆಯ ದಿನ (ಮುಂದೆ ತಿಳಿಸಲಾಗುವುದು) ಕಾರ್ಯಕ್ರಮಕ್ಕೆ ತಾವು ಮನಃಪೂರ್ವಕವಾಗಿ ಆಗಮಿಸಬೇಕೆಂದು ತಮ್ಮಲ್ಲಿ ಕಳಕಳಿಯ ಮನವಿ ಸಲ್ಲಿಸುತ್ತಿದ್ದೇವೆ.
ಹಾರೈಕೆಗಳ ಬರಹ/ ಲೇಖನಗಳನ್ನು ದಯಮಾಡಿ ಇಲ್ಲಿಗೆ..👇 ಕಳಿಸಿಕೊಡಿ.
ಶಾಮಸುಂದರ್ ಖಾನಾಪುರ್ಕರ್ :
88672 00514
ಸಾಕ್ಯ ಗೌತಮ್ :
9620697398
ಸುನಿಲ್ ನಾಗಬೌದ್ಧ :
9731953678
ಕಿರಣ್ ರಾಜವಂಶಿ :
93800 35756
ಈ ಮೇಲ್ :
gouthu436@gmail.com
ಜೈ ಭೀಮ್
ಜೈ ಪ್ರಬುದ್ಧ ಭಾರತ.
ನಿಮ್ಮ ಲೇಖನಗಳಿಗಾಗಿ ಕಾಯುತ್ತಿರುತ್ತೇವೆ.