ಹೆಚ್ಚಿನ ಇಳುವರಿ ಪಡೆಯಲು ತಾಂತ್ರಿಕ
ಸಲಹೆಗಳನ್ನು ಪಾಲಿಸಲು ರೈತಬಾಂಧವರಲ್ಲಿ ಮನವಿ

ಬೀದರ.07.ಜೂನ್.6:- ರೈತರು ತಮ್ಮ ಹೋಲಗಳಲ್ಲಿ ಉದ್ದು, ಹೆಸರು, ತೋಗರಿ, ಸೋಯಾಅವರೆ, ಮಿಶ್ರ ಬೆಳೆ ಬೆಳೆಸಿದಲ್ಲಿ ಭೂಮಿಯ ಫಲವತತ್ತೆ ಹಾಗೂ ರೈತರ ಆದಾಯವನ್ನು ಹೆಚ್ಚಿಗೆ ಪಡೆಯಬಹುದಾಗಿದೆ. ಹಾಗೆಯೇ ಕೇವಲ ಡಿ.ಎ.ಪಿ ರಸಗೊಬ್ಬರ ಬದಲಿಗೆ ಸಂಯುಕ್ತ ರಸಗೊಬ್ಬರಗಳಾದ 12:32:16, 10:26:26, 20:20:0:13, ಇತರೆ ಬಳಸಿದಲ್ಲಿ ಬೆಳೆಗಳಿಗೆ ಸಮತೋಲನೆಯ ಪೋಶಕಾಂಶ ದೊರೆತು ಹೆಚ್ಚಿನ ಇಳುವರಿ ಪಡೆಯಬಹುದಾಗಿದೆ ಎಂದು ಬೀದರ ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಬೀದರ ತಾಲ್ಲೂಕಿನ ಮುಂಗಾರು ಹಂಗಾಮಿನ ಬೆಳೆ ವಿಸ್ತೀರ್ಣ 54000 ಹೆಕ್ಟರ್ ಪ್ರದೇಶವಿದ್ದು, ಪ್ರಮುಖ ಬೆಳೆಗಳಾದ ಸೂಯಾ ಅವರೆ (25900 ಹೇಕ್ಟರ್), ತೋಗರಿ (17350 ಹೇಕ್ಟರ್), ಹೆಸರು (5461 ಹೇಕ್ಟರ್), ಉದ್ದು (2650 ಹೇಕ್ಟರ್), ಹೈಬ್ರೀಡ್ ಜೋಳ (980 ಹೇಕ್ಟರ್), ಇತರೆ ಕಬ್ಬು ಮತ್ತು ಹತ್ತಿ ಬೆಳೆಯಲಾಗುತ್ತಿದ್ದು, ಮೇ ತಿಂಗಳಿನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದ್ದು ತೋಗರಿ, ಉದ್ದು, ಮತ್ತು ಹೆಸರು ಬೆಳೆಗಳಿಗೆ ಬಿತ್ತನೆ ಮಾಡಲು ಸೂಕ್ತವಾಗಿರುತ್ತದೆ, ಮುಂದುವರೆದು ಭೂಮಿ ಉಳುಮೆ ಮಾಡಿ ಬಿತ್ತನೆ ಮಾಡಲು ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಬಿತ್ತನೆ ಮಾಡುವ ಮುಂಚೆ ತೋಗರಿ, ಉದ್ದು, ಮತ್ತು ಹೆಸರು ಬೆಳೆಗಳಿಗೆ ಪ್ರತಿ ಎಕರೆಗೆ ರೈಜೋಬಿಯಂ-200 ಗ್ರಾಂ, ಟೈಕೋಡರ್ಮ-20 ಗ್ರಾಂ ಮತ್ತು ಸೋಯಾ ಅವೆರೆಗೆ ಇಮ್ಮಿಡಾಕ್ಲೋಪ್ರಿಡ್ 600-ಎಸ್ ಎಲ್ (ಗೌಚ್) 10 ಎಮ್ ಎಮ್ ಪ್ರತಿ ಕೆ.ಜಿ ಬೀಜಕ್ಕೆ ಲೇಪನೆ ಮಾಡಿ, ಬಿತ್ತನೆ ಮಾಡಿದಲ್ಲಿ ರೋಗ ನಿರೋಧಕ ಶಕ್ತಿಯಿಂದ ರೋಗಗಳನ್ನು ಬರದಂತೆ ತಡೆಗಟ್ಟಬಹುದಾಗಿದೆ.

ಸೊಯಾ ಅವರೆ ಬಿತ್ತನೆಯನ್ನು 80-100 ಮೀ.ಮೀ ಮಳೆ ಬಂದಲ್ಲಿ ಭೂಮಿಯ ತೇವಾಂಶವನ್ನು ನೋಡಿ ಬಿತ್ತನೆ ಮಾಡುವುದು ಸೂಕ್ತವಾಗಿರುತ್ತದೆಂದು ಅವರು ತಿಳಿಸಿದ್ದಾರೆ.

Similar Posts

Leave a Reply

Your email address will not be published. Required fields are marked *