06/07/2025 2:17 AM

Translate Language

Home » ಲೈವ್ ನ್ಯೂಸ್ » ಹೈಟೆಕ್ ಹಾರ್ವೆಸ್ಟರ್ ಹಬ್‌ಗಳo ಸ್ಥಾಪನೆಗೆ ಅರ್ಜಿ ಆಹ್ವಾನ

ಹೈಟೆಕ್ ಹಾರ್ವೆಸ್ಟರ್ ಹಬ್‌ಗಳo ಸ್ಥಾಪನೆಗೆ ಅರ್ಜಿ ಆಹ್ವಾನ

Facebook
X
WhatsApp
Telegram


ಬೀದರ.05.ಜುಲೈ.25:- ಕೃಷಿ ಇಲಾಖೆಯಿಂದ ಹೈಟೆಕ್ ಹಾರ್ವೆಸ್ಟರ್ ಹಬ್ ಯೋಜನೆಯಡಿ ಹೈಟೆಕ್ ಹಾರ್ವೆಸ್ಟರ್ ಹಬ್‌ಗಳ ಸ್ಥಾಪನೆಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಬೀದರ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ರಾಜ್ಯದಲ್ಲಿ ಕೃಷಿ ಯಂತ್ರಧಾರೆ ಕೇಂದ್ರಗಳನ್ನು ಬಲಪಡಿಸಲು ಮತ್ತು ರೈತರಿಗೆ ಸುಲಭವಾಗಿ ಕೃಷಿ ಯಂತ್ರೋಪಕರಣಗಳು ದೊರೆಯುವಂತೆ ಮಾಡಲು ಹೈಟೆಕ್ ಹಾರ್ವೆಸ್ಟರ್ ಹಬ್‌ಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಬೀದರ ಜಿಲ್ಲೆಗೆ ಸಾಮಾನ್ಯ ವರ್ಗ (ವೈಯಕ್ತಿಕ) ಘಟಕದಡಿ 2 ಕಂಬೈನ್ಡ್ ಹಾರ್ವೇಸ್ಟರ್ ಹಬ್ ಗಳಿಗೆ ಹಾಗೂ ಸಾಮಾನ್ಯ ವರ್ಗ (ವೈಯಕ್ತಿಕ) ಘಟಕದಡಿ 2 ಶುಗರ್ ಕೇನ್ ಹಾರ್ವೆಸ್ಟರ್ ಹಬ್, ಸಾಮಾನ್ಯ ವರ್ಗ (ಸಂಘ/ಸoಸ್ಥೆ) ಘಟಕದಡಿ 1 ಶುಗರ್ ಹಾರ್ವೆಸ್ಟರ್ ಹಬ್ ಮತ್ತು ವಿಶೇಷ ಘಟಕ ಯೋಜನೆಯಡಿ 1 ಶುಗರ್ ಹಾರ್ವೇಸ್ಟರ್ ಹಬ್ ಒಟ್ಟು 2 ಕಂಬೈನ್ಡ್ ಹಾರ್ವೆಸ್ಟರ್ ಹಬ್ ಮತ್ತು 4 ಶುಗರ್ ಹಾರ್ವೆಸ್ಟರ್ ಹಬ್‌ಗಳ ಕ್ರಿಯಾ ಯೋಜನೆ ಅನುಮೋದನೆಗೊಂಡಿರುತ್ತದೆ. ಪ್ರತಿ “ಶುಗರ್‌ಕೇನ್ ಹಾರ್ವೆಸ್ಟರ್ ಹಬ್” ನಲ್ಲಿ ಶುಗರ್‌ಕೇನ್ ಹಾರ್ವೆಸ್ಟರ್ ದೊಂದಿಗೆ ಅಂತರ ಸಾಲು ರೋಟವೇಟರ್ ದಾಸ್ತಾನೀಕರಿಸುವುದು ಕಡ್ಡಾಯವಾಗಿರುತ್ತದೆ ಹಾಗೂ ಪ್ರತಿ ಕಂಬೈನ್ಡ್ ಹಾರ್ವೆಸ್ಟರ್‌ಹಬ್ ನಲ್ಲಿ ಕಂಬೈನ್ಡ್ ಹಾರ್ವೆಸ್ಟರ್ ನೊಂದಿಗೆ ಬೇಲರ್ ದಾಸ್ತಾನೀಕರಿಸುವುದು ಕಡ್ಡಾಯವಾಗಿರುತ್ತದೆ.

ಈ ಯೋಜನೆಯಡಿ ಸಾಮಾನ್ಯ ವರ್ಗ (ವೈಯಕ್ತಿಕ) ಘಟಕದಡಿ ಫಲಾನುಭವಿಗಳಿಗೆ ಶೇ. 40.00 ರಷ್ಟು ಸಹಾಯಧನ ಇರುತ್ತದೆ ಮತ್ತು ಸಂಘ/ಸoಸ್ಥೆ, ಪರಿಶಿಷ್ಟ ಜಾತಿ (ವೈಯಕ್ತಿಕ) ಪರಿಶಿಷ್ಟ ಪಂಗಡ (ವೈಯಕ್ತಿಕ) ಫಲಾನುಭವಿಗಳಿಗೆ ಶೇ. 50.00 ರಷ್ಟು ಸಹಾಯಧನ ಇರುತ್ತದೆ.


ದಾಖಲಾತಿಗಳು: ಪಹಣಿ ಪತ್ರ, ಜಾತಿ ಪ್ರಮಾಣ ಪತ್ರ ಆಧಾರ ಕಾರ್ಡ್ ಪ್ರತಿ, ಬ್ಯಾಂಕ್ ಪಾಸ್ ಬುಕ್ ಪ್ರತಿ, ಎಫ್.ಐ.ಡಿ (ಈIಆ) ಸಂಖ್ಯೆ, ಮತ್ತು ರೂ.100 ಛಾಪಾ ಕಾಗದದ ಮೇಲೆ ಹಬ್ ಅನ್ನು ಪರಭಾರೆ ಮಾಡುವುದಿಲ್ಲವೆಂದು ಮುಚ್ಚಳಿಕೆ ಪತ್ರ (ನೋಟರಿಯೊಂದಿಗೆ), ಸಂಘ/ಸoಸ್ಥೆಗಳಾದಲ್ಲಿ ಇತ್ತೀಚಿನ 2 ವರ್ಷಗಳ (2023-24, 2024-25) ಲೆಕ್ಕ ಪರಿಶೋಧನಾ ಪತ್ರ.

ಸಹಾಯ ಧನವು ಕ್ರೆಡಿಟ್ ಲಿಂಕ್ಸ್ ಬ್ಯಾಕ್ ಎಂಡೆಡ್ ಸಬ್ಸಿಡಿ ಆಗಿರುವುದರಿಂದ ಸಂಬoಧಿಸಿರುವ ಬ್ಯಾಂಕ್ ನಿಂದ ತಾತ್ವಿಕ ಸಾಲ ಮಂಜೂರಾತಿ ಪತ್ರ (ಇನ್ ಪ್ರಿನ್ಸಿಪಲ್ ಲೋನ್ ಸ್ಯಾಂಕ್ಷನ್ ಲೆಟರ್) ಮತ್ತು ಶುಗರ್‌ಕೇನ್ ಹಾರ್ವೆಸ್ಟರ್ ಹಬ್‌ಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅರ್ಜಿದಾರರು ಮೇಲ್ಕಂಡ ಎಲ್ಲಾ ದಾಖಲಾತಿಗಳೊಂದಿಗೆ, ವ್ಯಾಪ್ತಿಯಲ್ಲಿ ಬರುವ ರೈತರೊಂದಿಗೆ ಸಕ್ಕರೆ ಕಾರ್ಖಾನೆಗಳಿಂದ ಕಬ್ಬು ಕಟಾವಿಗೆ ಮಾಡಿಕೊಂಡ ಲಿಖಿತ “ಒಪ್ಪಂದ ಪ್ರಮಾಣ ಪತ” ವನ್ನು ಲಗತ್ತಿಸಿ ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಬೇಕು.


ಆಸಕ್ತ ರೈತರು ಅರ್ಜಿಯನ್ನು ನಿಗದಿತ ನಮೂನೆಯಲ್ಲಿ ದಾಖಲಾತಿಗಳೊಂದಿಗೆ ಜುಲೈ.21 ರೊಳಗಾಗಿ ಸಂಬAಧಪಟ್ಟ ಸಹಾಯಕ ಕೃಷಿ ನಿರ್ದೇಶಕರ ಕಛೇರಿಗೆ ಅರ್ಜಿ ಸಲ್ಲಿಸಬೇಕೆಂದು ಅವರು ತಿಳಿಸಿದ್ದಾರೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!