|

ಹೆಸರು ಸೇರ್ಪಡೆಗೆ ದಿನಾಂಕ ವಿಸ್ತರಣೆ.!

ಬೆಂಗಳೂರು.09.ನವೆಂಬರ.25:- ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ ಹೆಸರು ಸೇರ್ಪಡೆಗೆ ದಿನಾಂಕ ವಿಸ್ತರಣೆ.

ಕರ್ನಾಟಕ ವಿಧಾನ ಪರಿಷತ್ತಿನ  (ಆಗ್ನೆಯ ಮತ್ತು ಪಶ್ಚಿಮ ) ಮತದಾರ ನೋಂದಣಿ ದಿನಾಂಕವನ್ನು ವಿಸ್ತರಿಸಿ ಆದೇಶ ಹೊರಡಿಸಲಾಗಿದೆ.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ನಿಮ್ಮ ಉಲ್ಲೇಖ (1) ರ ಮನವಿಯನ್ನು ಪರಿಶೀಲಿಸಲಾಯಿತು.

ಉಲ್ಲೇಖ(2)ರ ಭಾರತ ಚುನಾವಣಾ ಆಯೋಗದ ವೇಳಾಪಟ್ಟಿಯಂತೆ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ ಕರಡು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ದಿನಾಂಕ 06.11.2025 ರಂದು ಅಂತಿಮ ದಿನಾಂಕವಾಗಿರುತ್ತದೆ. ಸದರಿ ದಿನಾಂಕದೊಳಗೆ ಅರ್ಜಿಗಳನ್ನು ಸಲ್ಲಿಸಲು ಸಾಧ್ಯವಾಗದಿದ್ದಲ್ಲಿ ಅಂತಹ ಅರ್ಹ ಮತದಾರರು ಹಕ್ಕು ಮತ್ತು ಆಕ್ಷೇಪಣೆ ಸಮಯದಲ್ಲಿ ಅಂದರೆ ದಿನಾಂಕ 25.11.2025 ರಿಂದ 10.12.2025 ರವರೆಗೆ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿರುತ್ತದೆ.

ಮುಂದುವರೆದು, ಚುನಾವಣೆ ಘೋಷಣೆಯಾದ ನಂತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಅಂತಿಮ ದಿನಾಂಕದಿಂದ 10 ದಿನ ಹಿಂದಿನ ದಿನಾಂಕದವೆರೆಗೆ ಅರ್ಹ ಮತದಾರರು ನೋಂದಣಿಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ ಎಂದು ಈ ಮೂಲಕ ತಿಳಿಸಿದೆ.

Similar Posts

Leave a Reply

Your email address will not be published. Required fields are marked *