07/08/2025 10:03 AM

Translate Language

Home » ಲೈವ್ ನ್ಯೂಸ್ » ಹೈಟೆಕ್ ಹಾರ್ವೆಸ್ಟರ್ ಹಬ್ ಯೋಜನೆಯಡಿ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

ಹೈಟೆಕ್ ಹಾರ್ವೆಸ್ಟರ್ ಹಬ್ ಯೋಜನೆಯಡಿ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

Facebook
X
WhatsApp
Telegram

ಕೊಪ್ಪಳ.07.ಆಗಸ್ಟ್.25:- ಕೃಷಿ ಇಲಾಖೆಯಿಂದ ಹೈಟೆಕ್ ಹಾರ್ವೆಸ್ಟರ್ ಹಬ್ ಯೋಜನೆಯಡಿ ಸಹಾಯಧನಕ್ಕಾಗಿ ಆಸಕ್ತ ರೈತರು, ಸಂಘ ಸಂಸ್ಥೆಗಳು ಹಾಗೂ ರೈತ ಉತ್ಪಾದಕ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆ ಆಧಾರದಲ್ಲಿ ರೈತರಿಗೆ ವಿತರಿಸುವ ಉದ್ದೇಶದಿಂದ ಕೊಪ್ಪಳ ಜಿಲ್ಲೆಗೆ ಸಾಮಾನ್ಯ ವರ್ಗ ಘಟಕದಡಿ ವೈಯಕ್ತಿಕ ಫಲಾನುಭವಿಗೆ 2 ಮತ್ತು ಸಂಘ ಸಂಸ್ಥೆಗಳಿಗೆ 1 ಸೇರಿ ಒಟ್ಟು 3 ಕಂಬೈನ್ಡ್ ಹಾರ್ವೆಸ್ಟರ್ ಹಬ್ (Combined Harvestor hub) ಕ್ರೀಯಾ ಯೋಜನೆ ಅನುಮೋದನೆಗೊಂಡಿರುತ್ತದೆ. ಈ ಹಬ್‌ನಲ್ಲಿ ಕಡ್ಡಾಯವಾಗಿ ಕಡ್ಡಾಯವಾಗಿ ಬೈನ್ಡ್ ಹಾರ್ವೆಸ್ಟರ್ ಮತ್ತು ಟ್ರ್ಯಾಕ್ಟರ್ ಆಪರೇಟೆಡ್ ಬೇಲರ‍್ಸ್ (Tractor operated Balers) ಇರಬೇಕು.

ಈ ಯೋಜನೆಯಡಿ ಸಾಮಾನ್ಯ ವರ್ಗ ಘಟಕದಡಿ ವೈಯಕ್ತಿಕ ಫಲಾನುಭವಿಗೆ ಗರಿಷ್ಠ 40 ಲಕ್ಷ  (50%ರ ಸಹಾಯಧನ) ಮತ್ತು ಸಂಘ ಸಂಸ್ಥೆಗಳಿಗೆ ಗರಿಷ್ಠ 50 ಲಕ್ಷ (70% ಸಹಾಯಧನ )ಇರುತ್ತದೆ. ಆದ ಕಾರಣ  ಆಸಕ್ತ ರೈತರು, ಸಂಘ ಸಂಸ್ಥೆಗಳು, ರೈತ ಉತ್ಪಾದಕ ಸಂಸ್ಥೆ (ಎಫ್.ಪಿ.ಐ), ಕೃಷಿ ಯಂತ್ರೋಪಕರಣಗಳ ಬ್ಯಾಂಕ್ (ಎಫ್.ಎಂ.ಬಿ) ಅಥವಾ ಕೃಷಿ ಯಂತ್ರಧಾರೆ ಕೇಂದ್ರಗಳು (ಸಿ.ಹೆಚ್.ಎಸ್.ಸಿ)ಗಳು ಅರ್ಜಿಯನ್ನು ನಿಗಧಿತ ನಮೊನೆಯಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ಆಗಸ್ಟ್ 20 ರೊಳಗಾಗಿ ಸಹಾಯಕ ಕೃಷಿ ನಿರ್ದೇಶಕರ ಕಛೇರಿಗೆ ಅರ್ಜಿ ಸಲ್ಲಿಸಬೇಕು.


ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಛೇರಿಯಲ್ಲಿ ಅರ್ಜಿಗಳನ್ನು ಪರಿಶೀಲಿಸಿ ಉಪಕೃಷಿ ನಿರ್ದೇಶಕರ ಕಛೇರಿಗೆ ಸಲ್ಲಿಸಲಾಗುವುದು. ನಂತರ ಈ ಕಛೇರಿಯಲ್ಲಿ ಉಪಕೃಷಿ ನಿರ್ದೇಶಕರ ಕಛೇರಿಯಿಂದ ಸ್ವಿಕೃತಗೊಂಡ ಅರ್ಜಿಗಳನ್ನು ಪರಿಶೀಲಿಸಿ ಜಿಲ್ಲಾ ಮಟ್ಟದ ಉಪಕರಣ ಸಮಿತಿಯಲ್ಲಿ ಮಂಡಿಸಲಾಗುವುದು.

ಜಿಲ್ಲಾ ಮಟ್ಟದ ಸಮಿತಿ ಸಭೆಯಲ್ಲಿ ಒಂದೇ ಹಬ್‌ಗೆ ಒಂದಕ್ಕಿಂತ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿ ಅರ್ಹಗೊಂಡಲ್ಲಿ, ಲಾಟರಿ ಮುಖಾಂತರ ಫಲಾನುಭವಿಯನ್ನು ಆಯ್ಕೆ ಮಾಡುವುದು. ಈ ಕಛೇರಿಯಿಂದ ಆಯ್ಕೆಯಾದ ಫಲಾನುಭವಿಗೆ ಕೃಷಿ ಯಂತ್ರೋಪಕರಣಗಳನ್ನು ದಾಸ್ತಾನಿಕರಿಸಲು ಕಾರ್ಯಾದೇಶ ನೀಡಲಾಗುವುದು.

ಹಬ್‌ವಾರು ಸ್ವೀಕೃತವಾದ ಯಂತ್ರೋಪಕರಣಗಳನ್ನು ಸಂಬಂಧಿಸಿದ ರೈತ ಸಂಪರ್ಕ ಕೇಂದ್ರ ಮತ್ತು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರು ಪರಿಶೀಲಿಸಿ, ಸಹಾಯಧನವನ್ನು ನಿಯಾಮನುಸಾರ ಸಂಬಂಧಿಸಿದವರ ಸಾಲದ ಬ್ಯಾಂಕ್ ಖಾತೆಗೆ ಕ್ರೆಡಿಟ್ ಲಿಂಕ್ಡ್ ಬ್ಯಾಕ್ ಎಂಡೆಡ್ ಸಬ್ಸಿಡಿ (Credit Linked Back ended Subsidy) ಮೂಲಕ ಜಮಾ ಮಾಡಲಾಗುವುದು.

ಫಲಾನುಭವಿ ಅಥವಾ ಸಂಘ ಸಂಸ್ಥೆ ಅರ್ಜಿಯೊಂದಿಗೆ ಸಲ್ಲಿಸಬೇಕಾದ ವಿವರ: ಸಂಸ್ಥೆಯಾದಲ್ಲಿ ಸಹಕಾರ ಸಂಘಗಳ ನಿಬಂಧನೆಯಂತೆ ಸಂಸ್ಥೆ ನೊಂದಾಯಿಸಿರುವ ಬಗ್ಗೆ ಪ್ರಮಾಣ ಪತ್ರ. ಪಹಣಿ ಪ್ರತಿ, ಜಾತಿ ಪ್ರಮಾಣ ಪತ್ರ, ಆಧಾರ ಕಾರ್ಡ ಪ್ರತಿ, ಬ್ಯಾಂಕ್ ಪಾಸ್ ಬುಕ್ ಪ್ರತಿ ಮತ್ತು ಎಫ್.ಐ.ಡಿ ಸಂಖ್ಯೆ. ರೂ 100 ಚಾಫಾ ಕಾಗದದ ಮೇಲೆ ಹಬ್‌ನ್ನು ಪರಬಾರೆ ಮಾಡುವುದಿಲ್ಲವೆಂದು ಮುಚ್ಚಳಿಕೆ ಪತ್ರ (ನೋಟರಿಯೊಂದಿಗೆ).

ಇತ್ತೀಚಿನ 2 ವರ್ಷಗಳ (2023-24 ಮತ್ತು 2024-25) ಲೆಕ್ಕ ಪರಿಶೋಧನಾ ಪತ್ರ.

ಸಹಾಯ ಧನವು ಕ್ರೆಡಿಟ್ ಲಿಂಕ್ಡ್ ಬ್ಯಾಕ್ ಎಂಡೆಡ್ ಸಬ್ಸಿಡಿ ಆಗಿರುವುದರಿಂದ ಸಂಬಂಧಿಸಿರುವ ಬ್ಯಾಂಕ್ ನಿಂದ ತಾತ್ವಿಕ ಸಾಲ ಮಂಜೂರಾತಿ ಪತ್ರವನ್ನು (In Principle Loan Sanction Letter) ಕಡ್ಡಾಯವಾಗಿ ರಾಷ್ಟ್ರೀಕೃತ ಅಥವಾ ಶೆಡ್ಯುಲ್ಡ್ ಬ್ಯಾಂಕ್ (Nationalized Bank/Scheduled Bank)ಗಳಿಂದ ಪಡೆಯುವಂತೆ ಕೊಪ್ಪಳ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!

Featuring Advanced Search Functions plugin by YD