Home » ಲೈವ್ ನ್ಯೂಸ್ » 96 ಸಾವಿರ ಹೊರಗುತ್ತಿಗೆ ಸಿಬ್ಬಂದಿಗೆ ‘ಸೇವಾ ಮುಕ್ತಿ’ ಇಲಾಖೆಗಳಿಗೆ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರ

96 ಸಾವಿರ ಹೊರಗುತ್ತಿಗೆ ಸಿಬ್ಬಂದಿಗೆ ‘ಸೇವಾ ಮುಕ್ತಿ’ ಇಲಾಖೆಗಳಿಗೆ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರ

Facebook
X
WhatsApp
Telegram

ಬೆಂಗಳೂರು.01.ಏಪ್ರಿಲ್.26: ರಾಜ್ಯದ ಸರ್ಕಾರದ ವಿವಿಧ ಇಲಾಖೆಗಳಲ್ಲಿನ ‘ಗುತ್ತಿಗೆ ಭಾರವನ್ನು ಇಳಿಸಿಕೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರ ಒಪ್ಪಂದ ಅವಧಿ ಮುಗಿದ ಹೊರಗುತ್ತಿಗೆ ಸಿಬ್ಬಂದಿಗೆ ತಕ್ಷಣದಿಂದ ‘ಸೇವಾ ಮುಕ್ತಿ’ ನೀಡುವಂತೆ ಎಲ್ಲ ಇಲಾಖೆಗಳಿಗೆ ಆದೇಶ ಹೊರಡಿಸಿದೆ. ರಾಜ್ಯದ ವಿವಿಧ ಇಲಾಖೆಗಳಲ್ಲಿ ಸದ್ಯ 96 ಸಾವಿರಕ್ಕೂ ಅಧಿಕ ಹೊರಗುತ್ತಿಗೆ ನಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.

ಸರ್ಕಾರಿ ಇಲಾಖೆಗಳಲ್ಲಿ ಹೊರಗುತ್ತಿಗೆ ನೇಮಕಾತಿಯನ್ನು 2028ರ ವೇಳೆಗೆ ಸಂಪೂರ್ಣ ರದ್ದುಗೊಳಿಸಲು ರಾಜ್ಯ ಸರ್ಕಾರ ಗುರಿ ಇಟ್ಟುಕೊಂಡಿದೆ. ಅಲ್ಲದೆ ಖಾಲಿ ಇರುವ ನೇರನೇಮಕಾತಿ ಹುದ್ದೆಗಳ ಪೈಕಿ 56 ಸಾವಿರ ಹುದ್ದೆಗಳನ್ನು ಭರ್ತಿಗೆ ಸರ್ಕಾರ ನಿರ್ದರಿಸಿದೆ. ನೇಮಕಾತಿ ಪ್ರಕ್ರಿಯೆಗೆ ಅಡಚಣೆ ಉಂಟು ಆಗಬಹುದಾದ ಒಂದೊಂದೇ ಹಂತವನ್ನು ಸರಿಪಡಿಸಿಕೊಳ್ಳುತ್ತಿರುವ ಸರ್ಕಾರ, ಇದೀಗ ಅವಧಿ ಮುಗಿದ ಹೊರಗುತ್ತಿಗೆ ಸಿಬ್ಬಂದಿಯನ್ನು ಸೇವೆಯಿಂದ ಬಿಡುಗಡೆಗೊಳಿಸುವ ತೀರ್ಮಾನ ಕೈಗೊಂಡಿದೆ ಎನ್ನಲಾಗಿದೆ.

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು, ಸಂಸ್ಥೆಗಳಲ್ಲಿ ಟೆಂಡರ್ ಅಥವಾ ಒಪ್ಪಂದದ ನಿಯಮಗಳನ್ನು ಉಲ್ಲಂಘಿಸಿ ಹೊರಗುತ್ತಿಗೆ/ಒಪ್ಪಂದ ಆಧಾರಿತ ಸಿಬ್ಬಂದಿಯನ್ನು ನಿಗದಿತ ಅವಧಿ ಮುಗಿದ ನಂತರವೂ ಮುಂದುವರಿಸಲಾಗುತ್ತಿರುವುದು ಸರ್ಕಾರಕ್ಕೆ ಗಮನಕ್ಕೆ ಬಂದಿದೆ. ಇದು ಹಣಕಾಸು ಶಿಸ್ತಿಗೆ ವಿರುದ್ಧವಾಗಿದ್ದು ಸರ್ಕಾರಿ ನಿಯಮಾವಳಿಗಳ ಉಲ್ಲಂಘನೆಯಾಗಿದೆ. ಆದ್ದರಿಂದ ಅವಧಿ ಮುಗಿದ ಹೊರಗುತ್ತಿಗೆ ಸಿಬ್ಬಂದಿಯನ್ನು ಮುಂದುವರಿಸದಂತೆ ಕಟ್ಟುನಿಟ್ಟಿನ ಆದೇಶ ಜಾರಿಗೆ ತರಲಾಗುತ್ತಿದ್ದು ಅದನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ ಹಣಕಾಸು ಇಲಾಖೆ ಇತ್ತೀಚೆಗೆ ಸುತ್ತೋಲೆ ಹೊರಡಿಸಿದೆ.

ಇಲಾಖಾ ಮುಖ್ಯಸ್ಥರೇ ಹೊಣೆ:

ರಾಜ್ಯದ ವಿವಿಧ ಇಲಾಖೆಗಳಲ್ಲಿ ಸದ್ಯ 96000ಕ್ಕೂ ಅಧಿಕ ಹೊರಗುತ್ತಿಗೆ ಸಿಬ್ಬಂದಿ ಇದ್ದಾರೆ. ಈ ಪೈಕಿ ಈಗಾಗಲೇ ಅವಧಿ ಮುಗಿದ ಸಿಬ್ಬಂದಿಯನ್ನು ಸೇವೆಯಲ್ಲಿ ಮುಂದುವರಿಸಬಾರದು, ಈ ಆರ್ಥಿಕ ವರ್ಷಕ್ಕೆ ಒಪ್ಪಂದ ಅವಧಿ ಮುಗಿದ ಹೊರಗುತ್ತಿಗೆ ಸಿಬ್ಬಂದಿಯ ಪಟ್ಟಿ ಮಾಡಿ ಅವರ ಸೇವೆ ವಿಲೇವಾರಿ ಮಾಡಬೇಕು. ಇಲ್ಲದಿದ್ದರೆ ಸಂಬಂಧಪಟ್ಟ ಇಲಾಖೆಯ ಮುಖ್ಯಸ್ಥರು ಹಾಗೂ ಹೊಣೆಗಾರ ಅಧಿಕಾರಿಯ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಲಾಗುವುದು. ಜತೆಗೆ ಅವಧಿ ಮುಗಿದ ನಿಬ್ಬಂದಿಯನ್ನು ಮುಂದುವರಿಸಿ ಅನಧಿಕೃತವಾಗಿ ಪಾವತಿಸಲಾದ ವೇತನ/ಪರಿಹಾರ ಮೊತ್ತವನ್ನು ಸಂಬಂಧಪಟ್ಟ ಅಧಿಕಾರಿಗಳಿಂದ ವೈಯುಕ್ತಿವಾಗಿ ವಸೂಲಿ ಮಾಡಲಾಗುವುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಹೈಕೋರ್ಟ್ ತೀರ್ಪುಗಳೂ ಇವೆ

ತಾತ್ಕಾಲಿಕ/ಒಪ್ಪಂದ/ಔಟ್ ಸೋರ್ಸ್‌ ಸಿಬ್ಬಂದಿಗೆ ಶಾಶ್ವತೀಕರಣದ (ಕಾಯಂ) ಹಕ್ಕಿಲ್ಲ. ನಿಯಮಿತ ನೇಮಕಾತಿ ವಿಧಾನಗಳನ್ನು ಅನುಸರಿಸದ ನೇಮಕಾತಿಗಳಿಗೆ ತಾತೃತೀಕರಣ ಅನ್ವಯಿಸುವುದಿಲ್ಲ. ಒಪ್ಪಂದ ಅವಧಿ ಮೀರಿಸಿ ಸಿಬ್ಬಂದಿಯನ್ನು ಮುಂದುವರಿಸುವುದು ಕಾನೂನುಬದ್ಧವಲ್ಲ ಎಂದು ಹೈಕೋರ್ಟ್ ಅನೇಕ ತೀರ್ಪುಗಳಲ್ಲಿ ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಈ ಆದೇಶವನ್ನು ತಕ್ಷಣದಿಂದಲೇ ಜಾರಿಗೆ ತರಬೇಕು. ಎಲ್ಲ ಇಲಾಖೆಗಳು, ಆಧೀನ ಕಚೇರಿಗಳು, ಸಂಸ್ಥೆಗಳು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚನೆ ನೀಡಲಾಗಿದೆ.

ಏನಿದು ಆದೇಶ?

– ರಾಜ್ಯದ ವಿವಿಧ ಇಲಾಖೆಗಳಲ್ಲಿ 96000ಕ್ಕೂ ಅಧಿಕ ಹೊರಗುತ್ತಿಗೆ ನಿಬ್ಬಂದಿ ನೀವೆ

– ಆದರೆ, ಹೊರಗುತ್ತಿಗೆ ನೇಮಕಾತಿ ಸಂಪೂರ್ಣ ರದ್ದತಿಗೆ ಸರ್ಕಾರ ನಿರ್ಧಾರ

– ಅವಧಿ ಮುಗಿದ ಸಿಬ್ಬಂದಿ ಯಾವುದೇ ಕಾರಣಕ್ಕೂ ಮುಂದುವರಿಸಬಾರದು

– ಇದು ಹಣಕಾಸು ಶಿಸ್ತಿಗೆ, ಸರ್ಕಾರಿ ನಿಯಮಾವಳಿಗಳಿಗೆ ವಿರುದ್ಧವಾಗಿದೆ.

– ಒಂದೊಮ್ಮೆ ಸಿಬ್ಬಂದಿ ಮುಂದುವರಿಸಿದರೆ ಸಂಬಂಧಿತ ಅಧಿಕಾರಿಗಳಿಂದ ವೇತನ ವಸೂಲಿ

ಪರಿಣಾಮವೇನು?

ಹೊಸದಾಗಿ ಸರ್ಕಾರಿ ನೇರ ನೇಮಕಾತಿ, ನೌಕರಿಗೆ ಕಾಯುತ್ತಿರುವವರಿಗೆ ಅವಕಾಶ

-ನೇಮಕಾತಿ ಪ್ರಕ್ರಿಯೆಗೆ ಅಡಚಣೆ ಉಂಟು ಆಗಬಹುದಾದ ಅಡ್ಡಿ ಸರಿಪಡಿಸುವ ಯತ್ನ

ಹೊರಗುತ್ತಿಗೆ ಸೇವೆ ವಿರುದ್ಧದ ನ್ಯಾಯಾಲಯದ ಹಲವಾರು ಆದೇಶಗಳ ಪಾಲನೆಗೆ ಹಾದಿ

-ರಾಜ್ಯದ ವಿತ್ತೀಯ ಶಿಸ್ತು ಸರ್ಕಾರಿ ನಿಯಮಾವಳಿಗಳ ಉಲ್ಲಂಘನೆಗೆ ತಡೆ

ಸುತ್ತೋಲೆಯಲ್ಲಿ ಏನಿದೆ?

-ಏಜೆನ್ಸಿಗಳ ಮೂಲಕ ಅಥವಾ ಒಪ್ಪಂದದ ಆಧಾರದ ಮೇಲೆ ನಿಯೋಜಿಸಲ್ಪಟ್ಟ ಎಲ್ಲ ಹೊರಗುತ್ತಿಗೆ/ಒಪ್ಪಂದ ಸಿಬ್ಬಂದಿಯ ಸೇವೆ, ಸಂಬಂಧಿತ ಟಿಂಡರ್/ ಒಪ್ಪಂದದಲ್ಲಿ ಉಲ್ಲೇಖಿಸಲ್ಪಟ್ಟ ಅವಧಿಗೆ ಮಾತ್ರ ಸೀಮಿತ

-ಒಪ್ಪಂದ/ಟೆಂಡರ್ ಅವಧಿ ಪೂರ್ಣಗೊಂಡ ತಕ್ಷಣವೇ ಯಾವುದೇ ಪ್ರತ್ಯೇಕ ಆದೇಶ/ನೋಟಿಸ್ ನೀಡದೆ ಸಿಬ್ಬಂದಿ ಸೇವೆ ಸ್ವಯಂಚಾಲಿತವಾಗಿ ಕೊನೆಗೊಂಡಂತೆಯೇ ಎಂದು ಪರಿಗಣಿಸಬೇಕು

ಒಪ್ಪಂದ ಅವಧಿ ಮುಗಿದ ನಂತರ, ಸಂಬಂಧಿತ ಸಿಬ್ಬಂದಿಯನ್ನು ಅದೇ ಸಂಸ್ಥೆ/ವಿಭಾಗದಲ್ಲಿ ಯಾವುದೇ ಕಾರಣಕ್ಕೂ ಮುಂದುವರಿಸಲು ಅನುಮತಿ ಇರುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಅವರನ್ನು ಕಡ್ಡಾಯವಾಗಿ ಮತ್ತು ತಕ್ಷಣ ಸೇವೆಯಿಂದ ವಿಲೇವಾರಿ ಮಾಡಬೇಕು

-ಹೊರಗುತ್ತಿಗೆ/ ಒಪ್ಪಂದ ಆಧಾರಿತ ಸಿಬ್ಬಂದಿ ಸಂಬಂಧಿತ ಏಜೆನ್ಸಿಯವರಾಗಿದ್ದು ಅವರು ಸರ್ಕಾರಿ ಇಲಾಖೆ/ಸಂಸ್ಥೆಯ ನೇರ ಸಿಬ್ಬಂದಿಯಲ್ಲ. ಇಂತಹ ಸಿಬ್ಬಂದಿಗೆ ಯಾವುದೇ రితీయ రాయం అభవా ముందుబరిద శిలడిగి ఉత్ను ఇరువుదిల్లు.

ಹೊಸ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ನಂತರ, ಸಿಬ್ಬಂದಿ ನಿಯೋಜನೆ ಸಂಪೂರ್ಣವಾಗಿ ಆಯ್ಕೆಯಾದ ಹೊಸ ಏಜೆನ್ಸಿಯ ಜವಾಬ್ದಾರಿಯಾಗಿರುತ್ತದೆ. ಹಿಂದಿನ ಸಿಬ್ಬಂದಿಗೆ ಯಾವುದೇ ಆದ್ಯತೆ ನೀಡುವ ಬಾಧ್ಯತೆ ಸರ್ಕಾರಕ್ಕಿಲ್ಲ.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology