19/04/2025 5:34 PM

Translate Language

Home » ಲೈವ್ ನ್ಯೂಸ್ » ಹೆಚ್‌ಐವಿ ಸೋಂಕಿತರಲ್ಲಿ ಕಾನೂನಿನ ಅರಿವು, ಮಾಹಿತಿ
ನೀಡುವುದು ಬಹಳ ಮುಖ್ಯವಾಗಿದೆ-ನ್ಯಾಪ್ರಕಾಶ ಬನಸೂಡೆ

ಹೆಚ್‌ಐವಿ ಸೋಂಕಿತರಲ್ಲಿ ಕಾನೂನಿನ ಅರಿವು, ಮಾಹಿತಿ
ನೀಡುವುದು ಬಹಳ ಮುಖ್ಯವಾಗಿದೆ-ನ್ಯಾಪ್ರಕಾಶ ಬನಸೂಡೆ

Facebook
X
WhatsApp
Telegram


ಬೀದರ, ಡಿಸೆಂಬರ್.3 :- ಹೆಚ್.ಐ.ವಿ ಸೋಂಕಿತರಲ್ಲಿ ಕಾನೂನಿನ ಅರಿವು, ಮಾಹಿತಿಯನ್ನು ನೀಡುವುದು ಬಹಳ ಮಹತ್ವದಾಗಿದೆ. ಆದ್ದರಿಂದ ಪ್ರತಿಯೊಬ್ಬರು ಹೆಚ್.ಐ.ವಿ ಸೋಂಕಿತರಿಗೆ ತಾರತಮ್ಯ ಮಾಡದೇ, ಅವರಿಗೆ ಸರಕಾರದಿಂದ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಬೇಕು ಮತ್ತು ಆರೋಗ್ಯ ಸಿಬ್ಬಂದಿಯವರು ಗ್ರಾಮೀಣ ಪ್ರದೇಶದಲ್ಲಿ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಂಡು, ಜನರಿಗೆ ಸರಿಯಾದ ಮಾಹಿತಿಯನ್ನು ನೀಡಬೇಕೆಂದು ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಬೀದರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಪ್ರಕಾಶ ಬನಸೂಡೆ ಹೇಳಿದರು.


ಅವರು ಇಂದು ವಿಶ್ವ ಏಡ್ಸ್ ದಿನ ಅಂಗವಾಗಿ ಜಿಲ್ಲಾ ಆರೋಗ್ಯಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ವಿಶ್ವ ಏಡ್ಸ್ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.


ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿಗಳಾದ ಡಾ. ಅನೀಲಕುಮಾರ ಚಿಂತಾಮಣಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲ್ಲೆಯಲ್ಲಿ ಹೆಚ್.ಐ.ವಿ/ಏಡ್ಸ್ ಕುರಿತು ನೀಡುವ ಸೇವಾ-ಸೌಲಭ್ಯಗಳು, ಅಂಕಿ-ಅAಶ, ಜನಸಾಮಾನ್ಯರಲ್ಲಿ ಅರಿವು ಮೂಡಿಸಲು ಹಮ್ಮಿಕೊಳ್ಳುತ್ತಿರುವ ಐಇಸಿ ಕಾರ್ಯಕ್ರಮಗಳ ಕುರಿತು, ಎನ್‌ಜಿಒ ಕಾರ್ಯಕ್ರಮಗಳ ಕುರಿತು ಮಾಹಿತಿಯನ್ನು ನೀಡಿದರು.


ಕ್ಷಯರೋಗ ನೋಡಲ್ ಅಧಿಕಾರಿಗಳಾದ ಡಾ. ಮಹೇಶ ತೋಂಡಾರೆ ಮಾತನಾಡಿ, 2024ರ ಘೋಷವಾಕ್ಯವಾದ – “ಹಕ್ಕುಗಳನ್ನು ಪಡೆಯಲು ಸರಿಯಾದ ಮಾರ್ಗ ಅನುಸರಿಸೋಣ: ನನ್ನ ಆರೋಗ್ಯ, ನನ್ನ ಹಕ್ಕು” ಕುರಿತು ಹೆಚ್.ಐ.ವಿ ಸೋಂಕಿತರು ಸರಕಾರದ ವತಿಯಿಂದ ಸಿಗುವ ಆರೋಗ್ಯ ಸೇವೆಗಳನ್ನು ಯಾವುದೇ ರೀತಿಯಿಂದ ಕಳಂಕ ಮತ್ತು ತಾರತಮ್ಯವಾಗದೇ ಪಡೆಯಬೇಕು ಎಂಬುದು ಈ ವರ್ಷದ ಘೋಷವಾಕ್ಯವಾಗಿದೆಂದು ಮಾಹಿತಿ ನೀಡಿದರು. ಹಾಗೂ ರಾಷ್ಟç , ರಾಜ್ಯ ಮತ್ತು ಜಿಲ್ಲೆಯ ಪ್ರಸ್ತುತ ಹೆಚ್.ಐ.ವಿ ಸ್ಥಿತಿ-ಗತಿ ಕುರಿತು ಮಾಹಿತಿಯನ್ನು ನೀಡಿದರು.


ಬ್ರಿಮ್ಸ್ ಆಸ್ಪತ್ರೆಯ ಐಸಿಟಿಸಿ(ಎ) ಕೇಂದ್ರದ ಪ್ರಯೋಗ ಶಾಲಾ ತಂತ್ರಜ್ಞಾರಾದ ಶ್ರೀ.ಅರವಿಂದ ಕುಲಕರ್ಣಿಯವರು ಪ್ರತಿಜ್ಞಾ ವಿಧಿಯನ್ನು ಬೊಧಿಸಿದರು. ಹಾಗೂ ಡ್ಯಾಪ್ಕು ಅಡಿಯಲ್ಲಿ ಅತ್ಯುತ್ತಮವಾಗಿ ಕರ್ತವ್ಯನಿರ್ವಹಿಸಿರುವ ಬ್ರಿಮ್ಸ್ ಆಸ್ಪತ್ರೆಯ ಐಸಿಟಿಸಿ(ಎ) ಕೇಂದ್ರದ ಆಪ್ತ ಸಮಾಲೋಚಕರಾದ ವಾಣಿ, ಬ್ರಿಮ್ಸ್ ಆಸ್ಪತ್ರೆಯ ಪಿಪಿಟಿಸಿಟಿ ಕೇಂದ್ರದ ಆಪ್ತ ಸಮಾಲೋಚಕರಾದ ಸುನೀತಾ, ಜಿಎಚ್ ಔರಾದ್(ಬಿ)ಐಸಿಟಿಸಿ ಕೇಂದ್ರದ ಆಪ್ತ ಸಮಾಲೋಚಕರಾದ ಪುಷ್ಪಾಂಜಲಿ, ಬ್ರಿಮ್ಸ್ ಆಸ್ಪತ್ರೆಯ ಐಸಿಟಿಸಿ(ಎ) ಕೇಂದ್ರದ ಪ್ರಯೋಗ ಶಾಲಾ ತಂತ್ರಜ್ಞಾರಾದ ಅರವಿಂದ ಕುಲಕರ್ಣಿ, ಜಿಎಚ್ ಬಸವಕಲ್ಯಾಣ ಐಸಿಟಿಸಿ ಕೇಂದ್ರದ ವಿಶ್ವನಾಥರವರಿಗೆ ಪ್ರಶಸ್ತಿ ಪತ್ರ ಹಾಗೂ ನೆನಪಿಕ ಕಾಣಿಕೆಯೊಂದಿಗೆ ಸನ್ಮಾನಿಸಲಾಯಿತು.


ಹೆಚ್.ಐ.ವಿ ಸಮುದಾಯಕ್ಕೆ ಬೆಂಬಲ ನೀಡಿರುವ ಮ/ಎಸ್ ಶ್ರೀವನ ಫಾರ್ಮಾ ಬೀದರನ ಚಿಫ ಪ್ರಮೋಟರ್ ಮತ್ತು ಡೈರೆಕ್ಟರ್ ದೇವೇಂದ್ರಪ್ಪಾ ಜೆಗಪ್ಪಾ, ಎಲ್.ಬಿ.ಇ.ಎಸ್ ಎನ್‌ಜಿಒದ ಲಿಂಕ ವರ್ಕರ ಕಾರ್ಯಕ್ರಮದ ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳಾದ ಆನಂದ ಮತ್ತು ಸಿಎಸ್‌ಸಿ ಬೆಳದಿಂಗಳು ನೆಟವರ್ಕ ಎನ್‌ಜಿಒದ ಕೋಆರ್‌ಡಿನೆಟರ್ ಸಂದೀಪಾ ಅವರಿಗೆ ಪ್ರಶಸ್ತಿ ಪತ್ರ ಹಾಗೂ ನೆನಪಿಕ ಕಾಣಿಕೆಯೊಂದಿಗೆ ಸನ್ಮಾನಿಸಲಾಯಿತು.
ಅತ್ಯುತ್ತಮ ರೆಡ್ ರಿಬ್ಬನ್ ಕಾಲೇಜುಗಳಾಗಿ ಹುಮನಾಬಾದ್‌ನ ವೀರಭದ್ರೇಶ್ವರ ಪದವಿ ಕಾಲೇಜಿನ ಎನ್.ಎಸ್.ಎಸ್ ಅಧಿಕಾರಿಗಳಾದ ಪ್ರವೀಣ ಕಲಬುರ್ಗಿ, ಬೀದರ ನಗರದ ನಾನಕ ಝೀರಾ ಸಾಹೇಬ ಕಾಲೇಜ್ ಆಫ ನರ್ಸಿಂಗ್‌ನ ಪ್ರಾಚಾರ್ಯರಾದ ಮಹಾಂತೇಶ ಮಿರ್ಜಿ, ನಗರದ ಅಕ್ಕಮಹಾದೇವಿ ಪದವಿ ಮಹಾವಿದ್ಯಾಲಯದ ಎನ್.ಎಸ್.ಎಸ್ ಅಧಿಕಾರಿಗಳಾದ ಮೀನಾ ಗಾಯಕವಾಡರವರಿಗೆ ಪ್ರಶಸ್ತಿ ಪತ್ರ ಹಾಗೂ ನೆನಪಿಕ ಕಾಣಿಕೆಯೊಂದಿಗೆ ಸನ್ಮಾನಿಸಲಾಯಿತ್ತು.


ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ. ಧ್ಯಾನೇಶ್ವರ ನಿರಗುಡೆ ಅವರು ವಿಶ್ವ ಏಡ್ಸ್ ದಿನದ ಅಂಗವಾಗಿ ಜಿಲ್ಲಾ ಮಟ್ಟದಲ್ಲಿ ಜಾಥಾ ಕಾರ್ಯಕ್ರಮವನ್ನು ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಾರ್ಯಾಲಯದ ಆವರಣದಲ್ಲಿ ರಿಬ್ಬನ್ ಕತ್ತರಿಸುವ ಮೂಲಕ ಜಾಥಾ ಪಥಚಲನಕ್ಕೆ ಚಾಲನೆಯನ್ನು ನೀಡಿದರು. ಜಾಥಾ ಕಾರ್ಯಕ್ರಮದಲ್ಲಿ ನಗರದ ಸರಕಾರಿ ಎ.ಎನ್.ಎಂ ನರ್ಸಿಂಗ್ ಕಾಲೇಜಿನ, ಅಕ್ಕಮಹಾದೇವಿ ಮಹಿಳಾ ಮಹಾವಿದ್ಯಾಲಯ ಮತ್ತು ಸಿದ್ದಾರ್ಥ ಮಹಾವಿದ್ಯಾಲಯದ ವಿದ್ಯಾರ್ಥಿ/ವಿದ್ಯಾರ್ಥಿನಿಯರು, ಡ್ಯಾಪ್ಕು ಎಲ್ಲಾ ಸಿಬ್ಬಂದಿಯವರು, ಹೆಚ್.ಐ.ವಿ ಕ್ಷೇತ್ರದಲ್ಲಿ ಕೆಸಲನಿರ್ವಹಿಸುತ್ತಿರುವ ಟಿಐ ಪ್ರವರ್ಧ, ಶರಣ ತತ್ವ, ಎಲ್‌ಬಿಇಎಸ್, ಬೆಳದಿಂಗಳು ನೆಟವರ್ಕ ಎನ್‌ಜಿಒ ಸಿಬ್ಬಂದಿಯರುವ ಪಾಲ್ಗೊಂಡಿದರು.


ಕಾರ್ಯಕ್ರಮದ ನಿರೂಪಣೆಯನ್ನು ಬ್ರಿಮ್ಸ್ ಆಸ್ಪತ್ರೆಯ ಐಸಿಟಿಸಿ(ಎ) ಕೇಂದ್ರದ ಪ್ರಯೋಗ ಶಾಲಾ ತಂತ್ರಜ್ಞಾರಾದ ಅರವಿಂದ ಕುಲಕರ್ಣಿರವರು ಮಾಡಿದರು. ಕಾರ್ಯಕ್ರಮದ ವಂದನಾರ್ಪಣೆಯನ್ನು ಜಿಲ್ಲಾ ಮೇಲ್ವಿಚಾರಕರಾದ ಶ್ರೀ.ಸೂರ್ಯಕಾಂತರವರು ನೇರವೇರಿಸಿದರು. ಹಾಗೂ ಕಾರ್ಯಕ್ರಮದಲ್ಲಿ ಐಸಿಟಿಸಿ, ಎಆರ್‌ಟಿ, ಡಿಎಸ್‌ಆರ್‌ಸಿ, ಬ್ಲಡ್ ಬ್ಯಾಂಕ, ಶರಣ ತತ್ವ, ಪ್ರವರ್ಧ, ಎಲ್‌ಬಿಇಎಸ್, ಬೆಳದಿಂಗಳೂ ನೆಟವರ್ಕ, ಜಿಲ್ಲಾ ಕ್ಷಯರೋಗ ಸಿಬ್ಬಂದಿಯವರು ಹಾಗೂ ಡ್ಯಾಪ್ಕು ಕಾರ್ಯಾಲಯದ ಸಿಬ್ಬಂದಿಯವರು ಉಪಸ್ಥಿತರಿದ್ದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!