Home » ಲೈವ್ ನ್ಯೂಸ್ » ಹೊರ ರಾಜ್ಯದ ಪಿಎಚ್‌ಡಿ ನೈಜತೆ ಒರೆಗಚ್ಚಿದ ಉನ್ನತ ಶಿಕ್ಷಣ ಇಲಾಖೆ.

ಹೊರ ರಾಜ್ಯದ ಪಿಎಚ್‌ಡಿ ನೈಜತೆ ಒರೆಗಚ್ಚಿದ ಉನ್ನತ ಶಿಕ್ಷಣ ಇಲಾಖೆ.

Facebook
X
WhatsApp
Telegram

ಬೆಂಗಳೂರು.12.ಫೆಬ್ರವರಿ.26: ಉನ್ನತ ಶಿಕ್ಷಣ ಇಲಾಖೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ವಿವಿಧ ವಿಷಯಗಳ ಅತಿಥಿ ಉಪನ್ಯಾಸಕರ ನಕಲಿ ಸಂಶೋಧನಾ ಪ್ರಮಾಣ ಪತ್ರ ಸಲ್ಲಿಸಿ ಅತಿಥಿ ಉಪನ್ಯಾಸಕರ ಹುದ್ದೆಗೆ ನೇಮಕರಾಗಿ ಕೆಲವು ವರ್ಷ ಸೇವೆ ಸಲ್ಲಿಸಲಾಗಿದೆ 2025ಗೆ 26ನೇ ಸಾಲಿನ ವಿವಿಧ ಸಂಘಟನೆ ಮತ್ತು ಇತರರ ನಕಲಿ ಸಂಶೋಧನಾ ಅಭ್ಯರ್ಥಿ ಹಾಗೂ ನಕಲಿ ವಿಶ್ವವಿದ್ಯಾಲಯ ವಿರುದ್ಧ ಕ್ರಮಕೆ ಆಗ್ರಹಿಸಿದರು.

ವಿವಿಧ ವಿಶ್ವವಿದ್ಯಾಲಯದಿಂದ ವಿವಿಧ ವಿಷಯಗಳ ನಕಲಿ Ph.D certificate,

ಹೊರರಾಜ್ಯದ ಹೊರ ರಾಜ್ಯದ ಪಿಎಚ್‌ಡಿ ನೈಜತೆ ಒರೆಗಚ್ಚಿದ ಇಲಾಖೆ ಹೊರ ರಾಜ್ಯದ ವಿಶ್ವ ವಿದ್ಯಾಲಯಗಳಿಂದ ಪಿಎಚ್‌ಡಿ ಪ್ರಮಾಣ ಪತ್ರ ಸಲ್ಲಿಸಿ ಸರ್ಕಾರ, ಅನುದಾನಿತ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ಹುದ್ದೆ ಗಿಟ್ಟಿಸಿಕೊಂಡವರಿಗೆ ಕಾಲೇಜು ಶಿಕ್ಷಣ ಇಲಾಖೆಯ ಆದೇಶ ಎದೆ ಬಡಿತ ಹೆಚ್ಚಿಸಿದೆ.

ಬೆಂಗಳೂರು ವಿಶ್ವ ವಿದ್ಯಾಲಯದ ವ್ಯಾಪ್ತಿಯಲ್ಲಿ ಮಾರ್ಗದರ್ಶನವೇ ಮಾಡದ ಪ್ರಾಧ್ಯಾಪಕರೊಬ್ಬರ ಹೆಸರು ಬಳಸಿ ಪಿಎಚ್‌ ಡಿ ಪ್ರಮಾಣ ಪತ್ರ ಸಲ್ಲಿಸಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕ ಹುದ್ದೆ ಪಡೆದು ಅಮಾನತ್ತು ಮಾಡಿದ ಪ್ರಕರಣ ಬೆಳಕಿಗೆ ಬಂದಿತ್ತು.

ಇದರಿಂದ ಎಚ್ಚೆತ್ತ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು ರಾಯಚೂರು ಜಿಲ್ಲೆಯಲ್ಲಿನ ಅನುದಾನಿತ ಹಾಗೂ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯಗಳ ಪ್ರಾಂಶುಪಾಲರಿಗೆ ಆಯಾ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ನಿರ್ವಹಿಸುತ್ತಿರುವ ಕಾರ್ಯ ಹೊರ ರಾಜ್ಯಗಳ ವಿಶ್ವ ವಿದ್ಯಾಲಯಗಳಿಂದ ಪಡೆದ ದಾಖಲೆಗಳ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸಲು ಆದೇಶಿಸಿರುವುದು ಬೆಳಕಿಗೆ ಬಂದಿದೆ.

ರಾಯಚೂರು ಜಿಲ್ಲೆಯಲ್ಲಿ ಮಾದರಿ ಪದವಿ ಕಾಲೇಜು ಸೇರಿ ಒಟ್ಟು 13 ಸರ್ಕಾರಿ, ಅನುದಾನಿತ ಪದವಿ ಮಹಾವಿದ್ಯಾಲಯಗಳಿವೆ. ಈ ವಿದ್ಯಾಲಯಗಳಲ್ಲಿ ಸುಮಾರು 300 ಜನ ಅತಿಥಿ ಉಪನ್ಯಾಸಕರು ಕಾರ್ಯ ನಿರ್ವಹಿಸತ್ತಿದ್ದಾರೆ.

ಏನೇನು ಪರಿಶೀಲನೆ : ಆಯಾ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರ ಪೈಕಿ ಪಿಎಚ್‌ ಡಿ ಪದವಿ ಪಡೆದವರೆಷ್ಟು, ಆ ಪಿಎಚ್‌ಡಿ ಪದವಿ ರಾಜ್ಯದ್ದೆ ಅಥವಾ ಹೊರ ರಾಜ್ಯದ ಯಾವ ವಿಶ್ವ ವಿದ್ಯಾಲಯದ್ದು, ಪಿಎಚ್‌ಡಿ ಅಧಿಸೂಚನೆ, ಮಾರ್ಗದರ್ಶಕರ ವಿವರ, ವಿಷಯದ ಪ್ರತಿ, ಮೌಖಿಕ ಸಂದರ್ಶನ ನೀಡಿದ ದಾಖಲೆ ಸೇರಿ 12 ಅಂಶಗಳನ್ನೊಳಗೊಂಡಿರುವ ದಾಖಲೆಗಳ ಪಡೆದು ಪರಿಶೀಲಿಸಲು ಪ್ರಾಂಶುಪಾಲರಿಗೆ ಸೂಚಿಸಲಾಗಿದೆ. ಅನುಮಾನವಿರುವ ಅಥವಾ ಕಡ್ಡಾಯವಾಗಿ ಹೊರ ರಾಜ್ಯದ ವಿಶ್ವ ವಿದ್ಯಾಲಯಗಳಿಂದ ಪಡೆದ ಪಿಎಚ್‌ಡಿ ಪದವಿಯ ನೈಜತೆ ಪ್ರಮಾಣ ಪತ್ರದೊಂದಿಗೆ ಮರು ಪರಿಶೀಲಿಸಿ ಇಲಾಖೆಗೆ ಸಲ್ಲಿಸುವಂತೆ ತಿಳಿಸಿದ್ದಾರೆ.

ಜಿಲ್ಲೆಯೊಂದರಲ್ಲಿಯೇ

ರಾಯಚೂರು ಸುಮಾರು 50ಕ್ಕೂ ಅಧಿಕ ಅತಿಥಿ ಉಪನ್ಯಾಸಕರು ಹೊರ ರಾಜ್ಯದ ವಿಶ್ವ ವಿದ್ಯಾಲಯಗಳಿಂದ ಪಿಎಚ್‌ಡಿ ಪದವಿ ಪಡೆದು ಆ ದಾಖಲೆಗಳೊಂದಿಗೆ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವುದಾಗಿ ಬಲ್ಲ ಮೂಲಗಳಿಂದ ಗೊತ್ತಾಗಿದೆ. ಆದರೆ, ಅವುಗಳ ನೈಜತೆ ಬಗ್ಗೆ ಅನುಮಾನವಿರುವುದರಿಂದ ಪ್ರಾಂಶುಪಾಲರು

ತಮ್ಮ ವಿವೇಚನೆ ಬಳಸಿ ಅಂತಹ පද්ධ ಉಪನ್ಯಾಸಕರ ದಾಖಲೆ ಸಮೇತ ಕಳುಹಿಸುವ ಸಿದ್ಧತೆ ಮಾಡಿಕೊಳ್ಳುತ್ತಿರುವುದಾಗಿ ಹೇಳಲಾಗುತ್ತಿದೆ.

ಪ್ರಾಂಶುಪಾಲರಿಗಿಲ್ಲ ಅಧಿಕಾರ : ಕಾಲೇಜು ಶಿಕ್ಷಣ ಇಲಾಖೆಯ ಆದೇಶದಂತೆ ಉಪನ್ಯಾಸಕರನ್ನು ನೇಮಿಸಿಕೊಳ್ಳುವ ಅಧಿಕಾರ ಮಾತ್ರ ಪ್ರಾಂಶುಪಾಲರಿಗಿದೆ. ಆದರೆ, ಇಲಾಖೆ ಆಯುಕ್ತರಿಗೆ ಅವರ ದಾಖಲೆ ಪರಿಶೀಲನೆ ಅಧಿಕಾರವಿದೆ.

ಉಪನ್ಯಾಸಕರು ಸಲ್ಲಿಸಿದ ಪಿಎಚ್‌ಡಿ ಅಸಲಿಯೊ, ನಕಲಿಯೊ ಎಂಬುದರ ನೈಜತೆ ಪರಿಶೀಲಿಸಬೇಕಾಗಿರುವುದು ಇಲಾಖೆ ಆಯುಕ್ತರೆ ಹೊರತು ಪ್ರಾಂಶುಪಾಲರಲ್ಲ. ಒಂದೊಮ್ಮೆ ನಕಲಿ ಪಿಎಚ್‌ಡಿ ಪ್ರಮಾಣ ಸಲ್ಲಿಸಿದ್ದರೂ ಅದಕ್ಕೆ ಪತ್ರ ಪ್ರಾಂಶುಪಾಲರು ಹೊಣೆಯಾಗರು ಅದಕ್ಕೆ ಇಲಾಖೆಯೆ ఎంబ ಹೊಣೆಯಾಗಲಿದೆ ಮಾಹಿತಿಯೂ ಹೊರ ಬಿದ್ದಿದೆ.

ಜಾಣತನಕ್ಕೆ ಮೊರೆ: ಇಲಾಖೆ ಹಾಗೂ ಅತಿಥಿ ಉಪನ್ಯಾಸಕರ ಮಧ್ಯೆ ಸಂಕಟದಿಂದ ಪಾರಾಗಲು ಕಾಲೇಜುಗಳ ಪ್ರಾಂಶುಪಾಲರು ಜಾಣತನದ ಹೆಜ್ಜೆ ಇಟ್ಟಿದ್ದಾರೆ.

ಕಾಲೇಜು ಶಿಕ್ಷಣ ಇಲಾಖೆಯ ಆದೇಶ ಪಡೆದು ತಮ್ಮ ಪಿಎಚ್‌ಡಿಗೆ ಸಂಬಂಧಿಸಿದ ಎಲ್ಲ ದ್ವಿಪ್ರತಿ ಸಲ್ಲಿಸ ಬೇಕು ಹೊರ ರಾಜ್ಯದ ವಿಶ್ವ ವಿದ್ಯಾಲಯದ ಪಿಎಚ್‌ ಡಿ ಪಡೆದವರು ನೈಜತೆ ಪ್ರಮಾಣ ಪತ್ರ ಸಲ್ಲಿಸಬೇಕು. ನಕಲಿ ಎಂದು ಗೊತ್ತಿದ್ದರೆ ಅಂತಹ ಅತಿಥಿ ಉಪನ್ಯಾಸಕರು ರಾಜೀನಾಮೆ ನೀಡಿ ಹೊರ ಹೋಗಬಹುದಾಗಿದೆ. ಒಂದೊಮ್ಮೆ ವಿಚಾರಣೆಯಲ್ಲಿ ಪಿಎಚ್‌ ಡಿ ನಕಲಿ ಎಂದು ಕಂಡು ಬಂದಲ್ಲಿ ಮುಂದಿನ ಕ್ರಮಕ್ಕೆ ತಾವೆ ಹೊಣೆ ಎಂದು ಅಂತಿಮ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಆ ಪ್ರತಿಯನ್ನು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರಿಗೆ ರವಾನಿಸಿ ಜವಾಬ್ದಾರಿ ಮುಗಿಸಿದ್ದಾರೆ.

ಎದೆ ಬಡಿತ ಹೆಚ್ಚಿಸಿದ ನೈಜತೆ : ಹೊರ ರಾಜ್ಯದಿಂದ ಪಿಎಚ್‌ಡಿ ಪಡೆದು ಸ್ಪರ್ಧೆ, ಶಿಫಾರಸ್ಸು ಮಾಡಿ ಅತಿಥಿ ಉಪನ್ಯಾಸಕರ ಹುದ್ದೆ ಗಿಟ್ಟಿಸಿಕೊಂಡಿರುವವರಿಗೆ ಕಾಲೇಜು ಶಿಕ್ಷಣ ಇಲಾಖೆಯ ಈ ಆದೇಶ ಎದೆ ಬಡಿತ ಹೆಚ್ಚಿಸಿದೆ.

ಪಿಎಚ್‌ ಡಿಗೆ ಸಂಬಂಧಿಸಿದ ದಾಖಲೆ, ಪ್ರಮಾಣ ಪತ್ರಗಳನ್ನು ಸಲ್ಲಿಸಿರುವ ಅತಿಥಿ ಉಪನ್ಯಾಸಕರ ಪೈಕಿ ಕೆಲವರು ಆಯಾ ವಿಶ್ವ ವಿದ್ಯಾಲಯದಿಂದ ನೈಜತೆ ಪ್ರಮಾಣ ಪತ್ರ ಸಲ್ಲಿಸಿಲ್ಲ ಎಂಬುದು ಪ್ರಾಂಶುಪಾಲರ ಗಮನಕ್ಕೆ ಈ ಆದೇಶ ತಂದಂತಾಗಿದೆ.

ಪ್ರತಿ ಕಾಲೇಜಿನಲ್ಲಿಯೂ ಕನಿಷ್ಠ ಇಬ್ಬರಿಂದ ಗರಿಷ್ಟ 5ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಹೊರ ರಾಜ್ಯದ ಪಿಎಚ್‌ಡಿ ಪಡೆದವರಿದ್ದಾರೆ ಎನ್ನಲಾಗುತ್ತಿದೆ. ಈಗ ಅಂತವರ ನೈಜತೆ ಪ್ರಮಾಣ ಪತ್ರ ಬೇಕೆಂಬ ಆದೇಶ ಎಷ್ಟರ ಮಟ್ಟಿಗೆ ಪಾಲಿಸುವರೆಂಬುದು ಕಾದು ನೋಡಬೇಕಿದೆ.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology